ರಾಬಿನ್ ಉತ್ತಪ್ಪಗೆ ಬೆದರಿಕೆಯೊಡ್ಡಿ ಸಹಿ ಮಾಡಿಸಿದ ಐಪಿಎಲ್ ಫ್ರಾಂಚೈಸಿ..!

|

Updated on: Sep 03, 2024 | 2:18 PM

ರಾಬಿನ್ ಉತ್ತಪ್ಪ ಐಪಿಎಲ್ ವೇಳೆ ಉಂಟಾದ ಕಹಿ ಅನುಭವನ್ನು ಬಿಚ್ಚಿಟ್ಟಿದ್ದಾರೆ. ಇದೇ ವೇಳೆ ನಾನು ಖಿನ್ನತೆಗೆ ಒಳಗಾಗಿದ್ದೆ. ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ಹಂಚಿಕೊಂಡಿರುವ ರಾಬಿನ್, ಖಿನ್ನತೆ ಮತ್ತು ಆತ್ಮಹತ್ಯಾ ಆಲೋಚನೆಗಳೊಂದಿಗೆ ಹೋರಾಡುವವರಿಗೆ ಈ ವಿಡಿಯೋ ಸಹಾಯ ಮಾಡುತ್ತದೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.

ಟೀಮ್ ಇಂಡಿಯಾದ ಮಾಜಿ ಆಟಗಾರ ರಾಬಿನ್ ಉತ್ತಪ್ಪ ಇದೇ ಮೊದಲ ಬಾರಿಗೆ ಮನಬಿಚ್ಚಿ ಮಾತನಾಡಿದ್ದಾರೆ. ಅದು ಸಹ ತಾವು ಅನುಭವಿಸಿದ ಖಿನ್ನತೆಯ ಬಗ್ಗೆ. ಈ ವೇಳೆ ಉಂಟಾದ ಆತ್ಮಹತ್ಯಾ ಆಲೋಚನೆಯ ಬಗ್ಗೆ. ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ ರಾಬಿನ್ ಉತ್ತಪ್ಪ 2009ರ ಕಹಿ ಘಟನೆಯೊಂದನ್ನು ಬಿಚ್ಚಿಟ್ಟಿದ್ದಾರೆ.

ಈ ವಿಡಿಯೋದಲ್ಲಿ 2009 ರಲ್ಲಿ ತನಗೆ ಬೆದರಿಕೆಯೊಡ್ಡಿ ಐಪಿಎಲ್ ಟ್ರಾನ್ಸ್​ಫರ್ ಮಾಡಿಸಿಕೊಂಡಿದ್ದರು ಎಂಬ ವಿಚಾರವನ್ನು ಬಹಿರಂಗಪಡಿಸಿದ್ದಾರೆ. 2009 ರಲ್ಲಿ ರಾಬಿನ್ ಉತ್ತಪ್ಪ ಮುಂಬೈ ಇಂಡಿಯನ್ಸ್ ತಂಡದಲ್ಲಿದ್ದರು. ಮರು ಸೀಸನ್​ನಲ್ಲೇ ಮುಂಬೈ ಅವರನ್ನು ಆರ್​ಸಿಬಿಗೆ ಟ್ರಾನ್ಸ್​ಫರ್ ಮಾಡಿದ್ದರು.

ಆದರೆ ಈ ಟ್ರಾನ್ಸ್​ಫರ್​​ಗೆ ರಾಬಿನ್ ಉತ್ತಪ್ಪ ಒಪ್ಪಿರಲಿರಲಿಲ್ಲ. ಅಲ್ಲದೆ ಟ್ರಾನ್ಸ್​ಫರ್​ ಪೇಪರ್‌ಗಳಿಗೆ ಸಹಿ ಹಾಕಲು ನಿರಾಕರಿಸಿದ್ದೆ. ನೀವು ಈ ಟ್ರೇಡ್ ಪತ್ರಗಳಿಗೆ ಸಹಿ ಮಾಡದಿದ್ದರೆ, ನಿಮಗೆ ಪ್ಲೇಯಿಂಗ್ ಇಲೆವೆನ್​ನಲ್ಲಂತು ಚಾನ್ಸ್ ನೀಡುವುದಿಲ್ಲ ಎಂದು ಮುಂಬೈ ಇಂಡಿಯನ್ಸ್​ ಫ್ರಾಂಚೈಸಿಯ ಉಸ್ತುವಾರಿ ವ್ಯಕ್ತಿಯೊಬ್ಬರು ಬೆದರಿಕೆಯೊಡ್ಡಿದ್ದರು. ಹೀಗಾಗಿ ನಾನು ಟ್ರಾನ್ಸ್​ಫರ್​​ಗೆ ಒಪ್ಪಿಗೆ ನೀಡಲೇಬೇಕಾಯಿತು.

ಇದರಿಂದ ನಾನು ಖಿನ್ನತೆಗೆ ಒಳಗಾದೆ. ಇದಾಗ್ಯೂ ನಾನು 2009 ರಲ್ಲಿ ಆರ್​ಸಿಬಿ ಪರ ಉತ್ತಮವಾಗಿ ಆಡಿದೆ. ಆದರೆ 2011 ರಲ್ಲಿ ನಾನು ನನ್ನ ಮೇಲಿನ ಸಂಪೂರ್ಣ ಕಂಟ್ರೋಲ್ ಕಳೆದುಕೊಂಡಿದ್ದೆ. ದೇಹ ತೂಕ ಹೆಚ್ಚಾಯಿತು. ಚಿಂತೆಗೆ ಒಳಗಾದೆ. ಈ ಸಂದರ್ಭದಲ್ಲಿ ನನ್ನ ತಾಯಿ ನೆರವಿಗೆ ನಿಂತರು. ಖಿನ್ನತೆಯಿಂದ ಹೊರಬರಲು ಸಹಾಯ ಮಾಡಿದರು ಎಂದು ಉತ್ತಪ್ಪ ಹೇಳಿದ್ದಾರೆ.

 

Published on: Sep 03, 2024 02:16 PM