ತವರಿನಲ್ಲಿ ಕೊನೆಗೂ ಆರ್ಸಿಬಿ ಸೋಲಿನ ಸರಪಳಿಯಿಂದ ಹೊರಬಂದಿದೆ. ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಆರ್ಸಿಬಿ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಕದನದಲ್ಲಿ ಡೆಲ್ಲಿ ತಂಡವನ್ನು 23 ರನ್ಗಳಿಂದ ಮಣಿಸಿದ ಆರ್ಸಿಬಿ ಟೂರ್ನಿಯಲ್ಲಿ 2ನೇ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಆರ್ಸಿಬಿ ಕೊಹ್ಲಿಯ ಅರ್ಧಶತಕದ ನೆರವಿನಿಂದ 174 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಡೆಲ್ಲಿ ಆರಂಭದಿಂದಲೇ ವಿಕೆಟ್ ಕಳೆದುಕೊಳ್ಳಲಾರಂಭಿಸಿತು. ತಂಡದ ಪರ ಕನ್ನಡಿಗ ಮನೀಶ್ ಪಾಂಡೆ ಅರ್ಧಶರಕ ಬಾರಿಸಿದ್ದನ್ನು ಬಿಟ್ಡರೆ ಮತ್ತ್ಯಾರು ಪರಿಣಾಮಕಾರಿಯಾಗಲಿಲ್ಲ. ಆರ್ಸಿಬಿ ಪರ ಮಾರಕ ದಾಳಿ ನಡೆಸಿದ ಕನ್ನಡಿಗ ವೈಶಾಕ್ ವಿಜಯ್ಕುಮಾರ್ ಪ್ರಮುಖ 3 ವಿಕೆಟ್ ಪಡೆದು ಮಿಂಚಿದರು. ಅಂತಿಮವಾಗಿ ಡೆಲ್ಲಿ ತಂಡ 9 ವಿಕೆಟ್ ಕಳೆದುಕೊಂಡು 152 ರನ್ ಗಳಿಸಲಷ್ಟೇ ಶಕ್ತವಾಯಿತು.
10 ಬಾಲ್ನಲ್ಲಿ 18 ರನ್ ಗಳಿಸಿದ್ದ ಅಮನ್ ಖಾನ್ ಸಿರಾಜ್ ಓವರ್‌ನಲ್ಲಿ ಬಿಗ್ ಶಾಟ್ ಹೊಡೆಯುವ ಯತ್ನದಲ್ಲಿ ಲಾಂಗ್ ಆನ್ನಲ್ಲಿ ಕೊಹ್ಲಿಗೆ ಕ್ಯಾಚಿತ್ತು ಔಟಾದರು.
ಹರ್ಷಲ್ ಎಸೆದ 17ನೇ ಓವರ್‌ನಲ್ಲಿ ಅಮನ್ ಖಾನ್ ಡೀಪ್ ಕವರ್ನಲ್ಲಿ ಬೌಂಡರಿ ಬಾರಿಸಿದರು.
ಸಿಕ್ಕ ಅವಕಾಶವನ್ನು ಸದುಪಯೋಗ ಪಡಿಸಿಕೊಂಡಿರುವ ಕನ್ನಡಿಗ ವೈಶಾಕ್ ವಿಜಯ್ ಕುಮಾರ್ ಮೊದಲ ಪಂದ್ಯದಲ್ಲೇ 3 ವಿಕೆಟ್ ಪಡೆದು ಮಿಂಚಿದ್ದಾರೆ. 3ನೇ ವಿಕೆಟ್ ಆಗಿ ಲಲಿತ್ ಯಾದವ್ ಔಟಾದರು. ಡೆಲ್ಲಿ ತಂಡದ 8ನೇ ವಿಕೆಟ್ ಪತನವಾಗಿದೆ.
ಅರ್ಧಶತಕ ಸಿಡಿಸಿದ ಬೆನ್ನಲ್ಲೇ ಮನೀಶ್ ಹಸರಂಗ ಬೌಲಿಂಗ್ನಲ್ಲಿ ಎಲ್ಬಿ ಬಲೆಗೆ ಬಿದ್ದರು. ಡೆಲ್ಲಿ 7ನೇ ವಿಕೆಟ್ ಪತನವಾಯಿತು.
ಹಸರಂಗ ಎಸೆದ 14ನೇ ಓವರ್‌ನಲ್ಲಿ 2ಬೌಂಡರಿ ಹಾಗೂ 1 ಸಿಕ್ಸರ್ ಬಾರಿಸಿದ ಮನೀಶ್ 37 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು.
13ನೇ ಓವರ್ ಬೌಲ್ ಮಾಡಿದ ಕನ್ನಡಿಗ ವೈಶಾಕ್ ಉಪನಾಯಕ ಅಕ್ಷರ್ ಪಟೇಲ್ ವಿಕೆಟ್ ಉರುಳಿಸಿದ್ದಾರೆ. ಈ ವಿಕೆಟ್ ಮೂಲಕ ಡೆಲ್ಲಿ 6ನೇ ವಿಕೆಟ್ ಕಳೆದುಕೊಂಡಿದೆ.
ಹಸರಂಗ ಎಸೆದ 11ನೇ ಓವರ್‌ನಲ್ಲಿ ಅಕ್ಷರ್ ಪಟೇಲ್ 2 ಬೌಂಡರಿ ಬಾರಿಸಿದರು. ಈ ಓವರ್‌ನಲ್ಲಿ ಒಟ್ಟು 13 ರನ್ ಬಂದವು.
9ನೇ ಓವರ್ ಬೌಲ್ ಮಾಡಿದ ಹರ್ಷಲ್ ಪಟೇಲ್ ಅಭಿಷೇಕ್ ಪೊರೆಲ್ ವಿಕೆಟ್ ಪಡೆದು. ಈ ಮೂಲಕ ಡೆಲ್ಲಿ ತನ್ನ ಐದನೇ ವಿಕೆಟ್ ಕಳೆದುಕೊಂಡಿದೆ.
8ನೇ ಓವರ್ ಎಸೆದ ಹಸರಂಗಗೆ ಬೌಂಡರಿ ಸ್ವಾಗತ ಸಿಕ್ಕಿತು. ಓವರ್‌ನ ಮೊದಲ ಎಸೆತದಲ್ಲೇ ಮನೀಶ್ ಬೌಂಡರಿ ಬಾರಿಸಿದರು.
ಪವರ್ ಪ್ಲೇಯ ಕೊನೆಯ ಓವರ್ ಎಸೆಯಲು ಬಂದ ಕನ್ನಡಿಕ ವೈಶಾಕ್ ವಿಜಯ್ ಕುಮಾರ್ ಡೇಂಜರಸ್ ವಾರ್ನರ್ ವಿಕೆಟ್ ಪಡೆದಿದ್ದಾರೆ.
ಸಿರಾಜ್ ಎಸೆದ 5ನೇ ಓವರ್‌ನ ಕೊನೆಯ 3 ಎಸೆತಗಳಲ್ಲಿ ವಾರ್ನರ್ 3 ಬೌಂಡರಿ ಬಾರಿಸಿದರು.
ಸಿರಾಜ್ ಎಸೆದ 3ನೇ ಓವರ್ 2ನೇ ಎಸೆತದಲ್ಲಿ ಯಶ್ ದುಲ್ ಎಲ್ಬಿ ಬಲೆಗೆ ಬಿದ್ದರು. ಡೆಲ್ಲಿ ಕೇವಲ 2 ರನ್ಗೆ 3 ವಿಕೆಟ್ ಕಳೆದುಕೊಂಡಿದೆ.
ಪೃಥ್ವಿ ಬಳಿಕ ಬಂದಿದ್ದ ಮಿಚೆಲ್ ಮಾರ್ಷ್ ಕೂಡ ಯಾವುದೇ ರನ್ ಗಳಿಸದೆ 2ನೇ ಓವರ್ ಮೊದಲ ಎಸೆತದಲ್ಲಿ ಕ್ಯಾಚಿತ್ತು ಔಟಾದರು.
ಡೆಲ್ಲಿ ಕ್ಯಾಪಿಟಲ್ಸ್‌ನ ಮೊದಲ ವಿಕೆಟ್ ಪತನಗೊಂಡಿದೆ. ಮೊದಲ ಓವರ್‌ನ ಮೂರನೇ ಎಸೆತದಲ್ಲಿ ಪೃಥ್ವಿ ಶಾ ಅವರನ್ನು 0 ರನ್‌ಗಳಿಗೆ ರನ್ ಔಟ್ ಮಾಡಲಾಗಿದೆ. 1 ಓವರ್‌ನ ನಂತರ ಡೆಲ್ಲಿ ಕ್ಯಾಪಿಟಲ್ಸ್ ಸ್ಕೋರ್ 1/1
ನಿಗದಿತ 20 ಓವರ್‌ಗಳಲ್ಲಿ ಆರ್ಸಿಬಿ 6 ವಿಕೆಟ್ ಕಳೆದುಕೊಂಡು 174 ರನ್ ಕಲೆಹಾಕಿದೆ. ತಂಡದ ಆರಂಭಿಕ ಮೂವರು ಬ್ಯಾಟರ್ಗಳನ್ನು ಬಿಟ್ಟರೆ, ಮಿಡಲ್ ಆರ್ಡರ್ ಯಾವುದೇ ಪರಿಣಾಮ ಬೀರಲಿಲ್ಲ. ಇಂಪ್ಯಾಕ್ಟ್ ಪ್ಲೇಯರ್ ಆಗಿ ಬಂದ ಅನುಜ್ ರಾವತ್ ಯಾವುದೇ ಇಂಪ್ಯಾಕ್ಟ್ ಮಾಡಲಿಲ್ಲ.
19ನೇ ಓವರ್‌ನಲ್ಲಿ ಆರ್ಸಿಬಿ 2 ಬೌಂಡರಿ ಬಾರಿಸಿತು. ಅನುಜ್ ರಾವತ್ 13 ರನ್ ಹಾಗೂ ಶಹಬಾಜ್ ಅಹ್ಮದ್ 17 ರನ್ ಗಳಿಸಿ ಆಡುತ್ತಿದ್ದಾರೆ. 19 ಓವರ್‌ಗಳ ನಂತರ ಬೆಂಗಳೂರು ಸ್ಕೋರ್ 166/6.
ನೋಕಿಯಾ ಎಸೆದ 18ನೇ ಓವರ್‌ನ ಕೊನೆಯ ಎಸೆತದಲ್ಲಿ ರಾವತ್ ಬೌಂಡರಿ ಬಾರಿಸಿದರು. ಅನುಜ್ ರಾವತ್ 11 ರನ್ ಹಾಗೂ ಶಹಬಾಜ್ ಅಹ್ಮದ್ 7 ರನ್ ಗಳಿಸಿ ಆಡುತ್ತಿದ್ದಾರೆ.18 ಓವರ್‌ಗಳಲ್ಲಿ ಬೆಂಗಳೂರು ಸ್ಕೋರ್ 154/6
ಬೆಂಗಳೂರು ತಂಡ ದೊಡ್ಡ ಮೊತ್ತ ಕಲೆ ಹಾಕಲು ಪರದಾಡುತ್ತಿದೆ. 17ನೇ ಓವರ್‌ನ ಕೊನೆಯ ಎಸೆತದಲ್ಲಿ ಶಹಬಾಜ್ ಬೌಂಡರಿ ಬಾರಿಸಿದರು. ಸದ್ಯ ಬೆಂಗಳೂರಿನ ಪರ ಅನುಜ್ ರಾವತ್ 4 ಹಾಗೂ ಶಹಬಾಜ್ ಅಹ್ಮದ್ 7 ರನ್ ಗಳಿಸಿ ಆಡುತ್ತಿದ್ದಾರೆ. 17 ಓವರ್‌ಗಳಲ್ಲಿ ಬೆಂಗಳೂರು ಸ್ಕೋರ್ 146/6
ಬೆಂಗಳೂರು ತಂಡ ದೊಡ್ಡ ಮೊತ್ತ ಕಲೆ ಹಾಕಲು ಪರದಾಡುತ್ತಿದೆ. ಸದ್ಯ ಬೆಂಗಳೂರಿನ ಪರ ಅನುಜ್ ರಾವತ್ 0 ರನ್ ಹಾಗೂ ಶಹಬಾಜ್ ಅಹ್ಮದ್ 1 ರನ್ ಗಳಿಸಿ ಆಡುತ್ತಿದ್ದಾರೆ.
ಹರ್ಷಲ್ ಪಟೇಲ್ ಬಳಿಕ 15ನೇ ಓವರ್‌ನ ಮೊದಲ ಎಸೆತದಲ್ಲಿ ಮ್ಯಾಕ್ಸ್ವೆಲ್ ಔಟಾದರೆ, ಆ ಬಳಿಕ ಬಂದ ದಿನೇಶ್ ಕಾರ್ತಿಕ್ ಕೂಡ ಶೂನ್ಯಕ್ಕೆ ಕ್ಯಾಚಿತ್ತು ಔಟಾದರು.
14ನೇ ಓವರ್ ಎಸೆದ ಅಕ್ಷರ್ ಪಟೇಲ್ ಅವರ ಕೊನೆಯ ಎಸೆತದಲ್ಲಿ ಹರ್ಷಲ್ ಪಟೇಲ್ ಕೀಪರ್ ಕೈಗೆ ಕ್ಯಾಚಿತ್ತು ಔಟಾದರು.
ಬೆಂಗಳೂರಿಗೆ ಮೂರನೇ ಹೊಡೆತ ಬಿದ್ದಿದೆ. ಮಹಿಪಾಲ್ ಲೊಮ್ರೋಡ್ ಔಟಾಗಿದ್ದಾರೆ. ಮಿಚೆಲ್ ಮಾರ್ಷ್ ಅವರ ಚೆಂಡನ್ನು ಆಡಲು ಪ್ರಯತ್ನಿಸಿದ ಮಹಿಪಾಲ್, ವಿಕೆಟ್ ಕೀಪರ್ ಅಭಿಷೇಕ್ ಪೊರೆಲ್ ಕೈಗೆ ಕ್ಯಾಚಿತ್ತು ಔಟಾದರು.
ಮ್ಯಾಕ್ಸ್ ವೆಲ್ 15 ರನ್ ಹಾಗೂ ಮಹಿಪಾಲ್ ಲೊಮ್ರೋರ್ 20 ರನ್ ಗಳಿಸಿ ಆಡುತ್ತಿದ್ದಾರೆ. ಬೆಂಗಳೂರು ತಂಡ ಈಗ ದೊಡ್ಡ ಮೊತ್ತ ಕಲೆ ಹಾಕಬೇಕಿದೆ. 12 ಓವರ್‌ಗಳ ನಂತರ ಬೆಂಗಳೂರು ಸ್ಕೋರ್ 110/2
11ನೇ ಓವರ್‌ನಲ್ಲಿ 2 ಸಿಕ್ಸರ್ ಬಾರಿಸಿದ ಮ್ಯಾಕ್ಸ್ವೆಲ್ ಆರ್ಸಿಬಿ ತಂಡವನ್ನು ಶತಕದ ಗಡಿ ದಾಟಿಸಿದರು.
33 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ ವಿರಾಟ್ ಕೊಹ್ಲಿ ಅರ್ಧಶತಕ ಬಾರಿಸಿ ವಿಕೆಟ್ ಒಪ್ಪಿಸಿದ್ದಾರೆ. ಈ ಇನ್ನಿಂಗ್ಸ್ನಲ್ಲಿ ಅವರು 1 ಸಿಕ್ಸರ್ ಮತ್ತು 6 ಬೌಂಡರಿಗಳನ್ನು ಬಾರಿಸಿದರು.
10 ಓವರ್‌ಗಳ ನಂತರ ಬೆಂಗಳೂರು ಸ್ಕೋರ್ 89/1. ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ ತಮ್ಮ 47 ನೇ ಐಪಿಎಲ್ ಮತ್ತು ಸೀಸನ್ ಮೂರನೇ ಅರ್ಧಶತಕವನ್ನು ಗಳಿಸಿದರು. ಈ ಓವರ್‌ನಲ್ಲಿ 2 ಸಿಕ್ಸರ್ ಮತ್ತು ಒಂದು ಬೌಂಡರಿ ಸೇರಿತ್ತು.
ಲಲಿತ್ ಯಾದವ್ ಎಸೆದ 8ನೇ ಓವರ್‌ನಲ್ಲಿ ಕೊಹ್ಲಿ 1 ಬೌಂಡರಿ ಬಾರಿಸಿದರು. 8 ಓವರ್ ಅಂತ್ಯಕ್ಕೆ ಆರ್ಸಿಬಿ 1 ವಿಕೆಟ್ ಕಳೆದುಕೊಂಡು 6 ರನ್ ಪೇರಿಸಿದೆ.
ನಾಯಕ ಫಾಫ್ ಔಟಾದ ಬಳಿಕ ಆರ್ಸಿಬಿ ಇನ್ನಿಂಗ್ಸ್ ನಿಧಾನಗತಿಯಲ್ಲಿ ಸಾಗುತ್ತಿದೆ. 6ನೇ ಓವರ್‌ನಲ್ಲಿ ಯಾವುದೇ ಬೌಂಡರಿ ಬರಲಿಲ್ಲ. ಪವರ್ ಪ್ಲೇ ಅಂತ್ಯಕ್ಕೆ ಆರ್ಸಿಬಿ 1 ವಿಕೆಟ್ ಕಳೆದುಕೊಂಡು 47 ರನ್ ಬಾರಿಸಿದೆ.
ಮಾರ್ಷ್ ಎಸೆದ 5ನೇ ಓವರ್‌ನಲ್ಲಿ 1 ಬೌಂಡರಿ ಬಾರಿಸಿದ ಫಾಫ್, ಮುಂದಿನ ಎಸೆತದಲ್ಲಿ ಕ್ಯಾಚಿತ್ತು ಔಟಾದರು.
4ನೇ ಓವರ್ ಎಸೆದ ಅಕ್ಷರ್ಗೆ ಫಾಫ್ ಲಾಂಗ್ ಆನ್ನಲ್ಲಿ ಅದ್ಭುತ ಸಿಕ್ಸರ್ ಬಾರಿಸಿದರು. ಈ ಓವರ್‌ನಲ್ಲಿ 7 ರನ್ ಬಂದವು
2ನೇ ಓವರ್‌ನಲ್ಲಿ ಯಾವುದೇ ಬೌಂಡರಿ ಬರಲಿಲ್ಲ. ಆದರೆ ಮೂರನೇ ಓವರ್‌ನ ಎರಡನೇ ಮತ್ತು 4ನೇ ಎಸೆತದಲ್ಲಿ ಫಾಫ್ ಕೀಪರ್ ಹಿಂದೆ ಬೌಂಡರಿ ಬಾರಿಸಿದರು.
ಆರ್ಸಿಬಿ ಬ್ಯಾಟಿಂಗ್ ಆರಂಭಿಸಿದೆ. ತಂಡದ ಪರ ಕೊಹ್ಲಿ- ಹಾಗೂ ಫಾಫ್ ಬ್ಯಾಟಿಂಗ್ನಲ್ಲಿದ್ದಾರೆ. ನೋಕಿಯಾ ಎಸೆದ ಮೊದಲ ಓವರ್‌ನಲ್ಲಿ ಕೊಹ್ಲಿ 2 ಬೌಂಡರಿ ಬಾರಿಸಿದರು.
The Playing XIs are in ✅
What do you make of the two sides in the #RCBvDC contest?
Follow the match ▶️ https://t.co/xb3InbFbrg #TATAIPL pic.twitter.com/sXRSsVvSYw
— IndianPremierLeague (@IPL) April 15, 2023
ವಿರಾಟ್ ಕೊಹ್ಲಿ, ಫಾಫ್ ಡು ಪ್ಲೆಸಿಸ್ (ನಾಯಕ), ಮಹಿಪಾಲ್ ಲೊಮ್ರೋರ್, ಗ್ಲೆನ್ ಮ್ಯಾಕ್ಸ್‌ವೆಲ್, ಶಹಬಾಜ್ ಅಹ್ಮದ್, ದಿನೇಶ್ ಕಾರ್ತಿಕ್, ಅನುಜ್ ರಾವತ್, ವನಿಂದು ಹಸರಂಗ, ವೇಯ್ನ್ ಪಾರ್ನೆಲ್, ಹರ್ಷಲ್ ಪಟೇಲ್, ಮೊಹಮ್ಮದ್ ಸಿರಾಜ್
ಡೇವಿಡ್ ವಾರ್ನರ್ (ನಾಯಕ), ಪೃಥ್ವಿ ಶಾ, ಮನೀಶ್ ಪಾಂಡೆ, ಯಶ್ ಧುಲ್, ಮಿಚೆಲ್ ಮಾರ್ಷ್, ಲಲಿತ್ ಯಾದವ್, ಅಕ್ಷರ್ ಪಟೇಲ್, ಅಭಿಷೇಕ್ ಪೊರೆಲ್, ಕುಲದೀಪ್ ಯಾದವ್, ಅನ್ರಿಚ್ ನೋಕಿಯಾ, ಮುಸ್ತಾಫಿಜುರ್ ರೆಹಮಾನ್
ಟಾಸ್ ಗೆದ್ದ ಡೆಲ್ಲಿ ನಾಯಕ ಡೇವಿಡ್ ವಾರ್ನರ್ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದ್ದಾರೆ. ಹೀಗಾಗಿ ಆರ್ಸಿಬಿ ಮೊದಲು ಬ್ಯಾಟಿಂಗ್ ಮಾಡಲಿದೆ.
ಡೆಲ್ಲಿ ಕ್ಯಾಪಿಟಲ್ಸ್ ಇನ್ನೂ ಮೊದಲ ಗೆಲುವಿನ ನಿರೀಕ್ಷೆಯಲ್ಲಿದೆ. ನಾಲ್ಕು ಪಂದ್ಯಗಳನ್ನು ಆಡಿರುವ ಡೆಲ್ಲಿ ನಾಲ್ಕರಲ್ಲೂ ಸೋಲು ಕಂಡಿದೆ. ಇಂದು ಬೆಂಗಳೂರಿನ ತವರು ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಈ ಪಂದ್ಯ ನಡೆಯಲಿದ್ದು, ಇಂತಹ ಪರಿಸ್ಥಿತಿಯಲ್ಲಿ ಡೆಲ್ಲಿಗೆ ಗೆಲುವು ಸುಲಭವಲ್ಲ.
Published On - 2:45 pm, Sat, 15 April 23