ಎಂಎಸ್ ಧೋನಿ (MS Dhoni) ನಾಯಕತ್ವ ತ್ಯಜಿಸಿದ ಬಳಿಕ ಚೆನ್ನೈ ಸೂಪರ್ ಕಿಂಗ್ಸ್ಗೆ ಅದೃಷ್ಟ ಕೈಹಿಡಿಯುತ್ತಿಲ್ಲ. ಆರಂಭದಲ್ಲಿ ಸತತ ನಾಲ್ಕು ಸೋಲು ಕಂಡು ಭಾರೀ ಮುಖಭಂಗಕ್ಕೆ ಒಳಗಾಗಿದ್ದ ಸಿಎಸ್ಕೆ ತನ್ನ ಐದನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಜಯ ಸಾಧಿಸಿತು. ಆದರೀಗ ಮತ್ತೆ ಸೋಲಿನತ್ತ ಮುಖ ಮಾಡಿದೆ. ಭಾನುವಾರ ನಡೆದ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ತಂಡ ಐಪಿಎಲ್-15ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ (GT vs CSK) ಎದುರು 3 ವಿಕೆಟ್‌ಗಳ ರೋಚಕ ಗೆಲುವು ದಾಖಲಿಸಿತು. ಡೇವಿಡ್ ಮಿಲ್ಲರ್ (94*ರನ್, 51 ಎಸೆತ, 8ಬೌಂಡರಿ, 6 ಸಿಕ್ಸರ್) ಹಾಗೂ ಹಂಗಾಮಿ ನಾಯಕ ರಶೀದ್ ಖಾನ್ (40ರನ್, 21 ಎಸೆತ, 2 ಬೌಂಡರಿ, 3 ಸಿಕ್ಸರ್) ಅಬ್ಬರಕ್ಕೆ ತತ್ತರಿಸಿದ ಸಿಎಸ್ಕೆ ಲೀಗ್‌ನಲ್ಲಿ 5ನೇ ಸೋಲು ಕಂಡಿದೆ. ಇದೀಗ ಹಾಲಿ ಚಾಂಪಿಯನ್ನರ ಮುಂದಿನ ಹಾದಿ ಮತ್ತಷ್ಟು ಕಠಿಣಗೊಂಡಿದೆ. ಪಂದ್ಯ ಮುಗಿದ ಬಳಿಕ ಮಾತನಾಡಿದ ಚೆನ್ನೈ ನಾಯಕ ರವೀಂದ್ರ ಜಡೇಜಾ (Ravindra Jadeja) ಏನು ಹೇಳಿದರು ಕೇಳಿ.
“ಬೌಲಿಂಗ್ನಲ್ಲಿ ನಮ್ಮ ಆರಂಭ ಅತ್ಯುತ್ತಮವಾಗಿತ್ತು. ಮೊದಲ ಆರು ಓವರ್ಗಳಲ್ಲಿ ಬೌಲರ್ಗಳು ಉತ್ತಮವಾಗಿ ಚೆಂಡನ್ನು ಎಸೆದರು. ಬ್ಯಾಟಿಂಗ್ ವಿಚಾರಕ್ಕೆ ಬಂದರೆ ನಾವು ಇನ್ನು ಕೆಲ ಸಮಯ ಕ್ರೀಸ್ನಲ್ಲಿ ಇರಬೇಕಿತ್ತು. ಚೆಂಡು ತಿರುಗುತ್ತಿತ್ತು. ನಾವು ಅಂದುಕೊಂಡ ಯೋಜನೆಯಂತೆ ಕೊನೆಯ ಐದು ಓವರ್ಗಳನ್ನು ಮಾಡಲು ಸಾಧ್ಯವಾಗಲಿಲ್ಲ. ಕ್ರಿಸ್ ಜೋರ್ಡನ್ ಯಾರ್ಕರ್ ಹಾಕಲು ಪ್ರಯತ್ನಿಸುತ್ತಿದ್ದರು. ಆದರೆ, ಅದು ಸರಿಯಾಗಿ ಫಲಿತಾಂಶ ನೀಡಲಿಲ್ಲ. ಟಿ20 ಕ್ರಿಕೆಟ್ನ ಬ್ಯೂಟಿ ಎಂದರೆ ಇದೇ ಅಲ್ವಾ,” ಎಂದು ಹೇಳುವ ಮೂಲಕ ಜಡೇಜಾ ಹೆcfcu ಮಾತಾಡದೆ ಹಿಂದೆ ಸರಿದರು.
ಹಾರ್ದಿಕ್ ಪಾಂಡ್ಯ ಅನುಪಸ್ಥಿತಿಯಲ್ಲಿ ರಶೀದ್ ಖಾನ್ ತಂಡದವನ್ನು ಮುನ್ನಡೆಸಿ ನಾಯಕನಾಗಿ ಮೊದಲ ಗೆಲುವು ಕಂಡರು. ಇವರು ಮಾತನಾಡಿ, “ಐಪಿಎಲ್ನಲ್ಲಿ ಇದೊಂದು ಅದ್ಭುತ ಅನುಭವ. ತಂಡವನ್ನು ಮುನ್ನಡೆಸಿದ್ದು ಕನಸು ನನಸಾದಂತಿದೆ. 7 ಓವರ್ಗಳಲ್ಲಿ 90 ರನ್‌ಗಳನ್ನು ಬೆನ್ನಟ್ಟುವ ಪ್ಲಾನ್ ನಮ್ಮದಾಗಿತ್ತು. ಕೊನೆಯ ಹಂತದ ವರೆಗೂ ಪಂದ್ಯವನ್ನು ಕೊಂಡೊಯ್ಯುವುದು ನಮ್ಮ ಯೋಜನೆಯಾಗಿತ್ತು. ಮೊದಲ ಐದು ಪಂದ್ಯಗಳಲ್ಲಿ ನಾನು ಬ್ಯಾಟಿಂಗ್ ಮಾಡಿರಲಿಲ್ಲ. ಇದರ ಬಗ್ಗೆ ಚರ್ಚೆ ನಡೆಸಿ ನಾನು ಜವಾಬ್ದಾರಿ ತೆಗೆದುಕೊಂಡೆ. ನಮ್ಮಲ್ಲಿ ಇಬ್ಬರು ಬ್ಯಾಟ್ಸ್ಮನ್ಗಳು ದೊಡ್ಡ ರನ್ ಕಲೆಹಾಕಬೇಕಿತ್ತು. ನಾನು ಮಿಲ್ಲರ್ ಜೊತೆ ದೊಡ್ಡ ಹೊಡೆತ ಹೊಡೆಯುವ ಬಗ್ಗೆ ಮಾತಾಡಿದೆ. ಅದರಂತೆ ನಾನು ಮುಂದೆ ಬಂದು ಬಿರುಸಿನ ಆಟಕ್ಕೆ ಮುಂದಾದೆ,” ಎಂದು ಗೇಮ್ ಪ್ಲಾನ್ ಅನ್ನು ವಿವರಿಸಿದ್ದಾರೆ.
ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಸಿಎಸ್ಕೆಗೆ ಉತ್ತಮ ಆರಂಭ ಸಿಗಲಿಲ್ಲ. ಉತ್ತಪ್ಪ (3) ಇಲ್ಲಿ ಸಂಪೂರ್ಣ ವೈಫಲ್ಯ ಕಂಡರು. ಮೊಯಿನ್ ಅಲಿ ಒಂದೇ ರನ್ ಮಾಡಿ ವಾಪಸಾದರು. ಆದರೆ ರುತುರಾಜ್ ಗಾಯಕ್ವಾಡ್ ಮತ್ತು ಅಂಬಾಟಿ ರಾಯುಡು ಈ ಬಾರಿ ಕೈಬಿಡಲಿಲ್ಲ. ಈ ಜೋಡಿ 56 ಎಸೆತಗಳಿಂದ 92 ರನ್ ಪೇರಿಸಿತು. 15ನೇ ಓವರ್‌ನಲ್ಲಿ ರಾಯುಡು (46) ಅವರನ್ನು ಔಟ್ ಮಾಡುವ ಮೂಲಕ ಜೋಸೆಫ್ ಗುಜರಾತ್‌ಗೆ ಅಗತ್ಯವಾದ ಬ್ರೇಕ್ ಒದಗಿಸಿದರು. ಗಾಯಕ್ವಾಡ್ 48 ಎಸೆತಗಳಿಂದ 73 ರನ್ ಬಾರಿಸಿದರು. ಚೆನ್ನೈ 20 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 169 ರನ್ ಗಳಿಸಿತು.
ಟಾರ್ಗೆಟ್ ಬೆನ್ನತ್ತಿದ ಗುಜರಾತ್ ಟೈಟಾನ್ಸ್ ನೀರಸ ಆರಂಭ ಪಡೆಯಿತು. ಶುಭ್ಮನ್ ಗಿಲ್(0) ಮೊದಲ ಬಾಲ್‌ನಲ್ಲೇ ಔಟಾದರೆ, ವಿಜಯ್ ಶಂಕರ್(0) ಮತ್ತೊಮ್ಮೆ ಬ್ಯಾಟಿಂಗ್ ವೈಫಲ್ಯ ಅನುಭವಿಸಿದರು. ಗುಜರಾತ್ 87ಕ್ಕೆ 5 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಈ ಸಂದರ್ಭದಲ್ಲಿ ಮಿಲ್ಲರ್ (ಔಟಾಗದೆ 94; 51 ಎಸೆತ, 8 ಬೌಂಡರಿ, 6 ಸಿಕ್ಸರ್) ಮತ್ತು ಹಂಗಾಮಿ ನಾಯಕ ರಶೀದ್ ಖಾನ್ (40; 21 ಎ, 2 ಬೌಂ, 3 ಸಿ) ಸ್ಫೋಟಕ 70 ರನ್‌ಗಳನ್ನು ಸೇರಿಸಿ ಪಂದ್ಯದ ಚಿತ್ರಣವನ್ನೇ ಬದಲಿಸಿ ಗೆಲುವು ತಂದುಕೊಟ್ಟರು.
RR vs KKR: ಐಪಿಎಲ್ನಲ್ಲಿಂದು ಹೈವೋಲ್ಟೇಜ್ ಪಂದ್ಯ: ಗೆಲ್ಲಲೇ ಬೇಕಾದ ಒತ್ತಡದಲ್ಲಿ ರಾಜಸ್ತಾನ್-ಕೋಲ್ಕತ್ತಾ
GT vs CSK: ಸಿಎಸ್ಕೆ ಗೆಲುವಿಗೆ ಕಿಲ್ಲರ್ ಆದ ಮಿಲ್ಲರ್: ಈ ಥ್ರಿಲ್ಲರ್ ಪಂದ್ಯ ಹೇಗಿತ್ತು ನೋಡಿ