ರೋಹಿತ್ ಶರ್ಮಾ (Rohit Sharma), ವಿರಾಟ್ ಕೊಹ್ಲಿ, ಜಸ್ಪ್ರಿತ್ ಬುಮ್ರಾ ಅವರಂತಹ ಸ್ಟಾರ್ ಆಟಗಾರರ ಕಮ್ಬ್ಯಾಕ್ ಹೊರತಾಗಿಯೂ ಆಸ್ಟ್ರೇಲಿಯಾ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾ ಸೋಲು ಕಂಡಿತು. ರಾಜ್ಕೋಟ್ನ ಸೌರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ನಡೆದ ಅಂತಿಮ ಪಂದ್ಯದಲ್ಲಿ ಆಸ್ಟ್ರೇಲಿಯಾ 66 ರನ್ಗಳ ಜಯ ಸಾಧಿಸಿ ಕ್ಲೀನ್ ಸ್ವೀಪ್ ಮುಖಭಂಗದಿಂದ ಪಾರಾಯಿತು. ಟೀಮ್ ಇಂಡಿಯಾ 2-1 ಅಂತರದಿಂದ ಸರಣಿ ವಶಪಡಿಸಿಕೊಂಡಿತು. ಆದರೆ, ಪೋಸ್ಟ್ ಮ್ಯಾಚ್ ಪ್ರೆಸೆಂಟೇಷನ್ ವೇಳೆ ನಾಯಕ ರೋಹಿತ್ ಶರ್ಮಾ ಟ್ರೋಫಿ ಪಡೆದುಕೊಳ್ಳಲು ನಿರಾಕರಿಸಿದರು.
ಆಸ್ಟ್ರೇಲಿಯಾ ವಿರುದ್ಧದ ಏಕದಿನ ಪಂದ್ಯದಲ್ಲಿ 2-1 ಮುನ್ನಡೆ ಪಡೆದುಕೊಂಡು ಸರಣಿ ವಶಪಡಿಸಿಕೊಂಡ ಭಾರತಕ್ಕೆ ಟ್ರೋಫಿ ಸಿಕ್ಕಿತು. ಆದರೆ, ನಾಯಕ ರೋಹಿತ್ ಶರ್ಮಾ ಟ್ರೋಫಿಯನ್ನು ಪಡೆದುಕೊಳ್ಳದೆ ಕೆಎಲ್ ರಾಹುಲ್ ಅವರನ್ನು ಕರೆದರು. ಮೊದಲ ಎರಡು ಪಂದ್ಯಗಳಲ್ಲಿ ಭಾರತವನ್ನು ಮುನ್ನಡೆಸಿದ್ದ ಕೆಎಲ್ ರಾಹುಲ್ ತಂಡಕ್ಕೆ ಗೆಲುವು ತಂದುಕೊಟ್ಟು ಸರಣಿ ವಶಪಡಿಸಿಕೊಳ್ಳಲು ಕಾರಣರಾಗಿದ್ದರು. ಇದಕ್ಕಾಗಿ ಹಿಟ್ಮ್ಯಾನ್ ಸರಣಿ ಟ್ರೋಫಿಯನ್ನು ರಾಹುಲ್ಗೆ ಹಸ್ತಾಂತರಿಸಿದರು. ರೋಹಿತ್ ನಡೆಗೆ ಮೆಚ್ಚುಗೆಯ ಮಾತುಗಳು ಕೇಳಿಬರುತ್ತಿದೆ. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.
ನೇಪಾಳಿಗರ ಅಬ್ಬರಕ್ಕೆ ಟಿ20 ಕ್ರಿಕೆಟ್ನ ದಾಖಲೆಗಳು ಧೂಳೀಪಟ
Captain @ImRo45 & @klrahul collect the @IDFCFIRSTBank Trophy as #TeamIndia win the ODI series 2⃣-1⃣ 👏👏#INDvAUS pic.twitter.com/k3JiTMiVGJ
— BCCI (@BCCI) September 27, 2023
ಟ್ರೋಫಿ ಹಿಡಿದುಕೊಂಡು ಎಲ್ಲ ಆಟಗಾರರು ಫೋಟೋಕ್ಕೆ ಪೋಸ್ ನೀಡುವಾಗ ಕೂಡ ನಾಯಕ ರೋಹಿತ್ ಶರ್ಮಾ, ಉಪನಾಯಕ ಕೆಎಲ್ ರಾಹುಲ್ ಸ್ಥಳೀಯ ಸೌರಾಷ್ಟ್ರ ಆಟಗಾರರಿಗೆ ಕರೆದು ಅವರಿಗೆ ಟ್ರೋಫಿಯನ್ನು ಹಸ್ತಾಂತರಿಸಿದರು. ಸೌರಾಷ್ಟ್ರ ಆಟಗಾರರಾದ ಧರ್ಮೇಂದ್ರ ಜಡೇಜಾ, ಪ್ರೇರಕ್ ಮಂಕಡ್, ವಿಶ್ವರಾಜ್ ಜಡೇಜಾ ಮತ್ತು ಹಾರ್ವಿಕ್ ದೇಸಾಯಿ ಅವರನ್ನು 3ನೇ ಏಕದಿನದಲ್ಲಿ ಡ್ರಿಂಕ್ಸ್ ಮತ್ತು ಫೀಲ್ಡಿಂಗ್‌ನೊಂದಿಗೆ ಟೀಮ್ ಇಂಡಿಯಾಗೆ ಬೆಂಬಲಿಸಲು ಸೇರಿಸಲಾಗಿತ್ತು. ರೋಹಿತ್ ಶರ್ಮಾ ಮತ್ತು ಕೆಎಲ್ ರಾಹುಲ್ ಅವರ ಈ ನಡೆಗೆ ಅನೇಕ ಅಭಿಮಾನಿಗಳು ಮನಸೋತಿದ್ದಾರೆ.
Several players went home for a break, few players were ill then the Indian team invited Saurashtra players as subs and it is nice to see they were in between the senior Indian players and raising the series-winning Trophy. pic.twitter.com/fTeaUeXwkd
— Johns. (@CricCrazyJohns) September 27, 2023
ಮೂರನೇ ಏಕದಿನ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿ 50 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 352 ರನ್ ಗಳಿಸಿತು. ಮಿಚೆಲ್ ಮಾರ್ಶ್ 84 ಎಸೆತಗಳಲ್ಲಿ 96, ಸ್ಟೀವ್ ಸ್ಮಿತ್ 74, ಲಾಬುಶೇನ್ 72 ಹಾಗೂ ವಾರ್ನರ್ 56 ರನ್ ಸಿಡಿಸಿದರು. ಭಾರತ ಪರ ಬುಮ್ರಾ 3 ವಿಕೆಟ್ ಪಡೆದರು. ಟಾರ್ಗೆಟ್ ಬೆನ್ನಟ್ಟಿದ ಭಾರತ 49.4 ಓವರ್ಗಳಲ್ಲಿ 286 ರನ್ಗೆ ಆಲೌಟ್ ಆಯಿತು. ತಂಡದ ಪರ ರೋಹಿತ್ 57 ಎಸೆತಗಳಲ್ಲಿ 81 ರನ್ ಸಿಡಿಸಿದರೆ, ಕೊಹ್ಲಿ 56 ಹಾಗೂ ಶ್ರೇಯಸ್ ಅಯ್ಯರ್ 48 ರನ್ ಗಳಿಸಿದರು. ಉಳಿದ ಬ್ಯಾಟರ್ಗಳೆಲ್ಲ ವೈಫಲ್ಯ ಅನುಭವಿಸಿದರು. ಆಸೀಸ್ ಪರ ಗ್ಲೆನ್ ಮ್ಯಾಕ್ಸ್ವೆಲ್ 4 ವಿಕೆಟ್ ಕಿತ್ತು ಮಿಂಚಿದರು.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ