AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IND vs PAK: ಸಂಪ್ರದಾಯಕ್ಕೆ ಬ್ರೇಕ್; ಇನ್ಮುಂದೆ ಐಸಿಸಿ ಈವೆಂಟ್​ನಲ್ಲೂ ಭಾರತ- ಪಾಕ್ ದೂರ ದೂರ..!

India-Pakistan Cricket Future Uncertain: ಪುಲ್ವಾಮಾ ಭಯೋತ್ಪಾದಕ ದಾಳಿಯ ನಂತರ ಭಾರತ ಮತ್ತು ಪಾಕಿಸ್ತಾನದ ನಡುವಿನ ಸಂಬಂಧಗಳು ಹದಗೆಟ್ಟಿವೆ. ಬಿಸಿಸಿಐ ಐಸಿಸಿಗೆ ಮನವಿ ಸಲ್ಲಿಸಿದ್ದು, ಭಾರತ ಮತ್ತು ಪಾಕಿಸ್ತಾನ ತಂಡಗಳು ಒಂದೇ ಗುಂಪಿನಲ್ಲಿ ಆಡದಂತೆ ವಿನಂತಿಸಿದೆ. ಈ ಮನವಿ ಒಪ್ಪಿಕೊಂಡರೆ, ಐಸಿಸಿ ಟೂರ್ನಮೆಂಟ್‌ಗಳಲ್ಲಿ ಎರಡು ತಂಡಗಳ ನಡುವೆ ಪಂದ್ಯಗಳು ಕಡಿಮೆಯಾಗುವ ಸಾಧ್ಯತೆ ಇದೆ. ನಾಕೌಟ್ ಹಂತಕ್ಕೆ ಎರಡೂ ತಂಡಗಳು ತಲುಪಿದರೆ ಮಾತ್ರ ಪಂದ್ಯ ನಡೆಯುವ ಸಾಧ್ಯತೆ ಇದೆ.

IND vs PAK: ಸಂಪ್ರದಾಯಕ್ಕೆ ಬ್ರೇಕ್; ಇನ್ಮುಂದೆ ಐಸಿಸಿ ಈವೆಂಟ್​ನಲ್ಲೂ ಭಾರತ- ಪಾಕ್ ದೂರ ದೂರ..!
Ind Vs Pak
ಪೃಥ್ವಿಶಂಕರ
|

Updated on: May 22, 2025 | 8:43 PM

Share

ಪಹಲ್ಗಾಮ್‌ ಭಯೋತ್ಪಾದಕ (Pahalgam Attack) ದಾಳಿಯ ನಂತರ ಕುತಂತ್ರಿ ಪಾಕಿಸ್ತಾನಕ್ಕೆ ಭಾರತ ನೀಡುತ್ತಿರುವ ಆಘಾತ ಒಂದೆರಡಲ್ಲ. ಪಾಪಿ ಪಾಕಿಸ್ತಾನದೊಂದಿಗಿನ ಎಲ್ಲಾ ಸಂಬಂಧಗಳನ್ನು ಭಾರತ ಮುರಿದುಕೊಂಡಿದೆ. ಇದೀಗ ಇದರ ಜೊತೆಗೆ ಕ್ರಿಕೆಟ್ ಸಂಬಂಧವೂ ಮುರಿದು ಬೀಳುವ ಲಕ್ಷಣಗಳು ಗೋಚರಿಸುತ್ತಿವೆ. ಉಭಯ ದೇಶಗಳ ನಡುವಿನ ಉದ್ವಿಗ್ನನತೆಯಿಂದಾಗಿ ಎರಡೂ ದೇಶಗಳ ಕ್ರಿಕೆಟ್ ತಂಡಗಳು ಏಷ್ಯಾಕಪ್‌ ಹಾಗೂ ಐಸಿಸಿ (ICC) ಈವೆಂಟ್​ಗಳಲ್ಲಿ ಮಾತ್ರ ಮುಖಾಮುಖಿಯಾಗುತ್ತಿದ್ದವು. ಆದರೆ ಇನ್ನು ಮುಂದೆ ಈ ಎರಡೂ ತಂಡಗಳ ನಡುವೆ ಪಂದ್ಯ ನಡೆಯುವುದು ಭಾಗಶಃ ಅನುಮಾನವಾಗಿದೆ. ಇದೀಗ ಬಿಸಿಸಿಐ (BCCI) ತೆಗೆದುಕೊಂಡಿರುವ ನಿರ್ಧಾರದಿಂದಾಗಿ ಎರಡು ತಂಡಗಳು ಐಸಿಸಿ ಈವೆಂಟ್​ನಲ್ಲೂ ಮುಖಾಮುಖಿಯಾಗುವುದು ಅನುಮಾನವಾಗಿದೆ.

ಐಸಿಸಿ ಈವೆಂಟ್​ಗಳಲ್ಲಿ ಮಾತ್ರ ಸ್ಪರ್ಧೆ

ವಾಸ್ತವವಾಗಿ ಐಸಿಸಿಯ ವಾರ್ಷಿಕ ಸಭೆ ಇದೇ ಜುಲೈ 17 ರಿಂದ 20 ರವರೆಗೆ ಸಿಂಗಾಪುರದಲ್ಲಿ ನಡೆಯಲಿದೆ. ಈ ಸಭೆಯಲ್ಲಿ ಭಾರತ ಹಾಗೂ ಪಾಕಿಸ್ತಾನ ನಡುವಿನ ಕ್ರಿಕೆಟ್ ಸಂಬಂಧದ ಬಗ್ಗೆ ಚರ್ಚೆಸಲಾಗುತ್ತದೆ. ಪ್ರಸ್ತುತ, ಭಾರತ ಮತ್ತು ಪಾಕಿಸ್ತಾನ ಐಸಿಸಿ ಪಂದ್ಯಾವಳಿಗಳಲ್ಲಿ ಮಾತ್ರ ಪರಸ್ಪರ ಎದುರಾಗುತ್ತವೆ. ಆದರೆ ಇತ್ತೀಚೆಗೆ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿ ಮತ್ತು ಉಭಯ ದೇಶಗಳ ನಡುವೆ ಹೆಚ್ಚಿದ ಉದ್ವಿಗ್ನತೆಯಿಂದಾಗಿ, ಇನ್ನು ಮುಂದೆ ಈ ಬದ್ಧವೈರಿಗಳ ನಡುವೆ ಹೈ-ವೋಲ್ಟೇಜ್ ಪಂದ್ಯ ನಡೆಯುವುದು ಕೂಡ ಅನುಮಾನವಾಗಿದೆ.

ಒಂದೇ ಗುಂಪಿನಲ್ಲಿ ಬೇಡ

ಬಿಸಿಸಿಐ ಮೂಲವೊಂದು ಪಿಟಿಐಗೆ ತಿಳಿಸಿರುವ ಪ್ರಕಾರ, ಐಸಿಸಿ ಈವೆಂಟ್​ಗಳಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳನ್ನು ಒಂದೇ ಗುಂಪಿನಲ್ಲಿ ಇರಿಸದಂತೆ ಐಸಿಸಿ ಬಳಿ ಬಿಸಿಸಿಐ ಕೇಳಿಕೊಂಡಿದೆ ಎಂದು ವರದಿಯಾಗಿದೆ. ಒಂದು ವೇಳೆ ಬಿಸಿಸಿಐ ಬೇಡಿಕೆಗೆ ಐಸಿಸಿ ಅಸ್ತು ಅಂದರೆ, ಇನ್ನು ಮುಂದೆ ಐಸಿಸಿ ಈವೆಂಟ್​ಗಳಲ್ಲಿ ಭಾರತ ಮತ್ತು ಪಾಕಿಸ್ತಾನ ಒಂದೇ ಗುಂಪಿನಲ್ಲಿ ಕಾಣಿಸಿಕೊಳ್ಳುವುದಿಲ್ಲ. ಆದರೆ ಎರಡೂ ತಂಡಗಳು ನಾಕೌಟ್ ಸುತ್ತಿಗೆ ಎಂಟ್ರಿಕೊಟ್ಟರೆ ಆಗ ಮಾತ್ರ ಉಭಯ ತಂಡಗಳ ಪಂದ್ಯ ನಡೆಯುವುದನ್ನು ತಪ್ಪಿಸಲಾಗುವುದಿಲ್ಲ.

ಈ ಹಿಂದಿನಿಂದ ನಡೆದುಕೊಂಡು ಬಂದಿರುವ ಸಂಪ್ರದಾಯದ ಪ್ರಕಾರ ಭಾಗಶಃ ಐಸಿಸಿ ಈವೆಂಟ್​ಗಳಲ್ಲಿ ಭಾರತ ಮತ್ತು ಪಾಕಿಸ್ತಾನ ಒಂದೇ ಗುಂಪಿನಲ್ಲಿರುತ್ತವೆ. ಇದರಿಂದ ಉಭಯ ತಂಡಗಳ ನಡುವೆ ಒಂದಕ್ಕಿಂತ ಹೆಚ್ಚಿನ ಪಂದ್ಯಗಳು ನಡೆಯುತ್ತವೆ. ಲೀಗ್ ಹಂತದಲ್ಲಿ ಒಮ್ಮೆ, ಆ ಬಳಿಕ ನಾಕೌಟ್ ಸುತ್ತಿನಲ್ಲಿ ನಂತರ ಫೈನಲ್​ನಲ್ಲೂ ಉಭಯ ತಂಡಗಳು ಸೆಣಸಾಡುವ ಸಾಧ್ಯತೆಗಳಿರುತ್ತವೆ. ಒಂದೆಡೆ ಇದು ಅಭಿಮಾನಿಗಳಿಗೆ ಒಂದೆಡೆ ಭರಪೂರ ಮನರಂಜನೆ ನೀಡಿದರೆ, ಇನ್ನೊಂದೆಡೆ ಐಸಿಸಿಗೂ ಭರ್ಜರಿ ಆದಾಯ ತಂದುಕೊಡುತ್ತದೆ. ಇದೇ ಕಾರಣ ಉಭಯ ತಂಡಗಳನ್ನು ಒಂದೇ ಗುಂಪಿನಲ್ಲಿ ಇರಿಸಲಾಗುತ್ತದೆ.

IND vs PAK: ಭಾರತ- ಪಾಕ್ ನಡುವೆ ದ್ವಿಪಕ್ಷೀಯ ಸರಣಿ ಸಾಧ್ಯವೇ ಇಲ್ಲ ಎಂದ ಬಿಸಿಸಿಐ

ಐಸಿಸಿಗೆ ಭಾರಿ ನಷ್ಟ

ಆದರೀಗ ಎರಡು ತಂಡಗಳು ಬೇರೆ ಬೇರೆ ಗುಂಪಿನಲ್ಲಿ ಸ್ಥಾನ ಪಡೆದರೆ, ಒಂದು ಪಂದ್ಯವನ್ನು ಕಡಿಮೆ ಆಡಿದಂತ್ತಾಗುತ್ತದೆ. ಒಂದು ವೇಳೆ ಎರಡು ತಂಡಗಳಲ್ಲಿ ಒಂದು ತಂಡ ನಾಕೌಟ್ ಸುತ್ತಿಗೆ ಅರ್ಹತೆ ಪಡೆಯದಿದ್ದರೆ, ಎರಡೂ ತಂಡಗಳ ನಡುವೆ ಪಂದ್ಯವೇ ನಡೆಯುವುದಿಲ್ಲ. ಇದು ಐಸಿಸಿಗೆ ಭಾರಿ ನಷ್ಟವನ್ನುಂಟು ಮಾಡಲಿದೆ. ಆದ್ದರಿಂದ ಬಿಸಿಸಿಐನ ಬೇಡಿಕೆಯನ್ನು ಐಸಿಸಿ ಒಪ್ಪಿಕೊಳ್ಳುತ್ತಾ ಎಂಬುದು ಪ್ರಶ್ನೆಯಾಗಿದೆ. ಆದರೆ ಐಸಿಸಿ ಅಧ್ಯಕ್ಷರಾಗಿ ಜಯ್​ ಶಾ ಅವರೇ ಇರುವ ಕಾರಣ, ಬಿಸಿಸಿಐ ಮನವಿಯನ್ನು ಪುರಸ್ಕರಿಸುವ ಸಾಧ್ಯತೆಗಳನ್ನು ತಳ್ಳಿ ಹಾಕುವಂತಿಲ್ಲ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ