ತವರಿನಲ್ಲಿ ಸೋಲು ಕಂಡಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಬೆಂಗಳೂರು ಬಿಟ್ಟ ತಕ್ಷಣ ಭರ್ಜರಿ ಗೆಲುವು ದಾಖಲಿಸಿದೆ. ಮೊಹಾಲಿಯ ತವರು ಮೈದಾನದಲ್ಲಿ ಬೆಂಗಳೂರು ತಂಡ ಪಂಜಾಬ್ ಕಿಂಗ್ಸ್ ತಂಡವನ್ನು 24 ರನ್‌ಗಳಿಂದ ಸೋಲಿಸಿತು. ಇದರೊಂದಿಗೆ ಆರನೇ ಪಂದ್ಯದಲ್ಲಿ ಬೆಂಗಳೂರು ಮೂರನೇ ಜಯ ದಾಖಲಿಸಿತು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆರ್ಸಿಬಿ ಆರಂಭಿಕರಾದ ವಿರಾಟ್ ಕೊಹ್ಲಿ ಹಾಗೂ ಫಾಫ್ ಡುಪ್ಲೆಸಿಸ್ ಅವರ ಅರ್ಧಶತಕದ ನೆರವಿನಿಂದ 174 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಪಂಜಾಬ್ ತಂಡವನ್ನು ಇನ್ನಿಲ್ಲದಂತೆ ಕಾಡಿದ ಮೊಹಮ್ಮದ್ ಸಿರಾಜ್ 4 ವಿಕೆಟ್ ಹಾಗೂ 1 ರನ್ಔಟ್ ಮಾಡಿ ಪಂಜಾಬ್ ತಂಡವನ್ನು ಸೋಲಿನ ದವಡೆಗೆ ಸಿಲುಕಿಸಿದರು. ಅಂತಿಮವಾಗಿ ಪಂಜಾಬ್ ತಂಡ ತನ್ನೆಲ್ಲ ವಿಕೆಟ್ ಕಳೆದುಕೊಂಡು ಕೇವಲ 138 ರನ್ಗಳಿಸಲಷ್ಟೇ ಶಕ್ತವಾಯಿತು.
19ನೇ ಓವರ್ನಲ್ಲಿ ಜಿತೇಶ್ ಔಟಾಗುವುದರೊಂದಿಗೆ ಪಂಜಾಬ್ 24 ರನ್ಗಳ ಸೋಲುಕಂಡಿದೆ. ಇದರೊಂದಿಗೆ ಆರ್ಸಿಬಿ 3ನೇ ಗೆಲುವು ಸಾಧಿಸಿದೆ.
ಸಿರಾಜ್ ಬೆಂಗಳೂರಿಗೆ ಮತ್ತೊಂದು ಯಶಸ್ಸನ್ನು ನೀಡಿದ್ದಾರೆ. ನಾಥನ್ ಎಲ್ಲಿಸ್ ಕ್ಲೀನ್ ಬೌಲ್ಡ್ ಆದರು. ಇದರೊಂದಿಗೆ ಪಂಜಾಬ್ನ ಒಂಬತ್ತನೇ ವಿಕೆಟ್ ಪತನಗೊಂಡಿದೆ.
ಹರ್‌ಪ್ರೀತ್ ಬ್ರಾರ್ ಔಟಾಗಿದ್ದಾರೆ. ಪಂಜಾಬ್‌ಗೆ ಎಂಟನೇ ಹೊಡೆತ ಬಿದ್ದಿದೆ. ಸಿರಾಜ್ 18ನೇ ಓವರ್‌ನ ಮೂರನೇ ಎಸೆತದಲ್ಲಿ ಬ್ರಾರ್ ಅವರನ್ನು ಬೌಲ್ಡ್ ಮಾಡಿದರು.
ವೈಶಾಖ್ ಎಸೆದ 16ನೇ ಓವರ್ನಲ್ಲಿ ಜಿತೇಶ್ 2ನೇ ಎಸೆತವನ್ನು ಬೌಂಡರಿಗಟ್ಟಿದರೆ, 3ನೇ ಎಸೆತವನ್ನು ಸಿಕ್ಸರ್ಗಟ್ಟಿದರು.
ಹಸರಂಗ ಎಸೆದ 15ನೇ ಓವರ್‌ನ 2ನೇ ಎಸೆತವನ್ನು ಸ್ಟ್ರೈಟ್ ಹಿಟ್ ಮಾಡಿ ಸಿಕ್ಸರ್ ಹೊಡೆದರು.
ಶಾರುಖ್ ಖಾನ್ 5 ಎಸೆತಗಳಲ್ಲಿ 7 ರನ್ ಗಳಿಸಿ ಪೆವಿಲಿಯನ್ಗೆ ಮರಳಿದರು. ಹಸರಂಗ ಓವರ್ನಲ್ಲಿ ಬಿಗ್ ಶಾಟ್ ಆಡಲು ಯತ್ನಿಸಿದ ಶಾರುಖ್ ಖಾನ್ ಸ್ಟಂಪ್ ಔಟ್ ಆದರು.
12 ಓವರ್‌ಗಳಲ್ಲಿ ಪಂಜಾಬ್ ಕಿಂಗ್ಸ್ ಸ್ಕೋರ್ 103/6. ಶಾರುಖ್ 3 ಎಸೆತಗಳಲ್ಲಿ 6 ರನ್ ಮತ್ತು ಜಿತೇಶ್ ಶರ್ಮಾ 6 ಎಸೆತಗಳಲ್ಲಿ 11 ರನ್ ಗಳಿಸಿ ಆಡುತ್ತಿದ್ದಾರೆ. ಈ ಓವರ್‌ನ ಕೊನೆಯ ಎಸೆತದಲ್ಲಿ ಶಾರುಖ್ ಭರ್ಜರಿ ಸಿಕ್ಸರ್ ಬಾರಿಸಿದರು.
ಪಂಜಾಬ್‌ಗೆ ಆರನೇ ಹೊಡೆತ ಬಿದ್ದಿದೆ. ಪ್ರಭಾಸಿಮ್ರಾನ್ ಸಿಂಗ್ ಔಟಾಗಿದ್ದಾರೆ. 12ನೇ ಓವರ್‌ನ ಮೂರನೇ ಎಸೆತದಲ್ಲಿ ಪ್ರಭಾಸಿಮ್ರಾನ್ ಸಿಂಗ್ ಕ್ಲೀನ್ ಬೌಲ್ಡ್ ಆದರು.
11ನೇ ಓವರ್ ಬೌಲ್ ಮಾಡಿದ ಹರ್ಷಲ್ 1 ಸಿಕ್ಸರ್ ಹಾಗೂ 1 ಬೌಂಡರಿ ಬಿಟ್ಟುಕೊಟ್ಟು ಕೊಂಚ ದುಬಾರಿಯಾಗಿದ್ದಾರೆ. ಈ ಓವರ್ನಲ್ಲಿ ಒಂದು ನೋ ಬಾಲ್ ಕೂಡ ಬಂತು.
9 ಓವರ್‌ಗಳ ನಂತರ ಪಂಜಾಬ್ ಸ್ಕೋರ್ 70/4. ಸಿಮ್ರಾನ್ ಸಿಂಗ್ 24 ಎಸೆತಗಳಲ್ಲಿ 37 ಮತ್ತು ಸ್ಯಾಮ್ ಕರನ್ 8 ಎಸೆತಗಳಲ್ಲಿ 5 ರನ್ ಗಳಿಸಿ ಕ್ರೀಸ್‌ನಲ್ಲಿ ಆಡುತ್ತಿದ್ದಾರೆ.
8ನೇ ಓವರ್‌ನ ಮೊದಲ ಎಸೆತದಲ್ಲಿ ಪ್ರಬ್ಸಿಮ್ರನ್ ಲಾಂಗ್ ಆನ್ನಲ್ಲಿ ಭರ್ಜರಿ ಸಿಕ್ಸರ್ ಹೊಡೆದರು. ಹಾಗೆಯೇ ಕೊನೆಉ ಎಸೆತದಲ್ಲೂ ಭರ್ಜರಿ ಸಿಕ್ಸರ್ ಬಂತು.
ಕನ್ನಡಿಗ ವೈಶಾಕ್ ಎಸೆದ ಪವರ್ ಪ್ಲೇ ಕೊನೆಯ ಓವರ್‌ನ ಮೊದಲ ಎಸೆತದಲ್ಲೇ ಹರ್ಪ್ರೀತ್ ಸಿಂಗ್ ಭಾಟಿಯಾ ರನ್ ಔಟ್ ಆದರು. ಆದರೆ ಓವರ್‌ನ ಕೊನೆಯ ಎಸೆತದಲ್ಲಿ 1 ಸಿಕ್ಸರ್ ಬಂತು.
ಪರ್ನೆಲ್ ಎಸೆದ 5ನೇ ಓವರ್‌ನ ಕೊನೆಯ ಎಸೆತದಲ್ಲಿ ಸಿಂಗ್ ಓವರ್ ದಿ ಡಿಪ್ ಸ್ಕ್ವೈರ್ ಲೆಗ್ನಲ್ಲಿ ಸಿಕ್ಸರ್ ಬಾರಿಸಿದರು.
4ನೇ ಓವರ್ ಬೌಲ್ ಮಾಡಲು ಬಂದ ಸಿರಾಜ್ ಆರ್ಸಿಬಿಗೆ ಮತ್ತೊಂದು ವಿಕೆಟ್ ತಂದುಕೊಟ್ಟಿದ್ದಾರೆ. ಪಂಜಾಬ್ ಪಾಳಯದ ಡೇಂಜರಸ್ ಬ್ಯಾಟರ್ ಲಿವಿಂಗ್‌ಸ್ಟನ್ ಎಲ್ಬಿ ಬಲೆಗೆ ಬಿದ್ದರು.
ಹಸರಂಗ ಎಸೆದ ಮೂರನೇ ಓವರ್‌ನ ಮೊದಲ ಎಸೆತದಲ್ಲೇ ಶಾರ್ಟ್ರನ್ನು ಕ್ಲೀನ್ ಬೌಲ್ಡ್ ಮಾಡಿದರು. ಪಂಜಾಬ್ 2ನೇ ವಿಕೆಟ್ ಪತನ
ಪರ್ನೆಲ್ ಎಸೆದ 2ನೇ ಓವರ್‌ನ 4ನೇ ಎಸೆತವನ್ನು ಶಾರ್ಟ್ ಫೈನ್ ಲೆಗ್ನಲ್ಲಿ ಸಿಕ್ಸರ್ಗಟ್ಟಿದರು. ಕೊನೆಯ ಎಸೆತದಲ್ಲೂ ಬೌಂಡರಿ ಬಂತು.
ಗುರಿ ಬೆನ್ನಟ್ಟಿರುವ ಪಂಜಾಬ್‌ಗೆ ಮೊದಲ ಓವರ್ನಲ್ಲೇ ಆಘಾತ ಎದುರಾಗಿದೆ. ಸಿರಾಜ್ ಎಸೆದ ಮೊದಲ ಓವರ್‌ನ ಮೊದಲ ಎಸೆತದಲ್ಲಿ ಬೌಂಡರಿ ಹೊಡೆದ ಟೈಡೆ, ನಂತರದ ಎಸೆತದಲ್ಲಿ ಎಲ್ಬಿ ಬಲೆಗೆ ಬಿದ್ದರು.
ಆರಂಭಿಕರಾಗಿ ಕಣಕ್ಕಿಳಿದ ಕೊಹ್ಲಿ ಹಾಗೂ ಫಾಫ್ ಅವರ ಅರ್ಧಶತಕದ ನೆರವಿನಿಂದ ಆರ್ಸಿಬಿ ನಿಗದಿತ 20 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು 174 ರನ್ ಕಲೆಹಾಕಿದೆ.
19ನೇ ಓವರ್ನಲ್ಲಿ ಮಹಿಪಾಲ್ 1 ಬೌಂಡರಿ ಹೊಡೆದರೆ, ಕಾರ್ತಿಕ್ 5ನೇ ಎಸೆತದಲ್ಲಿ ಬೌಂಡರಿ ಹೊಡೆದರು. ಆದರೆ ಕೊನೆಯ ಎಸೆತದಲ್ಲಿ ಕ್ಯಾಚಿತ್ತು ಔಟಾದರು.
ನಾಯಕ ಫಾಫ್ 84 ರನ್ ಗಳಿಸಿ ವಿಕೆಟ್ ಒಪ್ಪಿಸಿದ್ದಾರೆ. 18ನೇ ಓವರ್‌ನ 3ನೇ ಎಸೆತದಲ್ಲಿ ಬಿಗ್ ಶಾಟ್ ಆಡಲು ಯತ್ನಿಸಿದ ಫಾಫ್ ಬೌಂಡರಿ ಬಳಿ ಕ್ಯಾಚಿತ್ತು ಔಟಾದರು.
17ನೇ ಓವರ್ನಲ್ಲಿ 2 ವಿಕೆಟ್ ಉರುಳಿದ ಬಳಿಕ ಫಾಫ್ ಬೌಲರ್ ತಲೆಯ ಮೇಲೆ ಸಿಕ್ಸರ್ ಬಾರಿಸಿದರು. ಆ ಬಳಿಕ 18ನೇ ಓವರ್‌ನ 2ನೇ ಎಸೆತವನ್ನು ಲಾಂಗ್ ಆಫ್ನಲ್ಲಿ ಸಿಕ್ಸರ್ಗಟ್ಟಿದರು.
ಪಂಜಾಬ್ ಬೌಂಡರಿಗಳಿಗೆ ಕಡಿವಾಣ ಹಾಕಿದೆ. ಇದೀಗ 17ನೇ ಓವರ್‌ನ ಮೊದಲ ಎಸೆತದಲ್ಲಿ ಬೌಂಡರಿ ಕದಿಯಲು ಯತ್ನಿಸಿದ ಕೊಹ್ಲಿ ಕೀಪರ್ ಕೈಗೆ ಕ್ಯಾಚಿತ್ತು ಔಟಾದರು. ಆ ಬಳಿಕ ಬಂದ ಮ್ಯಾಕ್ಸ್‌ವೆಲ್ ಕೂಡ ಯಾವುದೇ ರನ್ ಗಳಿಸದೆ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದರು.
15ನೇ ಓವರ್‌ನ ಐದನೇ ಎಸೆತವನ್ನು ಕೊಹ್ಲಿ ಲಾಂಗ್ ಆಫ್ನಲ್ಲಿ ಸಿಕ್ಸರ್ಗಟ್ಟಿದರು.
14ನೇ ಓವರ್‌ನ ಕೊನೆಯ ಎಸೆತವನ್ನ ಬೌಂಡರಿಗಟ್ಟಿದ ಕೊಹ್ಲಿ ತಮ್ಮ ಅರ್ಧಶತಕ ಪೂರೈಸಿದರು.
ಮೊಹಾಲಿಯಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 100 ರನ್ ಪೂರೈಸಿದೆ. 13 ಓವರ್‌ಗಳ ಅಂತ್ಯಕ್ಕೆ ತಂಡದ ಸ್ಕೋರ್ ಯಾವುದೇ ವಿಕೆಟ್ ನಷ್ಟವಿಲ್ಲದೆ 108 ರನ್ ಆಗಿದೆ. ಕೊಹ್ಲಿ (44) ಮತ್ತು ಡುಪ್ಲೆಸಿಸ್ (61) ಕ್ರೀಸ್‌ನಲ್ಲಿ ಆಡುತ್ತಿದ್ದಾರೆ.
12ನೇ ಓವರ್ನಲ್ಲಿ ಕೊಹ್ಲಿ ಡಬಲ್ ರನ್ ಕದಿಯುವುದರೊಂದಿಗೆ ಆರ್ಸಿಬಿ ಮೊತ್ತವನ್ನು ಶತಕದ ಗಡಿ ದಾಟಿಸಿದ್ದಾರೆ. ಇಲ್ಲಿಂದ ಈ ಜೋಡಿ ಬಿಗ್ ಟಾರ್ಗೆಟ್ ಸೆಟ್ ಮಾಡಲು ಪ್ರಯತ್ನಿಸಬೇಕಿದೆ.
10ನೇ ಓವರ್‌ನ ಕೊನೆಯ ಎಸೆತದಲ್ಲಿ ಸಿಂಗಲ್ ಕದ್ದ ನಾಯಕ ಫಾಫ್ ತಮ್ಮ ಅರ್ಧಶತಕ ಪೂರೈಸಿದರು. ಹಾಗೆಯೇ ಈ ಓವರ್ನಲ್ಲಿ 1 ಬೌಂಡರಿ ಕೂಡ ಬಂತು.
7ನೇ ಓವರ್ನಲ್ಲಿ ಯಾವುದೇ ಬೌಂಡರಿ ಬರಲಿಲ್ಲ. ಆದರೆ 8ನೇ ಓವರ್‌ನ ಕೊನೆಯ ಎಸೆತದಲ್ಲಿ ಫಾಫ್ ಸಿಕ್ಸರ್ ಬಾರಿಸಿದರು.
ಸ್ಯಾಮ್ ಕರನ್ ಎಸೆದ ಪವರ್ ಪ್ಲೇಯ ಕೊನೆಯ ಓವರ್ನಲ್ಲಿ ಫಾಫ್ ಡೀಪ್ ಮಿಡ್ ವಿಕೆಟ್ ಮೇಲೆ ಬೌಂಡರಿ ಬಾರಿಸಿದರು. 6 ಓವರ್ ಅಂತ್ಯಕ್ಕೆ ಆರ್ಸಿಬಿ 59/0
5ನೇ ಓವರ್‌ನ 4ನೇ ಎಸೆತವನ್ನು ಸ್ಕ್ವೈರ್ ಲೆಗ್ ಕಡೆ ಬೌಂಡರಿಗಟ್ಟಿದ ಕೊಹ್ಲಿ ಕೊನೆಯ ಎಸೆತವನ್ನು ಬ್ಯಾಕ್ವರ್ಡ್ ಪಾಯಿಂಟ್ನಲ್ಲಿ ಬೌಂಡರಿಗಟ್ಟಿದರು.
4ನೇ ಓವರ್ನಲ್ಲಿ ನಾಯಕ ಫಾಫ್ 2 ಸಿಕ್ಸರ್ ಹೊಡೆದರು. ಮೊದಲ ಸಿಕ್ಸರ್ ಬೌಲರ್ ತಲೆಯ ಮೇಲೆ ಬಂದರೆ, 2ನೇ ಸಿಕ್ಸರ್ ಲಾಂಗ್ ಆನ್ನಿಂದ ಬಂತು.
ಅರ್ಶದೀಪ್ ಎಸೆದ ಮೂರನೇ ಓವರ್ನಲ್ಲಿ ಕೊಹ್ಲಿ 2 ಬೌಂಡರಿ ಹೊಡೆದರು. ಮೊದಲ ಬೌಂಡರಿ ಫೈನ್ ಲೆಗ್ ಕಡೆ ಬಂದರೆ, 2ನೇ ಬೌಂಡರಿ ಪಾಯಿಂಟ್ ದಿಕ್ಕಿನಿಂದ ಬಂತು.
ಬ್ರಾರ್ ಎಸೆದ 2ನೇ ಓವರ್‌ನ 4ನೇ ಎಸೆತದಲ್ಲಿ ಕೊಹ್ಲಿ ಕವರ್ಸ್ನಲ್ಲಿ ಬೌಂಡರಿ ಬಾರಿಸಿದರು.
ಆರ್ಸಿಬಿ ಬ್ಯಾಟಿಂಗ್ ಆರಂಭಿಸಿದ್ದು, ತಂಡದ ಪರ ಕೊಹ್ಲಿ ಹಾಗೂ ಡುಪ್ಲೆಸಿಸ್ ಇನ್ನಿಂಗ್ಸ್ ಆರಂಭಿಸಿದ್ದಾರೆ. ಅರ್ಶದೀಪ್ ಸಿಂಗ್ ಎಸೆದ ಮೊದಲ ಓವರ್ನಲ್ಲಿ 5 ರನ್ ಬಂದವು.
ಅರ್ಥವ್ ಟೈಡೆ, ಮ್ಯಾಥ್ಯೂ ಶಾರ್ಟ್, ಹರ್‌ಪ್ರೀತ್ ಸಿಂಗ್ ಭಾಟಿಯಾ, ಲಿಯಾಮ್ ಲಿವಿಂಗ್‌ಸ್ಟನ್, ಸ್ಯಾಮ್ ಕರನ್, ಜಿತೇಶ್ ಶರ್ಮಾ, ಶಾರುಖ್ ಖಾನ್, ಹರ್‌ಪ್ರೀತ್ ಬ್ರಾರ್, ನಾಥನ್ ಎಲ್ಲಿಸ್, ರಾಹುಲ್ ಚಾಹರ್, ಅರ್ಷ್‌ದೀಪ್ ಸಿಂಗ್
ಫಾಫ್ ಡು ಪ್ಲೆಸಿಸ್, ವಿರಾಟ್ ಕೊಹ್ಲಿ, ಮಹಿಪಾಲ್ ಲೋಮ್ರೋರ್, ಗ್ಲೆನ್ ಮ್ಯಾಕ್ಸ್‌ವೆಲ್, ಶಹಬಾಜ್ ಅಹ್ಮದ್, ದಿನೇಶ್ ಕಾರ್ತಿಕ್, ಸುಯಶ್ ಪ್ರಭುದೇಸಾಯಿ, ವೇಯ್ನ್ ಪಾರ್ನೆಲ್, ವನಿಂದು ಹಸರಂಗ, ಹರ್ಷಲ್ ಪಟೇಲ್, ಮೊಹಮ್ಮದ್ ಸಿರಾಜ್
ಟಾಸ್ ಗೆದ್ದ ಪಂಜಾಬ್ ನಾಯಕ ಸ್ಯಾಮ್ ಕರನ್ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದ್ದಾರೆ.
ಐಪಿಎಲ್ನ 27 ನೇ ಪಂದ್ಯವು ಪಂಜಾಬ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವೆ ನಡೆಯಲಿದೆ.
Published On - 2:44 pm, Thu, 20 April 23