ರಾಬಿನ್ ಉತ್ತಪ್ಪಗೆ ಬೆದರಿಕೆಯೊಡ್ಡಿ ಸಹಿ ಮಾಡಿಸಿದ ಐಪಿಎಲ್ ಫ್ರಾಂಚೈಸಿ..!
ರಾಬಿನ್ ಉತ್ತಪ್ಪ ಐಪಿಎಲ್ ವೇಳೆ ಉಂಟಾದ ಕಹಿ ಅನುಭವನ್ನು ಬಿಚ್ಚಿಟ್ಟಿದ್ದಾರೆ. ಇದೇ ವೇಳೆ ನಾನು ಖಿನ್ನತೆಗೆ ಒಳಗಾಗಿದ್ದೆ. ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ಹಂಚಿಕೊಂಡಿರುವ ರಾಬಿನ್, ಖಿನ್ನತೆ ಮತ್ತು ಆತ್ಮಹತ್ಯಾ ಆಲೋಚನೆಗಳೊಂದಿಗೆ ಹೋರಾಡುವವರಿಗೆ ಈ ವಿಡಿಯೋ ಸಹಾಯ ಮಾಡುತ್ತದೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.
ಟೀಮ್ ಇಂಡಿಯಾದ ಮಾಜಿ ಆಟಗಾರ ರಾಬಿನ್ ಉತ್ತಪ್ಪ ಇದೇ ಮೊದಲ ಬಾರಿಗೆ ಮನಬಿಚ್ಚಿ ಮಾತನಾಡಿದ್ದಾರೆ. ಅದು ಸಹ ತಾವು ಅನುಭವಿಸಿದ ಖಿನ್ನತೆಯ ಬಗ್ಗೆ. ಈ ವೇಳೆ ಉಂಟಾದ ಆತ್ಮಹತ್ಯಾ ಆಲೋಚನೆಯ ಬಗ್ಗೆ. ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ ರಾಬಿನ್ ಉತ್ತಪ್ಪ 2009ರ ಕಹಿ ಘಟನೆಯೊಂದನ್ನು ಬಿಚ್ಚಿಟ್ಟಿದ್ದಾರೆ.
ಈ ವಿಡಿಯೋದಲ್ಲಿ 2009 ರಲ್ಲಿ ತನಗೆ ಬೆದರಿಕೆಯೊಡ್ಡಿ ಐಪಿಎಲ್ ಟ್ರಾನ್ಸ್ಫರ್ ಮಾಡಿಸಿಕೊಂಡಿದ್ದರು ಎಂಬ ವಿಚಾರವನ್ನು ಬಹಿರಂಗಪಡಿಸಿದ್ದಾರೆ. 2009 ರಲ್ಲಿ ರಾಬಿನ್ ಉತ್ತಪ್ಪ ಮುಂಬೈ ಇಂಡಿಯನ್ಸ್ ತಂಡದಲ್ಲಿದ್ದರು. ಮರು ಸೀಸನ್ನಲ್ಲೇ ಮುಂಬೈ ಅವರನ್ನು ಆರ್ಸಿಬಿಗೆ ಟ್ರಾನ್ಸ್ಫರ್ ಮಾಡಿದ್ದರು.
ಆದರೆ ಈ ಟ್ರಾನ್ಸ್ಫರ್ಗೆ ರಾಬಿನ್ ಉತ್ತಪ್ಪ ಒಪ್ಪಿರಲಿರಲಿಲ್ಲ. ಅಲ್ಲದೆ ಟ್ರಾನ್ಸ್ಫರ್ ಪೇಪರ್‌ಗಳಿಗೆ ಸಹಿ ಹಾಕಲು ನಿರಾಕರಿಸಿದ್ದೆ. ನೀವು ಈ ಟ್ರೇಡ್ ಪತ್ರಗಳಿಗೆ ಸಹಿ ಮಾಡದಿದ್ದರೆ, ನಿಮಗೆ ಪ್ಲೇಯಿಂಗ್ ಇಲೆವೆನ್ನಲ್ಲಂತು ಚಾನ್ಸ್ ನೀಡುವುದಿಲ್ಲ ಎಂದು ಮುಂಬೈ ಇಂಡಿಯನ್ಸ್ ಫ್ರಾಂಚೈಸಿಯ ಉಸ್ತುವಾರಿ ವ್ಯಕ್ತಿಯೊಬ್ಬರು ಬೆದರಿಕೆಯೊಡ್ಡಿದ್ದರು. ಹೀಗಾಗಿ ನಾನು ಟ್ರಾನ್ಸ್ಫರ್ಗೆ ಒಪ್ಪಿಗೆ ನೀಡಲೇಬೇಕಾಯಿತು.
ಇದರಿಂದ ನಾನು ಖಿನ್ನತೆಗೆ ಒಳಗಾದೆ. ಇದಾಗ್ಯೂ ನಾನು 2009 ರಲ್ಲಿ ಆರ್ಸಿಬಿ ಪರ ಉತ್ತಮವಾಗಿ ಆಡಿದೆ. ಆದರೆ 2011 ರಲ್ಲಿ ನಾನು ನನ್ನ ಮೇಲಿನ ಸಂಪೂರ್ಣ ಕಂಟ್ರೋಲ್ ಕಳೆದುಕೊಂಡಿದ್ದೆ. ದೇಹ ತೂಕ ಹೆಚ್ಚಾಯಿತು. ಚಿಂತೆಗೆ ಒಳಗಾದೆ. ಈ ಸಂದರ್ಭದಲ್ಲಿ ನನ್ನ ತಾಯಿ ನೆರವಿಗೆ ನಿಂತರು. ಖಿನ್ನತೆಯಿಂದ ಹೊರಬರಲು ಸಹಾಯ ಮಾಡಿದರು ಎಂದು ಉತ್ತಪ್ಪ ಹೇಳಿದ್ದಾರೆ.
Published On - 2:16 pm, Tue, 3 September 24