- Kannada News Photo gallery Cricket photos Kannada News | IPL 2023: RCB's Equation based on MI Vs SRH
IPL 2023: ಮುಂಬೈ ಇಂಡಿಯನ್ಸ್ ಗೆದ್ದರೆ, RCB ಎಷ್ಟು ಅಂತರದಿಂದ ಗೆಲ್ಲಬೇಕು? ಇಲ್ಲಿದೆ ಮಾಹಿತಿ
IPL 2023 Kannada: ಮುಂಬೈ ಇಂಡಿಯನ್ಸ್ ಉತ್ತಮ ನೆಟ್ ರನ್ ರೇಟ್ನೊಂದಿಗೆ ಗೆಲ್ಲಬೇಕಾದ ಅನಿವಾರ್ಯತೆ ಇದೆ. ಈಗಾಗಲೇ MI vs SRH ಪಂದ್ಯ ಶುರುವಾಗಿದ್ದು, ಟಾಸ್ ಗೆದ್ದಿರುವ ಮುಂಬೈ ಇಂಡಿಯನ್ಸ್ ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ.
Updated on: May 21, 2023 | 4:22 PM

IPL 2023: ಐಪಿಎಲ್ ಸೀಸನ್ 16 ಲೀಗ್ ಹಂತದ ಪಂದ್ಯಗಳು ಮುಕ್ತಾಯದ ಹಂತಕ್ಕೆ ಬಂದು ನಿಂತಿದೆ. ಇನ್ನುಳಿದಿರುವುದು ಮುಂಬೈ ಇಂಡಿಯನ್ಸ್ - ಸನ್ರೈಸರ್ಸ್ ಹೈದರಾಬಾದ್ ಹಾಗೂ ಆರ್ಸಿಬಿ - ಗುಜರಾತ್ ಟೈಟಾನ್ಸ್ ನಡುವಣ ಪಂದ್ಯಗಳು ಮಾತ್ರ.

ಆದರೆ ಈ ಕೊನೆಯ 2 ಪಂದ್ಯಗಳೇ ಉಭಯ ತಂಡಗಳ ಪಾಲಿಗೆ ನಿರ್ಣಾಯಕ. ಅಂದರೆ ಈಗಾಗಲೇ ಗುಜರಾತ್ ಟೈಟಾನ್ಸ್, ಸಿಎಸ್ಕೆ ಹಾಗೂ ಲಕ್ನೋ ಸೂಪರ್ ಜೈಂಟ್ಸ್ ತಂಡಗಳು ಪ್ಲೇಆಫ್ ಹಂತಕ್ಕೇರಿದೆ. ಇನ್ನುಳಿದಿರುವ 4ನೇ ಸ್ಥಾನಕ್ಕಾಗಿ ಮುಂಬೈ ಇಂಡಿಯನ್ಸ್ ಹಾಗೂ ಆರ್ಸಿಬಿ ನಡುವೆ ಪೈಪೋಟಿ ಏರ್ಪಟ್ಟಿದೆ.

ಇಲ್ಲಿ ಎಸ್ಆರ್ಹೆಚ್ ವಿರುದ್ಧ ಮುಂಬೈ ಇಂಡಿಯನ್ಸ್ ಗೆದ್ದರೆ 16 ಪಾಯಿಂಟ್ಸ್ನೊಂದಿಗೆ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೇರಲಿದೆ. ಆದರೆ ಅತ್ತ ಕೊನೆಯ ಪಂದ್ಯದಲ್ಲಿ ಆರ್ಸಿಬಿ ಜಯ ಸಾಧಿಸಿದರೆ 16 ಪಾಯಿಂಟ್ಸ್ ಕಲೆಹಾಕಿ ಮುಂಬೈ ಇಂಡಿಯನ್ಸ್ ಅನ್ನು ಹಿಂದಿಕ್ಕಿ 4ನೇ ಸ್ಥಾನಕ್ಕೇರಬಹುದು.

ಅಂದರೆ ಇಲ್ಲಿ ಮುಂಬೈ ಇಂಡಿಯನ್ಸ್ ಉತ್ತಮ ನೆಟ್ ರನ್ ರೇಟ್ನೊಂದಿಗೆ ಗೆಲ್ಲಬೇಕಾದ ಅನಿವಾರ್ಯತೆ ಇದೆ. ಈಗಾಗಲೇ MI vs SRH ಪಂದ್ಯ ಶುರುವಾಗಿದ್ದು, ಟಾಸ್ ಗೆದ್ದಿರುವ ಮುಂಬೈ ಇಂಡಿಯನ್ಸ್ ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ.

ಅದರಂತೆ ಮುಂಬೈ ಇಂಡಿಯನ್ಸ್ ಚೇಸಿಂಗ್ ಲೆಕ್ಕಾಚಾರದೊಂದಿಗೆ ಬ್ಯಾಟಿಂಗ್ಗೆ ಇಳಿಯಲಿದೆ. ಅಂದರೆ ಮುಂಬೈ ಇಂಡಿಯನ್ಸ್ ನಿರ್ದಿಷ್ಟ ಓವರ್ಗಳಲ್ಲಿ ಎಸ್ಆರ್ಹೆಚ್ ನೀಡಿದ ಗುರಿಯನ್ನು ಚೇಸ್ ಮಾಡಿದರೆ ಆರ್ಸಿಬಿಗಿಂತ ನೆಟ್ ರನ್ ರೇಟ್ ಹೆಚ್ಚಿಸಿಕೊಳ್ಳಬಹುದು. ಈ ಲೆಕ್ಕಾಚಾರಗಳು ಯಾವುವು, ಈ ಮಾಸ್ಟರ್ ಪ್ಲ್ಯಾನ್ ಆರ್ಸಿಬಿ ಹೇಗೆ ಉತ್ತರ ನೀಡಬಹುದು ಎಂಬುದನ್ನು ನೋಡೋಣ..

ಎಸ್ಆರ್ಹೆಚ್ ನೀಡಿದ ಗುರಿಯನ್ನು ಮುಂಬೈ ಇಂಡಿಯನ್ಸ್ ತಂಡವು ಕೇವಲ 8 ಓವರ್ಗಳಲ್ಲಿ ಚೇಸ್ ಮಾಡಿದರೆ, ಆರ್ಸಿಬಿ ತಂಡವು ಗುಜರಾತ್ ಟೈಟಾನ್ಸ್ ವಿರುದ್ಧ 40 ರನ್ಗಳ ಅಂತರದಿಂದ ಗೆಲ್ಲಲೇಬೇಕು.

ಒಂದು ವೇಳೆ ಮುಂಬೈ ಇಂಡಿಯನ್ಸ್ ಎಸ್ಆರ್ಹೆಚ್ ನೀಡಿದ ಗುರಿಯನ್ನು ಬೆನ್ನತ್ತಲು 10 ಓವರ್ ತೆಗೆದುಕೊಂಡರೆ, ಆರ್ಸಿಬಿ ಗುಜರಾತ್ ಟೈಟಾನ್ಸ್ ವಿರುದ್ಧ 20 ರನ್ಗಳ ಅಂತರದಿಂದ ಗೆಲ್ಲಬೇಕು.

ಇನ್ನು ಎಸ್ಆರ್ಹೆಚ್ ತಂಡದ ಟಾರ್ಗೆಟ್ ಅನ್ನು ಬೆನ್ನತ್ತಲು ಮುಂಬೈ ಇಂಡಿಯನ್ಸ್ ಬ್ಯಾಟರ್ಗಳು 12 ಓವರ್ ಅಥವಾ ಅದಕ್ಕಿಂತ ಹೆಚ್ಚಿನ ಓವರ್ ತೆಗೆದುಕೊಂಡರೆ, ಆರ್ಸಿಬಿ ತಂಡವು ಗುಜರಾತ್ ಟೈಟಾನ್ಸ್ ವಿರುದ್ಧ ಗೆದ್ದರೆ ಸಾಕು.

ಅಂದರೆ ಎಸ್ಆರ್ಹೆಚ್ ತಂಡದ ವಿರುದ್ಧ ಮುಂಬೈ ಇಂಡಿಯನ್ಸ್ 12 ಓವರ್ ಬ್ಯಾಟಿಂಗ್ ಮಾಡಿದ್ರೆ, ಅತ್ತ ಆರ್ಸಿಬಿ ಗುಜರಾತ್ ಟೈಟಾನ್ಸ್ ಅನ್ನು ಮಣಿಸಿ 16 ಪಾಯಿಂಟ್ಸ್ನೊಂದಿಗೆ ಪ್ಲೇಆಫ್ ಪ್ರವೇಶಿಸುವುದು ಖಚಿತ.



















