ನೇಪಾಳಿಗರ ಅಬ್ಬರಕ್ಕೆ ಟಿ20 ಕ್ರಿಕೆಟ್​ನ ದಾಖಲೆಗಳು ಧೂಳೀಪಟ

Nepal vs Mongolia: ಏಷ್ಯನ್ ಗೇಮ್ಸ್​ನಲ್ಲಿ ಮೊದಲ ಶತಕ ಸಿಡಿಸಿದ ದಾಖಲೆ ಕೂಡ ನೇಪಾಳ ತಂಡದ ಕುಶಾಲ್ ಮಲ್ಲ ಹೆಸರಿಗೆ ಸೇರ್ಪಡೆಯಾಗಿದೆ. ಈ ಪಂದ್ಯದಲ್ಲಿ ಕುಶಾಲ್ 50 ಎಸೆತಗಳಲ್ಲಿ 12 ಸಿಕ್ಸ್ ಹಾಗೂ 8 ಫೋರ್​ಗಳೊಂದಿಗೆ ಅಜೇಯ 137 ರನ್ ಬಾರಿಸಿದ್ದಾರೆ.

TV9 Web
| Updated By: ಝಾಹಿರ್ ಯೂಸುಫ್

Updated on: Sep 27, 2023 | 5:18 PM

ಏಷ್ಯನ್ ಗೇಮ್ಸ್​ನ ಪುರುಷರ ಮೊದಲ ಟಿ20 ಪಂದ್ಯದಲ್ಲಿ ಮಂಗೋಲಿಯಾ ವಿರುದ್ಧ ನೇಪಾಳ ತಂಡವು ಅಮೋಘ ಗೆಲುವು ದಾಖಲಿಸಿದೆ. ಈ ಭರ್ಜರಿ ಗೆಲುವಿನೊಂದಿಗೆ ನೇಪಾಳ ತಂಡದ ಆಟಗಾರರು ಹಲವು ವಿಶ್ವದಾಖಲೆಗಳನ್ನು ಕೂಡ ನಿರ್ಮಿಸಿರುವುದು ವಿಶೇಷ. ಆ ದಾಖಲೆಗಳಾವುವು ಎಂಬುದರ ಸಂಪೂರ್ಣ ಮಾಹಿತಿ ಈ ಕೆಳಗಿನಂತಿದೆ...

1 / 10
1- ಅತ್ಯಧಿಕ ಸ್ಕೋರ್: ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ನೇಪಾಳ ತಂಡವು 20 ಓವರ್​ಗಳಲ್ಲಿ 3 ವಿಕೆಟ್ ನಷ್ಟಕ್ಕೆ ಕಲೆಹಾಕಿದ್ದು ಬರೋಬ್ಬರಿ 314 ರನ್​ಗಳು. ಇದರೊಂದಿಗೆ ಟಿ20 ಕ್ರಿಕೆಟ್​ನಲ್ಲಿ 300+ ರನ್​ ಕಲೆಹಾಕಿದ ಮೊದಲ ತಂಡ ಎಂಬ ದಾಖಲೆ ನೇಪಾಳ ಪಾಲಾಗಿದೆ. ಈ ಹಿಂದೆ ಅಫ್ಘಾನಿಸ್ತಾನ್ 278 ರನ್ ಬಾರಿಸಿದ್ದು ಇದುವರೆಗಿನ ದಾಖಲೆಯಾಗಿತ್ತು.

2 / 10
2- ಅತೀ ವೇಗದ ಶತಕ: ಈ ಪಂದ್ಯದಲ್ಲಿ 34 ಎಸೆತಗಳಲ್ಲಿ ಶತಕ ಸಿಡಿಸುವ ಮೂಲಕ ಕುಶಾಲ್ ಮಲ್ಲ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಈ ಮೂಲಕ ಟಿ20 ಕ್ರಿಕೆಟ್​ನಲ್ಲಿ ಅತೀ ವೇಗದ ಶತಕ ಸಿಡಿಸಿದ ಬ್ಯಾಟರ್ ಎನಿಸಿಕೊಂಡಿದ್ದಾರೆ. ಇದಕ್ಕೂ ಮುನ್ನ ಈ ದಾಖಲೆ 35 ಎಸೆತಗಳಲ್ಲಿ ಶತಕ ಸಿಡಿಸಿದ್ದ ರೋಹಿತ್ ಶರ್ಮಾ ಹಾಗೂ ಡೇವಿಡ್ ಮಿಲ್ಲರ್ ಹೆಸರಿನಲ್ಲಿತ್ತು.

3 / 10
3- ಅತೀ ವೇಗದ ಅರ್ಧಶತಕ: ಈ ಪಂದ್ಯದಲ್ಲಿ ದೀಪೇಂದ್ರ ಸಿಂಗ್ ಕೇವಲ 9 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ್ದರು. ಇದರೊಂದಿಗೆ ಟಿ20 ಕ್ರಿಕೆಟ್​ನಲ್ಲಿ ಅತೀ ವೇಗದ ಅರ್ಧಶತಕ ಬಾರಿಸಿದ ದಾಖಲೆ ನೇಪಾಳಿ ಕ್ರಿಕೆಟಿಗನ ಹೆಸರಿಗೆ ಸೇರ್ಪಡೆಯಾಯಿತು. ಇದಕ್ಕೂ ಮುನ್ನ ಈ ದಾಖಲೆ ಯುವರಾಜ್ ಸಿಂಗ್ ಹೆಸರಿನಲ್ಲಿತ್ತು. ಇಂಗ್ಲೆಂಡ್ ವಿರುದ್ಧ ಯುವಿ 12 ಎಸೆತಗಳಲ್ಲಿ ಹಾಫ್ ಸೆಂಚುರಿ ಸಿಡಿಸಿ ದಾಖಲೆ ಬರೆದಿದ್ದರು.

4 / 10
4- ಅತ್ಯಧಿಕ ಸ್ಟ್ರೈಕ್ ರೇಟ್: ಈ ಪಂದ್ಯದಲ್ಲಿ ದೀಪೇಂದ್ರ ಸಿಂಗ್ ಕೇವಲ 10 ಎಸೆತಗಳಲ್ಲಿ 52 ರನ್ ಚಚ್ಚಿದ್ದರು. ಅಂದರೆ 520.00 ರ ಸ್ಟ್ರೈಕ್ ರೇಟ್​ನಲ್ಲಿ ದೀಪೇಂದ್ರ ಬ್ಯಾಟ್ ಬೀಸಿದ್ದರು. ಇದರೊಂದಿಗೆ ಟಿ20 ಕ್ರಿಕೆಟ್​ನಲ್ಲಿ ಅತ್ಯಧಿಕ ಸ್ಟ್ರೈಕ್​ ರೇಟ್​ನಲ್ಲಿ ರನ್ ಕಲೆಹಾಕಿದ ವಿಶ್ವ ದಾಖಲೆ ನೇಪಾಳಿ ಕ್ರಿಕೆಟಿಗನ ಪಾಲಾಯಿತು.

5 / 10
5- ಬೃಹತ್ ಅಂತರದ ಗೆಲುವು: ಈ ಪಂದ್ಯದಲ್ಲಿ ನೇಪಾಳ ತಂಡ ನೀಡಿದ 314 ರನ್​ಗಳ ಟಾರ್ಗೆಟ್ ಅನ್ನು ಬೆನ್ನತ್ತಿದ ಮಂಗೋಲಿಯಾ ಕೇವಲ 41 ರನ್​ಗಳಿಗೆ ಆಲೌಟ್ ಆಗಿದೆ. ಇದರೊಂದಿಗೆ ನೇಪಾಳ ತಂಡ 271 ರನ್​ಗಳ ಭರ್ಜರಿ ಜಯ ಸಾಧಿಸಿದೆ. ಇದು ಟಿ20 ಕ್ರಿಕೆಟ್​ನಲ್ಲಿ ಮೂಡಿಬಂದ ಬೃಹತ್ ಅಂತರದ ಗೆಲುವಾಗಿದೆ. ಟರ್ಕಿ ವಿರುದ್ಧ ಜೆಕ್ ಗಣರಾಜ್ಯದ 257 ರನ್​ಗಳ ಅಂತರದಿಂದ ಜಯ ಸಾಧಿಸಿದ್ದು ಇದುವರೆಗಿನ ದಾಖಲೆಯಾಗಿತ್ತು.

6 / 10
6- ಅತೀ ಹೆಚ್ಚು ಸಿಕ್ಸರ್​ಗಳು: ಈ ಪಂದ್ಯದಲ್ಲಿ ನೇಪಾಳ ಬ್ಯಾಟರ್​ಗಳು ಒಟ್ಟು 26 ಸಿಕ್ಸ್​ಗಳನ್ನು ಸಿಡಿಸಿದ್ದರು. ಇದರೊಂದಿಗೆ ಟಿ20 ಇನಿಂಗ್ಸ್​ನಲ್ಲಿ ಅತ್ಯಧಿಕ ಸಿಕ್ಸ್ ಬಾರಿಸಿದ ತಂಡ ಹೆಗ್ಗಳಿಕೆಯು ನೇಪಾಳ ಪಾಲಾಗಿದೆ. ಈ ಮೂಲಕ 2019ರಲ್ಲಿ ಐರ್ಲೆಂಡ್ ವಿರುದ್ಧ ಅಫ್ಘಾನಿಸ್ತಾನ್ ಬಾರಿಸಿದ್ದ 22 ಸಿಕ್ಸ್​ಗಳ ದಾಖಲೆಯನ್ನು ನೇಪಾಳ ತಂಡ ಮುರಿದಿದೆ.

7 / 10
7- ಶತಕ ಸಿಡಿಸಿದ 2ನೇ ಕಿರಿಯ ಬ್ಯಾಟರ್: ಈ ಪಂದ್ಯದಲ್ಲಿ 34 ಎಸೆತಗಳಲ್ಲಿ ಕುಶಾಲ್ ಮಲ್ಲ ಶತಕ ಪೂರೈಸುತ್ತಿದ್ದಂತೆ ಟಿ20 ಕ್ರಿಕೆಟ್​ನಲ್ಲಿ ಸೆಂಚುರಿ ಸಿಡಿಸಿದ 2ನೇ ಕಿರಿಯ ಬ್ಯಾಟರ್ ಎನಿಸಿಕೊಂಡಿದ್ದಾರೆ. 19 ವರ್ಷ ಮತ್ತು 206 ದಿನಗಳಲ್ಲಿ ಕುಶಾಲ್ ಈ ಸಾಧನೆ ಮಾಡಿದ್ದಾರೆ. ಇನ್ನು ಟಿ20 ಕ್ರಿಕೆಟ್​ನಲ್ಲಿ ಶತಕ ಸಿಡಿಸಿದ ಅತ್ಯಂತ ಕಿರಿಯ ಬ್ಯಾಟರ್ ಎಂಬ ದಾಖಲೆ ಫ್ರಾನ್ಸ್​ನ ಗುಸ್ತಾವ್ ಮೆಕಿಯಾನ್ ಹೆಸರಿನಲ್ಲಿದೆ. 18 ವರ್ಷ ಮತ್ತು 282 ದಿನಗಳಲ್ಲಿ ಟಿ20 ಶತಕ ಸಿಡಿಸಿ ಗುಸ್ತಾವ್ ಈ ಸಾಧನೆ ಮಾಡಿದ್ದಾರೆ.

8 / 10
8- ಹೆಚ್ಚುವರಿ ರನ್‌ಗಳು (56%): ಈ ಪಂದ್ಯದಲ್ಲಿ ಮಂಗೋಲಿಯಾ ತಂಡ 41 ರನ್​ಗಳಿಗೆ ಆಲೌಟ್ ಆಗಿತ್ತು. ಆದರೆ ಇದರಲ್ಲಿ ಮಂಗೋಲಿಯಾ ಬ್ಯಾಟರ್​ಗಳು ಕಲೆಹಾಕಿರುವುದು ಕೇವಲ 18 ರನ್​ಗಳು ಮಾತ್ರ. ಇನ್ನುಳಿದ 23 ರನ್​ಗಳನ್ನು ನೇಪಾಳ ಬೌಲರ್​ಗಳು ಎಕ್ಸ್​ಟ್ರಾ ರೂಪದಲ್ಲಿ ನೀಡಿದ್ದರು. ಇದು ಕೂಡ ದಾಖಲೆಯಾಗಿದೆ.

9 / 10
9- ಏಷ್ಯನ್ ಗೇಮ್ಸ್‌ನಲ್ಲಿ ಶತಕ: ಏಷ್ಯನ್ ಗೇಮ್ಸ್​ನಲ್ಲಿ ಮೊದಲ ಶತಕ ಸಿಡಿಸಿದ ದಾಖಲೆ ಕೂಡ ನೇಪಾಳ ತಂಡದ ಕುಶಾಲ್ ಮಲ್ಲ ಹೆಸರಿಗೆ ಸೇರ್ಪಡೆಯಾಗಿದೆ. ಈ ಪಂದ್ಯದಲ್ಲಿ ಕುಶಾಲ್ 50 ಎಸೆತಗಳಲ್ಲಿ 12 ಸಿಕ್ಸ್ ಹಾಗೂ 8 ಫೋರ್​ಗಳೊಂದಿಗೆ ಅಜೇಯ 137 ರನ್ ಬಾರಿಸಿದ್ದಾರೆ.

10 / 10
Follow us