IND vs ZIM 2nd T20 Highlights: ಜಿಂಬಾಬ್ವೆ ವಿರುದ್ಧ 100 ರನ್​ಗಳಿಂದ ಗೆದ್ದ ಭಾರತ

|

Updated on:Jul 07, 2024 | 7:57 PM

India vs Zimbabwe 2nd T20I Live Score in Kannada: ಭಾರತ ಮತ್ತು ಜಿಂಬಾಬ್ವೆ ನಡುವೆ ಐದು ಪಂದ್ಯಗಳ ಟಿ20 ಸರಣಿ ನಡೆಯುತ್ತಿದೆ. ಈ ಸರಣಿಯ ಮೊದಲ ಪಂದ್ಯದಲ್ಲಿ ಭಾರತ ಸೋತಿತ್ತು. ಆ ಬಳಿಕ ಇಂದು ನಡೆದ ಎರಡನೇ ಪಂದ್ಯದಲ್ಲಿ ಟೀಂ ಇಂಡಿಯಾ ಭರ್ಜರಿ ಕಮ್ ಬ್ಯಾಕ್ ಮಾಡಿದೆ. ಅಭಿಷೇಕ್ ಶರ್ಮಾ, ರುತುರಾಜ್ ಗಾಯಕ್ವಾಡ್ ಮತ್ತು ರಿಂಕು ಸಿಂಗ್ ಅವರ ಅಮೋಘ ಇನ್ನಿಂಗ್ಸ್ ಆಧಾರದ ಮೇಲೆ ಭಾರತ 100 ರನ್​ಗಳಿಂದ ಪಂದ್ಯವನ್ನು ಗೆದ್ದುಕೊಂಡಿದೆ

IND vs ZIM 2nd T20 Highlights: ಜಿಂಬಾಬ್ವೆ ವಿರುದ್ಧ 100 ರನ್​ಗಳಿಂದ ಗೆದ್ದ ಭಾರತ
ಭಾರತ- ಜಿಂಬಾಬ್ವೆ

ಭಾರತ ಮತ್ತು ಜಿಂಬಾಬ್ವೆ ನಡುವೆ ಐದು ಪಂದ್ಯಗಳ ಟಿ20 ಸರಣಿ ನಡೆಯುತ್ತಿದೆ. ಈ ಸರಣಿಯ ಮೊದಲ ಪಂದ್ಯದಲ್ಲಿ ಭಾರತ ಸೋತಿತ್ತು. ಆ ಬಳಿಕ ಇಂದು ನಡೆದ ಎರಡನೇ ಪಂದ್ಯದಲ್ಲಿ ಟೀಂ ಇಂಡಿಯಾ ಭರ್ಜರಿ ಕಮ್ ಬ್ಯಾಕ್ ಮಾಡಿದೆ. ಅಭಿಷೇಕ್ ಶರ್ಮಾ, ರುತುರಾಜ್ ಗಾಯಕ್ವಾಡ್ ಮತ್ತು ರಿಂಕು ಸಿಂಗ್ ಅವರ ಅಮೋಘ ಇನ್ನಿಂಗ್ಸ್ ಆಧಾರದ ಮೇಲೆ ಭಾರತ 100 ರನ್​ಗಳಿಂದ ಪಂದ್ಯವನ್ನು ಗೆದ್ದುಕೊಂಡಿದೆ. ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ 20 ಓವರ್​ಗಳಲ್ಲಿ 2 ವಿಕೆಟ್ ನಷ್ಟಕ್ಕೆ 234 ರನ್ ಗಳಿಸಿ ಗೆಲುವಿಗೆ 235 ರನ್ ಗಳ ಸವಾಲನ್ನು ನೀಡಿತು. ಗುರಿ ಬೆನ್ನಟ್ಟಿದ ಜಿಂಬಾಬ್ವೆ ತಂಡ 134 ರನ್ ಗಳಿಸಲಷ್ಟೇ ಶಕ್ತವಾಯಿತು. ಈ ಗೆಲುವಿನೊಂದಿಗೆ ಭಾರತ ಸರಣಿಯಲ್ಲಿ 1-1 ರಿಂದ ಸಮಬಲಗೊಳಿಸಿತು.

LIVE NEWS & UPDATES

The liveblog has ended.
  • 07 Jul 2024 07:53 PM (IST)

    IND vs ZIM Live Score: ಭಾರತಕ್ಕೆ ಸುಲಭ ಗೆಲುವು

    ಟೀಂ ಇಂಡಿಯಾ 100 ರನ್‌ಗಳ ಜಯ ಸಾಧಿಸಿದೆ. ಮುಖೇಶ್ ಕುಮಾರ್ 19ನೇ ಓವರ್‌ನಲ್ಲಿ ಲ್ಯೂಕ್ ಜೊಂಗ್ವೆ (33) ಅವರ ಇನ್ನಿಂಗ್ಸ್ ಕೊನೆಗೊಳಿಸುವ ಮೂಲಕ ಜಿಂಬಾಬ್ವೆಯನ್ನು 134 ರನ್‌ಗಳಿಗೆ ಆಲೌಟ್ ಮಾಡಿದರು. ಮುಖೇಶ್ 3 ವಿಕೆಟ್ ಪಡೆದರು.

  • 07 Jul 2024 07:48 PM (IST)

    IND vs ZIM Live Score: ಒಂಬತ್ತನೇ ವಿಕೆಟ್ ಪತನ

    ತಮ್ಮ ಖೋಟಾದಲ್ಲಿ ಮೂರನೇ ವಿಕೆಟ್ ಪಡೆಯುವ ಮೂಲಕ ಅವೇಶ್ ಖಾನ್ ಜಿಂಬಾಬ್ವೆಗೆ 9ನೇ ಹೊಡೆತ ನೀಡಿದರು. ಮುಜರಬಾನಿ 2 ರನ್​ಗಳಿಗೆ ಇನ್ನಿಂಗ್ಸ್ ಮುಗಿಸಿದರು.

  • 07 Jul 2024 07:35 PM (IST)

    IND vs ZIM Live Score: ಜಿಂಬಾಬ್ವೆ 100 ರನ್

    ಜಿಂಬಾಬ್ವೆ ಸೋಲು ಖಚಿತ ಎನಿಸಿದರೂ ಲ್ಯೂಕ್ ಜೊಂಗ್ವೆ ಮತ್ತು ವೆಸ್ಲಿ ಮಾಧೆವೆರೆ ಗೆಲುವಿಗಾಗಿ ಹೋರಾಟ ನೀಡುತ್ತಿದ್ದಾರೆ. ಹೀಗಾಗಿ ತಂಡ 100 ರನ್‌ಗಳ ಗಡಿ ದಾಟಿದೆ.

  • 07 Jul 2024 07:21 PM (IST)

    IND vs ZIM Live Score: ಏಳನೇ ವಿಕೆಟ್

    12ನೇ ಓವರ್‌ನ ಮೊದಲ ಎಸೆತದಲ್ಲಿ ಜಿಂಬಾಬ್ವೆಗೆ ಏಳನೇ ಹೊಡೆತ ಬಿದ್ದಿತು. ಜುರೆಲ್ ಮಸಕಡ್ಜಾನನ್ನು ರನ್ ಔಟ್​ಗೆ ಬಲಿಯಾದರು. ಲ್ಯೂಕ್ ಜೊಂಗ್ವೆ ಒಂಬತ್ತನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬಂದಿದ್ದಾರೆ.

  • 07 Jul 2024 07:14 PM (IST)

    IND vs ZIM Live Score: ಆರನೇ ವಿಕೆಟ್ ಪತನ

    ಜಿಂಬಾಬ್ವೆಯ ಸ್ಥಿತಿ ಹದಗೆಟ್ಟಿದ್ದು ಮದಾಂಡೆ ಕೂಡ ಔಟಾಗಿದ್ದಾರೆ. ಲೆಗ್ ಸ್ಪಿನ್ನರ್ ರವಿ ಬಿಷ್ಣೋಯ್ ಅವರನ್ನು ಎಲ್ ಬಿಡಬ್ಲ್ಯೂ ಔಟ್ ಮಾಡಿದರು.

  • 07 Jul 2024 07:09 PM (IST)

    IND vs ZIM Live Score: ಐದನೇ ವಿಕೆಟ್

    ಜಿಂಬಾಬ್ವೆ ಐದನೇ ವಿಕೆಟ್ ಕಳೆದುಕೊಂಡಿದೆ. ವಾಷಿಂಗ್ಟನ್ ಸುಂದರ್ ಎಸೆದ ಎರಡನೇ ಓವರ್​ನಲ್ಲಿ ಜೋನಾಥನ್ ಕ್ಯಾಂಪ್ ಬೆಲ್ (10) ಬಿಗ್ ಶಾಟ್ ಆಡಲು ಯತ್ನಿಸಿ ಕ್ಯಾಚ್ ನೀಡಿದರು.

  • 07 Jul 2024 06:55 PM (IST)

    IND vs ZIM Live Score: ಒಂದೇ ಓವರ್​ನಲ್ಲಿ 2 ವಿಕೆಟ್

    ಅವೇಶ್ ಖಾನ್ ಒಂದೇ ಓವರ್​ನಲ್ಲಿ 2 ವಿಕೆಟ್ ಕಬಳಿಸುವ ಮೂಲಕ ಜಿಂಬಾಬ್ವೆಯನ್ನು ಸಂಕಷ್ಟಕ್ಕೆ ಸಿಲುಕಿಸಿದ್ದಾರೆ. ಅವೇಶ್, ಬೌನ್ಸರ್ ಮೂಲಕ ಜಿಂಬಾಬ್ವೆ ನಾಯಕ ಸಿಕಂದರ್ ರಜಾ ಅವರ ವಿಕೆಟ್ ಪಡೆದರು.

  • 07 Jul 2024 06:46 PM (IST)

    IND vs ZIM Live Score: ಮೂರನೇ ವಿಕೆಟ್ ಪತನ

    ಜಿಂಬಾಬ್ವೆ 4ನೇ ಓವರ್​ನಲ್ಲೇ ಮೂರನೇ ವಿಕೆಟ್ ಕಳೆದುಕೊಂಡಿತು. ನಾಲ್ಕನೇ ಓವರ್‌ನಲ್ಲಿ ಬಂದ ಅವೇಶ್ ಖಾನ್ ಎರಡನೇ ಎಸೆತದಲ್ಲಿಯೇ ಹೊಸ ಬ್ಯಾಟ್ಸ್‌ಮನ್ ಡಿಯೋನ್ ಮೈಯರ್ಸ್ ಅವರನ್ನು ಔಟ್ ಮಾಡಿದರು.

  • 07 Jul 2024 06:39 PM (IST)

    IND vs ZIM Live Score: ಎರಡನೇ ವಿಕೆಟ್ ಪತನ

    ಬ್ರಿಯಾನ್ ಬೆನೆಟ್ ಮೂರನೇ ಓವರ್‌ನಲ್ಲಿ ಮುಖೇಶ್ ಕುಮಾರ್ ಮೇಲೆ ಸತತ ಎರಡು ಸಿಕ್ಸರ್‌ಗಳನ್ನು ಬಾರಿಸಿದರು ಆದರೆ ಆ ನಂತರ ಕ್ಲೀನ್ ಬೌಲ್ಡ್ ಆದರು. ಜಿಂಬಾಬ್ವೆ ಎರಡನೇ ವಿಕೆಟ್ ಪತನಗೊಂಡಿದೆ.

  • 07 Jul 2024 06:38 PM (IST)

    IND vs ZIM Live Score: ಅಭಿಷೇಕ್ ದುಬಾರಿ ಓವರ್

    ಎರಡನೇ ಓವರ್‌ನಲ್ಲಿ ಬೌಲಿಂಗ್ ಮಾಡಲು ಬಂದ ಪಾರ್ಟ್‌ಟೈಮ್ ಸ್ಪಿನ್ನರ್ ಅಭಿಷೇಕ್ ಶರ್ಮಾ ಮೇಲೆ ಜಿಂಬಾಬ್ವೆ ಬ್ಯಾಟ್ಸ್‌ಮನ್‌ಗಳು 19 ರನ್ ಗಳಿಸಿದರು. ಬ್ರಿಯಾನ್ ಬೆನೆಟ್ ಓವರ್‌ನಲ್ಲಿ ಒಂದು ಸಿಕ್ಸರ್ ಮತ್ತು ಬೌಂಡರಿ ಬಾರಿಸಿದರು.

  • 07 Jul 2024 06:25 PM (IST)

    IND vs ZIM Live Score: ಮೊದಲ ವಿಕೆಟ್

    ಇನಿಂಗ್ಸ್‌ನ ಆರಂಭದಲ್ಲಿ ಜಿಂಬಾಬ್ವೆ ಮೊದಲ ಹಿನ್ನಡೆ ಅನುಭವಿಸಿದೆ. ಮುಖೇಶ್ ಕುಮಾರ್ ನಾಲ್ಕು ರನ್ ಗಳಿಸಿದ್ದ ಕಯಾ ಅವರನ್ನು ಔಟ್ ಮಾಡಿದರು. ಬೆನೆಟ್ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬಂದಿದ್ದಾರೆ. ಅವರಿಗೆ ಬೆಂಬಲವಾಗಿ ವೆಸ್ಲಿ ಮಾಧವೆರೆ ಕ್ರೀಸ್‌ನಲ್ಲಿದ್ದಾರೆ.

  • 07 Jul 2024 06:09 PM (IST)

    IND vs ZIM Live Score: 234 ರನ್ ಟಾರ್ಗೆಟ್

    ಟೀಂ ಇಂಡಿಯಾ 20 ಓವರ್‌ಗಳಲ್ಲಿ 234 ರನ್ ಗಳಿಸಿದೆ. ಕೊನೆಯ ಓವರ್​ನಲ್ಲಿ ರಿಂಕು ಸಿಂಗ್ ಸತತ 2 ಸಿಕ್ಸರ್ ಬಾರಿಸಿ ತಂಡವನ್ನು 234 ರನ್ ಗಳಿಗೆ ಕೊಂಡೊಯ್ದರು. ಇದು ಈ ಮೈದಾನದಲ್ಲಿ ಅಂತಾರಾಷ್ಟ್ರೀಯ ಟಿ20ಯಲ್ಲಿ ಗರಿಷ್ಠ ಸ್ಕೋರ್ ದಾಖಲಿಸಿದ ದಾಖಲೆಯಾಗಿದೆ. ಇದಕ್ಕೂ ಮುನ್ನ ಆಸ್ಟ್ರೇಲಿಯಾ 229 ರನ್ ಬಾರಿಸಿತ್ತು.

  • 07 Jul 2024 06:09 PM (IST)

    IND vs ZIM Live Score: ಭಾರತದ 200 ರನ್ ಪೂರ್ಣ

    ರಿಂಕು ಸಿಂಗ್ 19ನೇ ಓವರ್‌ನಲ್ಲಿ ಬ್ಲೆಸ್ಸಿಂಗ್ ಮುಜರಬಾನಿ ಮೇಲೆ 104 ಮೀಟರ್ ಉದ್ದದ ಸಿಕ್ಸರ್ ಬಾರಿಸಿದರು ಮತ್ತು ಇದರೊಂದಿಗೆ ಭಾರತ ತಂಡದ 200 ರನ್ ಕೂಡ ಪೂರ್ಣಗೊಂಡಿತು.

  • 07 Jul 2024 05:59 PM (IST)

    IND vs ZIM Live Score: ರುತುರಾಜ್ ಫಿಫ್ಟಿ

    ರುತುರಾಜ್ ಗಾಯಕ್ವಾಡ್ ಕೂಡ ಅರ್ಧಶತಕ ಪೂರೈಸಿದ್ದಾರೆ. 38 ಎಸೆತಗಳಲ್ಲಿ ಬೌಂಡರಿ ಸಹಿತ ಅರ್ಧಶತಕ ಪೂರೈಸಿದರು. ಇದು ಅವರ ಅಂತಾರಾಷ್ಟ್ರೀಯ ವೃತ್ತಿ ಬದುಕಿನ ನಾಲ್ಕನೇ ಅರ್ಧಶತಕವಾಗಿದೆ.

  • 07 Jul 2024 05:41 PM (IST)

    IND vs ZIM Live Score: ಅಭಿಷೇಕ್ ಶರ್ಮಾ ಬಿರುಸಿನ ಶತಕ

    ಅಭಿಷೇಕ್ ಶರ್ಮಾ ಬಿರುಸಿನ ಶತಕ ಬಾರಿಸಿದ್ದಾರೆ. ಅಭಿಷೇಕ್ 14ನೇ ಓವರ್ ನಲ್ಲಿ ಸತತ 3 ಸಿಕ್ಸರ್ ಬಾರಿಸುವ ಮೂಲಕ ಕೇವಲ 46 ಎಸೆತಗಳಲ್ಲಿ ಶತಕ ದಾಖಲಿಸಿದರು.

  • 07 Jul 2024 05:19 PM (IST)

    IND vs ZIM Live Score: ಅರ್ಧಶತಕ ಪೂರೈಸಿದ ಅಭಿಷೇಕ್

    ಅಭಿಷೇಕ್ ಶರ್ಮಾ ಕೇವಲ 33 ಎಸೆತಗಳಲ್ಲಿ ಮೊದಲ ಅರ್ಧಶತಕ ಪೂರೈಸಿದರು. 11ನೇ ಓವರ್‌ನಲ್ಲಿ ಅಭಿಷೇಕ್ ಡಿಯೋನ್ ಮೈಯರ್ಸ್ ಅವರ ಸತತ 5 ಎಸೆತಗಳಲ್ಲಿ 5 ಬೌಂಡರಿಗಳನ್ನು ಬಾರಿಸಿದರು, ಇದರಲ್ಲಿ 3 ಬೌಂಡರಿ ಮತ್ತು 2 ಸಿಕ್ಸರ್‌ಗಳು ಸೇರಿವೆ. ಇದರೊಂದಿಗೆ ಟೀಂ ಇಂಡಿಯಾ ಕೂಡ 100 ರನ್ ಗಳಿಸಿತು.

  • 07 Jul 2024 05:12 PM (IST)

    IND vs ZIM Live Score: ಅರ್ಧಶತಕದ ಜೊತೆಯಾಟ

    ಅಭಿಷೇಕ್ ಶರ್ಮಾ ಮತ್ತು ರಿತುರಾಜ್ ಗಾಯಕ್ವಾಡ್ ನಡುವಿನ ಅರ್ಧಶತಕದ ಜೊತೆಯಾಟ ಪೂರ್ಣಗೊಂಡಿದೆ. ಅಭಿಷೇಕ್, ಸಿಕಂದರ್ ಓವರ್​ನಲ್ಲಿ ಒಂದು ಬೌಂಡರಿ ಮತ್ತು ಸಿಕ್ಸರ್ ಬಾರಿಸಿದರು. ನಂತರದ ಓವರ್‌ನಲ್ಲಿ ಗಾಯಕ್ವಾಡ್ ಸತತ 2 ಬೌಂಡರಿಗಳನ್ನು ಬಾರಿಸಿದರು.

  • 07 Jul 2024 05:01 PM (IST)

    IND vs ZIM Live Score: ಪವರ್‌ಪ್ಲೇ ಮುಗಿದಿದೆ

    10 ರನ್ ಗಳಿಸುವಷ್ಟರಲ್ಲಿ ಒಂದು ವಿಕೆಟ್ ಕಳೆದುಕೊಂಡಿದ್ದ ಭಾರತ ತಂಡಕ್ಕೆ ಉತ್ತಮ ಜೊತೆಯಾಟದ ಅಗತ್ಯವಿತ್ತು. ಅಭಿಷೇಕ್ ಶರ್ಮಾ ಮತ್ತು ರಿತುರಾಜ್ ಗಾಯಕ್ವಾಡ್ ಭಾರತದ ಈ ಅಗತ್ಯವನ್ನು ಪೂರೈಸುತ್ತಿದ್ದಾರೆ. ಇಬ್ಬರ ನಡುವೆ ಉತ್ತಮ ಜೊತೆಯಾಟವಿದೆ. ಪವರ್‌ಪ್ಲೇ ಮುಗಿದಿದೆ. ಆರು ಓವರ್‌ಗಳ ನಂತರ ತಂಡದ ಸ್ಕೋರ್ 36/1.

  • 07 Jul 2024 04:53 PM (IST)

    IND vs ZIM Live Score: ಅಭಿಷೇಕ್ ದಾಳಿ

    ಅಭಿಷೇಕ್ ಶರ್ಮಾ ಮೂರನೇ ಓವರ್‌ನಲ್ಲಿ ಬ್ರಿಯಾನ್ ಬೆನೆಟ್ ಬೌಲಿಂಗ್​ನಲ್ಲಿ ಸತತ 2 ಬೌಂಡರಿಗಳನ್ನು ಬಾರಿಸಿದರು.

  • 07 Jul 2024 04:42 PM (IST)

    IND vs ZIM Live Score: ಗಿಲ್ ಔಟ್

    ಮುಜರಬಾನಿ ಭಾರತಕ್ಕೆ ಮೊದಲ ಹೊಡೆತ ನೀಡಿದ್ದು, ನಾಯಕ ಶುಭ್‌ಮನ್ ಗಿಲ್ ಅವರ ವಿಕೆಟ್ ಉರುಳಿಸಿದ್ದಾರೆ. ಗಿಲ್ ಕೇವಲ ಎರಡು ರನ್ ಗಳಿಸಲು ಸಾಧ್ಯವಾಯಿತು. ರುತುರಾಜ್ ಗಾಯಕ್ವಾಡ್ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬಂದಿದ್ದಾರೆ. ಅ

  • 07 Jul 2024 04:34 PM (IST)

    IND vs ZIM Live Score: ಸಿಕ್ಸರ್ ಸಿಡಿಸಿದ ಅಭಿಷೇಕ್

    ಟೀಂ ಇಂಡಿಯಾ ಇನ್ನಿಂಗ್ಸ್ ಆರಂಭವಾಗಿದ್ದು, ಕಳೆದ ಪಂದ್ಯದಲ್ಲಿ 0 ರನ್ ಗಳಿಸಿ ಔಟಾಗಿದ್ದ ಅಭಿಷೇಕ್ ಶರ್ಮಾ ಈ ಬಾರಿ ಮೊದಲ ಓವರ್ ನಲ್ಲೇ ಸಿಕ್ಸರ್ ಬಾರಿಸುವ ಮೂಲಕ ವೃತ್ತಿ ಜೀವನದ ಮೊದಲ ರನ್ ಗಳಿಸಿದ್ದಾರೆ.

  • 07 Jul 2024 04:19 PM (IST)

    IND vs ZIM Live Score: ಜಿಂಬಾಬ್ವೆ ತಂಡ

    ವೆಸ್ಲಿ ಮಾಧೆವೆರೆ, ಇನೋಸೆಂಟ್ ಕಯಾ, ಬ್ರಿಯಾನ್ ಬೆನೆಟ್, ಸಿಕಂದರ್ ರಜಾ (ನಾಯಕ), ಡಿಯೋನ್ ಮೈಯರ್ಸ್, ಜೊನಾಥನ್ ಕ್ಯಾಂಪ್‌ಬೆಲ್, ಕ್ಲೈವ್ ಮದಂಡೆ (ವಿಕೆ), ವೆಲ್ಲಿಂಗ್ಟನ್ ಮಸಕಡ್ಜಾ, ಲ್ಯೂಕ್ ಜೊಂಗ್ವೆ, ಬ್ಲೆಸ್ಸಿಂಗ್ ಮುಜರಬಾನಿ, ಟೆಂಡೈ ಚಟಾರಾ.

  • 07 Jul 2024 04:19 PM (IST)

    IND vs ZIM Live Score: ಭಾರತ ತಂಡ

    ಶುಭ್​ಮನ್ ಗಿಲ್ (ನಾಯಕ), ಅಭಿಷೇಕ್ ಶರ್ಮಾ, ರುತುರಾಜ್ ಗಾಯಕ್ವಾಡ್, ಸಾಯಿ ಸುದರ್ಶನ್, ರಿಯಾನ್ ಪರಾಗ್, ರಿಂಕು ಸಿಂಗ್, ಧ್ರುವ್ ಜುರೆಲ್ (ವಿಕೆಟ್ ಕೀಪರ್), ವಾಷಿಂಗ್ಟನ್ ಸುಂದರ್, ರವಿ ಬಿಷ್ಣೋಯ್, ಅವೇಶ್ ಖಾನ್, ಮುಖೇಶ್ ಕುಮಾರ್.

  • 07 Jul 2024 04:07 PM (IST)

    IND vs ZIM Live Score: ಟಾಸ್ ಗೆದ್ದ ಭಾರತ

    ಟಾಸ್ ಗೆದ್ದ ಟೀಂ ಇಂಡಿಯಾ ನಾಯಕ ಶುಭ್​ಮನ್ ಗಿಲ್ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದ್ದಾರೆ.

  • Published On - Jul 07,2024 4:06 PM

    Follow us
    ರಾಜಕಾಲುವೆ ಮುಚ್ಚಿರುವ ಕಾರಣ ಐದಾರು ಮನೆಗಳಿಗೆ ನುಗ್ಗಿದ ಮಳೆ ನೀರು
    ರಾಜಕಾಲುವೆ ಮುಚ್ಚಿರುವ ಕಾರಣ ಐದಾರು ಮನೆಗಳಿಗೆ ನುಗ್ಗಿದ ಮಳೆ ನೀರು
    ‘ಬಿಗ್​ಬಾಸ್ ಅನ್ನು ಹಾಳು ಮಾಡಲು ನಿಮ್ಮಪ್ಪನಾಣೆ ಸಾಧ್ಯವಿಲ್ಲ‘
    ‘ಬಿಗ್​ಬಾಸ್ ಅನ್ನು ಹಾಳು ಮಾಡಲು ನಿಮ್ಮಪ್ಪನಾಣೆ ಸಾಧ್ಯವಿಲ್ಲ‘
    ಸಿದ್ದರಾಮಯ್ಯ ಪಾರ್ವತಿ ಅವರನ್ನು ಮದುವೆ ಆಗಿದ್ದೇ ತಪ್ಪಾ? ಸಿಎಂ ಇಬ್ರಾಹಿಂ
    ಸಿದ್ದರಾಮಯ್ಯ ಪಾರ್ವತಿ ಅವರನ್ನು ಮದುವೆ ಆಗಿದ್ದೇ ತಪ್ಪಾ? ಸಿಎಂ ಇಬ್ರಾಹಿಂ
    ಮಹಾರಾಷ್ಟ್ರದ ದೇವಸ್ಥಾನದಲ್ಲಿ ಡೋಲು ಬಾರಿಸಿದ ಪ್ರಧಾನಿ ಮೋದಿ
    ಮಹಾರಾಷ್ಟ್ರದ ದೇವಸ್ಥಾನದಲ್ಲಿ ಡೋಲು ಬಾರಿಸಿದ ಪ್ರಧಾನಿ ಮೋದಿ
    ಮೈಸೂರು ದಸರಾದಲ್ಲಿ ಗಿಡ್ಡ ಕಾಲಿನ ಬಂಡೂರು ಕುರಿಯೇ ಆಕರ್ಷಣೆ
    ಮೈಸೂರು ದಸರಾದಲ್ಲಿ ಗಿಡ್ಡ ಕಾಲಿನ ಬಂಡೂರು ಕುರಿಯೇ ಆಕರ್ಷಣೆ
    ಲಾಯರ್ ಜಗದೀಶ್ ವಿಚಾರಣೆ ನಡೆಸುವ ಸುಳಿವು ಕೊಟ್ಟ ಕಿಚ್ಚ: ವಿಡಿಯೋ
    ಲಾಯರ್ ಜಗದೀಶ್ ವಿಚಾರಣೆ ನಡೆಸುವ ಸುಳಿವು ಕೊಟ್ಟ ಕಿಚ್ಚ: ವಿಡಿಯೋ
    ಪಿಡಿಒ, ಕಾರ್ಯದರ್ಶಿಗಳ ಹೋರಾಟಕ್ಕೆ ಬೆಂಬಲ ಘೋಷಿಸಿದ ಕುಮಾರಸ್ವಾಮಿ,ವಿಜಯೇಂದ್ರ
    ಪಿಡಿಒ, ಕಾರ್ಯದರ್ಶಿಗಳ ಹೋರಾಟಕ್ಕೆ ಬೆಂಬಲ ಘೋಷಿಸಿದ ಕುಮಾರಸ್ವಾಮಿ,ವಿಜಯೇಂದ್ರ
    ಶನಿವಾರ ಭಕ್ತರ ಪರಾಕಾಷ್ಠೆ-ತಿಮ್ಮಪ್ಪನ ದರ್ಶನಕ್ಕೆ ಕಾಯಬೇಕು 18 ಗಂಟೆ...
    ಶನಿವಾರ ಭಕ್ತರ ಪರಾಕಾಷ್ಠೆ-ತಿಮ್ಮಪ್ಪನ ದರ್ಶನಕ್ಕೆ ಕಾಯಬೇಕು 18 ಗಂಟೆ...
    ನಾಮಿನೇಷನ್ ತೂಗುಗತ್ತಿ ಜೊತೆ ಕುತೂಹಲ ಮೂಡಿಸಿದ ಕಿಚ್ಚನ ಪಂಚಾಯ್ತಿ
    ನಾಮಿನೇಷನ್ ತೂಗುಗತ್ತಿ ಜೊತೆ ಕುತೂಹಲ ಮೂಡಿಸಿದ ಕಿಚ್ಚನ ಪಂಚಾಯ್ತಿ
    Daily Devotional: ನವರಾತ್ರಿ ಮೂರನೇ ದಿನ ಚಂದ್ರಘಂಟಾ ದೇವಿ ಆರಾಧನೆ
    Daily Devotional: ನವರಾತ್ರಿ ಮೂರನೇ ದಿನ ಚಂದ್ರಘಂಟಾ ದೇವಿ ಆರಾಧನೆ