AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆರ್​​​ಸಿಬಿ ಮಾರಾಟದಿದ ವಿಜಯ್ ಮಲ್ಯಗೆ ಸಿಕ್ಕ ಹಣ ಎಷ್ಟು?

ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡ ಇತ್ತೀಚೆಗೆ 16,600 ಕೋಟಿ ರೂ.ಗಳಿಗೆ ಆದಿತ್ಯ ಬಿರ್ಲಾ ಗ್ರೂಪ್ ಒಕ್ಕೂಟಕ್ಕೆ ಮಾರಾಟವಾಗಿದೆ. ಈ ಹಿಂದೆ ವಿಜಯ್ ಮಲ್ಯ 446 ಕೋಟಿ ರೂ.ಗೆ ತಂಡವನ್ನು ಖರೀದಿಸಿದ್ದರು. ಈಗ ಅವರು ಲಂಡನ್​​ ಅಲ್ಲಿದ್ದಾರೆ. ಅವರು ಮಾರಾಟದ ಬಳಿಕ ಟ್ವೀಟ್ ಕೂಡ ಮಾಡಿದ್ದರು.

ಆರ್​​​ಸಿಬಿ ಮಾರಾಟದಿದ ವಿಜಯ್ ಮಲ್ಯಗೆ ಸಿಕ್ಕ ಹಣ ಎಷ್ಟು?
ಮಲ್ಯ
ರಾಜೇಶ್ ದುಗ್ಗುಮನೆ
|

Updated on: Mar 27, 2026 | 12:05 PM

Share

ಐಪಿಎಲ್​​​ನಲ್ಲಿ ಸಾಕಷ್ಟು ಹೆಸರು ಮಾಡಿರೋ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಮಾರಾಟ ಇತ್ತೀಚೆಗೆ ನಡೆದಿದೆ. 16,600 ಕೋಟಿ ರೂಪಾಯಿಗೆ ಈ ಡೀಲ್​ ನಡೆದಿದೆ. ಆದಿತ್ಯ ಬಿರ್ಲಾ ಗ್ರೂಪ್ ನೇತೃತ್ವದ ಒಕ್ಕೂಟವು ಇದನ್ನು ಖರೀದಿ ಮಾಡಿದೆ. ಬಿಸಿಸಿಐ ಒಪ್ಪಿಗೆ ಬಳಿಕ ತಂಡ ಅಧಿಕೃತವಾಗಿ ಆದಿತ್ಯ ಬಿರ್ಲಾ ಗ್ರೂಪ್ ತೆಕ್ಕೆಗೆ ಸೇರಲಿದೆ. ಈ ತಂಡವನ್ನು ಮೊದಲು ಖರೀದಿ ಮಾಡಿದ್ದು ಮಲ್ಯ. ಹಾಗಾದರೆ, ಆರ್​​​ಸಿಬಿ ತಂಡದ ಮಾರಾಟದಿಂದ ಅವರಿಗೆ ಸಿಕ್ಕ ಹಣ ಎಷ್ಟು? ಆ ಬಗ್ಗೆ ಇಲ್ಲಿದೆ ವಿವರ.

ಮಲ್ಯ ಅವರು ಯುನೈಟೆಡ್ ಸ್ಪಿರಿಟ್ಸ್ ಲಿಮಿಟೆಡ್ (ಯುಎಸ್​​ಎಲ್) ಒಡೆತನ ಹೊಂದಿದ್ದರು. ರಾಯಲ್ ಚಾಲೆಂಜ್ ವಿಸ್ಕಿ ಬ್ರ್ಯಾಂಡ್ ಪ್ರಚಾರಕ್ಕಾಗಿ ವಿಜಯ್ ಮಲ್ಯ ಅವರು 2008ರಲ್ಲಿ 446 ಕೋಟಿ ರೂಪಾಯಿ ಕೊಟ್ಟು ಐಪಿಎಲ್ ತಂಡವನ್ನು ಖರೀದಿ ಮಾಡಿದರು. ಈ ತಂಡಕ್ಕೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಎಂದೇ ಹೆಸರಿಟ್ಟರು. ಕ್ರಿಕೆಟ್ ಕ್ಷೇತ್ರಕ್ಕೂ, ವಿಸ್ಕಿ ಬ್ರ್ಯಾಂಡ್ ಪ್ರಚಾರಕ್ಕೂ ಏನು ಸಂಬಂಧ ಎಂದು ಎಲ್ಲರೂ ನಕ್ಕರು. ಆದರೆ, ಊಹೆ ತಪ್ಪಾಗಿತ್ತು. ಆರ್​​​ಸಿಬಿ ತಂಡ ಬಹುಬೇಗನೆ ತನ್ನ ಮೌಲ್ಯವನ್ನು ಹೆಚ್ಚಿಸಿಕೊಂಡಿತು.

2012ರಲ್ಲಿ ಬ್ರಿಟಿಷ್ ಮೂಲದ ಡಿಯಾಜಿಯೋ ಕಂಪನಿ ಮಲ್ಯ ಅವರ ಯುಎಸ್​​​ಎಲ್​ನ ಶೇ.53.4 ಷೇರನ್ನು ಖರೀದಿ ಮಾಡಿತು. ಈ ಡೀಲ್ 11,166 ಕೋಟಿ ರೂಪಾಯಿಗೆ ನಡೆಯಿತು. ಆರಂಭದಲ್ಲಿ ಮಲ್ಯಗೆ 3,635 ಕೋಟಿ ರೂಪಾಯಿ ಸಿಕ್ಕಿತು. 2013-14ರ ಅವಧಿಯಲ್ಲಿ ಮಲ್ಯ ಅವರ ಕಿಂಗ್​​​ಫಿಶರ್ ಏರ್​​ಲೈನ್ಸ್ ಮುಳಗಿ ಹೋಯಿತು. 9000 ಕೋಟಿ ರೂಪಾಯಿ ಸಾಲವನ್ನು ಹೊಂದಿದ್ದರು. ಯುಎಸ್​​ಎಲ್ ಮಾರಾಟದಿಂದ ಬಂದ ಹಣವನ್ನು (1,225 ಕೋಟಿ ರೂಪಾಯಿ) ಮಲ್ಯ ಎಫ್​​ 1ತಂಡ, ಏರ್​​ಲೈನ್ಸ್​ ಹಾಗೂ ವಿದೇಶಿ ಖಾತೆಗೆ ವರ್ಗಾವಣೆ ಮಾಡಿದ್ದರು.

ಡಿಯಾಜಿಯೋ ಯುಎಸ್​​​ಎಲ್​ ಸ್ಟೇಕ್ಸ್​​ನ ಶೇ.56ಕ್ಕೆ ಏರಿಕೆ ಮಾಡಿಕೊಂಡಿತು. ಆ ಸಂದರ್ಭದಲ್ಲಿ ಮಲ್ಯ ಅವರು ಅಧ್ಯಕ್ಷ ಸ್ಥಾನದಿಂದ ಕೆಳಕ್ಕೆ ಇಳಿದರು. ಹೆಚ್ಚುವರಿ ಷೇರುಗಳಿಗಾಗಿ ಅವರಿಗೆ 515 ಕೋಟಿ ರೂಪಾಯಿ ಪಾವತಿಸಲಾಯಿತು.2016ರಲ್ಲಿ ಮಲ್ಯ ಅವರು 17 ಸಾವಿರ ಕಿಂಗ್​​​ಫಿಶರ್ ಸಾಲದೊಂದಿಗೆ ಇಂಗ್ಲೆಂಡ್​​​ಗೆ ಹಾರಿದರು. ಈ ವೇಳೆ ಯುಎಸ್​​ಎಲ್​ ಸಂಪೂರ್ಣವಾಗಿ ಡಿಯಾಜಿಯೋ ತೆಕ್ಕೆಗೆ ಹೋಯಿತು. ಆ ಸಂದರ್ಭದಲ್ಲಿ ಆರ್​​​ಸಿಬಿ ವ್ಯಾಲ್ಯೂ 1,200 ಕೋಟಿ ರೂಪಾಯಿ ಎಂದು ಪರಿಗಣಿಸಿ ಡಿಯಾಜಿಯೋ ಸಂಪೂರ್ಣವಾಗಿ ತಮ್ಮ ತೆಕ್ಕೆಗೆ ತೆಗೆದುಕೊಂಡಿತು. ಈ ಮೂಲಕ ಮಲ್ಯ ಅವರ ಬಳಿ ಯಾವುದೇ ಷೇರು ಉಳಿದುಕೊಂಡಿರಲಿಲ್ಲ.

ಇದನ್ನೂ ಓದಿ: ​​RCB ಮಾರಾಟದ ಬೆನ್ನಲ್ಲೇ ಮಹತ್ವದ ಕೋರಿಕೆ ಇಟ್ಟ ವಿಜಯ್ ಮಲ್ಯ

2026ರಲ್ಲಿ ಡಿಯಾಜಿಯೋ 16,660 ಕೋಟಿ ರೂಪಾಯಿಗೆ ಐಪಿಎಲ್ ತಂಡವನ್ನು ಮಾರಾಟ ಮಾಡಿತು. ಇದರಿಂದ ಯುಎಸ್​​​ಎಲ್​​ಗೆ ಲಾಭ ಆಗಿದೆ. ಮಲ್ಯ ಷೇರು ಇದರಲ್ಲಿ ಇಲ್ಲದ ಕಾರಣ ಅವರಿಗೆ ಯಾವುದೇ ಹಣ ಸಿಕ್ಕಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ರಾಜೇಶ್ ದುಗ್ಗುಮನೆ
ರಾಜೇಶ್ ದುಗ್ಗುಮನೆ

ರಾಜೇಶ್ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
ಹಾಸನಾಂಬೆ ಮಹೋತ್ಸವ: ಗುತ್ತಿಗೆದಾರನ ಜತೆ ಸಚಿವ ಶಿವಲಿಂಗೇಗೌಡ ಚೌಕಾಸಿ
ಹಾಸನಾಂಬೆ ಮಹೋತ್ಸವ: ಗುತ್ತಿಗೆದಾರನ ಜತೆ ಸಚಿವ ಶಿವಲಿಂಗೇಗೌಡ ಚೌಕಾಸಿ
ಹೀರೋಗಳೇ ವಿಲನ್ ಆಗಿದ್ದಕ್ಕೆ ಕನ್ನಡ ಚಿತ್ರರಂಗಕ್ಕೆ ಸಮಸ್ಯೆ ಆಯ್ತಾ?
ಹೀರೋಗಳೇ ವಿಲನ್ ಆಗಿದ್ದಕ್ಕೆ ಕನ್ನಡ ಚಿತ್ರರಂಗಕ್ಕೆ ಸಮಸ್ಯೆ ಆಯ್ತಾ?
ಪ್ರೀತಿಸಿ ಮದುವೆಯಾದ 3 ತಿಂಗಳಲ್ಲೇ ನವಜೋಡಿಗೆ ಗಂಡಾಂತರ: ಆಗಿದ್ದೇನು?
ಪ್ರೀತಿಸಿ ಮದುವೆಯಾದ 3 ತಿಂಗಳಲ್ಲೇ ನವಜೋಡಿಗೆ ಗಂಡಾಂತರ: ಆಗಿದ್ದೇನು?
ಬರ ಮಧ್ಯೆ ಸಚಿವರು, ಲೋಕಸಭಾ, ರಾಜ್ಯಸಭಾ ಸದಸ್ಯರ ಕಾರು ಖರೀದಿ ಮೊತ್ತ ಏರಿಕೆ
ಬರ ಮಧ್ಯೆ ಸಚಿವರು, ಲೋಕಸಭಾ, ರಾಜ್ಯಸಭಾ ಸದಸ್ಯರ ಕಾರು ಖರೀದಿ ಮೊತ್ತ ಏರಿಕೆ
‘ಪ್ರೇಮದ ಊರಲಿ’ ಗೆಲುವನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ತರುಣ್ ಸುಧೀರ್
‘ಪ್ರೇಮದ ಊರಲಿ’ ಗೆಲುವನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ತರುಣ್ ಸುಧೀರ್
ರಾಷ್ಟ್ರಪತಿ ಭವನದತ್ತ ಮೆರವಣಿಗೆಯಲ್ಲಿ ಸಿಎಂ ಡಿಕೆ ಶಿವಕುಮಾರ್ ಕೂಡ ಭಾಗಿ
ರಾಷ್ಟ್ರಪತಿ ಭವನದತ್ತ ಮೆರವಣಿಗೆಯಲ್ಲಿ ಸಿಎಂ ಡಿಕೆ ಶಿವಕುಮಾರ್ ಕೂಡ ಭಾಗಿ
ಪ್ರತಿಭಟನೆಯಲ್ಲಿ ಭಾಗವಹಿಸದಂತೆ ಮುಸ್ಲಿಮರಿಗೆ ಇಮಾಮ್ ಉಮರ್ ಇಲ್ಯಾಸಿ ಮನವಿ
ಪ್ರತಿಭಟನೆಯಲ್ಲಿ ಭಾಗವಹಿಸದಂತೆ ಮುಸ್ಲಿಮರಿಗೆ ಇಮಾಮ್ ಉಮರ್ ಇಲ್ಯಾಸಿ ಮನವಿ
ಬೇಡ್ತಿ ನದಿ ತಿರುವಿನಿಂದಾಗುವ ಪರಿಣಾಮಗಳೇನು? ಯೋಜನೆಗೆ ವಿರೋಧವೇಕೆ?
ಬೇಡ್ತಿ ನದಿ ತಿರುವಿನಿಂದಾಗುವ ಪರಿಣಾಮಗಳೇನು? ಯೋಜನೆಗೆ ವಿರೋಧವೇಕೆ?
ಬರಿದಾಗ್ತಿದೆ KRS: CWMA ಆದೇಶದಿಂದ ಕುಡಿಯುವ ನೀರಿಗೂ ಹಾಹಾಕಾರದ ಭೀತಿ
ಬರಿದಾಗ್ತಿದೆ KRS: CWMA ಆದೇಶದಿಂದ ಕುಡಿಯುವ ನೀರಿಗೂ ಹಾಹಾಕಾರದ ಭೀತಿ
‘ಆ ಸಿನಿಮಾ ದರ್ಶನ್​​​ಗೆ ಮಾತ್ರ’: ತರುಣ್ ಸುಧೀರ್ ಹೇಳಿದ್ದು ಯಾವ ಕತೆ?
‘ಆ ಸಿನಿಮಾ ದರ್ಶನ್​​​ಗೆ ಮಾತ್ರ’: ತರುಣ್ ಸುಧೀರ್ ಹೇಳಿದ್ದು ಯಾವ ಕತೆ?