ನಾಯಕ ರೋಹಿತ್ ಶರ್ಮಾ (Rohit Sharma) ಅವರ ಭರ್ಜರಿ ಬ್ಯಾಟಿಂಗ್ ಜೊತೆ ಅಕ್ಷರ್ ಪಟೇಲ್ (Axar Patel) ಅವರ ಸ್ಪಿನ್ ಮೋಡಿಗೆ ಅಂತಿಮ ಮೂರನೇ ಟಿ20 ಪಂದ್ಯದಲ್ಲೂ ಮುಗ್ಗರಿಸಿದ ನ್ಯೂಜಿಲೆಂಡ್ (India vs New Zealand) ಭಾರೀ ಮುಖಭಂಗಕ್ಕೆ ಒಳಗಾಗಿದೆ. ಇತ್ತ ಬರೋಬ್ಬರಿ 73 ರನ್ಗಳ ಅಮೋಘ ಗೆಲುವು ಕಂಡಿರುವ ಟೀಮ್ ಇಂಡಿಯಾ (Team India) ಟಿ20 ವಿಶ್ವಕಪ್ನಲ್ಲಿ ಕಿವೀಸ್ ವಿರುದ್ಧ ಅನುಭವಿಸಿದ ಸೋಲಿಗೆ ಸೇಡಿ ತೀರಿಸಿಕೊಂಡಿದೆ. ಮೊದಲ ಬಾರಿಗೆ ಸಂಪೂರ್ಣ ನಾಯಕತ್ವದ ಜವಾಬ್ದಾರಿ ಹೊತ್ತ ರೋಹಿತ್ ಶರ್ಮಾ ಅವರಿಗೆ ಭರ್ಜರಿ ಯಶಸ್ಸು ಸಿಕ್ಕಿದೆ. ನಾಯಕನಾದ ಬಳಿಕ ಇವರು ನಡವಳಿಕೆಯಲ್ಲೂ ಬದಲಾವಣೆ ಆಗಿದೆ. ಆಟಗಾರರಿಗೆ ವಿಭಿನ್ನ ರೀತಿಯಲ್ಲಿ ಹುರಿದುಂಬಿಸುತ್ತಿದ್ದಾರೆ. ಇದು ಮೂರನೇ ಟಿ20 ಪಂದ್ಯದಲ್ಲೂ ಕಂಡುಬಂತು. ದೀಪಕ್ ಚಹಾರ್ (Deepak Chahar) ಸಿಕ್ಸ್ ಸಿಡಿಸಿದ ವೇಳೆ ಹಿಟ್ಮ್ಯಾನ್ ಇವರಿಗೆ ಸೆಲ್ಯೂಟ್ (Rohit Sharma Salutes) ಮಾಡಿ ಪ್ರಶಂಶಿಸಿದರು.
ಹೌದು, ಅಂತಿಮ ಹಂತದಲ್ಲಿ ಹರ್ಷಲ್ ಪಟೇಲ್ ಔಟ್ ಆದ ಬಳಿಕ ಕ್ರೀಸ್ಗೆ ಬಂದ ದೀಪಕ್ ಚಹಾರ್ ಸ್ಫೋಟಕ ಬ್ಯಾಟಿಂಗ್ ನಡೆಸಿದರು. ಕೇವಲ 8 ಎಸೆತಗಳಲ್ಲಿ 2 ಫೋರ್, 1 ಸಿಕ್ಸರ್ ಸಿಡಿಸಿ ಅಜೇಯ 21 ರನ್ ಚಚ್ಚಿದರು. ಅದರಲ್ಲೂ ಕೊನೇ 20ನೇ ಓವರ್ನಲ್ಲಿ ಇವರೊಬ್ಬರೇ ಬರೋಬ್ಬರಿ 19 ರನ್ ಬಾರಿಸಿದರು. 20ನೇ ಓವರ್ನ ಆ್ಯಡಂ ಮಿಲ್ನೆ ಅವರ ಮೊದಲ ಎರಡು ಎಸೆತದಲ್ಲಿ ಚಹಾರ್ ಚೆಂಡನ್ನು ಬೌಂಡರಿಗೆ ಅಟ್ಟಿದರು. ಮೂರನೇ ಎಸೆತದಲ್ಲಿ ಮತ್ತೆ ಎರಡು ರನ್ ಕಲೆಹಾಕಿದರು.
4ನೇ ಎಸೆತದಲ್ಲಿ ಚಹಾರ್ ಬ್ಯಾಟ್ನಿಂದ ಬೊಂಬಾಟ್ ಸಿಕ್ಸ್ ಒಂದು ಬಂತು. ಮಿಲ್ನೆ ಅವರ ಸ್ಲೋ ಶಾರ್ಟ್ ಬಾಲ್ ಅನ್ನು ಚೆನ್ನಾಗಿ ಅರಿತ ಚಹಾರ್ ಲಾಂಗ್ ಆನ್ನಲ್ಲಿ ಸಿಕ್ಸ್ ಸಿಡಿಸಿದರು. ಇದು ಬರೋಬ್ಬರಿ 95 ಮೀಟರ್ ಹೋಯಿತು. ಇದನ್ನು ಕಂಡು ಡಗೌಟ್ನಲ್ಲಿ ಕುಳಿತಿದ್ದ ನಾಯಕ ರೋಹಿತ್ ಶರ್ಮಾ ಅಚ್ಚರಿಗೊಂಡರು. ಅಲ್ಲಿಂದಲೇ ಚಹಾರ್ಗೆ ಒಂದು ಸೆಲ್ಯೂಟ್ ಹೊಡೆದರು. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭರ್ಜರಿ ವೈರಲ್ ಆಗುತ್ತಿದೆ.
— Simran (@CowCorner9) November 21, 2021
ಭಾರತ ರೋಹಿತ್ ಶರ್ಮಾ ಅವರ ನಾಯಕತ್ವದಲ್ಲಿ ಆಡಿರುವ ಮೊದಲ ಸರಣಿಯಲ್ಲಿ ಹ್ಯಾಟ್ರಿಕ್ ಗೆಲುವು ದಾಖಲಿಸಿ ಮಿಂಚಿತು. ರವಿವಾರ ನಡೆದ ಪಂದ್ಯದಲ್ಲಿ ರೋಹಿತ್ ಗಳಿಸಿದ ಅರ್ಧಶತಕ ಹಾಗೂ ಕೆಳ ಕ್ರಮಾಂಕದ ಬ್ಯಾಟರ್ಗಳ ಉಪಯುಕ್ತ ಕೊಡುಗೆಯ ನೆರವಿನಿಂದ ಭಾರತ 184 ರನ್ ಕಲೆಹಾಕಿತು. ಗೆಲ್ಲಲು 185 ರನ್ ಕಠಿಣ ಗುರಿ ಪಡೆದ ನ್ಯೂಜಿಲೆಂಡ್ 17.2 ಓವರ್ ಗಳಲ್ಲಿ 111 ರನ್ ಗಳಿಸಿ ಹೀನಾಯ ಸೋಲುಂಡಿತು. ಕಿವೀಸ್ ಆರಂಭಿಕ ಬ್ಯಾಟ್ಸ್ ಮನ್ ಮಾರ್ಟಿನ್ ಗಪ್ಟಿಲ್ (51, 36 ಎಸೆತ, 4 ಬೌಂಡರಿ, 4 ಸಿಕ್ಸರ್) ಸರ್ವಾಧಿಕ ಸ್ಕೋರ್ ಗಳಿಸಿದರು.
Rohit Sharma Record: ಕೊಹ್ಲಿ ದಾಖಲೆ ಉಡೀಸ್: ನಾಯಕನಾಗಿ ಮೊದಲ ಸರಣಿಯಲ್ಲೇ ರೋಹಿತ್ ಶರ್ಮಾ ಹಿಟ್
(Rohit Sharma saluted Deepak Chahar after hit 95m six in India vs New Zealand 3rd T20I Video Vira)