ರೋಹಿತ್ ಶರ್ಮಾ ಸ್ಫೋಟಕ ಸೆಂಚುರಿ: 183 ಎಸೆತಗಳಲ್ಲಿ ಪಂದ್ಯ ಮುಗಿಸಿದ ಮುಂಬೈ

Vijay Hazare Trophy 2025: ರೋಹಿತ್ ಶರ್ಮಾ ವಿಜಯ ಹಝಾರೆ ಟೂರ್ನಿಯಲ್ಲಿ ಕೊನೆಯ ಬಾರಿ ಕಾಣಿಸಿಕೊಂಡಿದ್ದು 2019 ರಲ್ಲಿ. ಮುಂಬೈ ಪರ ಎರಡು ಮ್ಯಾಚ್​ಗಳಲ್ಲಿ ಕಣಕ್ಕಿಳಿದಿದ್ದ ಹಿಟ್​ಮ್ಯಾನ್ ಒಟ್ಟು 50 ರನ್​ ಕಲೆಹಾಕಿದ್ದರು. ಇದೀಗ 6 ವರ್ಷಗಳ ಬಳಿಕ ದೇಶೀಯ ಅಂಗಳದಲ್ಲಿ ಕಣಕ್ಕಿಳಿದಿರುವ ರೋಹಿತ್ ಶರ್ಮಾ ಮೊದಲ ಪಂದ್ಯದಲ್ಲೇ ಭರ್ಜರಿ ಸೆಂಚುರಿ ಸಿಡಿಸಿದ್ದಾರೆ.

ರೋಹಿತ್ ಶರ್ಮಾ ಸ್ಫೋಟಕ ಸೆಂಚುರಿ: 183 ಎಸೆತಗಳಲ್ಲಿ ಪಂದ್ಯ ಮುಗಿಸಿದ ಮುಂಬೈ
Rohit Sharma

Updated on: Dec 24, 2025 | 3:25 PM

ಜೈಪುರದ ಸವಾಯಿ ಮಾನ್​ಸಿಂಗ್ ಸ್ಟೇಡಿಯಂನಲ್ಲಿ ನಡೆದ ವಿಜಯ ಹಝಾರೆ ಟೂರ್ನಿಯ ಮೊದಲ ಪಂದ್ಯದಲ್ಲಿ ಮುಂಬೈ ತಂಡ ಭರ್ಜರಿ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಸಿಕ್ಕಿಂ ತಂಡವು ಬ್ಯಾಟಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಸಿಕ್ಕಿಂ ಪರ ವಿಕೆಟ್ ಕೀಪರ್ ಬ್ಯಾಟರ್ ಆಶಿಶ್ ಥಾಪಾ 79 ರನ್​ಗಳ ಇನಿಂಗ್ಸ್ ಆಡಿದ್ದರು. ಈ ಅರ್ಧಶತಕದ ನೆರವಿನೊಂದಿಗೆ ಸಿಕ್ಕಿಂ ತಂಡ 50 ಓವರ್​ಗಳಲ್ಲಿ 7 ವಿಕೆಟ್ ಕಳೆದುಕೊಂಡು 236 ರನ್​ ಕಲೆಹಾಕಿತು.

ರೋಹಿತ್ ಶರ್ಮಾ ಸ್ಫೋಟಕ ಶತಕ:

237 ರನ್​ಗಳ ಸುಲಭ ಗುರಿ ಪಡೆದ ಮುಂಬೈ ಪರ ಆರಂಭಿಕನಾಗಿ ಕಣಕ್ಕಿಳಿದ ರೋಹಿತ್ ಶರ್ಮಾ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿದರು. ಆರಂಭದಿಂದಲೇ ಬಿರುಸಿನ ಬ್ಯಾಟಿಂಗ್​ಗೆ ಒತ್ತು ನೀಡಿದ ಹಿಟ್​ಮ್ಯಾನ್ ಸಿಕ್ಕಿಂ  ಬೌಲರ್​ಗಳನ್ನು ಮನಸೋ ಇಚ್ಛೆ ದಂಡಿಸಿದರು. ಈ ಭರ್ಜರಿ ಬ್ಯಾಟಿಂಗ್​ನೊಂದಿಗೆ ಕೇವಲ 62 ಎಸೆತಗಳಲ್ಲಿ ಶತಕ ಪೂರೈಸಿದರು.

ಈ ಶತಕದ ಬಳಿಕ ಕೂಡ ಹೊಡಿಬಡಿ ಆಟ ಮುಂದುವರೆಸಿದ ಹಿಟ್​ಮ್ಯಾನ್ 9 ಭರ್ಜರಿ ಸಿಕ್ಸ್ ಹಾಗೂ 18 ಫೋರ್​ಗಳೊಂದಿಗೆ 94 ಎಸೆತಗಳಲ್ಲಿ 155 ರನ್ ಬಾರಿಸಿದರು. ಈ ಮೂಲಕ ಮುಂಬೈ ತಂಡವು 30.3 ಓವರ್​ಗಳಲ್ಲಿ 237 ರನ್​ಗಳಿಸಿ 8 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದೆ.

ಮುಂಬೈ (ಪ್ಲೇಯಿಂಗ್ XI): ರೋಹಿತ್ ಶರ್ಮಾ, ಅಂಗ್ಕ್ರಿಶ್ ರಘುವಂಶಿ, ಸರ್ಫರಾಝ್ ಖಾನ್, ಸಿದ್ಧೇಶ್ ಲಾಡ್, ಮುಶೀರ್ ಖಾನ್, ಹಾರ್ದಿಕ್ ತಮೋರ್ (ವಿಕೆಟ್ ಕೀಪರ್), ಶಮ್ಸ್ ಮುಲಾನಿ, ತನುಷ್ ಕೋಟ್ಯಾನ್, ಶಾರ್ದೂಲ್ ಠಾಕೂರ್ (ನಾಯಕ), ತುಷಾರ್ ದೇಶಪಾಂಡೆ, ಸಿಲ್ವೆಸ್ಟರ್ ಡಿಸೋಝ.

ಇದನ್ನೂ ಓದಿ: ಬರೋಬ್ಬರಿ 15 ಸಿಕ್ಸ್… ವಿಶ್ವ ದಾಖಲೆಯ ಶತಕ ಸಿಡಿಸಿದ ವೈಭವ್ ಸೂರ್ಯವಂಶಿ

ಸಿಕ್ಕಿಂ (ಪ್ಲೇಯಿಂಗ್ XI): ಲೀ ಯೋಂಗ್ ಲೆಪ್ಚಾ (ನಾಯಕ), ಆಶಿಶ್ ಥಾಪಾ (ವಿಕೆಟ್ ಕೀಪರ್), ಅಮಿತ್ ರಾಜೇರಾ, ರಾಬಿನ್ ಲಿಂಬೂ, ಗುರಿಂದರ್ ಸಿಂಗ್, ಕ್ರಾಂತಿ ಕುಮಾರ್, ಪಲ್ಜೋರ್ ತಮಾಂಗ್, ಅಂಕುರ್ ಮಲಿಕ್, ಕೆ ಸಾಯಿ ಸಾತ್ವಿಕ್, ಎಂಡಿ ಸಪ್ತುಲ್ಲಾ, ಅಭಿಷೇಕ್ ಶಾ.