Rishabh Pant: 140 ಕಿ.ಮೀ ವೇಗದ ಬೆಂಕಿಯುಂಡೆಗಳ ಎದುರು ಬ್ಯಾಟ್ ಬೀಸಿದ ರಿಷಭ್ ಪಂತ್..!

|

Updated on: Aug 05, 2023 | 11:46 AM

Rishabh Pant Health Update: ಫೀಲ್ಡ್​ಗೆ ಮರಳಲು ರೆಡಿಯಾಗಿರುವ ಪಂತ್, ನೆಟ್ಸ್​ನಲ್ಲಿ ಬೆಂಕಿಯುಂಡೆಗಳಂತಹ ಚೆಂಡುಗಳನ್ನು ಎದುರಿಸಲಾರಂಭಿಸಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ.

Rishabh Pant: 140 ಕಿ.ಮೀ ವೇಗದ ಬೆಂಕಿಯುಂಡೆಗಳ ಎದುರು ಬ್ಯಾಟ್ ಬೀಸಿದ ರಿಷಭ್ ಪಂತ್..!
ರಿಷಭ್ ಪಂತ್ (ಪ್ರಾತಿನಿಧಿಕ ಚಿತ್ರ)
Follow us on

ಕಳೆದ ಡಿಸೆಂಬರ್​ನಲ್ಲಿ ಅಂದರೆ, 2022ರ ಡಿಸೆಂಬರ್​ನಲ್ಲಿ ಭೀಕರ ಕಾರು ಅಪಘಾತಕ್ಕೀಡಾಗಿ (Car Accident) ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಟೀಂ ಇಂಡಿಯಾದ (Team India) ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್ ರಿಷಭ್ ಪಂತ್ (Rishabh Pant) ಪ್ರಸ್ತುತ ರಾಷ್ಟ್ರೀಯ ಕ್ರಿಕೆಟ್ (NCA) ಅಕಾಡೆಮಿಯಲ್ಲಿ ರಿಹ್ಯಾಬ್​​​ನಲ್ಲಿದ್ದಾರೆ. ಅಪಘಾತದಲ್ಲಿ ಕಾಲು ಮುರಿತಕ್ಕೊಳಗಾಗಿದ್ದ ಪಂತ್, ಆ ಬಳಿಕ ಮುಂಬೈನ ಅಂಬಾನಿ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಗೊಳಗಾಗಿದ್ದರು. ಬಳಿಕ ಹಂತ ಹಂತವಾಗಿ ಚೇತರಿಸಿಕೊಳ್ಳುತ್ತಿರುವ ಪಂತ್, ಟೀಂ ಇಂಡಿಯಾಕ್ಕೆ ಮರಳಲು ತಮ್ಮ ಅಭ್ಯಾಸವನ್ನು ಆರಂಭಿಸಿದ್ದಾರೆ. ಪ್ರಸ್ತುತ ಎನ್​ಸಿಎನಲ್ಲಿರುವ ಪಂತ್ ಅವರ ಶೀಘ್ರ ಚೇತರಿಕೆ ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ. ಎರಡು ತಿಂಗಳ ಹಿಂದೆ ಊರುಗೋಲಿನ ಸಹಾಯದಿಂದ ನಡೆಯುತ್ತಿದ್ದ ಪಂತ್, ಕೆಲವು ದಿನಗಳ ಹಿಂದೆ  ವಿಕೆಟ್ ಕೀಪಿಂಗ್ ಆರಂಭಿಸಿದ್ದರು. ಇದೀಗ ಫೀಲ್ಡ್​ಗೆ ಮರಳಲು ರೆಡಿಯಾಗಿರುವ ಪಂತ್, ನೆಟ್ಸ್​ನಲ್ಲಿ ಬೆಂಕಿಯುಂಡೆಗಳಂತಹ ಚೆಂಡುಗಳನ್ನು ಎದುರಿಸಲಾರಂಭಿಸಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ.

ಸದ್ಯದ ಸುದ್ದಿ ಪ್ರಕಾರ ಪಂತ್, ಏಷ್ಯಾಕಪ್ ಹಾಗೂ ಏಕದಿನ ವಿಶ್ವಕಪ್ ವೇಳೆಗೆ ತಂಡಕ್ಕೆ ಮರಳುವುದು ಅಸಾಧ್ಯವೆನ್ನಲಾಗುತ್ತಿದೆ. ಪಂತ್ ಏನಿದ್ದರು ಮುಂದಿನ ವರ್ಷ ನಡೆಯುವ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿ ವೇಳೆಗೆ ತಂಡ ಸೇರಿಕೊಳ್ಳಲಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ. ಆದರೆ ಪಂತ್ ಶೀಘ್ರ ಚೇತರಿಕೆಯನ್ನು ಕಂಡರೆ, ಈ ವಿಕೆಟ್ ಕೀಪರ್ ಬ್ಯಾಟರ್ ಆದಷ್ಟು ಬೇಗ ತಂಡ ಸೇರಿಕೊಳ್ಳುವ ಸಾಧ್ಯತೆಗಳಿವೆ. ಕಳೆದ ಕೆಲವು ವಾರಗಳಿಂದ ಎನ್​ಸಿಎನಲ್ಲಿ ವಿಕೆಟ್ ಕೀಪಿಂಗ್ ಅಭ್ಯಾಸ ಆರಂಭಿಸಿದ್ದ ಪಂತ್, ಇದೀಗ ನೆಟ್ಸ್​ನಲ್ಲಿ ಬ್ಯಾಟ್ ಹಿಡಿದು ಗುಡಗಲಾರಂಭಿಸಿದ್ದಾರೆ.

Rishabh Pant: ಈ ವರ್ಷ ಡೌಟ್; ರಿಷಭ್ ಪಂತ್ ರೀ ಎಂಟ್ರಿ ಯಾವಾಗ ಗೊತ್ತಾ?

140 ಕಿ.ಮೀ ವೇಗದ ಚೆಂಡುಗಳ ಎದುರು ಬ್ಯಾಟ್ ಬೀಸಿದ ಪಂತ್

ಕಳೆದ ತಿಂಗಳಿನಿಂದ ಥ್ರೋಡೌನ್‌ಗಳನ್ನು ಎದುರಿಸಲು ಪ್ರಾರಂಭಿಸಿದ್ದ ಪಂತ್, ಕಳೆದ 2 ವಾರಗಳಿಂದ ಚೆಂಡಿನ ವೇಗವನ್ನು ಹೆಚ್ಚಿಸಿದ್ದಾರೆ ಎಂದು ತಿಳಿದುಬಂದಿದೆ. ಗಂಟೆಗೆ 140 ಕಿ.ಮೀ ವೇಗದ ಚೆಂಡುಗಳನ್ನು ಪಂತ್ ನೆಟ್ಸ್​ನಲ್ಲಿ ಎದುರಿಸಲಾರಂಭಿಸಿದ್ದಾರೆ. ಅಲ್ಲದೆ ವೇಗದ ಚೆಂಡುಗಳನ್ನು ಯಾವುದೇ ತೊಂದರೆಯಿಲ್ಲದೆ ಪಂತ್​ ಆರಾಮಾಗಿ ಆಡುತ್ತಿದ್ದಾರೆ ಎಂದು ವರದಿಯಾಗಿದೆ. ಇದೀಗ ಬ್ಯಾಟಿಂಗ್ ಆರಂಭಿಸಿರುವ ಪಂತ್ ಮುಂದಿನ ದಿನಗಳಲ್ಲಿ ವೇಗವಾಗಿ ಓಡುವುದಕ್ಕೆ ಪ್ರಯತ್ನಿಸಲಿದ್ದಾರೆ ಎಂದು NCA ಯ ಮೂಲವೊಂದು ಹೇಳಿರುವುದಾಗಿ RevSportz ವರದಿ ಮಾಡಿದೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 11:42 am, Sat, 5 August 23