GT vs CSK: ಪಂದ್ಯದ ಗತಿ ಬದಲಾಯಿಸಿದ ರಶೀದ್ ಖಾನ್ ರೋಚಕ ಕ್ಯಾಚ್: ಸ್ತಬ್ಧವಾದ ಮೋದಿ ಸ್ಟೇಡಿಯಂ

Rashid Khan Catch Video: ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ತಂಡದ ಆಟಗಾರ ರಶೀದ್ ಖಾನ್ ಅವರು ಬೌಂಡರಿ ಬಳಿ ಜಿಗಿದು ರುತುರಾಜ್ ಗಾಯಕ್ವಾಡ್ ಅವರ ಅದ್ಭುತ ಕ್ಯಾಚ್ ಪಡೆದರು. ನಿಯಂತ್ರಣ ಕಳೆದುಕೊಂಡರೂ ಬೌಂಡರಿ ಗೆರೆಯಿಂದ ತನ್ನನ್ನು ರಕ್ಷಿಸಿಕೊಂಡು ಒಂದೇ ಕೈಯಲ್ಲಿ ಕ್ಲೀನ್ ಕ್ಯಾಚ್ ಪಡೆದರು. ಇದರ ವಿಡಿಯೋ ವೈರಲ್ ಆಗುತ್ತಿದೆ.

GT vs CSK: ಪಂದ್ಯದ ಗತಿ ಬದಲಾಯಿಸಿದ ರಶೀದ್ ಖಾನ್ ರೋಚಕ ಕ್ಯಾಚ್: ಸ್ತಬ್ಧವಾದ ಮೋದಿ ಸ್ಟೇಡಿಯಂ
ruturaj gaikwad and Rashid Khan Catch

Updated on: May 11, 2024 | 7:44 AM

ಇಂಡಿಯನ್ ಪ್ರೀಮಿಯರ್ ಲೀಗ್ 2024 ರ 59 ನೇ ಪಂದ್ಯದಲ್ಲಿ, ಗುಜರಾತ್ ಟೈಟಾನ್ಸ್ ತಂಡವು ಚೆನ್ನೈ ಸೂಪರ್ ಕಿಂಗ್ಸ್ (GT vs CSK) ವಿರುದ್ಧ ಬ್ಯಾಟಿಂಗ್, ಬೌಲಿಂಗ್ ಜೊತೆಗೆ ಫೀಲ್ಡಿಂಗ್‌ನಲ್ಲೂ ಅದ್ಭುತ ಪ್ರದರ್ಶನ ನೀಡಿತು. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ ಪರ ನಾಯಕ ಶುಭ್​ಮನ್ ಗಿಲ್ ಮತ್ತು ಸಾಯಿ ಸುದರ್ಶನ್ ಅತ್ಯುತ್ತಮ ಶತಕ ಗಳಿಸಿದರು. ಇದಾದ ಬಳಿಕ ಗುಜರಾತ್ ಎರಡನೇ ಇನ್ನಿಂಗ್ಸ್‌ನಲ್ಲಿ ಬೌಲಿಂಗ್ ಮಾಡಲು ಬಂದಾಗ ಪವರ್ ಪ್ಲೇನಲ್ಲಿಯೇ ಸಿಎಸ್‌ಕೆ ಮೂರು ವಿಕೆಟ್ ಕಳೆದುಕೊಂಡಿತು. ಈ ಅವಧಿಯಲ್ಲಿ ತಂಡದ ಫೀಲ್ಡಿಂಗ್ ಅದ್ಭುತವಾಗಿತ್ತು. ಅದರಲ್ಲೂ ರಶೀದ್ ಖಾನ್ ಬೌಂಡರಿ ಲೈನ್ ಬಳಿ ರುತುರಾಜ್ ಗಾಯಕ್ವಾಡ್ ಅವರ ಕ್ಯಾಚ್ ಹಿಡಿದಿದ್ದು ರೋಚಕವಾಗಿತ್ತು.

ಉಮೇಶ್ ಯಾದವ್ ಬೌಲ್ ಮಾಡಿದ ಇನಿಂಗ್ಸ್​ನ ಮೂರನೇ ಓವರ್​ನ ಐದನೇ ಎಸೆತದಲ್ಲಿ ಸಿಎಸ್​ಕೆ ನಾಯಕ ರುತುರಾಜ್ ದೊಡ್ಡ ಹೊಡೆತಕ್ಕೆ ಯತ್ನಿಸಿದರು. ಚೆಂಡು ಬೌಂಡರಿ ಗೆರೆಯನ್ನು ದಾಟುತ್ತಿರುವಂತೆ ಬಹುತೇಕ ಕಂಡುಬಂದಿತು, ಆದರೆ ಈ ಸಂದರ್ಭ ರಶೀದ್ ಬೌಂಡರಿ ಬಳಿ ಜಿಗಿದು ಕ್ಯಾಚ್ ಪಡೆದರು, ಆದರೆ ಈ ಸಮಯದಲ್ಲಿ ಅವರು ನಿಯಂತ್ರಣ ಕಳೆದುಕೊಂಡರು ಮತ್ತು ಚೆಂಡು ಕೈಯಿಂದ ಚದುರಿಹೋಯಿತು.

ಗುಜರಾತ್ ಸಿಡಿಲಬ್ಬರದ ಬ್ಯಾಟಿಂಗ್ ನೋಡಿ ಕಣ್ಣೀರಿಟ್ಟ ಚೆನ್ನೈನ ಪುಟ್ಟ ಫ್ಯಾನ್; ವಿಡಿಯೋ ನೋಡಿ

ಆಗ ಚೆಂಡನ್ನು ಗಾಳಿಯಲ್ಲಿ ಎಸೆದ ರಶೀದ್ ಬೌಂಡರಿ ಗೆರೆಯಿಂದ ತನ್ನನ್ನು ರಕ್ಷಿಸಿಕೊಂಡು ಒಂದೇ ಕೈಯಲ್ಲಿ ಕ್ಲೀನ್ ಕ್ಯಾಚ್ ಪಡೆದರು. ಆರಂಭದಲ್ಲಿ ರಶೀದ್ ಅವರ ಕಾಲು ಬೌಂಡರಿ ಲೈನ್​ಗೆ ಮುಟ್ಟಿದೆ ಎಂದು ತೋರುತ್ತಿದ್ದರೂ, ವಿಡಿಯೋವನ್ನು ಸೂಕ್ಷ್ಮವಾಗಿ ಗಮನಿಸಿದಾಗ ಕೆಲವೇ ಇಂಚುಗಳಷ್ಟು ದೂರದಲ್ಲಿರುವುದು ಕಂಡುಬಂತು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.

ರಶೀದ್ ಖಾನ್ ಹಿಡಿದ ರೋಚಕ ಕ್ಯಾಚ್ ವಿಡಿಯೋ ಇಲ್ಲಿದೆ:

 

ರಾಹುಲ್ ಬೆನ್ನಿಗೆ ನಿಂತ ಮಾಜಿ ಕೋಚ್; ಸಂಜೀವ್ ಗೋಯೆಂಕಾ ವಿರುದ್ಧ ಗಂಭೀರ್ ಗರಂ..!

ಮುಖ್ಯವಾದ ಪಂದ್ಯದಲ್ಲಿ ಚೆನ್ನೈ ನಾಯಕ ರುತುರಾಜ್ ಗಾಯಕ್ವಾಡ್ ಖಾತೆ ತೆರೆಯದೆ ಪೆವಿಲಿಯನ್ ಸೇರಿಕೊಂಡರು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ ಟೈಟಾನ್ಸ್ ತಂಡ ನಿಗದಿತ 20 ಓವರ್‌ಗಳಲ್ಲಿ 231 ರನ್ ಗಳಿಸಿತ್ತು. ಗುಜರಾತ್ ಪರ ಶುಭ್‌ಮನ್ ಗಿಲ್ ಮತ್ತು ಸುದರ್ಶನ್ ಶತಕ ಸಿಡಿಸಿದ್ದರು. ಸಿಎಸ್​ಕೆ 20 ಓವರ್​ಗಳಲ್ಲಿ 8 ವಿಕೆಟ್ ನಷ್ಟಕ್ಕೆ 196 ರನ್ ಗಳಿಸಿ ಸೋಲು ಕಂಡಿತು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ