GT vs CSK Highlights, IPL 2024: ಗುಜರಾತ್ ವಿರುದ್ಧ ಚೆನ್ನೈಗೆ 35 ರನ್ ಸೋಲು

ಪೃಥ್ವಿಶಂಕರ
|

Updated on:May 10, 2024 | 11:40 PM

Gujarat Titans vs Chennai Super Kings Highlights in Kannada: ವೇಗದ ಬೌಲರ್ ಮೋಹಿತ್ ಶರ್ಮಾ ಅವರ ಮೂರು ವಿಕೆಟ್‌ಗಳ ನೆರವಿನಿಂದ ಗುಜರಾತ್ ಟೈಟಾನ್ಸ್ 35 ರನ್‌ಗಳಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಸೋಲಿಸಿ, ಪ್ಲೇ ಆಫ್‌ನ ರೇಸ್‌ನಲ್ಲಿ ಇನ್ನು ಉಳಿದಿದೆ. ಇದರೊಂದಿಗೆ ಲೀಗ್ ಸುತ್ತು ಇನ್ನಷ್ಟು ಕುತೂಹಲ ಕೆರಳಿಸಿದೆ.

GT vs CSK Highlights, IPL 2024: ಗುಜರಾತ್ ವಿರುದ್ಧ ಚೆನ್ನೈಗೆ 35 ರನ್ ಸೋಲು

ಅಹಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯವನ್ನು ಗುಜರಾತ್ ಟೈಟಾನ್ಸ್ ತಂಡ 35 ರನ್​ಗಳಿಂದ ಗೆದ್ದುಕೊಂಡಿದೆ. ವೇಗದ ಬೌಲರ್ ಮೋಹಿತ್ ಶರ್ಮಾ ಅವರ ಮೂರು ವಿಕೆಟ್‌ಗಳ ನೆರವಿನಿಂದ ಗುಜರಾತ್ ಟೈಟಾನ್ಸ್ 35 ರನ್‌ಗಳಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಸೋಲಿಸಿ, ಪ್ಲೇ ಆಫ್‌ನ ರೇಸ್‌ನಲ್ಲಿ ಇನ್ನು ಉಳಿದಿದೆ. ಇದರೊಂದಿಗೆ ಲೀಗ್ ಸುತ್ತು ಇನ್ನಷ್ಟು ಕುತೂಹಲ ಕೆರಳಿಸಿದೆ. ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಗುಜರಾತ್, ಶುಭ್‌ಮನ್ ಗಿಲ್ ಮತ್ತು ಸಾಯಿ ಸುದರ್ಶನ್ ಅವರ ಶತಕಗಳ ನೆರವಿನಿಂದ 20 ಓವರ್‌ಗಳಲ್ಲಿ ಮೂರು ವಿಕೆಟ್‌ ಕಳೆದುಕೊಂಡು 231 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ ಗುಜರಾತ್ ತಂಡದ ಬೌಲರ್‌ಗಳು ಅಮೋಘ ಪ್ರದರ್ಶನ ನೀಡಿದ್ದರಿಂದ ಚೆನ್ನೈ ತಂಡ 20 ಓವರ್‌ಗಳಲ್ಲಿ ಎಂಟು ವಿಕೆಟ್‌ಗೆ 196 ರನ್ ಗಳಿಸಲಷ್ಟೇ ಶಕ್ತವಾಯಿತು. ಚೆನ್ನೈ ಪರ ಡೆರಿಲ್ ಮಿಚೆಲ್ 63 ರನ್ ಮತ್ತು ಮೊಯಿನ್ ಅಲಿ 56 ರನ್ ಗಳಿಸಿದರು. ನಾಲ್ಕನೇ ವಿಕೆಟ್‌ಗೆ ಈ ಇಬ್ಬರು ಬ್ಯಾಟ್ಸ್‌ಮನ್‌ಗಳ ನಡುವೆ 109 ರನ್‌ಗಳ ಜೊತೆಯಾಟವಿತ್ತು, ಆದರೆ ಮಿಚೆಲ್ ಔಟಾದ ನಂತರ, ಚೆನ್ನೈ ಇನ್ನಿಂಗ್ಸ್ ಮತ್ತೊಮ್ಮೆ ತತ್ತರಿಸಿ ಚೇತರಿಸಿಕೊಳ್ಳಲು ಸಾಧ್ಯವಾಗಲಿಲ್ಲ.

LIVE NEWS & UPDATES

The liveblog has ended.
  • 10 May 2024 11:36 PM (IST)

    35 ರನ್ ಗೆಲುವು

    ಗುಜರಾತ್ ನೀಡಿದ 231 ರನ್​ಗಳ ಗುರಿ ಬೆನ್ನಟ್ಟಿದ ಚೆನ್ನೈ ತಂಡ 20 ಓವರ್‌ಗಳಲ್ಲಿ ಎಂಟು ವಿಕೆಟ್‌ಗೆ 196 ರನ್ ಗಳಿಸಲಷ್ಟೇ ಶಕ್ತವಾಯಿತು.

  • 10 May 2024 11:18 PM (IST)

    ಜಡೇಜಾ ಔಟ್

    ರವೀಂದ್ರ ಜಡೇಜಾ 10 ಎಸೆತಗಳಲ್ಲಿ 18 ರನ್ ಬಾರಿಸಿ ರಶೀದ್​ ಖಾನ್​ಗೆ ಬಲಿಯಾದರು.

  • 10 May 2024 11:14 PM (IST)

    16 ಓವರ್‌ ಮುಕ್ತಾಯ

    232 ರನ್‌ಗಳ ಗುರಿ ಬೆನ್ನತ್ತಿದ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡ 16 ಓವರ್‌ಗಳ ಅಂತ್ಯಕ್ಕೆ 5 ವಿಕೆಟ್‌ ಕಳೆದುಕೊಂಡು 162 ರನ್‌ ಗಳಿಸಿದೆ. ಈಗ ಗೆಲ್ಲಲು ಕೊನೆಯ 4 ಓವರ್‌ಗಳಲ್ಲಿ 70 ರನ್ ಗಳಿಸಬೇಕಿದೆ.

  • 10 May 2024 10:59 PM (IST)

    ಅಲಿ 56 ರನ್ ಬಾರಿಸಿ ಔಟ್

    ಮೊಯಿನ್ ಅಲಿ ಇನ್ನಿಂಗ್ಸ್ 56 ರನ್​ಗಳಿಗೆ ಅಂತ್ಯಗೊಂಡಿದೆ.

    ಚೆನ್ನೈ ಸ್ಕೋರ್; 135/ 5

  • 10 May 2024 10:46 PM (IST)

    ಮಿಚೆಲ್ ಔಟ್

    34 ಎಸೆತಗಳಲ್ಲಿ 63 ರನ್‌ಗಳ ಅದ್ಭುತ ಇನ್ನಿಂಗ್ಸ್ ಆಡಿದ ಡೆರಿಲ್ ಮಿಚೆಲ್, ಮೋಹಿತ್ ಶರ್ಮಾಗೆ ಬಲಿಯಾದರು.

  • 10 May 2024 10:38 PM (IST)

    11 ಓವರ್‌ ಮುಕ್ತಾಯ

    ಪವರ್‌ಪ್ಲೇಯಲ್ಲಿ 3 ವಿಕೆಟ್‌ಗಳನ್ನು ಕಳೆದುಕೊಂಡ ನಂತರ, ಡೆರಿಲ್ ಮಿಚೆಲ್ ಮತ್ತು ಮೊಯಿನ್ ಅಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಇನ್ನಿಂಗ್ಸ್ ಜವಬ್ದಾರಿ ಹೊತ್ತಿದ್ದಾರೆ. 11 ಓವರ್‌ಗಳ ಅಂತ್ಯಕ್ಕೆ ಚೆನ್ನೈ 105 ರನ್‌ ಕಲೆಹಾಕಿದೆ. ಮಿಚೆಲ್ 50 ಮತ್ತು ಮೊಯಿನ್ 48 ರನ್ ಗಳಿಸಿ ಆಡುತ್ತಿದ್ದಾರೆ.

  • 10 May 2024 10:29 PM (IST)

    ಮಿಚೆಲ್ ಅರ್ಧಶತಕ

    ಆರಂಭದಲ್ಲೇ 3 ವಿಕೆಟ್ ಕಳೆದುಕೊಂಡಿದ್ದ ಚೆನ್ನೈಗೆ ಮಿಚೆಲ್ ಆಸರೆಯಾಗಿದ್ದಾರೆ. 27 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ್ದಾರೆ.

    10 ಓವರ್ ಪೂರ್ಣ; 86/3

  • 10 May 2024 10:20 PM (IST)

    ಪವರ್ ಪ್ಲೇ ಅಂತ್ಯ

    232 ರನ್‌ಗಳ ಗುರಿ ಬೆನ್ನತ್ತಿದ ಚೆನ್ನೈ ಸೂಪರ್ ಕಿಂಗ್ಸ್ ತಂಡ 6 ಓವರ್‌ಗಳ ಅಂತ್ಯಕ್ಕೆ 3 ವಿಕೆಟ್ ನಷ್ಟಕ್ಕೆ 43 ರನ್ ಗಳಿಸಿದೆ. ಡೆರಿಲ್ ಮಿಚೆಲ್ 21 ರನ್ ಹಾಗೂ ಮೊಯಿನ್ ಅಲಿ 18 ರನ್ ಗಳಿಸಿ ಆಡುತ್ತಿದ್ದಾರೆ.

  • 10 May 2024 10:07 PM (IST)

    ರುತುರಾಜ್ ಶೂನ್ಯಕ್ಕೆ ಔಟ್

    ಚೆನ್ನೈ ನಾಯಕ ರುತುರಾಜ್ ಗಾಯಕ್‌ವಾಡ್ ಖಾತೆ ತೆರೆಯದೆ ಪೆವಿಲಿಯನ್‌ಗೆ ಮರಳಿದ್ದಾರೆ. ಇದರೊಂದಿಗೆ 10 ರನ್​ಗಳಿಗೆ ಚೆನ್ನೈ ಸೂಪರ್ ಕಿಂಗ್ಸ್ 3ನೇ ವಿಕೆಟ್ ಕಳೆದುಕೊಂಡಿದೆ.

  • 10 May 2024 09:52 PM (IST)

    ರಹಾನೆ ಔಟ್

    ಕೇವಲ 1 ರನ್ ಬಾರಿಸಿ ಅಜಿಂಕ್ಯ ರಹಾನೆ ಸಂದೀಪ್ ವಾರಿಯರ್‌ಗೆ ಬಲಿಯಾದರು. 2 ರನ್ ಗಳಿಸುವಷ್ಟರಲ್ಲಿ ಚೆನ್ನೈ ಎರಡನೇ ವಿಕೆಟ್ ಕಳೆದುಕೊಂಡಿದೆ.

  • 10 May 2024 09:51 PM (IST)

    ಮೊದಲ ವಿಕೆಟ್

    ಗುಜರಾತ್ ಟೈಟಾನ್ಸ್ ವಿರುದ್ಧ 232 ರನ್​ಗಳ ಗುರಿ ಬೆನ್ನತ್ತಿದ ಚೆನ್ನೈ ಸೂಪರ್ ಕಿಂಗ್ಸ್ ಕೇವಲ 2 ರನ್​ಗಳಿಗೆ ಮೊದಲ ವಿಕೆಟ್ ಕಳೆದುಕೊಂಡಿದೆ ರಚಿನ್ ರವೀಂದ್ರ ಔಟ್.

  • 10 May 2024 09:23 PM (IST)

    231 ರನ್ ಗುರಿ

    ಗುಜರಾತ್ ತಂಡ ಚೆನ್ನೈಗೆ 232 ರನ್​ಗಳ ಗುರಿ ನೀಡಿದೆ. ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಗುಜರಾತ್ 20 ಓವರ್ ಗಳಲ್ಲಿ ಮೂರು ವಿಕೆಟ್ ಕಳೆದುಕೊಂಡು 231 ರನ್ ಗಳಿಸಿತು. ನಾಯಕ ಶುಭಮನ್ ಗಿಲ್ 55 ಎಸೆತಗಳಲ್ಲಿ ಒಂಬತ್ತು ಬೌಂಡರಿ ಹಾಗೂ 6 ಸಿಕ್ಸರ್ ನೆರವಿನಿಂದ 104 ರನ್ ಹಾಗೂ ಸಾಯಿ ಸುದರ್ಶನ್ 51 ಎಸೆತಗಳಲ್ಲಿ 5 ಬೌಂಡರಿ ಹಾಗೂ 7 ಸಿಕ್ಸರ್ ನೆರವಿನಿಂದ 103 ರನ್ ಗಳಿಸಿದರು. ಶುಭಮನ್ ಮತ್ತು ಸುದರ್ಶನ್ ನಡುವೆ 210 ರನ್‌ಗಳ ದಾಖಲೆಯ ಜೊತೆಯಾಟವಿತ್ತು.

  • 10 May 2024 09:21 PM (IST)

    104 ರನ್ ಬಾರಿಸಿ ಗಿಲ್ ಔಟ್

    104 ರನ್‌ಗಳ ಅದ್ಭುತ ಇನ್ನಿಂಗ್ಸ್‌ ಆಡಿ ನಾಯಕ ಶುಭಮನ್ ಗಿಲ್ ವಿಕೆಟ್ ಒಪ್ಪಿಸಿದರು.

  • 10 May 2024 09:13 PM (IST)

    ಸುದರ್ಶನ್ ಶತಕ ಬಾರಿಸಿ ಔಟ್

    ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 103 ರನ್‌ಗಳ ಅಮೋಘ ಶತಕ ಬಾರಿಸಿದ ಸಾಯಿ ಸುದರ್ಶನ್ ಅಂತಿಮವಾಗಿ ವಿಕೆಟ್ ಒಪ್ಪಿಸಿದ್ದಾರೆ.

  • 10 May 2024 09:02 PM (IST)

    ಗಿಲ್ ಮತ್ತು ಸುದರ್ಶನ್ ಶತಕ

    ಗುಜರಾತ್ ಟೈಟಾನ್ಸ್ ತಂಡದ ನಾಯಕ ಶುಭಮನ್ ಗಿಲ್ ಮತ್ತು ಸಾಯಿ ಸುದರ್ಶನ್ ಇಬ್ಬರೂ ಶತಕ ಪೂರೈಸಿದ್ದಾರೆ. ಈ ಪಂದ್ಯದಲ್ಲಿ ಗುಜರಾತ್ ತಂಡ 17 ಓವರ್‌ಗಳ ಅಂತ್ಯಕ್ಕೆ 209 ರನ್ ಗಳಿಸಿದೆ.

  • 10 May 2024 08:55 PM (IST)

    15 ಓವರ್‌ಗಳಲ್ಲಿ 190 ರನ್

    15 ಓವರ್‌ಗಳ ಆಟದ ಅಂತ್ಯಕ್ಕೆ ಗುಜರಾತ್ ಟೈಟಾನ್ಸ್ ಯಾವುದೇ ವಿಕೆಟ್ ನಷ್ಟವಿಲ್ಲದೆ 190 ರನ್ ಗಳಿಸಿದೆ. ಶುಭಮನ್ ಗಿಲ್ 93 ರನ್ ಹಾಗೂ ಸಾಯಿ ಸುದರ್ಶನ್ 94 ರನ್ ಗಳಿಸಿ ಆಡುತ್ತಿದ್ದಾರೆ.

  • 10 May 2024 08:38 PM (IST)

    12 ಓವರ್‌ ಪೂರ್ಣ

    ಗುಜರಾತ್ ಟೈಟಾನ್ಸ್ ತಂಡದ ಆರಂಭಿಕ ಬ್ಯಾಟ್ಸ್ ಮನ್ ಗಳು ಅಮೋಘ ಬ್ಯಾಟಿಂಗ್ ಪ್ರದರ್ಶಿಸಿದ್ದು, 12 ಓವರ್​ಗಳ ಅಂತ್ಯಕ್ಕೆ ತಂಡದ ಸ್ಕೋರ್ ಯಾವುದೇ ವಿಕೆಟ್ ನಷ್ಟವಿಲ್ಲದೆ 143 ರನ್ ಆಗಿದೆ. ಸಾಯಿ ಸುದರ್ಶನ್ 80 ರನ್ ಹಾಗೂ ಶುಭ್‌ಮನ್ ಗಿಲ್ 61 ರನ್ ಗಳಿಸಿ ಆಡುತ್ತಿದ್ದಾರೆ.

  • 10 May 2024 08:18 PM (IST)

    ಸುದರ್ಶನ್ ಅರ್ಧಶತಕ

    ಒಂಬತ್ತು ಓವರ್‌ಗಳಲ್ಲಿ ಗುಜರಾತ್ ಯಾವುದೇ ವಿಕೆಟ್ ನಷ್ಟವಿಲ್ಲದೆ 94 ರನ್ ಗಳಿಸಿದೆ. ಸಾಯಿ ಸುದರ್ಶನ್ ತಮ್ಮ ಐಪಿಎಲ್ ವೃತ್ತಿಜೀವನದ ಏಳನೇ ಅರ್ಧಶತಕ ದಾಖಲಿಸಿದ್ದಾರೆ. ಶುಭಮನ್ ಗಿಲ್ ಕೂಡ ತಮ್ಮ 21 ನೇ ಅರ್ಧಶತಕದ ಸಮೀಪದಲ್ಲಿದ್ದಾರೆ. ಸದ್ಯ ಶುಭಮನ್ 21 ಎಸೆತಗಳಲ್ಲಿ 40 ರನ್ ಹಾಗೂ ಸುದರ್ಶನ್ 33 ಎಸೆತಗಳಲ್ಲಿ 52 ರನ್ ಗಳಿಸಿ ಕ್ರೀಸ್‌ನಲ್ಲಿದ್ದಾರೆ. ಚೆನ್ನೈ ಬೌಲರ್‌ಗಳು ವಿಕೆಟ್‌ಗಳ ಹಂಬಲದಲ್ಲಿದ್ದಾರೆ.

  • 10 May 2024 08:03 PM (IST)

    ಪವರ್ ಪ್ಲೇ ಅಂತ್ಯ

    ಗುಜರಾತ್ ಟೈಟಾನ್ಸ್ ತಂಡ 6 ಓವರ್‌ಗಳ ಅಂತ್ಯಕ್ಕೆ ಯಾವುದೇ ವಿಕೆಟ್ ನಷ್ಟವಿಲ್ಲದೆ 58 ರನ್ ಗಳಿಸಿದೆ. ಶುಭಮನ್ ಗಿಲ್ 29 ರನ್ ಹಾಗೂ ಸಾಯಿ ಸುದರ್ಶನ್ 28 ರನ್ ಗಳಿಸಿ ಆಡುತ್ತಿದ್ದಾರೆ.

  • 10 May 2024 07:48 PM (IST)

    ಗುಜರಾತ್ ಇನ್ನಿಂಗ್ಸ್ ಆರಂಭ

    ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಗುಜರಾತ್ ಟೈಟಾನ್ಸ್ ಇನ್ನಿಂಗ್ಸ್ ಆರಂಭವಾಗಿದೆ. ನಾಯಕ ಶುಭಮನ್ ಗಿಲ್ ಅವರೊಂದಿಗೆ ಸಾಯಿ ಸುದರ್ಶನ್ ಗುಜರಾತ್‌ಗೆ ಇನ್ನಿಂಗ್ಸ್ ಆರಂಭಿಸಿದ್ದಾರೆ.

  • 10 May 2024 07:48 PM (IST)

    ಚೆನ್ನೈ ಸೂಪರ್ ಕಿಂಗ್ಸ್

    ರುತುರಾಜ್ ಗಾಯಕ್ವಾಡ್ (ನಾಯಕ), ರಚಿನ್ ರವೀಂದ್ರ, ಡೆರಿಲ್ ಮಿಚೆಲ್, ಶಿವಂ ದುಬೆ, ಮೊಯಿನ್ ಅಲಿ, ರವೀಂದ್ರ ಜಡೇಜಾ, ಎಂಎಸ್ ಧೋನಿ (ವಿಕೆಟ್ ಕೀಪರ್), ಮಿಚೆಲ್ ಸ್ಯಾಂಟ್ನರ್, ಶಾರ್ದೂಲ್ ಠಾಕೂರ್, ತುಷಾರ್ ದೇಶಪಾಂಡೆ, ಸಿಮರ್ಜೀತ್ ಸಿಂಗ್.

  • 10 May 2024 07:47 PM (IST)

    ಗುಜರಾತ್ ಟೈಟಾನ್ಸ್

    ಶುಬ್ಮನ್ ಗಿಲ್ (ನಾಯಕ), ಸಾಯಿ ಸುದರ್ಶನ್, ಶಾರುಖ್ ಖಾನ್, ಡೇವಿಡ್ ಮಿಲ್ಲರ್, ಮ್ಯಾಥ್ಯೂ ವೇಡ್ (ವಿಕೆಟ್ ಕೀಪರ್), ರಾಹುಲ್ ತೆವಾಟಿಯಾ, ರಶೀದ್ ಖಾನ್, ನೂರ್ ಅಹ್ಮದ್, ಉಮೇಶ್ ಯಾದವ್, ಮೋಹಿತ್ ಶರ್ಮಾ, ಕಾರ್ತಿಕ್ ತ್ಯಾಗಿ, ಸಂದೀಪ್

  • 10 May 2024 07:02 PM (IST)

    ಕೊನೆಗೂ ಟಾಸ್ ಗೆದ್ದ ರುತುರಾಜ್

    ಆಡಿರುವ 11 ಪಂದ್ಯಗಳಲ್ಲಿ ಒಮ್ಮೆ ಮಾತ್ರ ಟಾಸ್ ಗೆದ್ದಿದ್ದ ರುತುರಾಜ್ ಇದೀಗ 12ನೇ ಪಂದ್ಯದಲ್ಲಿ ಟಾಸ್ ಗೆದ್ದು,ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ.

  • Published On - May 10,2024 7:01 PM

    Follow us
    ‘ವಟವಟ ಅಂತಾನೆ’; ಐಶ್ವರ್ಯಾಗೆ ಶಿಶಿರ್ ಮೇಲಿದ್ದ ಅಭಿಪ್ರಾಯ ಬದಲಾಯ್ತಾ?
    ‘ವಟವಟ ಅಂತಾನೆ’; ಐಶ್ವರ್ಯಾಗೆ ಶಿಶಿರ್ ಮೇಲಿದ್ದ ಅಭಿಪ್ರಾಯ ಬದಲಾಯ್ತಾ?
    ಮನೆಯಲ್ಲಿ ತೆಂಗಿನಕಾಯಿ ಕಟ್ಟುವುದರ ಹಿಂದಿನ ಅರ್ಥವೇನು ಗೊತ್ತಾ? ವಿಡಿಯೋ ನೋಡಿ
    ಮನೆಯಲ್ಲಿ ತೆಂಗಿನಕಾಯಿ ಕಟ್ಟುವುದರ ಹಿಂದಿನ ಅರ್ಥವೇನು ಗೊತ್ತಾ? ವಿಡಿಯೋ ನೋಡಿ
    ಇಂದಿನ ರಾಶಿ ಫಲ, ಪಂಚಾಂಗ ಮತ್ತು ಜ್ಯೋತಿಷ್ಯ ಭವಿಷ್ಯ ತಿಳಿಯಿರಿ
    ಇಂದಿನ ರಾಶಿ ಫಲ, ಪಂಚಾಂಗ ಮತ್ತು ಜ್ಯೋತಿಷ್ಯ ಭವಿಷ್ಯ ತಿಳಿಯಿರಿ
    ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
    ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
    ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
    ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
    ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
    ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
    ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
    ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
    ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
    ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
    ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
    ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
    ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
    ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ