ಐಪಿಎಲ್ 2024 ರ ಎಲಿಮಿನೇಟರ್ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ನಾಲ್ಕು ವಿಕೆಟ್‌ಗಳಿಂದ ಸೋಲಿಸಿ ಕ್ವಾಲಿಫೈಯರ್-2 ಗೆ ಅರ್ಹತೆ ಗಿಟ್ಟಿಸಿಕೊಂಡಿದೆ. ಇತ್ತ ಸತತ ಆರು ಪಂದ್ಯಗಳನ್ನು ಗೆಲ್ಲುವ ಮೂಲಕ ಪ್ಲೇಆಫ್ಗೆ ಅರ್ಹತೆ ಪಡೆದುಕೊಂಡಿದ್ದ ಆರ್‌ಸಿಬಿ ಪಯಣ ಇಲ್ಲಿಗೆ ಅಂತ್ಯಗೊಂಡಿದೆ. ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಬೆಂಗಳೂರು 20 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು 172 ರನ್ ಗಳಿಸಿತು. ಉತ್ತರವಾಗಿ ರಾಜಸ್ಥಾನ 19 ಓವರ್‌ಗಳಲ್ಲಿ ಆರು ವಿಕೆಟ್ ಕಳೆದುಕೊಂಡು ಗುರಿ ತಲುಪಿತು.
ಕ್ವಾಲಿಫೈಯರ್-2 ತಲುಪಿರುವ ರಾಜಸ್ಥಾನ ತಂಡ ಇದೀಗ ಮೇ 24 ರಂದು ಮತ್ತೊಂದು ನಾಕೌಟ್ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡವನ್ನು ಎದುರಿಸಲಿದೆ. ಆ ಪಂದ್ಯದಲ್ಲಿ ಗೆಲ್ಲುವ ತಂಡ ಮೇ 26 ರಂದು ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಫೈನಲ್‌ನಲ್ಲಿ ಆಡಲಿದೆ. ಬೆಂಗಳೂರಿನ ಆಟಗಾರರು ದಿನೇಶ್ ಕಾರ್ತಿಕ್ ಅವರನ್ನು ಅಪ್ಪಿಕೊಂಡ ರೀತಿ, ಇದು ಐಪಿಎಲ್‌ನಲ್ಲಿ ಕಾರ್ತಿಕ್ ಅವರ ಕೊನೆಯ ಪಂದ್ಯ ಎಂದು ಊಹಿಸಲಾಗುತ್ತಿದೆ. ಸಿಎಸ್‌ಕೆ ವಿರುದ್ಧದ ಪಂದ್ಯವು ತನ್ನ ಐಪಿಎಲ್ ವೃತ್ತಿಜೀವನದ ಕೊನೆಯ ಪಂದ್ಯವಾಗಲಿದೆ ಎಂದು ಕಾರ್ತಿಕ್ ಸಿಎಸ್‌ಕೆಯನ್ನು ಸೋಲಿಸಿದ ನಂತರ ಈ ಹಿಂದೆ ಹೇಳಿದ್ದರು. ಇಂತಹ ಪರಿಸ್ಥಿತಿಯಲ್ಲಿ ಕಾರ್ತಿಕ್ ಅವರ ವೃತ್ತಿಜೀವನ ಮುಗಿದಿದೆ ಎಂದು ಪರಿಗಣಿಸಲಾಗಿದೆ.
ರಾಜಸ್ಥಾನ್ ರಾಯಲ್ಸ್ ತಂಡ ಆರ್‌ಸಿಬಿ ತಂಡವನ್ನು ನಾಲ್ಕು ವಿಕೆಟ್‌ಗಳಿಂದ ಸೋಲಿಸಿದೆ. ಈ ಪಂದ್ಯವನ್ನು ಗೆಲ್ಲುವ ಮೂಲಕ ರಾಜಸ್ಥಾನ್ ರಾಯಲ್ಸ್ ಕ್ವಾಲಿಫೈಯರ್-2ರಲ್ಲಿ ಸ್ಥಾನ ಪಡೆದುಕೊಂಡಿದೆ.
ಮೊಹಮ್ಮದ್ ಸಿರಾಜ್ ಒಂದೇ ಓವರ್‌ನಲ್ಲಿ ರಿಯಾನ್ ಪರಾಗ್ ಮತ್ತು ಶಿಮ್ರಾನ್ ಹೆಟ್ಮೆಯರ್ ಅವರ ವಿಕೆಟ್ ಪಡೆದರು. ರಾಜಸ್ಥಾನ್ ರಾಯಲ್ಸ್ 18 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 160 ರನ್ ಗಳಿಸಿದೆ.
ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಎಸೆತದಲ್ಲಿ ಧ್ರುವ್ ಜುರೆಲ್ ರನೌಟ್ ಆಗಿದ್ದಾರೆ. ಈ ಮೂಲಕ ರಾಜಸ್ಥಾನದ ನಾಲ್ಕು ವಿಕೆಟ್‌ಗಳು ಪತನಗೊಂಡಿವೆ
13 ಓವರ್‌ಗಳಲ್ಲಿ ರಾಜಸ್ಥಾನ್ ರಾಯಲ್ಸ್ ತಂಡ 3 ವಿಕೆಟ್ ನಷ್ಟಕ್ಕೆ 111 ರನ್ ಗಳಿಸಿದೆ. ಧ್ರುವ್ ಜುರೆಲ್ ಮತ್ತು ರಿಯಾನ್ ಪರಾಗ್ ಕ್ರೀಸ್‌ನಲ್ಲಿದ್ದಾರೆ.
ರಾಜಸ್ಥಾನ ಸತತ ಎರಡು ಓವರ್‌ಗಳಲ್ಲಿ ಎರಡು ವಿಕೆಟ್ ಕಳೆದುಕೊಂಡಿತು. ಯಶಸ್ವಿ 10ನೇ ಓವರ್‌ನಲ್ಲಿ 45 ರನ್ ಗಳಿಸಿ ಔಟಾದರು. ಇದಾದ ಬಳಿಕ 11ನೇ ಓವರ್ ನಲ್ಲಿ ನಾಯಕ ಸಂಜು ಸ್ಯಾಮ್ಸನ್ ಔಟಾದರು. ಒಂದು ಸಮಯದಲ್ಲಿ ರಾಜಸ್ಥಾನದ ಸ್ಕೋರ್ ಒಂದು ವಿಕೆಟ್‌ಗೆ 81 ರನ್ ಆಗಿತ್ತು. ಇದೀಗ ತಂಡ 86 ರನ್‌ಗಳಿಗೆ ಇನ್ನೆರಡು ವಿಕೆಟ್ ಕಳೆದುಕೊಂಡಿದೆ.
10ನೇ ಓವರ್‌ನಲ್ಲಿ 81 ರನ್‌ಗಳಿದ್ದಾಗ ರಾಜಸ್ಥಾನಕ್ಕೆ ಎರಡನೇ ವಿಕೆಟ್ ಕಳೆದುಕೊಂಡಿದೆ. ಯಶಸ್ವಿ 30 ಎಸೆತಗಳಲ್ಲಿ ಎಂಟು ಬೌಂಡರಿಗಳ ನೆರವಿನಿಂದ 45 ರನ್ ಗಳಿಸಿ ಔಟಾದರು. ನಾಯಕ ಸಂಜು ಸ್ಯಾಮ್ಸನ್ ಅವರೊಂದಿಗೆ ಎರಡನೇ ವಿಕೆಟ್‌ಗೆ 35 ರನ್‌ಗಳ ಜೊತೆಯಾಟವನ್ನು ಮಾಡಿದರು.
ಒಂಬತ್ತು ಓವರ್‌ಗಳಲ್ಲಿ ರಾಜಸ್ಥಾನ ಒಂದು ವಿಕೆಟ್ ಕಳೆದುಕೊಂಡು 80 ರನ್ ಗಳಿಸಿದೆ. ಸದ್ಯ ಸಂಜು ಸ್ಯಾಮ್ಸನ್ 10 ಎಸೆತಗಳಲ್ಲಿ 14 ರನ್ ಹಾಗೂ ಯಶಸ್ವಿ ಜೈಸ್ವಾಲ್ 29 ಎಸೆತಗಳಲ್ಲಿ 45 ರನ್ ಗಳಿಸಿ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಇವರಿಬ್ಬರ ನಡುವೆ 30ಕ್ಕೂ ಹೆಚ್ಚು ರನ್ ಗಳ ಜೊತೆಯಾಟ ನಡೆದಿದೆ.
ಪವರ್‌ಪ್ಲೇಯ ಕೊನೆಯ ಓವರ್‌ನಲ್ಲಿ ಅಂದರೆ ಆರನೇ ಓವರ್‌ನಲ್ಲಿ 46 ರನ್‌ಗಳ ಸ್ಕೋರ್‌ಗೆ ರಾಜಸ್ಥಾನ ತನ್ನ ಮೊದಲ ವಿಕೆಟ್ ಕಳೆದುಕೊಂಡಿದೆ. ಟಾಮ್ ಕೊಹ್ಲರ್ ಕ್ಯಾಡ್ಮೋರ್ ಅವರನ್ನು ಲೋಕಿ ಫರ್ಗುಸನ್ ಕ್ಲೀನ್ ಬೌಲ್ಡ್ ಮಾಡಿದರು. 15 ಎಸೆತಗಳಲ್ಲಿ ನಾಲ್ಕು ಬೌಂಡರಿಗಳ ನೆರವಿನಿಂದ 20 ರನ್ ಗಳಿಸಿ ಔಟಾದರು. ಸದ್ಯ ನಾಯಕ ಸಂಜು ಸ್ಯಾಮ್ಸನ್ ಮತ್ತು ಯಶಸ್ವಿ ಜೈಸ್ವಾಲ್ ಕ್ರೀಸ್‌ನಲ್ಲಿದ್ದಾರೆ. ಆರು ಓವರ್‌ಗಳ ನಂತರ ರಾಜಸ್ಥಾನದ ಸ್ಕೋರ್ ಒಂದು ವಿಕೆಟ್‌ಗೆ 47 ರನ್ ಆಗಿದೆ.
ಐದು ಓವರ್‌ಗಳಲ್ಲಿ ರಾಜಸ್ಥಾನ ಯಾವುದೇ ವಿಕೆಟ್ ನಷ್ಟವಿಲ್ಲದೆ 45 ರನ್ ಗಳಿಸಿದೆ. ಸದ್ಯ ಯಶಸ್ವಿ ಜೈಸ್ವಾಲ್ 16 ಎಸೆತಗಳಲ್ಲಿ 24 ರನ್ ಹಾಗೂ ಟಾಮ್ ಕೊಹ್ಲರ್ ಕ್ಯಾಡ್ಮೋರ್ 14 ಎಸೆತಗಳಲ್ಲಿ 20 ರನ್ ಗಳಿಸಿ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
ರಾಜಸ್ಥಾನ್ ರಾಯಲ್ಸ್ ತಂಡ 2 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 6 ರನ್ ಗಳಿಸಿದೆ. ಯಶಸ್ವಿ ಜೈಸ್ವಾಲ್ ಮತ್ತು ಟಾಮ್ ಕಾಡ್ಮೋರ್ ಕ್ರೀಸ್‌ನಲ್ಲಿದ್ದಾರೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿಬಿ 20 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು 172 ರನ್ ಕಲೆಹಾಕಿದೆ. ಇದರೊಂದಿಗೆ ರಾಜಸ್ಥಾನ್ಗೆ 173 ರನ್ ಟಾರ್ಗೆಟ್ ನೀಡಿದೆ.
19ನೇ ಓವರ್‌ನಲ್ಲಿ 154 ರನ್‌ಗಳಾಗುವಷ್ಟರಲ್ಲಿ ಬೆಂಗಳೂರು ಆರನೇ ವಿಕೆಟ್ ಕಳೆದುಕೊಂಡಿದೆ. ದಿನೇಶ್ ಕಾರ್ತಿಕ್ 13 ಎಸೆತಗಳಲ್ಲಿ 11 ರನ್ ಗಳಿಸಿ ಔಟಾದರು. ಸದ್ಯ ಮಹಿಪಾಲ್ ಲೊಮ್ರೋರ್ ಮತ್ತು ಸ್ವಪ್ನಿಲ್ ಸಿಂಗ್ ಕ್ರೀಸ್‌ನಲ್ಲಿದ್ದಾರೆ.
17 ಓವರ್ ಮುಕ್ತಾಯಕ್ಕೆ ಆರ್‌ಸಿಬಿ 5 ವಿಕೆಟ್ ಕಳೆದುಕೊಂಡು 144 ರನ್ ಕಲೆಹಾಕಿದೆ. ದಿನೇಶ್ ಕಾರ್ತಿಕ್ ಮಹಿಪಾಲ್ ಲೊಮ್ರೊರ್ ಕ್ರೀಸ್‌ನಲ್ಲಿದ್ದಾರೆ.
15ನೇ ಓವರ್‌ನಲ್ಲಿ ಆರ್‌ಸಿಬಿ 5ನೇ ವಿಕೆಟ್ ಕಳೆದುಕೊಂಡಿದೆ. ಉತ್ತಮವಾಗಿ ಆಡುತ್ತಿದ್ದ ರಜತ್ ಪಾಟಿದರ್ 34 ರನ್‌ಗಳಿಗೆ ವಿಕೆಟ್ ಒಪ್ಪಿಸಿದರು.
14 ಓವರ್ ಮುಕ್ತಾಯಕ್ಕೆ ಆರ್‌ಸಿಬಿ 4 ವಿಕೆಟ್ ಕಳೆದುಕೊಂಡು 116 ರನ್ ಕಲೆಹಾಕಿದೆ. ಈ ಓವರ್‌ನಲ್ಲಿ 2 ಸಿಕ್ಸರ್ ಕೂಡ ಬಂದವು.
ಆರ್‌ಸಿಬಿ ಮತ್ತೊಂದು ವಿಕೆಟ್ ಕಳೆದುಕೊಂಡಿದೆ. ಮ್ಯಾಕ್ಸ್‌ವೆಲ್ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದರು.
13ನೇ ಓವರ್‌ನಲ್ಲಿ ಆರ್‌ಸಿಬಿ 3ನೇ ವಿಕೆಟ್ ಕಳೆದುಕೊಂಡಿದೆ. ಆಲ್ರೌಂಡರ್ ಗ್ರೀನ್ 27 ರನ್‌ಗಳಿಗೆ ಇನ್ನಿಂಗ್ಸ್ ಮುಗಿಸಿದರು.
ಆರ್‌ಸಿಬಿ 97/3
ಆರ್ಸಿಬಿಯ ಅರ್ಧ ಇನ್ನಿಂಗ್ಸ್ ಮುಗಿದಿದೆ. ಈ 10 ಓವರ್‌ಗಳಲ್ಲಿ ತಂಡ 2 ವಿಕೆಟ್ ಕಳೆದುಕೊಂಡು 79 ರನ್ ಕಲೆಹಾಕಿದೆ.
ಆರ್ಸಿಬಿಗೆ ಆಘಾತ ಎದುರಾಗಿದೆ. ತಂಡದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ 33 ರನ್‌ಗಳಿಗೆ ತಮ್ಮ ಇನ್ನಿಂಗ್ಸ್ ಮುಗಿಸಿದರು.
ಆರ್‌ಸಿಬಿ 56/2
ಆರ್ಸಿಬಿಯ ಮೊದಲ 6 ಓವರ್ಗಳು ಮುಗಿದಿವೆ. ಈ 6 ಓವರ್‌ಗಳಲ್ಲಿ ತಂಡ 1 ವಿಕೆಟ್ ಕಳೆದುಕೊಂಡು 50 ರನ್ ಕಲೆಹಾಕಿದೆ.
ನಾಯಕ ಫಾಫ್ ಡುಪ್ಲೆಸಿಸ್ 17 ರನ್‌ಗಳಿಗೆ ತಮ್ಮ ಇನ್ನಿಂಗ್ಸ್ ಮುಗಿಸಿದರು.
ಆರ್‌ಸಿಬಿ 37/1
ಬೆಂಗಳೂರಿನ ಇನ್ನಿಂಗ್ಸ್ ಆರಂಭವಾಗಿದೆ. ವಿರಾಟ್ ಕೊಹ್ಲಿ ಮತ್ತು ನಾಯಕ ಫಾಫ್ ಡುಪ್ಲೆಸಿಸ್ ಕ್ರೀಸ್‌ನಲ್ಲಿದ್ದಾರೆ. ಟ್ರೆಂಟ್ ಬೌಲ್ಟ್ ಮೊದಲ ಓವರ್ ಬೌಲ್ ಮಾಡಿ 3 ರನ್ ಬಿಟ್ಟುಕೊಟ್ಟರು.
ಯಶಸ್ವಿ ಜೈಸ್ವಾಲ್, ಟಾಮ್ ಕೊಹ್ಲರ್-ಕ್ಯಾಡ್ಮೋರ್, ಸಂಜು ಸ್ಯಾಮ್ಸನ್ (ನಾಯಕ), ರಿಯಾನ್ ಪರಾಗ್, ಧ್ರುವ ಜುರೆಲ್, ರೋವ್ಮನ್ ಪೊವೆಲ್, ರವಿಚಂದ್ರನ್ ಅಶ್ವಿನ್, ಟ್ರೆಂಟ್ ಬೌಲ್ಟ್, ಅವೇಶ್ ಖಾನ್, ಸಂದೀಪ್ ಶರ್ಮಾ, ಯುಜ್ವೇಂದ್ರ ಚಾಹಲ್.
ಇಂಪ್ಯಾಕ್ಟ್ ಪ್ಲೇಯರ್: ನಾಂದ್ರೆ ಬರ್ಗರ್, ಶುಭಂ ದುಬೆ, ಡೊನೊವನ್ ಫೆರೇರಾ, ತನುಷ್ ಕೋಟ್ಯಾನ್, ಶಿಮ್ರಾನ್ ಹೆಟ್ಮೆಯರ್.
ವಿರಾಟ್ ಕೊಹ್ಲಿ, ಫಾಫ್ ಡುಪ್ಲೆಸಿಸ್ (ನಾಯಕ), ರಜತ್ ಪಾಟಿದಾರ್, ಕ್ಯಾಮೆರಾನ್ ಗ್ರೀನ್, ಗ್ಲೆನ್ ಮ್ಯಾಕ್ಸ್‌ವೆಲ್, ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಮಹಿಪಾಲ್ ಲೊಮೊರೊರ್, ಕರ್ಣ್ ಶರ್ಮಾ, ಯಶ್ ದಯಾಲ್, ಮೊಹಮ್ಮದ್ ಸಿರಾಜ್, ಲಾಕಿ ಫರ್ಗುಸನ್.
ಇಂಪ್ಯಾಕ್ಟ್ ಪ್ಲೇಯರ್: ಸ್ವಪ್ನಿಲ್ ಸಿಂಗ್, ಅನುಜ್ ರಾವತ್, ಸುಯ್ಯಾಶ್ ಪ್ರಭುದೇಸಾಯಿ, ವೈಶಾಕ್ ವಿಜಯ್ಕುಮಾರ್, ಹಿಮಾಂಶು ಶರ್ಮಾ.
ಟಾಸ್ ಗೆದ್ದ ರಾಜಸ್ಥಾನ್ ನಾಯಕ ಸಂಜು ಸ್ಯಾಮ್ಸನ್ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದ್ದಾರೆ.
ರಾಜಸ್ಥಾನ್ ರಾಯಲ್ಸ್ ತಂಡ ಐಪಿಎಲ್ ಪ್ಲೇಆಫ್‌ನಲ್ಲಿ ಒಟ್ಟು 9 ಪಂದ್ಯಗಳನ್ನು ಆಡಿದ್ದು, ತಂಡವು ನಾಲ್ಕರಲ್ಲಿ ಗೆದ್ದಿದೆ. ಐದು ಪಂದ್ಯಗಳಲ್ಲಿ ತಂಡ ಸೋಲು ಅನುಭವಿಸಬೇಕಾಯಿತು.
ಐಪಿಎಲ್ ಪ್ಲೇಆಫ್‌ನಲ್ಲಿ ಆರ್‌ಸಿಬಿ ತಂಡ ಇದುವರೆಗೆ ಒಟ್ಟು 14 ಪಂದ್ಯಗಳನ್ನು ಆಡಿದ್ದು, ಅದರಲ್ಲಿ ತಂಡವು ಐದರಲ್ಲಿ ಮಾತ್ರ ಗೆದ್ದಿದೆ. 9 ಪಂದ್ಯಗಳಲ್ಲಿ ತಂಡ ಸೋಲು ಅನುಭವಿಸಬೇಕಾಯಿತು.
ರಾಜಸ್ಥಾನ್ ರಾಯಲ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು 31 ಬಾರಿ ಮುಖಾಮುಖಿಯಾಗಿವೆ. ಇದರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು 15 ಬಾರಿ ಮತ್ತು ರಾಜಸ್ಥಾನ್ ರಾಯಲ್ಸ್ 13 ಬಾರಿ ಗೆದ್ದಿವೆ. ಮೂರು ಪಂದ್ಯಗಳು ಡ್ರಾ ಆಗಿವೆ.
Published On - 5:55 pm, Wed, 22 May 24