ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಕೊನೆಯ ಲೀಗ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಆರು ವಿಕೆಟ್‌ಗಳಿಂದ ಸೋಲಿಸಿದ ಗುಜರಾತ್ ಟೈಟಾನ್ಸ್ ತಂಡ ಆರ್‌ಸಿಬಿಯ ಪ್ಲೇಆಫ್ ಕನಸಿಗೆ ನೀರೆರಚಿದೆ. ಪ್ಲೇಆಫ್‌ಗೆ ಹೋಗಲು ಈ ಪಂದ್ಯದಲ್ಲಿ ಬೆಂಗಳೂರು ತಂಡಕ್ಕೆ ಗೆಲುವಿನ ಅಗತ್ಯವಿತ್ತು. ಆದರೆ ವಿರಾಟ್ ಕೊಹ್ಲಿ ಅವರ ಅಜೇಯ 101 ರನ್‌ಗಳ ಹೊರತಾಗಿಯೂ ಆರ್‌ಸಿಬಿ ಸೋಲಿನ ಶಾಕ್ಗೆ ಒಳಗಾಗಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿಬಿ ಆರಂಭಿಕ ವಿರಾಟ್ ಕೊಹ್ಲಿಯವರ ಸತತ ಎರಡನೇ ಶತಕದ ನೆರವಿನಿಂದಾಗಿ 197 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಗುಜರಾಜ್ ಗಿಲ್ ಅವರ ಶತಕದ ನೆರವಿನಿಂದಾಗಿ 20ನೇ ಓವರ್‌ನಲ್ಲಿ ಗೆಲುವಿನ ನಗೆ ಬೀರಿತು. ಇದೊಂದು ಸೋಲಿನಿಂದಾಗಿ ಆರ್‌ಸಿಬಿ ಪ್ಲೇ ಆಫ್ನಿಂದ ಹೊರಬಿದ್ದರೆ, ಈ ಸೋಲಿನ ಲಾಭ ಪಡೆದ ಮುಂಬೈ ಸುಲಭವಾಗಿ ಪ್ಲೇ ಆಫ್ಗೆ ಎಂಟ್ರಿಕೊಟ್ಟಿದೆ.
ಪ್ಲೇಆಫ್‌ಗೆ ಹೋಗಲು ಆರ್ಸಿಬಿಗೆ ಈ ಪಂದ್ಯದಲ್ಲಿ ಗೆಲುವಿನ ಅಗತ್ಯವಿತ್ತು. ಆದರೆ ಗುಜರಾತ್ ಈ ಪಂದ್ಯದಲ್ಲಿ ಗೆದ್ದು ಬೀಗಿತು. ಇದರೊಂದಿಗೆ ಬೆಂಗಳೂರು ತಂಡ ಪ್ಲೇಆಫ್ ರೇಸ್‌ನಿಂದ ಹೊರಗುಳಿದಿದೆ. ಈ ಸೋಲಿನ ಲಾಭವನ್ನು ಮುಂಬೈ ಇಂಡಿಯನ್ಸ್ ಪಡೆದುಕೊಂಡಿದ್ದು, ಪ್ಲೇಆಫ್ ತಲುಪಿದೆ.
ಶುಭ್ಮನ್ ಗಿಲ್ ಮತ್ತೊಂದು ಶತಕ ಬಾರಿಸಿದ್ದಾರೆ. ಇದು ಅವರ ಐಪಿಎಲ್‌ನಲ್ಲಿ ಎರಡನೇ ಶತಕವಾಗಿದೆ. ಕೊನೆಯ ಓವರ್‌ನಲ್ಲಿ ಮೊದಲ ಎಸೆತದಲ್ಲಿ ಗಿಲ್ ಶತಕ ಗಳಿಸಿದರು ಮತ್ತು ಇದರೊಂದಿಗೆ ಗುಜರಾತ್ ಆರು ವಿಕೆಟ್‌ಗಳಿಂದ ಬೆಂಗಳೂರು ತಂಡವನ್ನು ಸೋಲಿಸಿತು.
ಪರ್ನೆಲ್ ಬೌಲ್ ಮಾಡಿದ 5ನೇ ಓವರ್‌ನಲ್ಲಿ ವಿಜಯ್ ಶಂಕರ್ 1 ಸಿಕ್ಸರ್ ಹಾಗೂ 2 ಬೌಂಡರಿ ಬಾರಿಸಿದರು.
6 ಓವರ್ ಅಂತ್ಯಕ್ಕೆ 51/1
5 ಓವರ್ ಅಂತ್ಯಕ್ಕೆ ಗುಜರಾತ್ 35 ರನ್ ಬಾರಿಸಿದೆ
ವೈಶಾಕ್ ಬೌಲ್ ಮಾಡಿದ ಈ ಓವರ್‌ನಲ್ಲಿ ಯಾವುದೇ ಬೌಂಡರಿ ಬರಲಿಲ್ಲ
ಗುಜರಾತ್ 35/1
ಸಿರಾಜ್ ಬೌಲ್ ಮಾಡಿದ 3ನೇ ಓವರ್‌ನಲ್ಲಿ ಗುಜರಾತ್ ಮೊದಲ ವಿಕೆಟ್ ಪತನವಾಗಿದೆ.
ಓವರ್‌ನ 6ನೇ ಎಸೆತದಲ್ಲಿ ಸಹಾ ಕ್ಯಾಚಿತ್ತು ಔಟಾದರು
ಗುಜರಾತ್ 25/1
ಪರ್ನೆಲ್ ಬೌಲ್ ಮಾಡಿದ 2ನೇ ಓವರ್‌ನಲ್ಲಿ ಸಹಾ ಡೀಪ್ ಬ್ಯಾಕ್ವರ್ಡ್ ಪಾಯಿಂಟ್ನಲ್ಲಿ ಬೌಂಡರಿ ಬಾರಿಸಿದರು. ಕೊನೆಯ ಎಸೆತದಲ್ಲೂ ಬೌಂಡರಿ ಬಂತು.
ಗುಜರಾತ್ ಇನ್ನಿಂಗ್ಸ್ ಆರಂಭವಾಗಿದೆ
ತಂಡದ ಪರ ಸಹಾ ಹಾಗೂ ಗಿಲ್ ಇನ್ನಿಂಗ್ಸ್ ಆರಂಭಿಸಿದ್ದಾರೆ
ಸಿರಾಜ್ ಬೌಲ್ ಮಾಡಿದ ಮೊದಲ ಓವರ್‌ನಲ್ಲಿ 2 ರನ್ ಬಂದವು
ವಿರಾಟ್ ಕೊಹ್ಲಿ ಶತಕ ಪೂರೈಸಿದ್ದಾರೆ. 20 ನೇ ಓವರ್‌ನ ಮೊದಲ ಎಸೆತದಲ್ಲಿ ಕೊಹ್ಲಿ ಅವರು 61 ಎಸೆತಗಳಲ್ಲಿ ಒಂದು ರನ್ ಗಳಿಸುವ ಮೂಲಕ ತಮ್ಮ ಶತಕವನ್ನು ಪೂರ್ಣಗೊಳಿಸಿದರು.
ಈ ಬಾರಿಯ ಐಪಿಎಲ್‌ನಲ್ಲಿ ಕೊಹ್ಲಿ ಗಳಿಸಿದ ಸತತ ಎರಡನೇ ಶತಕ ಇದಾಗಿದೆ.
ಐಪಿಎಲ್‌ನಲ್ಲಿ ಅತಿ ಹೆಚ್ಚು ಶತಕ ಸಿಡಿಸಿದ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.
ಆರ್‌ಸಿಬಿಯ 150 ರನ್‌ಗಳು ಪೂರ್ಣಗೊಂಡಿವೆ. 17ನೇ ಓವರ್‌ನ ಮೊದಲ ಎಸೆತದಲ್ಲಿ ಕೊಹ್ಲಿ ಒಂದು ರನ್ ಗಳಿಸುವ ಮೂಲಕ ತಂಡದ 150 ರನ್‌ಗಳನ್ನು ಪೂರೈಸಿದರು.
ಕೊಹ್ಲಿ ಅರ್ಧಶತಕ ಪೂರ್ಣಗೊಂಡಿದೆ. 12ನೇ ಓವರ್‌ನ ಐದನೇ ಎಸೆತದಲ್ಲಿ ಎರಡು ರನ್ ಗಳಿಸುವ ಮೂಲಕ ಕೊಹ್ಲಿ ಅರ್ಧಶತಕ ಪೂರೈಸಿದರು.
ಐದನೇ ಓವರ್‌ನ ನಾಲ್ಕನೇ ಎಸೆತದಲ್ಲಿ ಆರ್‌ಸಿಬಿ 50 ರನ್ ಪೂರೈಸಿತು. ಐದನೇ ಓವರ್ ನ ಮೂರನೇ ಎಸೆತದಲ್ಲಿ ಡುಪ್ಲೆಸಿ ಒಂದು ರನ್ ಗಳಿಸುವ ಮೂಲಕ ತಂಡದ ಅರ್ಧಶತಕ ಪೂರೈಸಿದರು.
ಮಳೆಯಿಂದಾಗಿ ಇಂದು 7.30ರ ಬದಲು 8.25ಕ್ಕೆ ಪಂದ್ಯ ಆರಂಭವಾಯಿತು. ವಿರಾಟ್ ಕೊಹ್ಲಿ ಮತ್ತು ಫಾಫಾ ಡು ಪ್ಲೆಸಿಸ್ ಬೆಂಗಳೂರು ಪರ ಬ್ಯಾಟಿಂಗ್‌ಗೆ ಬಂದಿದ್ದಾರೆ. 1 ಓವರ್‌ನ ನಂತರ ಬೆಂಗಳೂರು ಸ್ಕೋರ್ – 6/0. ಈ ಓವರ್‌ನಲ್ಲಿ ವಿರಾಟ್ ಕೊಹ್ಲಿ ಬೌಂಡರಿ ಬಾರಿಸಿದರು.
ಶುಭಮನ್ ಗಿಲ್, ವೃದ್ಧಿಮಾನ್ ಸಹಾ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ (ನಾಯಕ), ದಾಸುನ್ ಶನಕ, ಡೇವಿಡ್ ಮಿಲ್ಲರ್, ರಾಹುಲ್ ತೆವಾಟಿಯಾ, ರಶೀದ್ ಖಾನ್, ಮೋಹಿತ್ ಶರ್ಮಾ, ನೂರ್ ಅಹ್ಮದ್, ಮೊಹಮ್ಮದ್ ಶಮಿ, ಯಶ್ ದಯಾಳ್
ವಿರಾಟ್ ಕೊಹ್ಲಿ, ಫಾಫ್ ಡು ಪ್ಲೆಸಿಸ್ (ನಾಯಕ), ಮೈಕಲ್ ಬ್ರೇಸ್‌ವೆಲ್, ಗ್ಲೆನ್ ಮ್ಯಾಕ್ಸ್‌ವೆಲ್, ಮಹಿಪಾಲ್ ಲೋಮರೋರ್, ಅನುಜ್ ರಾವತ್, ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಹರ್ಷಲ್ ಪಟೇಲ್, ವೇಯ್ನ್ ಪಾರ್ನೆಲ್, ಮೊಹಮ್ಮದ್ ಸಿರಾಜ್, ವಿಜಯಕುಮಾರ್ ವೈಶಾಕ್
ಗೆದ್ದ ಗುಜರಾತ್ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದೆ.ಗುಜರಾತ್ ತಂಡದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಬೆಂಗಳೂರು ತಂಡದಲ್ಲಿ ಬದಲಾವಣೆ ಮಾಡಲಾಗಿದೆ. ಕರ್ಣ್ ಶರ್ಮಾ ಬದಲಿಗೆ ಹಿಮಾಂಶು ರಾಣಾ ತಂಡಕ್ಕೆ ಬಂದಿದ್ದಾರೆ.
ಬೆಂಗಳೂರಿನಲ್ಲಿ ತುಂತುರು ಮಳೆಯಾಗುತ್ತಿದ್ದು, ಟಾಸ್ ತಡವಾಗಲಿದೆ.
Published On - 6:58 pm, Sun, 21 May 23