Faf Du Plessis: ಪಂದ್ಯ ಮುಗಿದ ಬಳಿಕ ನೋವು ತೋಡಿಕೊಂಡ ಆರ್​ಸಿಬಿ ನಾಯಕ ಫಾಫ್ ಡುಪ್ಲೆಸಿಸ್: ಏನು ಹೇಳಿದ್ರು ನೋಡಿ

RCB vs GT, IPL 2023: ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯ ಮುಗಿದ ಬಳಿಕ ಮಾತನಾಡಿದ ಆರ್​ಸಿಬಿ ನಾಯಕ ಫಾಫ್ ಡುಪ್ಲೆಸಿಸ್ ಬೇಸರ ಹೊರಹಾಕಿದ್ದಾರೆ. ಈ ಸೋಲಿನಿಂದ ತುಂಬಾ ನಿರಾಸೆ ಆಗಿದೆ ಎಂದು ನೋವು ತೋಡಿಕೊಂಡಿದ್ದಾರೆ.

Vinay Bhat
|

Updated on: May 22, 2023 | 9:19 AM

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಚೊಚ್ಚಲ ಬಾರಿಗೆ ಐಪಿಎಲ್ ಟ್ರೋಫಿ ಎತ್ತಿ ಹಿಡಿಯುವ ಅವಕಾಶವನ್ನು ಈ ಬಾರಿ ಕೂಡ ಕಳೆದುಕೊಂಡಿದೆ. ಪ್ಲೇ ಆಫ್​ಗೇರಲು ಗುಜರಾತ್ ಟೈಟಾನ್ಸ್ ವಿರುದ್ಧ ಗೆಲ್ಲಲೇ ಬೇಕಾದ ಪಂದ್ಯದಲ್ಲಿ ಸೋಲು ಕಾಣುವ ಮೂಲಕ ಆರ್​ಸಿಬಿ ಐಪಿಎಲ್ 2023 ರಿಂದ ಹೊರಬಿದ್ದಿದೆ.

1 / 8
ಮೊದಲು ಬ್ಯಾಟಿಂಗ್ ಮಾಡಿದ ಆರ್​ಸಿಬಿ ವಿರಾಟ್ ಕೊಹ್ಲಿ ಅವರ ಶತಕದ ನೆರವಿನಿಂದ 197 ರನ್ ಕಲೆಹಾಕಿದರೆ, ಟಾರ್ಗೆಟ್ ಬೆನ್ನಟ್ಟಿದ ಗುಜರಾತ್ 19.1 ಓವರ್​ನಲ್ಲಿ ದಡ ಮುಟ್ಟಿ 6 ವಿಕೆಟ್​ಗಳ ಜಯ ಸಾಧಿಸಿತು. ಜಿಟಿ ಪರ ಶುಭ್​ಮನ್ ಗಿಲ್ ಶತಕ ಬಾರಿಸಿದರೆ, ವಿಜಯ್ ಶಂಕರ್ ಅರ್ಧಶತಕ ಸಿಡಿಸಿದರು.

2 / 8
ಪಂದ್ಯ ಮುಗಿದ ಬಳಿಕ ಮಾತನಾಡಿದ ಆರ್​ಸಿಬಿ ನಾಯಕ ಫಾಫ್ ಡುಪ್ಲೆಸಿಸ್ ಬೇಸರ ಹೊರಹಾಕಿದ್ದಾರೆ. ಈ ಸೋಲಿನಿಂದ ತುಂಬಾ ನಿರಾಸೆ ಆಗಿದೆ ಎಂದು ನೋವು ತೋಡಿಕೊಂಡಿದ್ದಾರೆ.

3 / 8
ನಿಜ ಹೇಳಬೇಕೆಂದರೆ ಈ ಸೋಲು ತುಂಬಾ ನಿರಾಸೆ ತಂದಿದೆ. ಇಂದು ನಾವು ನಮ್ಮ ಬಲಿಷ್ಠ ತಂಡವನ್ನು ಕಣಕ್ಕಿಳಿಸಿದ್ದೆವು. ಆದರೆ, ಶುಭ್​ಮನ್ ಗಿಲ್ ಕಡೆಯಿಂದ ಅದ್ಭುತವಾದ ಶತಕ ಮೂಡಿಬಂತು. ಎರಡನೇ ಇನ್ನಿಂಗ್ಸ್ ವೇಳೆ ತುಂಬಾ ಒದ್ದೆ ಇತ್ತು. ಮೊದಲ ಇನ್ನಿಂಗ್ಸ್​ನಲ್ಲಿ ಕೂಡ ಇತ್ತು. ಎರಡನೇ ಇನ್ನಿಂಗ್ಸ್‌ನಲ್ಲಿ ಸಾಕಷ್ಟು ಹಿಡಿತ ಇರಲಿಲ್ಲ ಮತ್ತು ನಾವು ಕೆಲವು ಬಾರಿ ಚೆಂಡನ್ನು ಬದಲಾಯಿಸಬೇಕಾಗಿತ್ತು ಎಂದು ಹೇಳಿದ್ದಾರೆ.

4 / 8
ವಿರಾಟ್ ಕೊಹ್ಲಿ ಕಡೆಯಿಂದ ಊಹಿಸಲಾಗದ ಶತಕ ಬಂತು. ಅವರು ಸೆಂಚುರಿ ಬಾರಿಸಿ ಕಠಿಣ ಟಾರ್ಗೆಟ್ ನೀಡಿದರು. ಆದರೆ, ಗಿಲ್ ಅದ್ಭುತ ಆಟ ಪ್ರದರ್ಶಿಸಿ ಗೆಲುವನ್ನು ನಮ್ಮಿಂದ ಕಸಿದುಕೊಂಡರು. ನಮ್ಮ ಅಗ್ರ ನಾಲ್ಕು ಬ್ಯಾಟರ್​ಗಳ ಕಡೆಯಿಂದ ಉತ್ತಮ ಕೊಡುಗೆ ಬಂದಿದೆ - ಫಾಫ್ ಡುಪ್ಲೆಸಿಸ್.

5 / 8
ಈ ಸೀಸನ್​ನಲ್ಲಿ ನಮ್ಮ ಮಧ್ಯಮ ಕ್ರಮಾಂಕದಿಂದ ರನ್ ಬರಲಿಲ್ಲ. ಮುಖ್ಯವಾಗಿ ಇನ್ನಿಂಗ್ಸ್ ಅಂತಿಮ ಹಂತದಲ್ಲಿ ನಿರೀಕ್ಷೆಗೆ ತಕ್ಕಂತೆ ಬ್ಯಾಟಿಂಗ್ ಪ್ರದರ್ಶಿಸಿಲ್ಲ. ಜೊತೆಗೆ ಮಧ್ಯಮ ಓವರ್​ನಲ್ಲಿ ವಿಕೆಟ್ ಕೂಡ ಪಡೆದುಕೊಂಡಿಲ್ಲ ಎಂಬುದು ಫಾಫ್ ಅಭಿಪ್ರಾಯ.

6 / 8
ವಿರಾಟ್ ಕೊಹ್ಲಿ ಈ ಸೀಸನ್​ನಲ್ಲಿ ಅತ್ಯುತ್ತಮ ಬ್ಯಾಟಿಂಗ್ ಮಾಡಿದ್ದಾರೆ. ನಮ್ಮಿಬ್ಬರ ಜೊತೆಯಾಟ ಕೂಡ ಉತ್ತಮವಾಗಿತ್ತು. ಇಡೀ ಸೀಸನ್​ನಲ್ಲಿ 40ಕ್ಕಿಂತ ಕಡಿಮೆ ಜೊತೆಯಾಟ ನಾವು ಆಡಿಲ್ಲ. ಇನ್ನಿಂಗ್ಸ್​ನ ಕೊನೆಯ ಹಂತದಲ್ಲಿ ಪಂದ್ಯವನ್ನು ಫಿನಿಶ್ ಮಾಡುವ ವಿಚಾರದಲ್ಲಿ ನಾವಿನ್ನೂ ಬಲಿಷ್ಠವಾಗಬೇಕು - ಫಾಫ್ ಡುಪ್ಲೆಸಿಸ್.

7 / 8
ಕಳೆದ ವರ್ಷ ದಿನೇಶ್ ಕಾರ್ತಿಕ್ ಪಂದ್ಯವನ್ನು ಫಿನಿಶ್ ಮಾಡುತ್ತಿದ್ದರು. ಆದರೆ ಈ ಋತುವಿನಲ್ಲಿ ಅದು ಸಾಧ್ಯವಾಗಿಲ್ಲ. ನೀವು ಯಶಸ್ವಿಯಾದ ತಂಡಗಳನ್ನು ನೋಡಿದರೆ ಅವರು ಐದು, ಆರು ಮತ್ತು ಏಳನೇ ಕ್ರಮಾಂಕದಲ್ಲಿ ಉತ್ತಮ ಹಿಟ್ಟರ್​ಗಳನ್ನು ಹೊಂದಿದ್ದಾರೆ. ನಮ್ಮಲ್ಲಿ ಆರೀತಿಯ ಬ್ಯಾಟರ್ ಬೇಕು ಎಂದು ಫಾಫ್ ಹೇಳಿದ್ದಾರೆ.

8 / 8
Follow us
‘ಯುಐ’ ಸಿನಿಮಾ ಗೆಲುವಿನ ಬಳಿಕ ಉಡುಪಿ ಕೃಷ್ಣನ ದರ್ಶನ ಪಡೆದ ಉಪೇಂದ್ರ

ಚಾಮುಂಡಿ ಬೆಟ್ಟಕ್ಕೆ ಬಂದ ಸುದೀಪ್​; ಕಿಚ್ಚನ ನೋಡಲು ಜನಸಾಗರ

ಸುದೀಪ್ ಇರುವಾಗಲೇ ಬಿಗ್ ಬಾಸ್ ಸ್ಪರ್ಧಿಗಳಿಗೆ ಸುತ್ತಿಗೆ ಪೆಟ್ಟು, ಮಾತಿನ ಏಟು

ಹೊಸ ವರ್ಷ ಆಚರಣೆಗೆ ಬೆಂಗಳೂರು ಸಿದ್ಧ: ಬಂದೋಬಸ್ತ್ ಹೇಗಿರುತ್ತೆ ಗೊತ್ತಾ?

ಬೆಂಕಿ ಹೊತ್ತಿಕೊಂಡ ಏರ್​ ಕೆನಡಾ ವಿಮಾನ ಲ್ಯಾಂಡಿಂಗ್ ಆಗಿದ್ಹೇಗೆ ನೋಡಿ

ಹೈ ಡ್ರಾಮಾ... ಕಾಲಲ್ಲಿ ಕ್ಯಾಚ್ ಹಿಡಿದ ಕೆಎಲ್ ರಾಹುಲ್, ಗೆರೆ ದಾಟಿದ ಬುಮ್ರಾ

ಸರ್ಕಾರಿ ಶಾಲೆಯ ಮಕ್ಕಳಿಗೆ ವಿಮಾನ ಪ್ರಯಾಣ ಭಾಗ್ಯ, ಪಾಲಕರ ಖುಷಿ ನೋಡಿ

Video: ಭೀಕರ ಅಪಘಾತ, ಅಗ್ನಿಶಾಮಕ ವಾಹನಕ್ಕೆ ಡಿಕ್ಕಿ ಹೊಡೆದ ಹೈಸ್ಪೀಡ್ ರೈಲು

ಬೆಳ್ಳಂಬೆಳಗ್ಗೆ ಬಾರ್​ಗಳ ಮೇಲೆ ದಾಳಿ, ಮಾಲೀಕರ ಕಿಕ್ ಇಳಿಸಿದ ಪೊಲೀಸರು

ತ್ರಿವಿಕ್ರಮ್​ ಬಗ್ಗೆ ಭವ್ಯಾ ಹೇಳಿದ ಮಾತು ಕೇಳಿ ನಕ್ಕ ಕಿಚ್ಚ