AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಎಲ್​ಇಡಿ ಸ್ಟಂಪ್ಸ್​ಗಳನ್ನು ಮೊದಲ ಬಾರಿಗೆ ಬಳಸಿದ ದೇಶ ಯಾವುದು ಗೊತ್ತಾ? ಇವುಗಳ ಬೆಲೆ ಭಾರತದಲ್ಲಿ ಎಷ್ಟಿದೆ?

LED Stumps Bails Cost: ಈ ಸ್ಟಂಪ್‌ಗಳು ಬಲು ದುಬಾರಿಯಾಗಿದ್ದು, ಭಾರತದಲ್ಲಿ ನೀವು ಈ ಜಿಂಗ್ ಸಿಸ್ಟಮ್ ಲೀಡ್ ಬೈಲ್‌ಗಳನ್ನು ಖರೀದಿಸಲು ರೂ. 30 ಲಕ್ಷ ಮತ್ತು ಪಾಕಿಸ್ತಾನದಲ್ಲಿ ರೂ. 47.5 ಲಕ್ಷ ಪಾವತಿಸಬೇಕಾಗುತ್ತದೆ.

ಎಲ್​ಇಡಿ ಸ್ಟಂಪ್ಸ್​ಗಳನ್ನು ಮೊದಲ ಬಾರಿಗೆ ಬಳಸಿದ ದೇಶ ಯಾವುದು ಗೊತ್ತಾ? ಇವುಗಳ ಬೆಲೆ ಭಾರತದಲ್ಲಿ ಎಷ್ಟಿದೆ?
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: Vinay Bhat

Updated on: Feb 08, 2022 | 8:02 AM

ಕಳೆದ 10 ವರ್ಷಗಳಲ್ಲಿ ಕ್ರಿಕೆಟ್‌ನಲ್ಲಿ ಹೊಸ ತಂತ್ರಜ್ಞಾನವನ್ನು ಪರಿಚಯಿಸಲಾಗಿದೆ. ಎಲ್ಇಡಿ ಸ್ಟಂಪ್ಸ್ ಬೈಲ್ಸ್ ಅವುಗಳಲ್ಲಿ ಒಂದು. ಆಸ್ಟ್ರೇಲಿಯನ್ ಕ್ರಿಕೆಟ್ ಲೀಗ್‌ ಆದ ಬಿಗ್ ಬ್ಯಾಷ್​ (Big Bash T20)ನಲ್ಲಿ ಮೊದಲ ಬಾರಿಗೆ ಎಲ್ಇಡಿ ಸ್ಟಂಪ್‌ಗಳನ್ನು ಬಳಸಲಾಯಿತು. ನಂತರ ವಿಶ್ವಾದ್ಯಂತ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಾವಳಿಗಳಲ್ಲಿ ಇವುಗಳ ಬಳಕೆ ಸರಾಗವಾಗಿ ಹೆಚ್ಚಾಯಿತು. ಸಾಮಾನ್ಯವಾಗಿ ಬಳಸುವ ಸ್ಟಂಪ್‌ಗಳ ಬೇಲ್‌ಗೆ ಹೋಲಿಸಿದರೆ ಈ ಎಲ್ಇಡಿ ಸ್ಟಂಪ್‌ಗಳ ಬೇಲ್‌ಗಳ ಬೆಲೆ 12% ಹೆಚ್ಚು. ಮೂಲಗಳ ಪ್ರಕಾರ ಆಸ್ಟ್ರೇಲಿಯಾದಲ್ಲಿ ಎಲ್​ಇಡಿ ಸ್ಟಂಪ್ಸ್​ಗಳ ಬೆಲೆ $45,000 ಡಾಲರ್​ ಆಗಿದೆ.

ಮೊದಲು ಬಳಸಿದ್ದು ಯಾವಾಗ? ಭಾರತದಲ್ಲಿ ಈ ಎಲ್​ಇಡಿ ಸ್ಟಂಪ್ಸ್ ಬೈಲ್‌ಗಳನ್ನು ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಬಳಸಲಾಗಿದೆ. ಪ್ರಪಂಚದಾದ್ಯಂತದ ಹೆಚ್ಚಿನ ಕ್ರಿಕೆಟ್ ಲೀಗ್‌ಗಳು (ಜಿಂಗೋಲಜಿ) ತಂತ್ರಜ್ಞಾನ ಆಧಾರಿತ ಸ್ಟಂಪ್‌ಗಳನ್ನು ಪಂದ್ಯಗಳಲ್ಲಿ ಬಳಸುತ್ತಿವೆ. ಆಸ್ಟ್ರೇಲಿಯನ್ ಮೆಕ್ಯಾನಿಕಲ್ ಕೈಗಾರಿಕೋದ್ಯಮಿ ಬ್ರಾಂಟೆ ಎಕೆರ್ಮನ್ ಎಲ್​ಇಡಿ ಸ್ಟಂಪ್ ಬೇಲ್‌ಗಳ ಆವಿಷ್ಕಾರ ಮಾಡಿದವರಾಗಿದ್ದಾರೆ. 2012 ರ ಬಿಗ್ ಬ್ಯಾಷ್ ಲೀಗ್ ಋತುವಿನಲ್ಲಿ ಮೊದಲ ಬಾರಿಗೆ ಜಿಂಗ್ ಸಿಸ್ಟಮ್ ಆಧಾರಿತ ಮೊದಲ ಲೆಡ್ ಸ್ಟಂಪ್ಗಳನ್ನು ಬಳಸಲಾಯಿತು.

ನಂತರ ಇತರ ಲೀಗ್‌ಗಳಲ್ಲಿ ಮತ್ತು ICC ಪಂದ್ಯಾವಳಿಗಳಲ್ಲಿ ಈ ಸ್ಟಂಪ್‌ಗಳು ಮತ್ತು ಬೇಲ್‌ಗಳನ್ನು ಪರಿಚಯಿಸಲಾಯಿತು. ಆದರೆ ಈ ಸ್ಟಂಪ್‌ಗಳು ಬಲು ದುಬಾರಿಯಾಗಿದ್ದು, ಭಾರತದಲ್ಲಿ ನೀವು ಈ ಜಿಂಗ್ ಸಿಸ್ಟಮ್ ಲೀಡ್ ಬೈಲ್‌ಗಳನ್ನು ಖರೀದಿಸಲು ರೂ. 30 ಲಕ್ಷ ಮತ್ತು ಪಾಕಿಸ್ತಾನದಲ್ಲಿ ರೂ. 47.5 ಲಕ್ಷ ಪಾವತಿಸಬೇಕಾಗುತ್ತದೆ.

ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಪರಿಚಯಿಸಿದ್ದು ಭಾರತ ಲೆಡ್ ಸ್ಟಂಪ್‌ಗಳು ಮೊದಲ ಬಾರಿಗೆ ಭಾರತ 2016 ರಲ್ಲಿ ಆಯೋಜಿಸಿದ್ದ ICC ವರ್ಲ್ಡ್ ಟ್ವೆಂಟಿ20 ಅಂತರರಾಷ್ಟ್ರೀಯ ಪಂದ್ಯಾವಳಿಯಲ್ಲಿ ಪರಿಚಯಿಸಲ್ಪಟ್ಟವು. ಸಾಂಪ್ರದಾಯಿಕವಾಗಿ ಸ್ಟಂಪ್‌ಗಳು ಮತ್ತು ಬೈಲ್‌ಗಳು ಹೆಚ್ಚಾಗಿ ಮರದಿಂದ ಮಾಡಲ್ಪಟ್ಟಿವೆ. ಆದರೆ ಈಗ ಸಂಯೋಜಿತ ಪ್ಲಾಸ್ಟಿಕ್, ಎಲ್‌ಇಡಿ ದೀಪಗಳಿಂದ ಮಾಡಿದ ವಿಕೆಟ್‌ಗಳನ್ನು ಬಳಸಲಾಗುತ್ತಿದೆ. 2013 ರಲ್ಲಿ ICC ಯಿಂದ ಎಲ್​ಇಡಿ ಸ್ಟಂಪ್‌ಗಳ ಬಳಕೆಯನ್ನು ಅಧಿಕೃತಗೊಳಿಸಲಾಗಿದೆ. ಮಿನುಗುವ ಎಲ್​ಇಡಿ ಸ್ಟಂಪ್‌ಗಳನ್ನು ಪ್ರಪಂಚದ ಅನೇಕ ದೇಶೀಯ ಮತ್ತು ಅಂತರಾಷ್ಟ್ರೀಯ ಪಂದ್ಯಗಳಲ್ಲಿ ಬಳಸಲಾಗುತ್ತದೆ.

ಅಂತರರಾಷ್ಟ್ರೀಯ ಪಂದ್ಯಾವಳಿಗಳು ಮತ್ತು ಪಂದ್ಯಗಳಲ್ಲಿ ಮಿನುಗುವ ಎಲ್​ಇಡಿ ವಿಕೆಟ್‌ಗಳನ್ನು ಪರಿಚಯಿಸಿದ ನಂತರ ಕೆಲವು ಬದಲಾವಣೆಗಳನ್ನು ಮಾಡಲಾಗಿದೆ. ಅದೆನೆಂದರೆ, ವಿಜಯದ ನಂತರ ಆಟಗಾರರು ಸ್ಟಂಪ್‌ಗಳನ್ನು ಹಿಡಿದು ಸಂಭ್ರಮಿಸುವುದಾಗಲಿ ಅಥವಾ ತೆಗೆದುಕೊಂಡು ಹೋಗುವುದಾಗಲಿ ಮಾಡುವಂತಿಲ್ಲ. ಏಕೆಂದರೆ ಈ ವಿಕೆಟ್‌ಗಳು ಬಲು ದುಬಾರಿಯಾಗಿದ್ದು, ಅದರಲ್ಲಿ “ಮೈಕ್ರೋಪ್ರೊಸೆಸರ್‌ಗಳನ್ನು” ಆಧರಿಸಿದ ದುಬಾರಿ ತಂತ್ರಜ್ಞಾನವನ್ನು ಬಳಸಲಾಗುತ್ತದೆ.

ಈ ರಾಶಿಯವರಿಗೆ ಕೆಲಸ ಕಾರ್ಯಗಳಲ್ಲಿ ಯಶಸ್ಸು, ಆರ್ಥಿಕ ಲಾಭ, ಸಂತೋಷ
ಈ ರಾಶಿಯವರಿಗೆ ಕೆಲಸ ಕಾರ್ಯಗಳಲ್ಲಿ ಯಶಸ್ಸು, ಆರ್ಥಿಕ ಲಾಭ, ಸಂತೋಷ
ಇದು ಆತ್ಮದ ಹಾಡು; ‘ಶಿವಂ ಶಿವಂ ಸನಾತನಂ’ ಬಗ್ಗೆ ವಿಜಯ್ ಪ್ರಕಾಶ್ ಮಾತು
ಇದು ಆತ್ಮದ ಹಾಡು; ‘ಶಿವಂ ಶಿವಂ ಸನಾತನಂ’ ಬಗ್ಗೆ ವಿಜಯ್ ಪ್ರಕಾಶ್ ಮಾತು
ಲೈಂಗಿಕ ದೌರ್ಜನ್ಯ ನಡೆಸಿ ವಿಡಿಯೋ ಮಾಡಿದ್ದಾನೆ: ಮಡೆನೂರು ಮನು ಮೇಲೆ ಆರೋಪ
ಲೈಂಗಿಕ ದೌರ್ಜನ್ಯ ನಡೆಸಿ ವಿಡಿಯೋ ಮಾಡಿದ್ದಾನೆ: ಮಡೆನೂರು ಮನು ಮೇಲೆ ಆರೋಪ
ಗುಜರಾತ್ ವಿರುದ್ಧ ಸಿಡಿಲಬ್ಬರದ ಶತಕ ಸಿಡಿಸಿದ ಮಿಚೆಲ್ ಮಾರ್ಷ್
ಗುಜರಾತ್ ವಿರುದ್ಧ ಸಿಡಿಲಬ್ಬರದ ಶತಕ ಸಿಡಿಸಿದ ಮಿಚೆಲ್ ಮಾರ್ಷ್
ಭಾರತೀಯ ಸೇನೆ ಮಾಹಿತಿಯನ್ನು ಪಾಕಿಸ್ತಾನಕ್ಕೆ ಕಳಿಸುತ್ತಿದ್ದ ಇಬ್ಬರ ಬಂಧನ
ಭಾರತೀಯ ಸೇನೆ ಮಾಹಿತಿಯನ್ನು ಪಾಕಿಸ್ತಾನಕ್ಕೆ ಕಳಿಸುತ್ತಿದ್ದ ಇಬ್ಬರ ಬಂಧನ
ಇಲಿಗಳು ತಿಂದ ಆಹಾರವೇ ಈ ದೇವಸ್ಥಾನದ ಪ್ರಸಾದ: ಏನಿದರ ವಿಶೇಷತೆ?
ಇಲಿಗಳು ತಿಂದ ಆಹಾರವೇ ಈ ದೇವಸ್ಥಾನದ ಪ್ರಸಾದ: ಏನಿದರ ವಿಶೇಷತೆ?
ಬಿಜೆಪಿ ನಾಯಕರೆಲ್ಲ ಜೊತೆಗಿದ್ದೇವೆ, ನಮ್ಮ ಹೋರಾಟ ನಿಲ್ಲಲ್ಲ: ಚಲವಾದಿ
ಬಿಜೆಪಿ ನಾಯಕರೆಲ್ಲ ಜೊತೆಗಿದ್ದೇವೆ, ನಮ್ಮ ಹೋರಾಟ ನಿಲ್ಲಲ್ಲ: ಚಲವಾದಿ
ಗುಜರಾತ್​ನ ದಾಹೋದ್​ನಲ್ಲಿ 32 ವರ್ಷಗಳ ಬಳಿಕ ಹುಲಿ ಪ್ರತ್ಯಕ್ಷ
ಗುಜರಾತ್​ನ ದಾಹೋದ್​ನಲ್ಲಿ 32 ವರ್ಷಗಳ ಬಳಿಕ ಹುಲಿ ಪ್ರತ್ಯಕ್ಷ
ಗುತ್ತಿಗೆದಾರರಿಗೆ ಹಣ ಪಾವತಿಯಾಗದ ಕಾರಣ ಸಾಯಿ ಲೇಔಟ್​ನಲ್ಲಿ ಸಮಸ್ಯೆ: ನಿಖಿಲ್
ಗುತ್ತಿಗೆದಾರರಿಗೆ ಹಣ ಪಾವತಿಯಾಗದ ಕಾರಣ ಸಾಯಿ ಲೇಔಟ್​ನಲ್ಲಿ ಸಮಸ್ಯೆ: ನಿಖಿಲ್
‘ಅವನು ಸಾಯೋ ಬದಲು ಇವನು ಸಾಯಬಾರದಾ ಎಂದಿದ್ರು’: ಮಡೆನೂರು ಮನು
‘ಅವನು ಸಾಯೋ ಬದಲು ಇವನು ಸಾಯಬಾರದಾ ಎಂದಿದ್ರು’: ಮಡೆನೂರು ಮನು