AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IND vs ENG: ಇಂಗ್ಲೆಂಡ್‌ ಪ್ರವಾಸಕ್ಕೆ ಭಾರತ ಅಂಡರ್-19 ತಂಡ ಪ್ರಕಟ; ಆಯುಷ್​ಗೆ ನಾಯಕತ್ವ

India U19 Squad Announced for England Tour: ಇಂಗ್ಲೆಂಡ್ ಪ್ರವಾಸಕ್ಕೆ ಭಾರತ ಅಂಡರ್ 19 ತಂಡವನ್ನು ಬಿಸಿಸಿಐ ಪ್ರಕಟಿಸಿದೆ. ಆಯುಷ್ ಮ್ಹಾತ್ರೆ ನಾಯಕತ್ವದಲ್ಲಿ, ವೈಭವ್ ಸೂರ್ಯವಂಶಿ ಸೇರಿದಂತೆ ಐಪಿಎಲ್‌ನಲ್ಲಿ ಸ್ಫೋಟಕ ಪ್ರದರ್ಶನ ನೀಡಿದ ಆಟಗಾರರು ಸ್ಥಾನ ಪಡೆದಿದ್ದಾರೆ. ಜೂನ್ 24 ರಿಂದ ಜುಲೈ 23 ರವರೆಗೆ ಅಭ್ಯಾಸ ಪಂದ್ಯ, ಏಕದಿನ ಪಂದ್ಯಗಳು ಮತ್ತು ಬಹು-ದಿನ ಪಂದ್ಯಗಳು ನಡೆಯಲಿವೆ. ಅಭಿಗ್ಯಾನ್ ಕುಂಡು ಉಪನಾಯಕರಾಗಿ ಆಯ್ಕೆಯಾಗಿದ್ದಾರೆ.

IND vs ENG: ಇಂಗ್ಲೆಂಡ್‌ ಪ್ರವಾಸಕ್ಕೆ ಭಾರತ ಅಂಡರ್-19 ತಂಡ ಪ್ರಕಟ; ಆಯುಷ್​ಗೆ ನಾಯಕತ್ವ
India U19 Squad
ಪೃಥ್ವಿಶಂಕರ
|

Updated on:May 22, 2025 | 7:49 PM

Share

ಇಂಗ್ಲೆಂಡ್ ಪ್ರವಾಸಕ್ಕೆ ಭಾರತ ಅಂಡರ್ 19 ತಂಡವನ್ನು (India U19 Squad Announced for England Tour) ಪ್ರಕಟಿಸಲಾಗಿದೆ. ಈ ಪ್ರವಾಸದಲ್ಲಿ, ಭಾರತ ತಂಡವು ಜೂನ್ 24 ರಿಂದ ಜುಲೈ 23 ರವರೆಗೆ ಒಂದು ಅಭ್ಯಾಸ ಪಂದ್ಯ, ಐದು ಏಕದಿನ ಪಂದ್ಯಗಳು ಮತ್ತು ಎರಡು ಬಹು-ದಿನ ಪಂದ್ಯಗಳನ್ನು ಆಡಲಿದೆ. ಈ ಪ್ರವಾಸದಲ್ಲಿ 17 ವರ್ಷದ ಆಯುಷ್ ಮ್ಹಾತ್ರೆ (Ayush Mhatre) ಭಾರತ ತಂಡವನ್ನು ನಾಯಕನಾಗಿ ಮುನ್ನಡೆಸಲಿದ್ದಾರೆ. ಇವರಲ್ಲದೆ, ಈ ಬಾರಿಯ ಐಪಿಎಲ್‌ನಲ್ಲಿ ಸ್ಫೋಟಕ ಶತಕ ಸಿಡಿಸಿ ಕ್ರಿಕೆಟ್ ಲೋಕದಲ್ಲಿ ಸಂಚಲನ ಮೂಡಿಸಿದ್ದ 14 ವರ್ಷದ ವೈಭವ್ ಸೂರ್ಯವಂಶಿ (Vaibhav Suryavanshi) ಕೂಡ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

ಈ ತಂಡದ ಉಪನಾಯಕತ್ವವನ್ನು ವಿಕೆಟ್ ಕೀಪರ್ ಅಭಿಗ್ಯಾನ್ ಕುಂಡು ಅವರಿಗೆ ವಹಿಸಲಾಗಿದೆ. ಹರ್ವಂಶ್ ಸಿಂಗ್ ಎರಡನೇ ವಿಕೆಟ್ ಕೀಪರ್ ಆಗಿ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಇನ್ನು ಸ್ಟ್ಯಾಂಡ್‌ಬೈ ಆಟಗಾರರ ಪಟ್ಟಿಯಲ್ಲಿ ಅಲಂಕೃತ್ ರಾಪೋಲ್ ಅವರನ್ನು ಮತ್ತೊಬ್ಬ ವಿಕೆಟ್ ಕೀಪರ್ ಆಗಿ ಆಯ್ಕೆ ಮಾಡಲಾಗಿದೆ.

ಐಪಿಎಲ್​ನಲ್ಲಿ ಆಯುಷ್-ವೈಭವ್ ಅಬ್ಬರ

ಆಯುಷ್ ಮತ್ತು ವೈಭವ್ ಇಬ್ಬರೂ ಕೂಡ ಈ ಬಾರಿಯ ಐಪಿಎಲ್​ನಲ್ಲಿ ತಮ್ಮ ಬ್ಯಾಟಿಂಗ್‌ ಮೂಲಕ ಎಲ್ಲರ ಗಮನ ಸೆಳೆದಿದ್ದರು. 2025 ರ ಐಪಿಎಲ್‌ನಲ್ಲಿ ಸಿಎಸ್​ಕೆ ಪರ 6 ಪಂದ್ಯಗಳನ್ನಾಡಿದ್ದ ಆಯುಷ್ 187.27 ರ ಸ್ಟ್ರೈಕ್ ರೇಟ್ ಮತ್ತು 34.33 ರ ಸರಾಸರಿಯಲ್ಲಿ 206 ರನ್ ಕಲೆಹಾಕಿದ್ದರು. ಇತ್ತ ವೈಭವ್ ಸೂರ್ಯವಂಶಿ ಕೂಡ ರಾಜಸ್ಥಾನ್ ರಾಯಲ್ಸ್ ಪರ ಆಡಿದ್ದ 7 ಪಂದ್ಯಗಳಲ್ಲಿ 206.55 ರ ಸ್ಟ್ರೈಕ್ ರೇಟ್ ಮತ್ತು 36 ರ ಸರಾಸರಿಯಲ್ಲಿ 252 ರನ್ ಬಾರಿಸಿದ್ದರು.

ಇವರಿಬ್ಬರೂ 19 ವರ್ಷದೊಳಗಿನವರ ಕ್ರಿಕೆಟ್‌ನಲ್ಲಿ ಭಾರತ ತಂಡದ ಆಡಿದ್ದಾರೆ. ಕಳೆದ ವರ್ಷ ನಡೆದಿದ್ದ ಅಂಡರ್-19 ಏಷ್ಯಾಕಪ್‌ನಲ್ಲಿ ಈ ಇಬ್ಬರೂ ಆಟಗಾರರು ಇನ್ನಿಂಗ್ಸ್ ಆರಂಭಿಸಿದ್ದರು. ಕಳೆದ ವರ್ಷ ಚೆನ್ನೈನಲ್ಲಿ ನಡೆದ ಆಸ್ಟ್ರೇಲಿಯಾ ಅಂಡರ್-19 ವಿರುದ್ಧದ ಮೊದಲ ಯೂತ್ ಟೆಸ್ಟ್ ಪಂದ್ಯದಲ್ಲಿ ಸೂರ್ಯವಂಶಿ ಶತಕ ಸಿಡಿಸಿದ್ದರು. ಮತ್ತೊಂದೆಡೆ, 17 ವರ್ಷದ ಮ್ಹಾತ್ರೆ 9 ಪ್ರಥಮ ದರ್ಜೆ ಪಂದ್ಯಗಳು ಮತ್ತು 7 ಲಿಸ್ಟ್-ಎ ಪಂದ್ಯಗಳನ್ನು ಆಡಿದ್ದಾರೆ.

ಅಂಡರ್ 19 ತಂಡದ ಮತ್ತೊಂದು ಕುತೂಹಲಕಾರಿ ಆಯ್ಕೆಯೆಂದರೆ ಕೇರಳದ ಲೆಗ್-ಸ್ಪಿನ್ನರ್ ಮೊಹಮ್ಮದ್ ಎನಾನ್, ಕಳೆದ ವರ್ಷ ಡಿಸೆಂಬರ್‌ನಲ್ಲಿ ನಡೆದಿದ್ದ ಆಸ್ಟ್ರೇಲಿಯಾ ಅಂಡರ್-19 ವಿರುದ್ಧ ಗಮನಾರ್ಹ ಪ್ರದರ್ಶನ ನೀಡಿದ್ದರು. ಆಸ್ಟ್ರೇಲಿಯಾ ತಂಡದ ವಿರುದ್ಧದ ಎರಡು ಯೂತ್ ಟೆಸ್ಟ್‌ಗಳಲ್ಲಿ ಎನಾನ್ 16 ವಿಕೆಟ್‌ಗಳನ್ನು ಕಬಳಿಸಿದ್ದರು ಮತ್ತು ಆ ಸರಣಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿಕೊಂಡಿದ್ದರು. ಇವರಲ್ಲದೆ ಪಂಜಾಬ್ ಆಫ್ ಸ್ಪಿನ್ನರ್ ಅನ್ಮೋಲ್ಜಿತ್ ಸಿಂಗ್ ಕೂಡ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

IPL 2025: ಐಪಿಎಲ್​ನಿಂದ ಮತ್ತೆ ಹೊರಬಿದ್ದ ಮಯಾಂಕ್ ಯಾದವ್; ಬದಲಿ ಆಟಗಾರನ ಸೇರ್ಪಡೆ

ಭಾರತ 19 ವರ್ಷದೊಳಗಿನವರ ತಂಡ: ಆಯುಷ್ ಮ್ಹಾತ್ರೆ (ನಾಯಕ), ವೈಭವ್ ಸೂರ್ಯವಂಶಿ, ವಿಹಾನ್ ಮಲ್ಹೋತ್ರಾ, ಮೌಲಿರಾಜ್‌ಸಿನ್ಹ್ ಚಾವ್ಡಾ, ರಾಹುಲ್ ಕುಮಾರ್, ಅಭಿಜ್ಞಾನ್ ಕುಂದು (ಉಪನಾಯಕ ಮತ್ತು ವಿಕೆಟ್ ಕೀಪರ್), ಹರ್ವಂಶ್ ಸಿಂಗ್ (ವಿಕೆಟ್ ಕೀಪರ್), ಆರ್ ಎಸ್ ಅಂಬರೀಶ್, ಕನಿಷ್ಕ್ ಪಟೇಲ್, ಹೀನ್‌ಜಿಲ್ ಚೌಹಾನ್, ಹೀನ್ ಪ್ರಣವ್ ರಾಘವೇಂದ್ರ, ಮೊಹಮ್ಮದ್ ಎನಾನ್, ಆದಿತ್ಯ ರಾಣಾ ಮತ್ತು ಅನ್ಮೋಲ್ಜಿತ್ ಸಿಂಗ್.

ಸ್ಟ್ಯಾಂಡ್‌ಬೈ ಆಟಗಾರರು: ನಮನ್ ಪುಷ್ಪಕ್, ಡಿ ದೀಪೇಶ್, ವೇದಾಂತ್ ತ್ರಿವೇದಿ, ವಿಕಲ್ಪ್ ತಿವಾರಿ, ಅಲಂಕೃತ್ ರಾಪೋಲ್ (ವಿಕೆಟ್ ಕೀಪರ್)

ಪ್ರವಾಸದ ವೇಳಾಪಟ್ಟಿ

  • ಮಂಗಳವಾರ, ಜೂನ್ 24, 50 ಓವರ್‌ಗಳ ಅಭ್ಯಾಸ ಪಂದ್ಯ
  • ಶುಕ್ರವಾರ, ಜೂನ್ 27, ಮೊದಲ ಏಕದಿನ ಪಂದ್ಯ
  • ಸೋಮವಾರ, ಜೂನ್ 30, ಎರಡನೇ ಏಕದಿನ ಪಂದ್ಯ
  • ಬುಧವಾರ, ಜುಲೈ 2, ಮೂರನೇ ಏಕದಿನ ಪಂದ್ಯ
  • ಶನಿವಾರ, ಜುಲೈ 5, 4ನೇ ಏಕದಿನ ಪಂದ್ಯ
  • ಜುಲೈ 7, ಸೋಮವಾರ, 5ನೇ ಏಕದಿನ ಪಂದ್ಯ

ಟೆಸ್ಟ್ ಸರಣಿ

  • ಜುಲೈ 12 ರಿಂದ 15, ಮೊದಲ ಪಂದ್ಯ
  • ಜುಲೈ 20 ರಿಂದ 23, ಎರಡನೇ ಪಂದ್ಯ

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:43 pm, Thu, 22 May 25