ಸಕಿಬುಲ್ ಸಿಡಿಲಬ್ಬರದ ಸೆಂಚುರಿ: ಏಕದಿನ ಪಂದ್ಯಲ್ಲಿ ಗರಿಷ್ಠ ಸ್ಕೋರ್ ವಿಶ್ವ ದಾಖಲೆ
Vijay Hazare Trophy; ಏಕದಿನ ಕ್ರಿಕೆಟ್ನಲ್ಲಿ ಗರಿಷ್ಠ ಸ್ಕೋರ್ ಗಳಿಸಿದ ವಿಶ್ವ ದಾಖಲೆ ಬಿಹಾರ ತಂಡದ ಪಾಲಾಗಿದೆ. ಅದು ಕೂಡ ನಾಯಕ ಸಕಿಬುಲ್ ಗನಿ ಅವರ ಸಿಡಿಲಬ್ಬರದ ಶತಕದೊಂದಿಗೆ. ಈ ಸೆಂಚುರಿಯೊಂದಿಗೆ ಲಿಸ್ಟ್ ಎ ಪಂದ್ಯದಲ್ಲಿ ಅತೀ ವೇಗದ ಶತಕ ಬಾರಿಸಿದ ಹೆಗ್ಗಳಿಕೆಗೂ ಸಕಿಬುಲ್ ಗನಿ ಪಾತ್ರರಾಗಿದ್ದಾರೆ.

ರಾಂಚಿಯ ಜೆಎಸ್ಸಿಎ ಸ್ಟೇಡಿಯಂನಲ್ಲಿ ನಡೆಯುತ್ತಿರುವ ವಿಜಯ ಹಝಾರೆ ಟೂರ್ನಿಯ ಪ್ಲೇಟ್ ಪಂದ್ಯದಲ್ಲಿ ಬಿಹಾರ ತಂಡವು ಬರೋಬ್ಬರಿ 574 ರನ್ಗಳನ್ನು ಕಲೆಹಾಕಿದೆ. ಅರುಣಾಚಲ ವಿರುದ್ಧದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಬಿಹಾರ ಪರ ಆರಂಭಿಕನಾಗಿ ಕಣಕ್ಕಿಳಿದ ವೈಭವ್ ಸೂರ್ಯವಂಶಿ ಕೇವಲ 84 ಎಸೆತಗಳಲ್ಲಿ 15 ಸಿಕ್ಸ್ ಹಾಗೂ 16 ಫೋರ್ಗಳೊಂದಿಗೆ ಬರೋಬ್ಬರಿ 190 ರನ್ ಕಲೆಹಾಕಿದರು.
ಈ ಭರ್ಜರಿ ಶತಕದೊಂದಿಗೆ ವಿಸ್ಫೋಟಕ ಆರಂಭ ಪಡೆದ ಬಿಹಾರ ಪರ ಅಂತಿಮ ಹಂತದಲ್ಲಿ ನಾಯಕ ಸಕಿಬುಲ್ ಗನಿ ಅಬ್ಬರಿಸಿದರು. ಅಂತಿಮ 10 ಓವರ್ಗಳ ವೇಳೆ ಆರ್ಭಟಿಸಿದ ಸಕಿಬುಲ್ ಗನಿ ಕೇವಲ 32 ಎಸೆತಗಳಲ್ಲಿ ಸೆಂಚುರಿ ಪೂರೈಸಿದರು. ಈ ಮೂಲಕ ಲಿಸ್ಟ್ ಎ ಕ್ರಿಕೆಟ್ನಲ್ಲಿ ಭಾರತದ ಪರ ಅತೀ ಕಡಿಮೆ ಎಸೆತಗಳಲ್ಲಿ ಸೆಂಚುರಿ ಸಿಡಿಸಿದ ದಾಖಲೆ ನಿರ್ಮಿಸಿದರು.
ಸಕಿಬುಲ್ ಗನಿ ಭರ್ಜರಿ ದಾಖಲೆ:
ಕೇವಲ 32 ಎಸೆತಗಳಲ್ಲಿ ಸೆಂಚುರಿ ಚಚ್ಚುವ ಮೂಲಕ ಏಕದಿನ ಪಂದ್ಯದಲ್ಲಿ ಅತೀ ವೇಗವಾಗಿ ಸೆಂಚುರಿ ಸಿಡಿಸಿದ ಭಾರತೀಯ ಬ್ಯಾಟರ್ ಎನಿಸಿಕೊಂಡಿದ್ದಾರೆ. ಇದಕ್ಕೂ ಮುನ್ನ ಈ ದಾಖಲೆ ಅನ್ಮೋಲ್ ಪ್ರೀತ್ ಸಿಂಗ್ ಹೆಸರಿನಲ್ಲಿತ್ತು. 2024 ರಲ್ಲಿ ಪಂಜಾಬ್ ಬ್ಯಾಟರ್ ವಿಜಯ ಹಝಾರೆ ಟೂರ್ನಿಯಲ್ಲಿ ಕೇವಲ 35 ಎಸೆತಗಳಲ್ಲಿ ಸೆಂಚುರಿ ಸಿಡಿಸಿದ್ದರು. ಈ ಮೂಲಕ ಏಕದಿನ ಕ್ರಿಕೆಟ್ನಲ್ಲಿ ಅತೀ ವೇಗದ ಸೆಂಚುರಿ ಸಿಡಿಸಿದ ಭಾರತೀಯ ಬ್ಯಾಟರ್ ಎಂಬ ದಾಖಲೆ ನಿರ್ಮಿಸಿದ್ದರು.
ಇದೀಗ ಬಿಹಾರ ತಂಡದ ನಾಯಕ ಸಕಿಬುಲ್ ಗನಿ ಕೇವಲ 32 ಎಸೆತಗಳಲ್ಲಿ ಶತಕ ಬಾರಿಸಿ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಈ ಮೂಲಕ ಏಕದಿನ ಪಂದ್ಯದಲ್ಲಿ ಅತೀ ಕಡಿಮೆ ಎಸೆತಗಳಲ್ಲಿ ಸೆಂಚುರಿ ಸಿಡಿಸಿದ ಭಾರತೀಯ ಬ್ಯಾಟರ್ ಎನಿಸಿಕೊಂಡಿದ್ದಾರೆ.
ಬರೋಬ್ಬರಿ 574 ರನ್ಗಳು:
ಸಕಿಬುಲ್ ಗನಿ ಹಾಗೂ ವೈಭವ್ ಸೂರ್ಯವಂಶಿ ಬಾರಿಸಿದ ವಿಸ್ಫೋಟಕ ಸೆಂಚುರಿಗಳ ನೆರವಿನೊಂದಿಗೆ ಬಿಹಾರ ತಂಡವು 50 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು 574 ರನ್ ಕಲೆಹಾಕಿದೆ. ಈ ಮೂಲಕ ಬಿಹಾರ ತಂಡವು ಏಕದಿನ ಕ್ರಿಕೆಟ್ ಪಂದ್ಯದಲ್ಲಿ ಗರಿಷ್ಠ ಮೊತ್ತಗಳಿಸಿದ ವಿಶ್ವ ದಾಖಲೆ ದಾಖಲೆ ನಿರ್ಮಿಸಿದೆ.
ಅರುಣಾಚಲ ಪ್ರದೇಶ್ (ಪ್ಲೇಯಿಂಗ್ XI): ಕಮ್ಶಾ ಯಾಂಗ್ಫೋ (ನಾಯಕ), ಸೂರ್ಯಾಂಶ್ ಸಿಂಗ್, ಟೆಚಿ ನೇರಿ, ತಡಕಮಲ್ಲ ಮೋಹಿತ್, ನೀಲಂ ಓಬಿ, ನಬಮ್ ಟೆಂಪೋಲ್, ಆದಿತ್ಯ ವರ್ಮಾ, ಧೀರಜ್ ಆಂಟಿನ್, ಟೆಚಿ ಸಾನಿಯಾ, ಮಿಬೊಮ್ ಮೊಸು, ಟೆಚಿ ಡೋರಿಯಾ.
ಇದನ್ನೂ ಓದಿ: ಬರೋಬ್ಬರಿ 15 ಸಿಕ್ಸ್… ವಿಶ್ವ ದಾಖಲೆಯ ಶತಕ ಸಿಡಿಸಿದ ವೈಭವ್ ಸೂರ್ಯವಂಶಿ
ಬಿಹಾರ (ಪ್ಲೇಯಿಂಗ್ XI): ವೈಭವ್ ಸೂರ್ಯವಂಶಿ, ಸಕಿಬುಲ್ ಗನಿ (ನಾಯಕ), ಆಯುಷ್ ಲೋಹರುಕಾ (ವಿಕೆಟ್ ಕೀಪರ್), ಮಂಗಲ್ ಮಹರೂರ್, ಪಿಯೂಷ್ ಸಿಂಗ್, ಆಕಾಶ್ ರಾಜ್, ಬಿಪಿನ್ ಸೌರಭ್, ಸೂರಜ್ ಕಶ್ಯಪ್, ಹಿಮಾಂಶು ತಿವಾರಿ, ಸಬೀರ್ ಖಾನ್, ಬಾದಲ್ ಕನೌಜಿಯಾ.
