IND vs SL: ಟೀಮ್ ಇಂಡಿಯಾ ಮುಂದಿನ ಟಾರ್ಗೆಟ್ ಶ್ರೀಲಂಕಾ: ಲಖನೌ ತಲುಪಿದ ರೋಹಿತ್ ಶರ್ಮ ಪಡೆ

ರೋಹಿತ್ ಶರ್ಮಾ, ಇಶಾನ್ ಕಿಶನ್, ಸೂರ್ಯಕುಮಾರ್ ಯಾದವ್ ಸೇರಿದಂತೆ ವಿಂಡೀಸ್ 3ನೇ ಟಿ20ಯಲ್ಲಿ ಪಾಲ್ಗೊಂಡ ಬಹುತೇಕ ಆಟಗಾರರು ಶ್ರೀಲಂಕಾ ವಿರುದ್ಧದ ಮೊದಲ ಟಿ20ಗೆ ಈಡನ್ ಗಾರ್ಡನ್ಸ್ ಬಯೋ ಬಬಲ್​ನಿಂದ ನೇರವಾಗಿ ಲಖನೌಗೆ ತಲುಪಿದ್ದಾರೆ.

IND vs SL: ಟೀಮ್ ಇಂಡಿಯಾ ಮುಂದಿನ ಟಾರ್ಗೆಟ್ ಶ್ರೀಲಂಕಾ: ಲಖನೌ ತಲುಪಿದ ರೋಹಿತ್ ಶರ್ಮ ಪಡೆ
Team India in Lucknow
Edited By:

Updated on: Feb 22, 2022 | 9:48 AM

ತವರಿನಲ್ಲಿ ಜಯದ ಅಲೆಯಲ್ಲಿ ತೇಲಾಡುತ್ತಿರುವ ಭಾರತ ಕ್ರಿಕೆಟ್ ತಂಡ (Indian Cricket Team) ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಮತ್ತು ಟಿ20 ಸರಣಿಯನ್ನು ವಶಪಡಿಸಿಕೊಂಡ ಬೆನ್ನಲ್ಲೇ ಇದೀಗ ಮುಂದಿನ ಹೋರಾಟಕ್ಕೆ ಸಜ್ಜಾಗುತ್ತಿದೆ. ರೋಹಿತ್ ಶರ್ಮಾ (Rohit Sharma) ಪಡೆ ಶ್ರೀಲಂಕಾ ವಿರುದ್ಧದ ಟಿ20 ಸರಣಿಗಾಗಿ ಲಖನೌಗೆ ಬಂದಿಳಿದಿದೆ. ಫೆಬ್ರವರಿ 24 ರಂದು ಅಟಲ್ ಬಿಹಾರಿ ವಾಜಪೇಯಿ ಸ್ಟೇಡಿಯಂನಲ್ಲಿ ಮೊದಲ ಟಿ20 ಪಂದ್ಯ ಆಡುವ ಮೂಲಕ ಸರಣಿಗೆ ಚಾಲನೆ ಸಿಗಲಿದೆ. ರೋಹಿತ್ ಶರ್ಮಾ, ಇಶಾನ್ ಕಿಶನ್, ಸೂರ್ಯಕುಮಾರ್ ಯಾದವ್, ಯುಜ್ವೇಂದ್ರ ಚಹಲ್ ಸೇರಿದಂತೆ ವಿಂಡೀಸ್ 3ನೇ ಟಿ20ಯಲ್ಲಿ ಪಾಲ್ಗೊಂಡ ಬಹುತೇಕ ಆಟಗಾರರು ಈಡನ್ ಗಾರ್ಡನ್ಸ್ ಬಯೋ ಬಬಲ್​ನಿಂದ ನೇರವಾಗಿ ಲಖನೌಗೆ ತಲುಪಿದ್ದಾರೆ. ಸಂಜು ಸ್ಯಾಮ್ಸನ್, ರವೀಂದ್ರ ಜಡೇಜಾ ಇವರಿಗೂ ಮುನ್ನವೇ ಇಲ್ಲಿದೆ ತಲುಪಿದ್ದು ಕ್ವಾರಂಟೈನ್​ನಲ್ಲಿದ್ದಾರೆ. ಟೀಮ್ ಇಂಡಿಯಾ ಆಟಗಾರರು ಲಖನೌಗೆ ಬಂದಿಳಿದಿರುವ ಬಗ್ಗೆ ಬಿಸಿಸಿಐ (BCCI) ತನ್ನ ಟ್ವಿಟ್ಟರ್ ಖಾತೆಯಲ್ಲಿ ವಿಡಿಯೋ ಒಂದನ್ನು ಹಂಚಿಕೊಂಡಿದೆ.

 

ಕೊಹ್ಲಿ-ಪಂತ್ ಅಲಭ್ಯ:

ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಎರಡು ಟಿ20 ಸರಣಿಯಲ್ಲಿ ಆಡಿದ್ದ ಮಾಜಿ ನಾಯಕ ವಿರಾಟ್ ಕೊಹ್ಲಿ ಮತ್ತು ವಿಕೆಟ್ ಕೀಪರ್ ಬ್ಯಾಟ್ಸ್​ಮನ್ ರಿಷಭ್ ಪಂತ್ ಮೂರನೇ ಟಿ20 ಯಿಂದ ಹಿಂದೆ ಸರಿದಿದ್ದರು. ಸತತವಾಗಿ ಕ್ರಿಕೆಟ್ ಆಡುತ್ತಿರುವ ಹಿನ್ನೆಲೆಯಲ್ಲಿ ಇವರಿಗೆ ಬಿಸಿಸಿಐ ವಿಶ್ರಾಂತಿ ನೀಡಿದ್ದು, ಶ್ರೀಲಂಕಾ ವಿರುದ್ಧದ ಟಿ20 ಸರಣಿಗೂ ಅಲಭ್ಯರಾಗಿದ್ದಾರೆ. ಹೀಗಾಗಿ ಇವರು ಬಯೋ ಬಬಲ್ ತೊರೆದಿದ್ದಾರೆ.

ದೀಪಕ್ ಚಹರ್ ಅನುಮಾನ:

ಭಾನುವಾರ ನಡೆದ ವಿಂಡೀಸ್ ವಿರುದ್ಧದ ಅಂತಿಮ ಮೂರನೇ ಟಿ20 ಪಂದ್ಯದಲ್ಲಿ ಟೀಮ್ ಇಂಡಿಯಾದ ಪ್ರಮುಖ ಸ್ಟಾರ್ ಬೌಲರ್ ದೀಪಕ್ ಚಹರ್ ಇಂಜುರಿಗೆ ತುತ್ತಾಗಿದ್ದು, ಲಂಕಾ ಪ್ರವಾಸದಿಂದ ಹೊರಗುಳಿಯುವ ಸಾಧ್ಯತೆ ಇದೆ ಎನ್ನಲಾಗಿದೆ. ಬೌಲಿಂಗ್ ಮಾಡಲು ರನ್ ಅಪ್ ವೇಳೆ ಇವರು ಸ್ನಾಯು ಸೆಳೆತಕ್ಕೊಳಗಾಗಿ ಗಾಯಗೊಂಡರು. ಈ ವೇಳೆ ತಕ್ಷಣವೇ ಫಿಸಿಯೋ ಬಂದು ನೋಡಿ ಅವರನ್ನ ಪೆವಿಲಿಯನ್‌ಗೆ ಕರೆದುಕೊಂಡು ಹೋದರು.

ಶ್ರೀಲಂಕಾ ವಿರುದ್ಧದ ಸರಣಿ ಯಾವಾಗ:

ಶ್ರೀಲಂಕಾ ಭಾರತ ಪ್ರವಾಸವನ್ನು ಕೈಗೊಳ್ಳಲಿದ್ದು ಮೂರು ಪಂದ್ಯಗಳ ಟಿ20 ಸರಣಿ ಹಾಗೂ 2 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಟೀಮ್ ಇಂಡಿಯಾ ವಿರುದ್ಧ ಸೆಣಸಾಟ ನಡೆಸಲಿದೆ. ಮೊದಲನೇ ಟಿ20 ಪಂದ್ಯ ಫೆಬ್ರವರಿ 24ರಂದು ಸಂಜೆ 7ಕ್ಕೆ ಲಕ್ನೋದಲ್ಲಿ ಆಯೋಜಿಸಲಾಗಿದೆ. ದ್ವಿತೀಯ ಟಿ20 ಫೆಬ್ರವರಿ 26ರಂದು ಧರ್ಮಶಾಲಾದಲ್ಲಿ ಮತ್ತು ಅಂತಿಮ ಮೂರನೇ ಟಿ20 ಪಂದ್ಯ ಫೆಬ್ರವರಿ 27ರಂದು ಇದೇ ಧರ್ಮಶಾಲಾದ ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಶನ್ ಕ್ರೀಡಾಂಗಣದಲ್ಲಿ ಏರ್ಪಡಿಸಲಾಗಿದೆ. ಮೊದಲ ಟೆಸ್ಟ್ ಪಂದ್ಯ ಮೊಹಾಲಿಯಲ್ಲಿ ಮಾರ್ಚ್ 4ಕ್ಕೆ ಶುರುವಾಗಲಿದೆ. ಎರಡನೇಯದು ಡೇ ನೈಟ್ ಟೆಸ್ಟ್ ಪಂದ್ಯವಾಗಿದ್ದು, ಮಾರ್ಚ್​ 12 ರಿಂದ ಬೆಂಗಳೂರಿನಲ್ಲಿ ಆಯೋಜಿಸಲಾಗಿದೆ.

ಟಿ20 ಸರಣಿಗೆ ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ರುತುರಾಜ್ ಗಾಯಕ್ವಾಡ್, ಇಶಾನ್ ಕಿಶನ್, ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ವೆಂಕಟೇಶ್ ಅಯ್ಯರ್, ದೀಪಕ್ ಹೂಡಾ, ಜಸ್ಪ್ರೀತ್ ಬುಮ್ರಾ, ಭುವನೇಶ್ವರ್ ಕುಮಾರ್, ದೀಪಕ್ ಚಾಹರ್, ಹರ್ಷಲ್ ಪಟೇಲ್, ಮೊಹಮ್ಮದ್ ಸಿರಾಜ್, ಸಂಜು ಸ್ಯಾಮ್ಸನ್, ರವೀಂದ್ರ ಜಡೇಜಾ, ಯುಜ್ವೇಂದ್ರ ಚಹಾಲ್, ರವಿ ಬಿಷ್ಣೋಯ್, ಕುಲ್ದೀಪ್ ಯಾದವ್ ಮತ್ತು ಅವೇಶ್ ಖಾನ್.

ಟಿ20 ಸರಣಿಗೆ ಶ್ರೀಲಂಕಾ ತಂಡ: ದಸೂನ್‌ ಶನಕ (ನಾಯಕ), ಪಥುಮ್ ನಿಸಾಂಕ ಕುಸಾಲ್‌ ಮೆಂಡಿಸ್‌, ಚರಿತಾ ಅಸಲಂಕಾ (ಉಪ ನಾಯಕ), ದಿನೆಶ್‌ ಚಂಡಿಮಾಲ್‌, ದನುಷ್ಕ ಗುಣತಿಲಕೆ, ಕಮಿಲ್‌ ಮಿಶ್ರಾ, ಜನಿಥ್‌ ಲಿಯಾಂಗೆ, ವಾನಿಂದು ಹಸರಂಗ, ಚಮಿಕಾ ಕರುಣರತ್ನೆ, ದುಷ್ಮಾಂತ ಚಮೀರ, ಲಹಿರು ಕುಮಾರ, ಬಿನುರಾ ಫೆರ್ನಾಂಡೊ, ಶಿರನ್ ಫೆರ್ನಾಂಡೊ, ಮಹೀಶ ತೀಕ್ಷಣ, ಜೆಫ್ರೆ ವ್ಯಾಂಡೆರ್ಸೆ, ಪ್ರವೀಣ್‌ ಜಯವಿಕ್ರಮ.

Rahul Dravid: ಸಾಹ ಶಾಕಿಂಗ್ ಹೇಳಿಕೆಗೆ ದ್ರಾವಿಡ್ ಕೂಲ್ ರಿಪ್ಲೇ: ಏನಂದ್ರು ನೋಡಿ