ಟಿ20 ವಿಶ್ವಕಪ್ ಮುಕ್ತಾಯದ ಬೆನ್ನಲ್ಲೇ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ಗೆ ರೋಹಿತ್ ಶರ್ಮಾ (Rohit Sharma) ನಿವೃತ್ತಿ ಘೋಷಿಸಿದ್ದರು. ಇದರ ಬೆನ್ನಲ್ಲೇ ಏಕದಿನ ತಂಡದ ನಾಯಕರಾಗಿ ರೋಹಿತ್ ಶರ್ಮಾ ಮುಂದುವರೆಯಲಿದ್ದಾರಾ ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿತ್ತು. ಈ ಪ್ರಶ್ನೆಗೆ ಇದೀಗ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅವರೇ ಉತ್ತರ ನೀಡಿದ್ದಾರೆ.
ಭಾರತ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿರುವ ರೋಹಿತ್ ಶರ್ಮಾ ಮುಂಬರುವ ಚಾಂಪಿಯನ್ಸ್ ಟ್ರೋಫಿಯಲ್ಲೂ ಟೀಮ್ ಇಂಡಿಯಾದ ನಾಯಕರಾಗಿ ಕಾಣಿಸಿಕೊಳ್ಳಲಿದ್ದಾರೆ. ಹಾಗೆಯೇ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ನಲ್ಲೂ ಭಾರತ ತಂಡ ರೋಹಿತ್ ನಾಯಕತ್ವದಲ್ಲಿ ಕಣಕ್ಕಿಳಿಯಲಿದೆ ಎಂದು ಜಯ್ ಶಾ ತಿಳಿಸಿದ್ದಾರೆ.
ಈ ಮೂಲಕ ಟೀಮ್ ಇಂಡಿಯಾ ಟಿ20 ತಂಡದ ನಾಯಕತ್ವ ಮಾತ್ರ ಬದಲಾಗಲಿದೆ. ಏಕದಿನ ಮತ್ತು ಟೆಸ್ಟ್ ತಂಡಗಳನ್ನು ರೋಹಿತ್ ಶರ್ಮಾ ಅವರೇ ಮುನ್ನಡೆಸಲಿದ್ದಾರೆ ಎಂಬ ಸ್ಪಷ್ಟ ಸಂದೇಶವನ್ನು ಜಯ್ ಶಾ ರವಾನಿಸಿದ್ದಾರೆ.
#WATCH | BCCI Secretary Jay Shah congratulates the Indian cricket team on winning the ICC T20 World Cup
He says, “…I am confident that under the captaincy of Rohit Sharma, we will win the WTC Final and the Champions Trophy…”
(Source: BCCI) pic.twitter.com/NEAvQwxz8Y
— ANI (@ANI) July 7, 2024
ಅಲ್ಲದೆ ಮುಂದಿನ ವರ್ಷ ಭಾರತ ಇನ್ನೆರಡು ಐಸಿಸಿ ಟೂರ್ನಿಗಳನ್ನು ಗೆಲ್ಲಲಿದೆ ಎಂದು ಜಯ್ ಶಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ಭಾರತ ಟಿ20 ತಂಡದ ಪ್ರದರ್ಶನವನ್ನು ಶ್ಲಾಘಿಸಿದ ಬಿಸಿಸಿಐ ಕಾರ್ಯದರ್ಶಿ, ನಾವು ಎರಡು ಬಾರಿ ಫೈನಲ್ ಆಡಿದ್ದೆವು. 2023 ರಲ್ಲಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಆಡಿದರೂ ಪ್ರಶಸ್ತಿ ಗೆಲ್ಲಲಾಗಲಿಲ್ಲ.
ಹಾಗೆಯೇ ಕಳೆದ ವರ್ಷ ನವೆಂಬರ್ 23 ರಂದು ಏಕದಿನ ವಿಶ್ವಕಪ್ನಲ್ಲಿ 10 ಪಂದ್ಯಗಳನ್ನು ಗೆದ್ದ ನಂತರ ನಾವು ಹೃದಯಗಳನ್ನು ಗೆದ್ದವು. ಆದರೆ ನಮಗೆ ಕಪ್ ಗೆಲ್ಲಲು ಸಾಧ್ಯವಾಗಲಿಲ್ಲ. ಈ ಬಾರಿ, ಜೂನ್ 29 ರಂದು ನಾವು ಹೃದಯಗಳನ್ನು ಗೆಲ್ಲುವುದರ ಜೊತೆ ಕಪ್ ಅನ್ನು ಸಹ ಗೆದ್ದಿದ್ದೇವೆ. ಬಾರ್ಬಡೋಸ್‌ನಲ್ಲಿ ಭಾರತದ ಧ್ವಜವನ್ನು ಹಾರಿಸುತ್ತೇವೆ ಎಂದು ನಾನು ರಾಜ್‌ಕೋಟ್‌ನಲ್ಲಿ ಹೇಳಿದ್ದೇನೆ. ಅದರಂತೆ ನಮ್ಮ ಕ್ಯಾಪ್ಟನ್ ಭಾರತದ ಧ್ವಜ ಹಾರಿಸಿದರು ಎಂದು ಜಯ್ ಶಾ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: Abhishek Sharma: ಧೋನಿಯ ಅನಗತ್ಯ ದಾಖಲೆ ಸರಿಗಟ್ಟಿದ ಅಭಿಷೇಕ್ ಶರ್ಮಾ
ಇದೇ ರೀತಿ ಐಸಿಸಿಯ ಮುಂಬರುವ ಟೂರ್ನಿಗಳಾದ WTC ಫೈನಲ್ ಮತ್ತು ಚಾಂಪಿಯನ್ಸ್ ಟ್ರೋಫಿಯಲ್ಲೂ ರೋಹಿತ್ ಶರ್ಮಾ ಅವರ ನಾಯಕತ್ವದಲ್ಲಿ ನಮ್ಮ ತಂಡವು ಚಾಂಪಿಯನ್ ಆಗಲಿದೆ ಎಂದು ನನಗೆ ಸಂಪೂರ್ಣ ವಿಶ್ವಾಸವಿದೆ ಎಂದು ಜಯ್ ಶಾ ಹೇಳಿದ್ದಾರೆ. ಈ ಮೂಲಕ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಹಾಗೂ ಚಾಂಪಿಯನ್ಸ್ ಟ್ರೋಫಿಯಲ್ಲಿ ಟೀಮ್ ಇಂಡಿಯಾ ರೋಹಿತ್ ಶರ್ಮಾ ನಾಯಕತ್ವದಲ್ಲಿ ಕಣಕ್ಕಿಳಿಯುವುದನ್ನು ಜಯ್ ಶಾ ಖಚಿತಪಡಿಸಿದ್ದಾರೆ.
Published On - 1:47 pm, Sun, 7 July 24