Rohit Sharma: ‘ಹಿಟ್‌ಮ್ಯಾನ್ ಅಲ್ಲ… ಫ್ಯಾಟ್‌ಮ್ಯಾನ್’; ವೈರಲ್ ಫೋಟೋ ಹಿಂದಿರುವ ಅಸಲಿಯತ್ತೇನು?

|

Updated on: Jun 03, 2024 | 8:37 PM

Rohit Sharma: ಈ ಪಂದ್ಯದ ಸಮಯದಲ್ಲಿ ಕ್ಲಿಕ್ಕಿಸಿರುವುದು ಎನ್ನಲಾಗಿರುವ ರೋಹಿತ್ ಶರ್ಮಾ ಅವರ ಫೋಟೋವೊಂದು ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದೆ. ಇದರೊಂದಿಗೆ ನಾಯಕ ರೋಹಿತ್ ಅವರ ಫಿಟ್ನೇಸ್​ ಬಗ್ಗೆಯೂ ಸಾಕಷ್ಟು ಪ್ರಶ್ನೆಗಳನ್ನು ಎತ್ತಲಾಗುತ್ತಿದೆ.

Rohit Sharma: ‘ಹಿಟ್‌ಮ್ಯಾನ್ ಅಲ್ಲ... ಫ್ಯಾಟ್‌ಮ್ಯಾನ್’; ವೈರಲ್ ಫೋಟೋ ಹಿಂದಿರುವ ಅಸಲಿಯತ್ತೇನು?
ರೋಹಿತ್ ಶರ್ಮಾ
Follow us on

ರೋಹಿತ್ ಶರ್ಮಾ (Rohit Sharma) ನಾಯಕತ್ವದಲ್ಲಿ ಟೀಂ ಇಂಡಿಯಾ ಟಿ20 ವಿಶ್ವಕಪ್ (T20 World Cup 2024) ಅಖಾಡಕ್ಕೆ ಧುಮುಕಿದೆ. ನ್ಯೂಯಾರ್ಕ್​ನಲ್ಲಿ ಅಭ್ಯಾಸದಲ್ಲಿ ನಿರತವಾಗಿರುವ ಟೀಂ ಇಂಡಿಯಾ ಇದೇ ಜೂನ್ 5 ರಂದು ತನ್ನ ಮೊದಲ ಪಂದ್ಯವನ್ನು ಐರ್ಲೆಂಡ್ ವಿರುದ್ಧ ಆಡಲಿದೆ. ಅದಕ್ಕೂ ಮುನ್ನ ಬಾಂಗ್ಲಾದೇಶ ವಿರುದ್ಧ ಅಭ್ಯಾಸ ಪಂದ್ಯವನ್ನಾಡಿದ್ದ ಟೀಂ ಇಂಡಿಯಾ 60 ರನ್​ಗಳ ಭರ್ಜರಿ ಜಯ ದಾಖಲಿಸಿತ್ತು. ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡೂ ವಿಭಾಗದಲ್ಲೂ ಅದ್ಭುತ ಪ್ರದರ್ಶನ ನೀಡಿದ ಭಾರತ ಏಕಪಕ್ಷೀಯ ಗೆಲುವು ದಾಖಲಿಸಿತ್ತು. ಅದಾಗ್ಯೂ ಈ ಪಂದ್ಯದ ಸಮಯದಲ್ಲಿ ಕ್ಲಿಕ್ಕಿಸಿರುವುದು ಎನ್ನಲಾಗಿರುವ ರೋಹಿತ್ ಶರ್ಮಾ ಅವರ ಫೋಟೋವೊಂದು ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದೆ. ಇದರೊಂದಿಗೆ ನಾಯಕ ರೋಹಿತ್ ಅವರ ಫಿಟ್ನೇಸ್ (Fitness)​ ಬಗ್ಗೆಯೂ ಸಾಕಷ್ಟು ಪ್ರಶ್ನೆಗಳನ್ನು ಎತ್ತಲಾಗುತ್ತಿದೆ.

ರೋಹಿತ್ ಫೋಟೋ ವೈರಲ್

ವಾಸ್ತವವಾಗಿ ಬಾಂಗ್ಲಾದೇಶ ವಿರುದ್ಧ ನಡೆದ ಪಂದ್ಯದಲ್ಲಿ ರೋಹಿತ್ ಶರ್ಮಾ ಪಿಲ್ಡಿಂಗ್ ಮಾಡುತ್ತಿದ್ದ ವೇಳೆ ತೆಗೆದಿರುವುದು ಎನ್ನಲಾಗಿರುವ ಫೋಟೋವೊಂದು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ಈ ಫೋಟೋದಲ್ಲಿ ರೋಹಿತ್ ಅವರ ಹೊಟ್ಟೆ ಮುಂದಕ್ಕೆ ಚಾಚಿಕೊಂಡಿರುವಂತೆ ಕಾಣುತ್ತಿದೆ. ಈ ಫೋಟೋವನ್ನು ಹಂಚಿಕೊಂಡಿರುವ ನೆಟ್ಟಿಗನೊಬ್ಬ, ಹಿಟ್‌ಮ್ಯಾನ್​ನ ಫಿಟ್ನೆಸ್​ ಬಗ್ಗೆ ಪ್ರಶ್ನೆಗಳನ್ನು ಎತ್ತಿದ್ದಾನೆ. ಇದೀಗ ಈ ಫೋಟೋ ಸಖತ್ ವೈರಲ್ ಆಗಿದ್ದು, ನೆಟ್ಟಿಗರು ತರಹೆವಾರಿ ಕಾಮೆಂಟ್​ಗಳನ್ನು ಮಾಡುತ್ತಿದ್ದಾರೆ.

ಈ ಫೋಟೋ ಅಸಲಿಯೋ, ನಕಲಿಯೋ?

ಫೋಟೋ ವೈರಲ್ ಆದ ಬಳಿಕ, ಈ ಫೋಟೋ ಅಸಲಿಯೋ, ನಕಲಿಯೋ ಎಂಬುದರ ಬಗ್ಗೆ ಹುಡುಕಾಟ ಶುರುವಾಗಿದೆ. ನಿಜಾಂಶವೆಂದರೆ ಪಾಕಿಸ್ತಾನ ಮೂಲದ ಎಕ್ಸ್ ಬಳಕೆದಾರನೊಬ್ಬ ರೋಹಿತ್ ಅವರ ಫೋಟೋವನ್ನು ಫೋಟೋಶಾಪ್ ಮಾಡಿ, ಆ ನಂತರ ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾನೆ ಎಂದು ತಿಳಿದುಬಂದಿದೆ. ಇದಕ್ಕೆ ಪೂರಕವಾಗಿ ರೋಹಿತ್ ಅಭಿಮಾನಿಗಳು ಬಿಸಿಸಿಐ ಪೋಸ್ಟ್ ಮಾಡಿರುವ ರೋಹಿತ್ ಅವರ ನೈಜ ಫೋಟೋಗಳ ಸ್ಕ್ರೀನ್‌ಶಾಟ್‌ಗಳನ್ನು ಹಂಚಿಕೊಳ್ಳುವ ಮೂಲಕ ರೋಹಿತ್ ಶರ್ಮಾ ಅವರನ್ನು ಅಪಹಾಸ್ಯ ಮಾಡಲು ಉದ್ದೇಶಪೂರ್ವಕವಾಗಿ ಫೋಟೋವನ್ನು ಎಡಿಟ್ ಮಾಡಲಾಗಿದೆ ಎಂದು ದೂರಿದ್ದಾರೆ.

ಇನ್ನು ಈ ಫೋಟೋಗಳನ್ನು ಎಡಿಟ್ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿರುವ ಖಾತಾದಾರರ ಬಗ್ಗೆ ಪರಿಶೀಲಿಸಲಾಗಿ ಪಾಕಿಸ್ತಾನದ ನೆಟ್ಟಿಗನಿಂದ ಈ ಕೃತ್ಯ ನಡೆದಿರುವುದು ಪತ್ತೆಯಾಗಿದೆ. ಈತನ ಖಾತೆಯನ್ನು ಪರಿಶೀಲಿಸಿದಾಗ ಈ ಹಿಂದೆಯೂ ಆತ ಹಲವಾರು ಕ್ರಿಕೆಟಿಗರ ಹಾಗೂ ಖ್ಯಾತ ನಾಮರ ಫೋಟೋಗಳನ್ನು ಈ ರೀತಿಯಾಗಿ ಎಡಿಟ್ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿರುವುದು ಪತ್ತೆಯಾಗಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ