Shubhman Gill: ಶುಭ್​ಮನ್ ಗಿಲ್ ಸಹೋದರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ ಕೆಲ ಆರ್​ಸಿಬಿ ಫ್ಯಾನ್ಸ್: ವೈರಲ್ ಆಗುತ್ತಿದೆ ಫೋಟೋ

|

Updated on: May 22, 2023 | 11:58 AM

RCB vs GT, IPL 2023: ಆರ್​ಸಿಬಿ ಹಾಗೂ ಗುಜರಾತ್ ನಡುವಣ ಈ ಹೈವೋಲ್ಟೇಜ್ ಪಂದ್ಯ ವೀಕ್ಷಿಸಲು ಶುಭ್​ಮನ್ ಗಿಲ್ ಅವರ ಸಹೋದರಿ ಶಹನೀಲ್ ಗಿಲ್ ಕೂಡ ಬಂದಿದ್ದರು. ಆದರೀಗ ಇವರು ವಾರದ ಹಿಂದೆ ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡ ಫೋಟೋಕ್ಕೆ ಸಾಕಷ್ಟು ಕಮೆಂಟ್​ಗಳು ಬರುತ್ತಿದೆ.

Shubhman Gill: ಶುಭ್​ಮನ್ ಗಿಲ್ ಸಹೋದರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ ಕೆಲ ಆರ್​ಸಿಬಿ ಫ್ಯಾನ್ಸ್: ವೈರಲ್ ಆಗುತ್ತಿದೆ ಫೋಟೋ
Shubhman Gill, Shahneel Gill and Virat Kohli
Follow us on

ಇಂಡಿಯನ್ ಪ್ರೀಮಿಯರ್ ಲೀಗ್​ನಿಂದ (IPL 2023) ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಹೊರಬಿದ್ದಿದೆ. ಗುಜರಾತ್ ಟೈಟಾನ್ಸ್ ವಿರುದ್ಧ ಆಡಿದ ಗೆಲ್ಲಲೇ ಬೇಕಾದ ಪಂದ್ಯದಲ್ಲಿ ಆರ್​ಸಿಬಿ (RCB vs GT) ಸೋಲು ಕಾಣುವ ಮೂಲಕ ಐಪಿಎಲ್ 2023ಕ್ಕೆ ಗುಡ್ ಬೈ ಹೇಳಿತು. ಬೆಂಗಳೂರು ತಂಡಕ್ಕೆ ಕಂಟಕವಾಗಿ ಪರಿಣಮಿಸಿದ್ದು ಜಿಟಿ ತಂಡದ ಬ್ಯಾಟರ್ ಶುಭ್​ಮನ್ ಗಿಲ್. ಆರ್​ಸಿಬಿ ನೀಡಿದ್ದ 198 ರನ್​ಗಳ ಟಾರ್ಗೆಟ್ ಬೆನ್ನಟ್ಟಿದ ಗುಜರಾತ್​ಗೆ ಶುಭ್​ಮನ್ ಗಿಲ್ (Shubhman Gill) ಸ್ಫೋಟಕ ಬ್ಯಾಟಿಂಗ್ ನಡೆಸಿ, ಆಕರ್ಷಕ ಶತಕ ಸಿಡಿಸಿ ಗೆಲುವು ತಂದುಕೊಟ್ಟರು. ಕೇವಲ 52 ಎಸೆತಗಳಲ್ಲಿ 5 ಫೋರ್, 8 ಸಿಕ್ಸರ್ ಸಿಡಿಸಿ ಅಜೇಯ 104 ರನ್ ಚಚ್ಚಿದರು.

ಆರ್​ಸಿಬಿ ಹಾಗೂ ಗುಜರಾತ್ ನಡುವಣ ಈ ಹೈವೋಲ್ಟೇಜ್ ಪಂದ್ಯ ವೀಕ್ಷಿಸಲು ಶುಭ್​ಮನ್ ಗಿಲ್ ಅವರ ಸಹೋದರಿ ಶಹನೀಲ್ ಗಿಲ್ ಕೂಡ ಬಂದಿದ್ದರು. ಆದರೀಗ ಇವರು ವಾರದ ಹಿಂದೆ ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡ ಫೋಟೋಕ್ಕೆ ಸಾಕಷ್ಟು ಕಮೆಂಟ್​ಗಳು ಬರುತ್ತಿದೆ. ಬೆಂಗಳೂರು ಸೋಲುತ್ತಿದ್ದಂತೆ ಶಹನೀಲ್ ಹಂಚಿಕೊಂಡಿರುವ ಫೋಟೋಕ್ಕೆ ಕೆಲ ಆರ್​ಸಿಬಿ ಅಭಿಮಾನಿಗಳು ಅಸಭ್ಯವಾಗಿ ಕಮೆಂಟ್ ಮಾಡಿದ್ದಾರೆ. ಆರ್​ಸಿಬಿ ಪಾಲಿಗೆ ವಿಲನ್ ಆದ ಶುಭ್​ಮನ್ ಗಿಲ್ ಅವರ ಸಹೋದರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ.

ಇದನ್ನೂ ಓದಿ
Virat Kohli: ಮೈದಾನದಲ್ಲಿ ಕಣ್ಣೀರಿಟ್ಟ ಸಿರಾಜ್, ಕೋಪದಲ್ಲಿ ಬಾಟಲ್ ಎಸೆದ ಕೊಹ್ಲಿ: ಇದು ಪಂದ್ಯದ ಬಳಿಕ ನಡೆದ ಘಟನೆ
ಶತಕ ಬಾರಿಸಿದ ವಿರಾಟ್ ಕೊಹ್ಲಿಗೆ ಸ್ಟೇಡಿಯಂನಿಂದ ಫ್ಲೈಯಿಂಗ್ ಕಿಸ್ ಕೊಟ್ಟ ಅನುಷ್ಕಾ ಶರ್ಮಾ; ಇಲ್ಲಿದೆ ವಿಡಿಯೋ
Faf Du Plessis: ಪಂದ್ಯ ಮುಗಿದ ಬಳಿಕ ನೋವು ತೋಡಿಕೊಂಡ ಆರ್​ಸಿಬಿ ನಾಯಕ ಫಾಫ್ ಡುಪ್ಲೆಸಿಸ್: ಏನು ಹೇಳಿದ್ರು ನೋಡಿ
Virat Kohli: ಸೋತರೂ ಅಭಿಮಾನಿಗಳನ್ನು ರಂಜಿಸಿದ ವಿರಾಟ್ ಶತಕ: ಕೊಹ್ಲಿಯಿಂದ ದಾಖಲೆಯ ಸೆಂಚುರಿ

IPL 2023: ಸೋತರೂ ಐಪಿಎಲ್​ನಲ್ಲಿ ಹೊಸ ದಾಖಲೆ ನಿರ್ಮಿಸಿದ ಫಾಫ್-ಕಿಂಗ್ ಕೊಹ್ಲಿ

 

ಇದರ ನಡುವೆ ಕೆಲ ಅಭಿಮಾನಿಗಳು ಗಿಲ್ ಹಾಗೂ ಶಹನೀಲ್ ಪರವಾಗಿ ತಕ್ಕ ಉತ್ತರ ಕೊಟ್ಟಿದ್ದಾರೆ. ಗಿಲ್ ತಮ್ಮ ತಂಡಕ್ಕೆ ಬೇಕಾದ ಕೊಡುಗೆ ಸಲ್ಲಿಸಿದ್ದಾರೆ. ಇದರಲ್ಲಿ ಅವರ ತಪ್ಪೇನಿದೆ?, ಅವರ ಸಹೋದರಿಯನ್ನು ಯಾಕೆ ಇದರ ನಡುವೆ ಎಳೆತರುತ್ತೀರಿ ಎಂದು ಬರೆದುಕೊಂಡಿದ್ದಾರೆ.

 

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್​ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆರ್​ಸಿಬಿ ಕೊಹ್ಲಿ ಶತಕದ ನೆರವಿನೊಂದಿಗೆ ಐದು ವಿಕೆಟ್​ ನಷ್ಟಕ್ಕೆ 197 ರನ್​ ಪೇರಿಸಿತ್ತು. ಡುಪ್ಲೆಸಿಸ್‌ 28 ರನ್‌, ಮ್ಯಾಕ್ಸ್‌ವೆಲ್‌ 11 ರನ್‌, ಮೈಕೆಲ್‌ ಬ್ರೇಸ್‌ವೆಲ್‌ 26 ರನ್‌ (16 ಎಸೆತ, 5 ಬೌಂಡರಿ), ಅನುಜ್‌ ರಾವತ್‌ 23 ರನ್​ಗಳ (15 ಎಸೆತ, 1 ಬೌಂಡರಿ, 1 ಸಿಕ್ಸರ್‌) ಕೊಡುಗೆ ನೀಡಿದರು. ಗುಜರಾತ್‌ ಪರ ನೂರ್‌ ಅಹ್ಮದ್‌ 2 ವಿಕೆಟ್‌ ಹಾಗೂ ಮೊಹಮ್ಮದ್‌ ಶಮಿ, ಯಶ್‌ ದಯಾಳ್‌, ರಶೀದ್‌ ಖಾನ್‌ ತಲಾ ಒಂದೊಂದು ವಿಕೆಟ್‌ ಪಡೆದು ಮಿಂಚಿದರು.

ಗುರಿ ಬೆನ್ನಟ್ಟಿದ ಗುಜರಾತ್​ ಪರ ಶುಭ್​ಮನ್​ ಗಿಲ್​ ಅದ್ಬುತ ಶತಕ ಬಾರಿಸುವ ಮೂಲಕ ತಂಡವನ್ನು ಗೆಲ್ಲಿಸಿದರು. ಇನ್ನೂ ಐದು ಎಸತೆಗಳು ಬಾಕಿ ಇರುವಾಗಲೇ ಗುಜರಾತ್​ ತಂಡ ಆರು ವಿಕೆಟ್​ಗಳಿಂದ ಗೆಲುವಿನ ನಗೆ ಬೀರಿತು. ಮುಖ್ಯವಾಗಿ ಎರಡನೇ ವಿಕೆಟ್​ ಗಿಲ್ ಹಾಗೂ ವಿಜಯ ಶಂಕರ್ ಉತ್ತಮ ಜೊತೆಯಾಟ ನೀಡಿದರು. ಸ್ಫೋಟಕ ಬ್ಯಾಟಿಂಗ್ ಮಾಡಿದ ವಿಜಯ್ ಶಂಕರ್ 35 ಎಸೆತದಲ್ಲಿ 53 ರನ್​ ಬಾರಿಸಿ ನಿರ್ಗಮಿಸಿದರು. ಈ ಜೋಡಿ 123 ರನ್​ಗಳ ಜೊತೆಯಾಟ ನೀಡಿ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿತು.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 11:53 am, Mon, 22 May 23