AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಟಿ20 ತಂಡ ಖರೀದಿಸಿದ ರಿಕಿ ಪಾಂಟಿಂಗ್: ಡೇವಿಡ್ ವಾರ್ನರ್ ನಾಯಕ!

ಕ್ರಿಕೆಟ್ ಲೋಕದ ಹಳೆಯ ನೆನಪುಗಳನ್ನು ಮರುಕಳಿಸುವಂತೆ ಮಾಡುವ ಮತ್ತು ಜಾಗತಿಕ ಕ್ರಿಕೆಟ್‌ನ ಮಾಜಿ ದಿಗ್ಗಜರನ್ನು ಮತ್ತೊಮ್ಮೆ ಮೈದಾನಕ್ಕಿಳಿಸುವ ರೋಮಾಂಚಕ ಟಿ20 ಕ್ರಿಕೆಟ್ ಟೂರ್ನಿಯೇ 'ವರ್ಲ್ಡ್ ಚಾಂಪಿಯನ್ಸ್‌ಶಿಪ್ ಆಫ್ ಲೆಜೆಂಡ್ಸ್' . ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿರುವ ಭಾರತ, ಪಾಕಿಸ್ತಾನ್, ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್‌ನಂತಹ ಪ್ರಮುಖ ದೇಶಗಳ ಮಾಜಿ ಆಟಗಾರರು ಈ ಟೂರ್ನಿಯಲ್ಲಿ ಮುಖಾಮುಖಿಯಾಗುತ್ತಾರೆ. 

ಟಿ20 ತಂಡ ಖರೀದಿಸಿದ ರಿಕಿ ಪಾಂಟಿಂಗ್: ಡೇವಿಡ್ ವಾರ್ನರ್ ನಾಯಕ!
ವಾರ್ನರ್-ಪುನೀತ್-ಪಾಂಟಿಂಗ್Image Credit source: WCL
ಝಾಹಿರ್ ಯೂಸುಫ್
|

Updated on: Sep 09, 2026 | 9:45 AM

Share

ಆಸ್ಟ್ರೇಲಿಯಾದ ಕ್ರಿಕೆಟ್ ದಿಗ್ಗಜ ರಿಕಿ ಪಾಂಟಿಂಗ್ ವರ್ಲ್ಡ್ ಚಾಂಪಿಯನ್ಸ್‌ಶಿಪ್ ಆಫ್ ಲೆಜೆಂಡ್ಸ್ ಟೂರ್ನಿಗೆ ಎಂಟ್ರಿ ಕೊಟ್ಟಿದ್ದಾರೆ. ಆದರೆ, ಅವರು ಈ ಬಾರಿ ಆಟಗಾರನಾಗಿ ಕಣಕ್ಕಿಳಿಯುತ್ತಿಲ್ಲ. ಬದಲಾಗಿ ಫ್ರಾಂಚೈಸಿಯೊಂದರ ಸಹ-ಮಾಲೀಕರಾಗಿ ಕಾಣಿಸಿಕೊಳ್ಳಲಿದ್ದಾರೆ. ಹೌದು, ವರ್ಲ್ಡ್ ಚಾಂಪಿಯನ್ಸ್‌ಶಿಪ್ ಆಫ್ ಲೆಜೆಂಡ್ಸ್ ಟಿ20 ಟೂರ್ನಿಯ ‘ಆಸ್ಟ್ರೇಲಿಯಾ ಚಾಂಪಿಯನ್ಸ್’ ತಂಡದ ಸಹ-ಮಾಲೀಕತ್ವವನ್ನು ಪಾಂಟಿಂಗ್ ವಹಿಸಿಕೊಂಡಿದ್ದಾರೆ.

ಆಸ್ಟ್ರೇಲಿಯಾ ತಂಡಕ್ಕೆ ಎರಡು ಬಾರಿ ಏಕದಿನ ವಿಶ್ವಕಪ್ ತಂದುಕೊಟ್ಟ ಯಶಸ್ವಿ ನಾಯಕ ರಿಕಿ ಪಾಂಟಿಂಗ್, ಈಗ ಆಸ್ಟ್ರೇಲಿಯಾ ಚಾಂಪಿಯನ್ಸ್ ತಂಡದ ಸಹ-ಮಾಲೀಕರಾಗಿ ಪುನೀತ್ ಸಿಂಗ್ ಅವರೊಂದಿಗೆ ಕೈಜೋಡಿಸಿದ್ದಾರೆ. ಈ ಮೂಲಕ ಫ್ರಾಂಚೈಸಿಯ ಕಾರ್ಯತಂತ್ರ ಮತ್ತು ಆಡಳಿತದಲ್ಲೂ ಪಾಂಟಿಂಗ್ ಪ್ರಮುಖ ಪಾತ್ರವಹಿಸಲಿದ್ದಾರೆ.

ನಾಯಕನಾಗಿ ಡೇವಿಡ್ ವಾರ್ನರ್:

ಇತ್ತೀಚೆಗಷ್ಟೇ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದ ಸ್ಫೋಟಕ ಆರಂಭಿಕ ಆಟಗಾರ ಡೇವಿಡ್ ವಾರ್ನರ್, ಈಗ ಆಸ್ಟ್ರೇಲಿಯಾ ಚಾಂಪಿಯನ್ಸ್ ತಂಡದ ನಾಯಕನಾಗಿ ಆಯ್ಕೆಯಾಗಿದ್ದಾರೆ. ವಾರ್ನರ್ ಅವರ ಆಕ್ರಮಣಕಾರಿ ಬ್ಯಾಟಿಂಗ್ ಶೈಲಿ ಮತ್ತು ನಾಯಕತ್ವದ ಗುಣಗಳು ತಂಡಕ್ಕೆ ಟ್ರೋಫಿ ಗೆದ್ದುಕೊಡಲು ಪ್ರಮುಖ ಪಾತ್ರ ವಹಿಸಲಿವೆ. ಪಾಂಟಿಂಗ್ ಅವರ ಮಾರ್ಗದರ್ಶನ ಮತ್ತು ವಾರ್ನರ್ ಅವರ ಮೈದಾನದ ಆಕ್ರಮಣಕಾರಿ ಆಟದ ಕಾಂಬಿನೇಷನ್ ಎದುರಾಳಿ ತಂಡಗಳಿಗೆ ನಡುಕ ಹುಟ್ಟಿಸುವುದು ಖಂಡಿತ.

ಆಸ್ಟ್ರೇಲಿಯಾ ಚಾಂಪಿಯನ್ಸ್ ತಂಡ: ಡೇವಿಡ್ ವಾರ್ನರ್ (ನಾಯಕ), ಬ್ರೆಟ್ ಲೀ, ಆರೋನ್ ಫಿಂಚ್, ಶಾನ್ ಮಾರ್ಷ್, ಕ್ರಿಸ್ ಲಿನ್, ಬೆನ್ ಕಟಿಂಗ್, ಬ್ರಾಡ್ ಹ್ಯಾಡಿನ್, ಟಿಮ್ ಪೇನ್, ಡಾನ್ ಕ್ರಿಶ್ಚಿಯನ್, ಪೀಟರ್ ಸಿಡಲ್, ನಾಥನ್ ಕೌಲ್ಟರ್-ನೈಲ್, ಕ್ಸೇವಿಯರ್ ಡೋಹರ್ಟಿ, ಬೆನ್ ಡಂಕ್, ಬೆನ್ ಲಾಫ್ಲಿನ್, ಕ್ಯಾಲಮ್ ಫರ್ಗುಸನ್, ಸ್ಟೀವ್ ಓ’ಕೀಫ್, ರಾಬ್ ಕ್ವಿನಿ, ಜಾನ್ ಹೇಸ್ಟಿಂಗ್ಸ್ ಮತ್ತು ಡಿರ್ಕ್ ನ್ಯಾನೆಸ್.

ಇದನ್ನೂ ಓದಿ: ದುಲೀಪ್ ಟ್ರೋಫಿ ಫೈನಲ್ ಪಂದ್ಯ ಡ್ರಾ ಆದರೆ ಯಾರಿಗೆ ಪ್ರಶಸ್ತಿ?

ಏನಿದು ವರ್ಲ್ಡ್ ಚಾಂಪಿಯನ್ಸ್‌ಶಿಪ್ ಆಫ್ ಲೆಜೆಂಡ್ಸ್ ಟೂರ್ನಿ?

ವರ್ಲ್ಡ್ ಚಾಂಪಿಯನ್ಸ್‌ಶಿಪ್ ಆಫ್ ಲೆಜೆಂಡ್ಸ್ ಎಂಬುದು ನಿವೃತ್ತರಾದ ಅಥವಾ ಮಾಜಿ ಅಂತರರಾಷ್ಟ್ರೀಯ ಕ್ರಿಕೆಟ್ ಆಟಗಾರರ ನಡುವೆ ನಡೆಯುವ ಒಂದು ಟಿ20 ಕ್ರಿಕೆಟ್ ಟೂರ್ನಿಯಾಗಿದೆ.ಇದರಲ್ಲಿ ಭಾರತ, ಪಾಕಿಸ್ತಾನ್, ಆಸ್ಟ್ರೇಲಿಯಾ, ಇಂಗ್ಲೆಂಡ್, ವೆಸ್ಟ್ ಇಂಡೀಸ್ ಮತ್ತು ಸೌತ್ ಆಫ್ರಿಕಾದಂತಹ ಪ್ರಮುಖ ದೇಶಗಳ ಮಾಜಿ ದಿಗ್ಗಜ ಆಟಗಾರರು ಭಾಗವಹಿಸುತ್ತಾರೆ. ಇದೀಗ ಈ ಟೂರ್ನಿಯ ಮೂರನೇ ಸೀಸನ್​ನ ಸಿದ್ಧತೆಗಳು ಶುರುವಾಗಿದೆ.

Follow Us
ಸತೀಶ್ ಜಾರಕಿಹೊಳಿಗೆ ಡಬಲ್ ಶಾಕ್! ಗೋಕಾಕ್ ನಿವಾಸದ ಮೇಲೂ ಇಡಿ ರೇಡ್
ಸತೀಶ್ ಜಾರಕಿಹೊಳಿಗೆ ಡಬಲ್ ಶಾಕ್! ಗೋಕಾಕ್ ನಿವಾಸದ ಮೇಲೂ ಇಡಿ ರೇಡ್
ಸಚಿವ ಮಲ್ಲಿಕಾರ್ಜುನ್ ಅವಾಚ್ಯ ನಿಂದನೆ ವಿರುದ್ಧ ಶಾಸಕ ಬಿಪಿ ಹರೀಶ್ ಆಕ್ರೋಶ
ಸಚಿವ ಮಲ್ಲಿಕಾರ್ಜುನ್ ಅವಾಚ್ಯ ನಿಂದನೆ ವಿರುದ್ಧ ಶಾಸಕ ಬಿಪಿ ಹರೀಶ್ ಆಕ್ರೋಶ
ಲ್ಯಾಂಡಿಂಗ್ ವೇಳೆ ತೊಂದರೆ ಅನುಭವಿಸಿದ ರಾಹುಲ್ ಇದ್ದ ವಿಮಾನ
ಲ್ಯಾಂಡಿಂಗ್ ವೇಳೆ ತೊಂದರೆ ಅನುಭವಿಸಿದ ರಾಹುಲ್ ಇದ್ದ ವಿಮಾನ
ಇಂದು ಈ ರಾಶಿಯವರು ನಿಮ್ಮ ವೀಕ್ನೆಸ್ ಅನ್ನು ಯಾರಿಗೂ ಹೇಳಿಕೊಳ್ಳಬೇಡಿ!
ಇಂದು ಈ ರಾಶಿಯವರು ನಿಮ್ಮ ವೀಕ್ನೆಸ್ ಅನ್ನು ಯಾರಿಗೂ ಹೇಳಿಕೊಳ್ಳಬೇಡಿ!
ಕುಂಭಾಭಿಷೇಕಕ್ಕೆ ಹೊಸ ಬಣ್ಣದಲ್ಲಿ ಸಿಂಗಾರಗೊಂಡ ಮಧುರೈ ಮೀನಾಕ್ಷಿ ದೇವಸ್ಥಾನ
ಕುಂಭಾಭಿಷೇಕಕ್ಕೆ ಹೊಸ ಬಣ್ಣದಲ್ಲಿ ಸಿಂಗಾರಗೊಂಡ ಮಧುರೈ ಮೀನಾಕ್ಷಿ ದೇವಸ್ಥಾನ
ಕಾರ್ಮಿಕರ ಮಕ್ಕಳಿಗೆ ಉಚಿತ ಶಿಕ್ಷಣ: ರಾಜ್ಯಕ್ಕೆ ಮಾದರಿಯಾದ ರಾಮಪುರಂ ಕುಟುಂಬ
ಕಾರ್ಮಿಕರ ಮಕ್ಕಳಿಗೆ ಉಚಿತ ಶಿಕ್ಷಣ: ರಾಜ್ಯಕ್ಕೆ ಮಾದರಿಯಾದ ರಾಮಪುರಂ ಕುಟುಂಬ
ಹೈಕೋರ್ಟ್​ನಲ್ಲಿ ದರ್ಶನ್ ಪರ ಆದೇಶ ಬಂದಿದ್ದು ಹೇಗೆ? ವಿವರ ನೀಡಿದ ವಕೀಲರು
ಹೈಕೋರ್ಟ್​ನಲ್ಲಿ ದರ್ಶನ್ ಪರ ಆದೇಶ ಬಂದಿದ್ದು ಹೇಗೆ? ವಿವರ ನೀಡಿದ ವಕೀಲರು
ಎರಡೇ ತಿಂಗಳಿಗೆ 2 ಕೋಟಿ ವೆಚ್ಚದ ರಸ್ತೆ ಢಮಾರ್!
ಎರಡೇ ತಿಂಗಳಿಗೆ 2 ಕೋಟಿ ವೆಚ್ಚದ ರಸ್ತೆ ಢಮಾರ್!
ಟ್ರಾಲಿ ಬ್ಯಾಗ್​ನಲ್ಲಿ ಸಾಗಿಸುತ್ತಿದ್ದ 180 ನಕ್ಷತ್ರ ಆಮೆಗಳು ವಶಕ್ಕೆ 
ಟ್ರಾಲಿ ಬ್ಯಾಗ್​ನಲ್ಲಿ ಸಾಗಿಸುತ್ತಿದ್ದ 180 ನಕ್ಷತ್ರ ಆಮೆಗಳು ವಶಕ್ಕೆ 
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಕೆಎನ್ ರಾಜಣ್ಣ ನಡೆ
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಕೆಎನ್ ರಾಜಣ್ಣ ನಡೆ