ನಾಯಕನಾಗಿ ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲೇ ರೋಹಿತ್ ಶರ್ಮಾ (Rohit Sharma) ಯಶಸ್ಸು ಕಂಡಿದ್ದಾರೆ. ಹಾಗಿದ್ದರೂ ಕ್ರಿಕೆಟ್ ಅಭಿಮಾನಿಗಳು ರೋಹಿತ್ ಅವರನ್ನು ಅಂಜುಬುರುಕ ನಾಯಕ ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಹೌದು, ರೋಹಿತ್ ಶರ್ಮಾ ನಾಯಕತ್ವದಲ್ಲಿ ಟೀಮ್ ಇಂಡಿಯಾ (Team India) ವಿಂಡೀಸ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲೇ (ODI Series) ಗೆಲುವಿನ ಸಿಹಿ ಸವಿದಿದೆ. ಭಾರತೀಯ ಕ್ರಿಕೆಟ್ನ ಸಹಸ್ರ ಏಕದಿನ ಪಂದ್ಯದಲ್ಲೇ ಜಯ ದಾಖಲಿಸಿರುವುದು, ಕ್ರಿಕೆಟ್ ಪ್ರೇಮಿಗಳಿಗೂ ಖುಷಿ ನೀಡಿತ್ತು. ಆದರೀಗ ಈ ಸಂಭ್ರಮದ ಬೆನ್ನಲ್ಲೇ ರೋಹಿತ್ ಶರ್ಮಾ ನಾಯಕತ್ವ ನಿಭಾಯಿಸಿದ ಮೊದಲ ಪಂದ್ಯದಲ್ಲೇ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದ್ದಾರೆ. ಇದಕ್ಕೆ ಕಾರಣ ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯಕ್ಕೂ ಮುನ್ನ ರೋಹಿತ್ ಶರ್ಮಾ ನೀಡಿದ ಅದೊಂದು ಹೇಳಿಕೆ.
ಪಂದ್ಯಕ್ಕೂ ಮುನ್ನ ರೋಹಿತ್ ಶರ್ಮಾಗೆ ಟೆಸ್ಟ್ ತಂಡದ ನಾಯಕತ್ವ ನಿಭಾಯಿಸುವ ಬಗ್ಗೆ ಪ್ರಶ್ನೆಯೊಂದನ್ನ ಕೇಳಲಾಗಿತ್ತು. ಈ ಪ್ರಶ್ನೆಗೆ ರೋಹಿತ್ ನೀಡಿದ ಉತ್ತರವೇ ಈಗ ಕ್ರಿಕೆಟ್ ಫ್ಯಾನ್ಸ್ ಅಸಮಾಧಾನಕ್ಕೆ ಕಾರಣವಾಗಿದೆ. “ಅದಕ್ಕಿನ್ನೂ ಸಮಯವಿದೆ. ಆದ್ರೆ ಸೀಮಿತ ಓವರ್‌ಗಳ ಕ್ರಿಕೆಟ್‌ನತ್ತ ನನ್ನ ಗಮನವಿದೆ. ಕೆಲಸದ ಹೊರೆ ನಿರ್ವಹಣೆ ಅತ್ಯಗತ್ಯ. ನಾಯಕರಾಗಿ, ನಾವು ಮೊದಲ ಕೆಲವು ಸರಣಿಗಳನ್ನು ಸಹ ಕಳೆದುಕೊಳ್ಳಬಹುದು. ಯಾಕಂದ್ರೆ ನಾವು ನಿರಂತರವಾಗಿ ಆಟಗಾರರನ್ನು ಬದಲಾಯಿಸಬೇಕಾಗುತ್ತದೆ. ಆದರೆ ನಾವು ಅದಕ್ಕೆ ಸಿದ್ಧರಿದ್ದೇವೆ” ಎಂದು ಹಿಟ್ಮ್ಯಾನ್ ಹೇಳಿದ್ದಾರೆ.
ರೋಹಿತ್ ಶರ್ಮಾ ನೀಡಿದ ಇದೇ ಹೇಳಿಕೆಗೆ ಈಗ ಕ್ರಿಕೆಟ್ ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ಛೀಮಾರಿ ಹಾಕುತ್ತಿದ್ದಾರೆ. ರೋಹಿತ್ರನ್ನು ಅಂಜುಬುರುಕ ನಾಯಕ, ಆಕ್ರಮಣಶೀಲ ಕೊರತೆಯಿರುವ ನಾಯಕ ಎಂದು ತರಹೇವಾರಿಯಾಗಿ ಟ್ರೋಲ್ ಮಾಡಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ರೋಹಿತ್ ಶರ್ಮಾ, ಜಸ್ಪ್ರೀತ್ ಬೂಮ್ರಾಗೆ ನಾಯಕತ್ವ ಬಿಟ್ಟುಕೊಡುವುದು ಉತ್ತಮ ಎಂದು ಅಭಿಮಾನಿಗಳು ಹೇಳಕೊಳ್ಳುತ್ತಿದ್ದಾರೆ. ಈ ತಂಡದೊಂದಿಗೆ ಎದುರಾಳಿಗಳನ್ನ ಮಣಿಸಲು ಸಾಧ್ಯವಾಗದಿದ್ರೆ, ರೋಹಿತ್ ಶರ್ಮಾ ನಾಯಕತ್ವ ನಿಭಾಯಿಸುವುದರಲ್ಲಿ ಅರ್ಥವಿಲ್ಲ. ಯಾಕಂದ್ರೆ ವೇಗಿ ಬೂಮ್ರಾಗೆ ನಾಯಕತ್ವ ನಿಭಾಯಿಸುತ್ತಾರಾ ಎನ್ನುವ ಪ್ರಶ್ನೆಯನ್ನ ಕೇಳಲಾಗಿತ್ತು. ಬೂಮ್ರಾ, ತಂಡದ ಯಶಸ್ಸಿಗಾಗಿ ನನ್ನ ಸಕಲ ಪ್ರಯತ್ನ ನಡೆಸುತ್ತೇನೆ ಎಂದು ಆತ್ಮವಿಶ್ವಾಸದಿಂದ ಹೇಳಿಕೊಂಡಿದ್ದರು.
ಯಾವ ಫಾರ್ಮ್ಯಾಟ್ನಲ್ಲೂ ನಾಯಕತ್ವ ನಿಭಾಯಿಸದ ಅನುಭವವಿರದ ಬೂಮ್ರಾ, ತಂಡದ ಯಶಸ್ಸಿಗಾಗಿ ಶ್ರಮಿಸುತ್ತೇನೆ ಎಂದು ಈ ಹಿಂದೆ ಹೇಳಿದ್ದರು. ಆದರೆ ರೋಹಿತ್ ಶರ್ಮಾ, ಆರಂಭದಲ್ಲಿ ಕೆಲವು ಸರಣಿಗಳನ್ನ ಸೋಲಬಹುದು ಎಂಬ ವೈಫಲ್ಯದ ಮಾತುಗಳನ್ನಾಡಿದ್ದು, ಅಭಿಮಾನಿಗಳನ್ನ ಕೆರಳಿಸಿದೆ. ಇದೇ ಕಾರಣಕ್ಕೆ ಕೆಲವರು ರೋಹಿತ್ ಶರ್ಮಾಗೆ, ಧೋನಿ ನಾಯಕತ್ವದ ಪಾಠ ಮಾಡಿದ್ದಾರೆ.
ಕ್ರಿಕೆಟ್ ಫ್ಯಾನ್ಸ್ ರೋಹಿತ್ ಶರ್ಮಾಗೆ ಅಂಜುಬುರುಕ ನಾಯಕ ಎಂದು ಜರಿದಿರುವ ಹಿಂದೆ ಒಂದು ಕಾರಣವಿದೆ. ಅದೇನಂದರೆ ವೆಸ್ಟ್ ಇಂಡೀಸ್ ಸರಣಿ ಬಳಿಕ ಟೀಮ್ ಇಂಡಿಯಾ ಶ್ರೀಲಂಕಾ ಮತ್ತು ಅಫ್ಘಾನಿಸ್ತಾನ ವಿರುದ್ಧ ಸರಣಿಗಳನ್ನಾಡಲಿದೆ. ಈ ಸರಣಿಗಳಲ್ಲಿ ಭಾರತ ಸೋಲೋಕೆ ಸಾಧ್ಯನಾ? ಅದು ತವರಿನಲ್ಲೇ ನಡೆಯುವ ಸರಣಿ. ಹಾಗಿದ್ದರೂ ರೋಹಿತ್, ಸರಣಿ ಸೋಲಿನ ಭೀತಿಯ ಬಗ್ಗೆ ಮಾತನಾಡಿದ್ದಾರೆ. ಅದೂ ಅಲ್ಲದೇ ತಮ್ಮ ನಾಯಕತ್ವದ ಬಗ್ಗೆಯೇ ಅಭದ್ರತೆಯನ್ನ ಹೊರ ಹಾಕಿದ್ದಾರೆ. ರೋಹಿತ್ ಶರ್ಮಾ ಈ ಮನಸ್ಥಿತಿ ಅಭಿಮಾನಿಗಳ ಕಣ್ಣು ಕೆಂಪಗಾಗುವಂತೆ ಮಾಡಿದೆ.
IND vs WI: ಭಾರತ- ವೆಸ್ಟ್ ಇಂಡೀಸ್ ಎರಡನೇ ಏಕದಿನ ಯಾವಾಗ?, ಎಲ್ಲಿ?, ಎಷ್ಟು ಗಂಟೆಗೆ?: ಇಲ್ಲಿದೆ ಮಾಹಿತಿ