AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

RCB vs SRH: ಆರ್​ಸಿಬಿಗೆ ಡಬಲ್ ಖುಷ್: ಈ ಆಟಗಾರ ಕೂಡ ಫಿಟ್, ಇಂದು ಕಣಕ್ಕೆ

Royal Challengers Bengaluru vs Sunrisers Hyderabad: ರಾಯಲ್ ಚಾಲೆಂಜರ್ಸ್ ಬೆಂಗಳೂರು ಗುರುವಾರ ಇಂಗ್ಲೆಂಡ್ ಬ್ಯಾಟ್ಸ್‌ಮನ್ ಜಾಕೋಬ್ ಬೆಥೆಲ್ ಐಪಿಎಲ್ ಪ್ಲೇ-ಆಫ್‌ಗಳಿಗೆ ಲಭ್ಯವಿಲ್ಲದ ಕಾರಣ ಅವರ ಬದಲಿಗೆ ನ್ಯೂಝಿಲೆಂಡ್‌ನ ಟಿಮ್ ಸೀಫರ್ಟ್ ಅವರನ್ನು ತಂಡಕ್ಕೆ ಸೇರಿಸಿಕೊಂಡಿದೆ. ಇದರ ಜೊತೆಗೆ ತಂಡದ ನಾಯಕ ರಜತ್ ಪಾಟಾದರ್ ಸಂಪೂರ್ಣ ಫಿಟ್ ಆಗಿದ್ದಾರೆ ಎಂದು ಕೋಚ್ ಅಧಿಕೃತವಾಗಿ ಹೇಳಿದ್ದಾರೆ

RCB vs SRH: ಆರ್​ಸಿಬಿಗೆ ಡಬಲ್ ಖುಷ್: ಈ ಆಟಗಾರ ಕೂಡ ಫಿಟ್, ಇಂದು ಕಣಕ್ಕೆ
Rcb (28)
Vinay Bhat
|

Updated on: May 23, 2025 | 7:11 AM

Share

ಬೆಂಗಳೂರು (ಮೇ. 23): ಇಂಡಿಯನ್ ಪ್ರೀಮಿಯರ್ ಲೀಗ್ 2025 (Indian Premier League) ಈಗ ಪ್ಲೇಆಫ್ ಹಂತದತ್ತ ಸಾಗುತ್ತಿದೆ. ಲೀಗ್‌ನಲ್ಲಿ ಇನ್ನೂ 7 ಪಂದ್ಯಗಳು ಉಳಿದಿವೆ ಆದರೆ ನಾಲ್ಕು ಪ್ಲೇಆಫ್ ತಂಡಗಳು ಈಗಾಗಲೇ ಪ್ಲೇ ಆಫ್​ಗೆ ಲಗ್ಗೆಯಿಟ್ಟಾಗಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು, ಗುಜರಾತ್ ಟೈಟಾನ್ಸ್, ಪಂಜಾಬ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್ ಈ ವರ್ಷದ ಟಾಪ್ 4 ತಂಡಗಳಾಗಿ ಸ್ಥಾನ ಪಡೆದಿವೆ. ಆದರೆ ಪ್ಲೇಆಫ್‌ಗೆ ಹತ್ತಿರ ಇರುವಾಗ, ಆರ್‌ಸಿಬಿ ತಂಡಕ್ಕೆ ಡಬಲ್ ಗುಡ್ ನ್ಯೂಸ್ ಸಿಕ್ಕಿದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ಗುರುವಾರ ಇಂಗ್ಲೆಂಡ್ ಬ್ಯಾಟ್ಸ್‌ಮನ್ ಜಾಕೋಬ್ ಬೆಥೆಲ್ ಐಪಿಎಲ್ ಪ್ಲೇ-ಆಫ್‌ಗಳಿಗೆ ಲಭ್ಯವಿಲ್ಲದ ಕಾರಣ ಅವರ ಬದಲಿಗೆ ನ್ಯೂಝಿಲೆಂಡ್‌ನ ಟಿಮ್ ಸೀಫರ್ಟ್ ಅವರನ್ನು ತಂಡಕ್ಕೆ ಸೇರಿಸಿಕೊಂಡಿದೆ. ಇದರ ಜೊತೆಗೆ ತಂಡದ ನಾಯಕ ರಜತ್ ಪಾಟಾದರ್ ಸಂಪೂರ್ಣ ಫಿಟ್ ಆಗಿದ್ದಾರೆ ಎಂದು ಕೋಚ್ ಅಧಿಕೃತವಾಗಿ ಹೇಳಿದ್ದಾರೆ ಮತ್ತು ಇಂದಿನ ಸನ್​ರೈಸರ್ಸ್ ಹೈದರಬಾದ್ ವಿರುದ್ಧದ ಪಂದ್ಯದಲ್ಲಿ ರಜತ್ ಕಣಕ್ಕಿಳಿಯುವುದು ಕೂಡ ಖಚಿತವಾಗಿದೆ.

ರಜತ್ ಪಾಟಿದಾರ್ ನಾಯಕತ್ವದಲ್ಲಿ ಆರ್‌ಸಿಬಿ ತಂಡ ಈವರೆಗೆ ಅದ್ಭುತ ಪ್ರದರ್ಶನ ನೀಡಿದ್ದು, ಪ್ಲೇಆಫ್‌ಗೆ ಅರ್ಹತೆ ಪಡೆದಿದೆ. ಆದರೆ, ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ರಜತ್ ಬೆರಳಿಗೆ ಗಾಯವಾಗಿತ್ತು. ಇದಾದ ನಂತರ ಅವರು ಕಣಕ್ಕಿಳಿಯುವ ಬಗ್ಗೆ ಅನುಮಾನವಿತ್ತು. ಆದರೆ ಈಗ ತಂಡದ ಕೋಚ್ ಆಂಡಿ ಫ್ಲವರ್ ಅವರು ರಜತ್ ಸಂಪೂರ್ಣವಾಗಿ ಫಿಟ್ ಆಗಿದ್ದಾರೆ ಎಂದು ಹೇಳಿದ್ದಾರೆ.

ಇದನ್ನೂ ಓದಿ
Image
ಆಂಗ್ಲರ ಹುಟ್ಟಡಗಿಸಲು ಸಜ್ಜಾದ ಭಾರತದ 5 ವಿಭಿನ್ನ ತಂಡಗಳು
Image
ಒಟ್ಟಿಗಿರಲು ಸಾಧ್ಯವೇ ಇಲ್ಲ; ಬಿಸಿಸಿಐ ಮಹತ್ವದ ನಿರ್ಧಾರ
Image
ಲ್ಯಾವೆಂಡರ್ ಬಣ್ಣದ ಜೆರ್ಸಿ ಧರಿಸಿ ಕಣಕ್ಕಿಳಿದ ಗುಜರಾತ್
Image
ಭಾರತ ಅಂಡರ್-19 ತಂಡದಲ್ಲಿ ವೈಭವ್​ಗೆ ಅವಕಾಶ

‘‘ಐಪಿಎಲ್ ವಿರಾಮದ ಬಗ್ಗೆ ನಮಗೆ ಚಿಂತೆ ಇಲ್ಲ. ತಂಡವು ಋತುವಿನ ಉದ್ದಕ್ಕೂ ಕಠಿಣ ಪರಿಶ್ರಮ ವಹಿಸಿದೆ ಮತ್ತು ಇಲ್ಲಿಯವರೆಗೆ ಅದ್ಭುತ ಪ್ರದರ್ಶನ ನೀಡಿದೆ. ಈ ವಿರಾಮವು ಕೆಲವು ಆಟಗಾರರಿಗೆ ಫಿಟ್ ಆಗಲು ಅವಕಾಶವನ್ನು ನೀಡಿತು. ಮೇ 17 ರಂದು ನಡೆಯಬೇಕಿದ್ದ ಆರ್‌ಸಿಬಿ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ನಡುವಿನ ಪಂದ್ಯ ಮಳೆಯಿಂದಾಗಿ ರದ್ದಾಯಿತು, ಇದರಿಂದಾಗಿ ವಿರಾಮ ಮತ್ತಷ್ಟು ದೀರ್ಘವಾಯಿತು. ಈಗ ರಜತ್ ಪಾಟಿದಾರ್ ಬ್ಯಾಟಿಂಗ್ ಮಾಡಲು ಫಿಟ್ ಆಗಿದ್ದಾರೆ, ಅದು ಒಳ್ಳೆಯದೇ. ಆರಂಭಿಕ ಆಟಗಾರ ಫಿಲ್ ಸಾಲ್ಟ್ ಕೂಡ ಅನಾರೋಗ್ಯದಿಂದ ಬಳಲುತ್ತಿದ್ದರು ಆದರೆ ವಿರಾಮದ ಸಮಯದಲ್ಲಿ ಅವರಿಗೆ ಫಿಟ್ ಆಗಲು ಅವಕಾಶ ಸಿಕ್ಕಿತು. ಈಗ ಅವರು ಸಂಪೂರ್ಣವಾಗಿ ಫ್ರೆಶ್ ಆಗಿದ್ದು ಆಡಲು ಸಿದ್ಧರಾಗಿದ್ದಾರೆ’’ ಎಂದು ಹೇಳಿದ್ದಾರೆ.

IND vs ENG: ಒಂದಲ್ಲ, ಎರಡಲ್ಲ… ಭಾರತದ 5 ವಿಭಿನ್ನ ತಂಡಗಳ ಇಂಗ್ಲೆಂಡ್‌ ಪ್ರವಾಸ

ಆರ್‌ಸಿಬಿಗೆ ತವರಿನಲ್ಲಿ ಯಾವುದೇ ಪಂದ್ಯವಿಲ್ಲ:

ಆರ್‌ಸಿಬಿ ಈಗ ಉಳಿದ ಎಲ್ಲಾ ಪಂದ್ಯಗಳನ್ನು ತನ್ನ ತವರು ಮೈದಾನದ ಹೊರಗೆ ಆಡಬೇಕಾಗಿದೆ ಮತ್ತು ತಂಡವು ಈ ಸವಾಲಿಗೆ ಸಿದ್ಧವಾಗಿದೆ ಎಂದು ಕೋಚ್ ಹೇಳಿದರು. ಬೆಂಗಳೂರಿನಲ್ಲಿ ಮಳೆಯಿಂದಾಗಿ, ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯ ಲಕ್ನೋದಲ್ಲಿ ನಡೆಯುತ್ತಿದೆ. ಬೆಂಗಳೂರಿನಲ್ಲಿ ಪಂದ್ಯವನ್ನು ಆಡದಿರುವುದು ನಮಗೆ ನಿರಾಶೆ ತಂದಿದೆ ಎಂದು ಅವರು ಹೇಳಿದರು. ಇತರ ಮೈದಾನಗಳಲ್ಲಿ ನಮ್ಮ ದಾಖಲೆ ಅತ್ಯುತ್ತಮವಾಗಿದೆ ಮತ್ತು ಹೈದರಾಬಾದ್ ವಿರುದ್ಧ ತಂಡವು ಉತ್ತಮವಾಗಿ ಆಡುತ್ತದೆ ಎಂದು ನಾವು ಭಾವಿಸುತ್ತೇವೆ ಎಂದರು.

ಆರ್‌ಸಿಬಿ 8 ಪಂದ್ಯಗಳನ್ನು ಗೆದ್ದಿದೆ:

ಆರ್‌ಸಿಬಿ ತಂಡವು ಪ್ರಸಕ್ತ ಋತುವಿನಲ್ಲಿ ಒಟ್ಟು 12 ಪಂದ್ಯಗಳನ್ನು ಆಡಿದ್ದು, ಅದರಲ್ಲಿ 8 ಪಂದ್ಯಗಳಲ್ಲಿ ಗೆದ್ದು ಮೂರು ಪಂದ್ಯಗಳಲ್ಲಿ ಸೋತಿದೆ. ಇವರು 17 ಅಂಕಗಳನ್ನು ಹೊಂದಿದ್ದು, ನಿವ್ವಳ ರನ್ ರೇಟ್ ಪ್ಲಸ್ 0.482 ಆಗಿದೆ. ಆರ್​ಸಿಬಿ ಪ್ರಸ್ತುತ ಪಾಯಿಂಟ್ಸ್ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಹಾಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಹಾಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ