ಐಪಿಎಲ್ 2021 (IPL2021) ರಲ್ಲಿಂದು ಹೈವೋಲ್ಟೇಜ್ ಪಂದ್ಯ ನಡೆಯಲಿದೆ. ಶಾರ್ಜಾ ಕ್ರಿಕೆಟ್ ಸ್ಟೇಡಿಯಂನಲ್ಲಿ ಸಾಂಪ್ರದಾಯಿಕ ಎದುರಾಳಿಗರಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore) ಮತ್ತು ಚೆನ್ನೈ ಸೂಪರ್ ಕಿಂಗ್ಸ್ (Chennai Super Kings) ನಡುವಣ ಕಾಳಗ ನಡೆಯಲಿದ್ದು, ಹೈವೋಲ್ಟೇಜ್ ಪಂದ್ಯ ನಿರೀಕ್ಷಿಸಲಾಗಿದೆ. ಟೂರ್ನಿಯ ಆರಂಭದಲ್ಲಿ ಅದ್ಭುತ ಪ್ರದರ್ಶನ ತೋರಿದ್ದ ವಿರಾಟ್ ಕೊಹ್ಲಿ (Virat Kohli) ಬಳಗ ಎರಡನೇ ಚರಣದಲ್ಲಿ ಕಳಪೆ ಆರಂಭ ಪಡೆದುಕೊಂಡಿತು. ಕೆಕೆಆರ್ (KKR) ವಿರುದ್ಧದ ಮೊದಲ ಪಂದ್ಯದಲ್ಲೇ ಹೀನಾಯ ಸೋಲು ಕಂಡಿತು. ಹೀಗಾಗಿ ಆರ್ಸಿಬಿಗೆ (RCB) ಇಂದಿನ ಪಂದ್ಯ ಮುಖ್ಯವಾಗಿದ್ದು, ಗೆಲ್ಲಲೇ ಬೇಕಾದ ಅನಿವಾರ್ಯತೆ ಎದುರಾಗಿದೆ. ಇತ್ತ ಎಂ. ಎಸ್ ಧೋನಿ (MS Dhoni) ಪಡೆ ಪಾಯಿಂಟ್ ಟೇಬಲ್ನಲ್ಲಿ ಎರಡನೇ ಸ್ಥಾನದಲ್ಲಿದ್ದು, ಇಂದಿನ ಪಂದ್ಯ ಗೆದ್ದು ಪ್ಲೇ ಆಫ್ ಹಾದಿಯನ್ನು ಸುಗಮಗೊಳಿಸುವ ಲೆಕ್ಕಚಾರದಲ್ಲಿದೆ. ಅಲ್ಲದೆ ಪ್ಲೇ ಆಫ್ಗೆ ಆರ್ಸಿಬಿ ಅಥವಾ ಸಿಎಸ್ಕೆ (CSK) ತಲುಪಿಲ್ಲ ಎಂದಾದರೆ ನಾಯಕರಾಗಿ ಕೊಹ್ಲಿ ಮತ್ತು ಧೋನಿ (Kohli vs Dhoni) ಮುಖಾಮುಖಿ ಆಗುತ್ತಿರುವುದು ಇದೇ ಕೊನೇಯ ಬಾರಿಯಾಗಿದೆ. ಹೀಗಾಗಿ ಅನೇಕ ಕಾರಣಗಳಿಗೆ ಇಂದಿನ ಪಂದ್ಯ ಸಾಕ್ಷಿಯಾಗಲಿದೆ.
ಎರಡನೇ ಚರಣದ ಮೊದಲ ಪಂದ್ಯದಲ್ಲಿ ಯುವ ಆಟಗಾರರಿಗೆ ಅವಕಾಶ ಕೊಟ್ಟು ಆರ್ಸಿಬಿ ಕೈಸುಟ್ಟುಕೊಂಡಿತ್ತು. ಕೇವಲ 92 ರನ್ಗೆ ಆಲೌಟ್ ಆಯಿತು. ಪ್ರಮುಖವಾಗಿ ಶ್ರೀಕರ್ ಭರತ್ ಮತ್ತು ಸಚಿನ್ ಬೇಬಿ ಸಿಕ್ಕ ಅವಕಾಶವನ್ನು ಉಪಯೋಗಿಸಕೊಂಡಿಲ್ಲ. ಹೀಗಾಗಿ ಇಂದಿನ ಸಿಎಸ್ಕೆ ವಿರುದ್ಧದ ಪಂದ್ಯಕ್ಕೆ ತಂಡದಲ್ಲಿ ಬದಲಾವಣೆ ಖಚಿತ ಎಂದೇ ಹೇಳಬಹುದು.
ನಾಯಕ ವಿರಾಟ್ ಕೊಹ್ಲಿ ಆರಂಭಿಕರಾಗಿ ಕಣಕ್ಕಿಳಿಯುತ್ತಿದ್ದಾರೆ ಬಿಟ್ಟರೆ ಯಶಸ್ಸು ಸಾಧಿಸುತ್ತಿಲ್ಲ. ಹೀಗಾಗಿ ಓಪನರ್ ಸ್ಥಾನದಿಂದ ಹಿಂದೆ ಸರಿದು ಇತರೆ ಆಟಗಾರರಿಗೆ ಅವಕಾಶ ನೀಡುತ್ತಾರ ಎಂಬ ಕುತೂಹಲವಿದೆ. ಎಬಿ ಡಿವಿಲಿಯರ್ಸ್ ಮತ್ತು ಗ್ಲೆನ್ ಮ್ಯಾಕ್ಸ್ವೆಲ್ ಸ್ಥಾನ ತಂಡಕ್ಕೆ ಮುಖ್ಯವಾಗಿದೆ. ಮೊದಲ ಚರಣದಲ್ಲಿ ನಿರೀಕ್ಷೆ ಹುಟ್ಟಿಸಿದ್ದ ರಜತ್ ಪಟಿದಾರ್ ಆಡುವ ಬಳಗಕ್ಕೆ ಕಮ್ಬ್ಯಾಕ್ ಮಾಡುವ ಸಾಧ್ಯತೆಯಿದೆ.
ಅಂತೆಯೆ ಅಭ್ಯಾಸ ಪಂದ್ಯದಲ್ಲಿ ಸ್ಫೋಟಕ ಬ್ಯಾಟಿಂಗ್ ನಡೆಸಿದ್ದ ಮೊಹಮ್ಮದ್ ಅಜರುದ್ದೀನ್ ಇಂದಿನ ಪಂದ್ಯದಲ್ಲಿ ಆಡುವ ಸಂಭವವಿದೆ. ಬೌಲಿಂಗ್ ವಿಭಾಗದಲ್ಲಿ ವನಿಂದು ಹಸರಂಗ ಅವರನ್ನು ಕೈಬಿಟ್ಟು ಟಿಮ್ ಡೇವಿಡ್ ಕಣಕ್ಕಿಳಿದರೆ ಅಚ್ಚರಿಯಿಲ್ಲ. ಉಳಿದಂತೆ ಕೈಲ್ ಜೆಮಿಸನ್, ಹರ್ಷಲ್ ಪಟೇಲ್, ಮೊಹಮ್ಮದ್ ಸಿರಾಜ್, ಯುಜ್ವೇಂದ್ರ ಚಹಾಲ್ ಮತ್ತು ನವ್ದೀಪ್ ಸೈನಿ ಪ್ಲೇಯಿಂಗ್ ಇಲೆವೆನ್ನಲ್ಲಿ ಸ್ಥಾನ ಗಿಟ್ಟಿಸಿಕೊಳ್ಳಲಿದ್ದಾರೆ.
ಇತ್ತ ಚೆನ್ನೈ ತಂಡದಲ್ಲೂ ಬದಲಾವಣೆ ನಿರೀಕ್ಷಿಸಲಾಗಿದೆ. ಸ್ಯಾಮ್ ಕುರ್ರನ್ ಇಂದಿನ ಪಂದ್ಯಕ್ಕೆ ಲಭ್ಯರಾಗುವ ಸಾಧ್ಯತೆ ಇದೆ. ಹೀಗಾದಲ್ಲಿ ಮೊಯೀನ್ ಅಲಿಗೆ ವಿಶ್ರಾಂತಿ ನೀಡಬಹುದು. ಚೆನ್ನೈ ಪರ ಅನುಭವಿ ಆಟಗಾರರ ಕಳಪೆ ಫಾರ್ಮ್ ಒಂದುಕಡೆಯಾದರೆ ಯಂಗ್ ಸ್ಟಾರ್ಸ್ಗಳು ಬೊಂಬಾಟ್ ಪ್ರದರ್ಶನ ತೋರುತ್ತಿದ್ದಾರೆ. ಕಳೆದ ಪಂದ್ಯದಲ್ಲಿ ರಜತ್ ಪಟಿದಾರ್ ಆಟ ಎಲ್ಲರ ಹುಬ್ಬೇರುವಂತೆ ಮಾಡಿದ್ದರು.
ಆರ್ಸಿಬಿ ಹಾಗೂ ಸಿಎಸ್ಕೆ ನಡುವಣ ಪಂದ್ಯ ಶಾರ್ಜಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿದೆ. ಸಂಜೆ 7:30ಕ್ಕೆ ಮ್ಯಾಚ್ ಪ್ರಾರಂಭವಾಗಲಿದ್ದು, 7 ಗಂಟೆಗೆ ಟಾಸ್ ಪ್ರಕ್ರಿಯೆ ನಡೆಯಲಿದೆ.
Point Table IPL 2021: ಪಾಯಿಂಟ್ ಟೇಬಲ್ನಲ್ಲಿ ಆರನೇ ಸ್ಥಾನಕ್ಕೆ ಕುಸಿದ ಮುಂಬೈ: ಇತರೆ ತಂಡಗಳು ಯಾವ ಸ್ಥಾನದಲ್ಲಿದೆ?
IPL 2021, RCB vs CSK: ಇಂದು ಬೆಂಗಳೂರು-ಚೆನ್ನೈ ಕಾದಾಟ: ಪುಟಿದೇಳುವ ವಿಶ್ವಾಸದಲ್ಲಿ ಕೊಹ್ಲಿ ಬಳಗ
(RCB Playing 11 IPL 2021 RCB vs CSK Virat Kohli Team Royal Challengers Bangalore vs MS Dhoni Team Chennai Super Kings)