
ತಿರುವನಂತಪುರದಲ್ಲಿ ನಡೆದ ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಏಕದಿನ ಪಂದ್ಯವನ್ನು ಟೀಂ ಇಂಡಿಯಾ 8 ವಿಕೆಟ್‌ಗಳಿಂದ ಗೆದ್ದುಕೊಂಡಿತು. ಈ ಪಂದ್ಯವನ್ನು ಏಕಪಕ್ಷೀಯವಾಗಿ ಗೆದ್ದುಕೊಂಡ ಟೀಂ ಇಂಡಿಯಾ ಆಟಗಾರರು ತಂಡದ ಬಸ್ನಲ್ಲಿ ತಾವು ತಂಗಿದ್ದ ಹೋಟೆಲ್ನತ್ತ ಪ್ರಯಾಣ ಬೆಳೆಸಿದರು. ಬಸ್ ಹೋಟೆಲ್‌ಗೆ ತಲುಪಿದ ಕೂಡಲೇ ಆಟಗಾರರು ಒಬ್ಬೊಬ್ಬರೆ ಬಸ್‌ನಿಂದ ಇಳಿದು ಹೋಟೆಲ್ ಒಳಗಡೆ ತೆರಳಿದರು. ರೋಹಿತ್ ಶರ್ಮಾ ಕೂಡ ಬಸ್‌ನಿಂದ ಇಳಿದು ಹೋಟೆಲ್ನತ್ತ ಹೋಗಲು ಬಸ್ನ ಮೆಟ್ಟಿಲುಗಳ ಬಳಿ ಬಂದರು. ಮೆಟ್ಟಿಲುಗಳ ಮೇಲೆ ಇಳಿಯುವ ವೇಳೆ ರೋಹಿತ್ ಜಾರಿ ಬಿದ್ದರು. ಇದನ್ನು ನೋಡಿದ ಬಸ್ನೊಳಗಿದ್ದ ಆಟಗಾರರು ಮತ್ತು ಹೊರಗಿದ್ದವರು ಆಘಾತಕ್ಕೊಳಗಾದರು. ಕೂಡಲೇ ರೋಹಿತ್ ನೆರವಿಗೆ ಬಂದು ಅವರನ್ನು ಮೆಲಕ್ಕೇತ್ತಿದರು. ಇದೀಗ ಅದರ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಈ ಅವಘಡದಲ್ಲಿ ರೋಹಿತ್ಗಾಗಿರುವ ಗಾಯದ ಗಂಭೀರತೆ ಇದುವರೆಗೆ ಸ್ಪಷ್ಟವಾಗಿಲ್ಲ. ಆದರೆ ಅದು ವಿರಾಟ್ ಕೊಹ್ಲಿಯ ಮುಖದಲ್ಲಿ ಖಂಡಿತವಾಗಿಯೂ ಚಿಂತೆಯ ಛಾಯೆಯನ್ನು ಮೂಡಿಸಿತು. ವೆಸ್ಟ್ ಇಂಡೀಸ್ ವಿರುದ್ಧದ ಗೆಲುವಿನ ನಂತರ ಟೀಂ ಇಂಡಿಯಾವನ್ನು ಹೋಟೆಲ್‌ಗೆ ಮರಳಿ ಸ್ವಾಗತಿಸಲು ಸಿದ್ಧತೆಗಳು ನಡೆಯುತ್ತಿದ್ದವು. ಆದಾಗ್ಯೂ, ರೋಹಿತ್ ಬಸ್ಸಿನಿಂದ ಜಾರಿದ್ದನ್ನು ನೋಡಿದ ವಿರಾಟ್ ಕೆಲ ಸಮಯ ಆಘಾತಕ್ಕೊಳಗಾದವರಂತೆ ಕಂಡುಬಂದರು.
Rohit Sharma 𝗦𝗹𝗶𝗽𝗽𝗲𝗱 from the Bus 😱
While returning to the hotel after winning the first ODI against the West Indies, Rohit Sharma slipped badly on the stairs of the team bus. 😥
– Everyone was celebrating India’s win, but Virat Kohli was 𝘀𝘁𝘂𝗻𝗻𝗲𝗱 to see Rohit. 😭 pic.twitter.com/T01Lf4tJsb
— Mukku (@Cric_Mukku) September 28, 2026
ಮೊದಲ ಏಕದಿನ ಪಂದ್ಯದಲ್ಲಿ ಭಾರತ ತಂಡ ವೆಸ್ಟ್ ಇಂಡೀಸ್ ತಂಡವನ್ನು 8 ವಿಕೆಟ್‌ಗಳಿಂದ ಸೋಲಿಸಿತು. ಭಾರತದ ತಂಡದ ಗೆಲುವಿಗೆ ರೋಹಿತ್ ಶರ್ಮಾ 32 ರನ್‌ಗಳ ಕೊಡುಗೆ ನೀಡಿದರು. ಈ ಪಂದ್ಯದಲ್ಲಿ ಆಡಿದ 35 ಎಸೆತಗಳಲ್ಲಿ ರೋಹಿತ್ 3 ಸಿಕ್ಸರ್‌ಗಳು ಮತ್ತು 2 ಬೌಂಡರಿಗಳನ್ನು ಬಾರಿಸಿದರು. ಅಲ್ಲದೆ ಶುಭ್ಮನ್ ಗಿಲ್ ಅವರೊಂದಿಗೆ 74 ರನ್‌ಗಳ ಜೊತೆಯಾಟವನ್ನು ಹಂಚಿಕೊಂಡರು.
ತಿರುವನಂತಪುರದ ಗ್ರೀನ್‌ಫೀಲ್ಡ್ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ಮೊದಲು ಬೌಲಿಂಗ್ ಆಯ್ಕೆ ಮಾಡಿತು. ಹೀಗಾಗಿ ಮೊದಲು ಬ್ಯಾಟಿಂಗ್ ಮಾಡಿದ ವೆಸ್ಟ್ ಇಂಡೀಸ್ 50 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 295 ರನ್ ಗಳಿಸಿತು. ತಂಡದ ಪರ ಜಸ್ಟಿನ್ ಗ್ರೀವ್ಸ್ ಶತಕ ಸಿಡಿಸಿದರು. ಜಾನ್ ಕ್ಯಾಂಪ್‌ಬೆಲ್ ಮತ್ತು ಅಮೀರ್ ಜಂಗೂ ಅರ್ಧಶತಕಗಳ ಕಾಣಿಕೆ ನೀಡಿದರು. ಭಾರತದ ಪರ ಕುಲ್ದೀಪ್ ಯಾದವ್ 4 ವಿಕೆಟ್ ಪಡೆದರು. ವಿರಾಟ್ ಕೊಹ್ಲಿ ಮತ್ತು ಶುಭಮನ್ ಗಿಲ್ ಅವರ ಶತಕಗಳ ಸಹಾಯದಿಂದ ಭಾರತ 41.4 ಓವರ್‌ಗಳಲ್ಲಿ 296 ರನ್‌ಗಳ ಗುರಿ ತಲುಪಿತು.