6,6,6,6,6: ಒಂದೇ ಓವರ್ನಲ್ಲಿ ಪೊವೆಲ್ ಸಿಡಿಲಬ್ಬರ!
Seattle Orcas vs Los Angeles Knight Riders: ಮೇಜರ್ ಲೀಗ್ ಕ್ರಿಕೆಟ್ ಟೂರ್ನಿಯ 6ನೇ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಲಾಸ್ ಏಂಜಲೀಸ್ ನೈಟ್ ರೈಡರ್ಸ್ ತಂಡವು 20 ಓವರ್ಗಳಲ್ಲಿ 196 ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ಸಿಯಾಟಲ್ ಓರ್ಕಾಸ್ ತಂಡವು 15.3 ಓವರ್ಗಳಲ್ಲಿ 115 ರನ್‌ಗಳಿಸಿ ಆಲೌಟ್ ಆಗಿದೆ.

ಅಮೆರಿಕದಲ್ಲಿ ನಡೆಯುತ್ತಿರುವ ಮೇಜರ್ ಲೀಗ್ ಕ್ರಿಕೆಟ್ ಟಿ20 ಟೂರ್ನಿಯ 6ನೇ ಪಂದ್ಯದಲ್ಲಿ ರೋವ್ಮನ್ ಪೊವೆಲ್ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ. ಅದು ಸಹ ಒಂದೇ ಓವರ್ನಲ್ಲಿ 5 ಸಿಕ್ಸರ್ ಸಿಡಿಸುವ ಮೂಲಕ ಎಂಬುದ ವಿಶೇಷ. ಡಲ್ಲಾಸ್ನಲ್ಲಿ ನಡೆದ ಈ ಪಂದ್ಯದಲ್ಲಿ ಲಾಸ್ ಏಂಜಲೀಸ್ ನೈಟ್ ರೈಡರ್ಸ್ ಹಾಗೂ ಸಿಯಾಟಲ್ ಓರ್ಕಾಸ್ ತಂಡಗಳು ಮುಖಾಮುಖಿಯಾಗಿದ್ದವು.
ಈ ಮ್ಯಾಚ್ನಲ್ಲಿ ಟಾಸ್ ಗೆದ್ದ ಸಿಯಾಟಲ್ ಓರ್ಕಾಸ್ ತಂಡದ ನಾಯಕ ಮಾರ್ಕಸ್ ಸ್ಟೊಯಿನಿಸ್ ಬೌಲಿಂಗ್ ಆಯ್ದುಕೊಂಡರು. ಅದರಂತೆ ಮೊದಲು ಬ್ಯಾಟ್ ಮಾಡಿದ ಲಾಸ್ ಏಂಜಲೀಸ್ ನೈಟ್ ರೈಡರ್ಸ್ ಕಾಲಿನ್ ಮನ್ರೋ (30) ಹಾಗೂ ಆ್ಯಂಡ್ರೆ ಫ್ಲೆಚರ್ (40) ಉತ್ತಮ ಆರಂಭ ಒದಗಿಸಿದ್ದರು.
ಆದರೆ ಬಳಿಕ ಬಂದ ಉನ್ಮುಕ್ತ್ ಚಂದ್ (19) ಹಾಗೂ ಸುನಿಲ್ ನರೈನ್ (15) ಬೇಗನೆ ವಿಕೆಟ್ ಒಪ್ಪಿಸಿದರು. ಈ ಹಂತದಲ್ಲಿ ಕಣಕ್ಕಿಳಿದ ರೋವ್ಮನ್ ಪೊವೆಲ್ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದರು.
ಅದರಲ್ಲೂ ದಸುನ್ ಶಾನಕ ಎಸೆದ 17ನೇ ಓವರ್ 5 ಭರ್ಜರಿ ಸಿಕ್ಸರ್ ಸಿಡಿಸಿದರು. ಹೀಗೆ ಬ್ಯಾಕ್ ಟು ಬ್ಯಾಕ್ ಸಿಕ್ಸರ್ ಸಿಡಿಸಿದ ಪೊವೆಲ್ಗೆ ಯುವರಾಜ್ ಸಿಂಗ್ ಅವರ ಒಂದೇ ಓವರ್ನಲ್ಲಿನ 6 ಸಿಕ್ಸರ್ಗಳ ದಾಖಲೆ ಸರಿಗಟ್ಟಲು ಅವಕಾಶವಿತ್ತು. ಆದರೆ, ಶಾನಕ ಎಸೆದ ಕೊನೆಯ ಸ್ಲೋ ಬೌನ್ಸರ್ ಅನ್ನು ದೊಡ್ಡ ಹೊಡೆತಕ್ಕೆ ಕನೆಕ್ಟ್ ಮಾಡಲು ಯತ್ನಿಸಿದ ಪೊವೆಲ್, ಶಾರ್ಟ್ ಥರ್ಡ್-ಮ್ಯಾನ್‌ನಲ್ಲಿದ್ದ ಒಟ್ನೀಲ್ ಬಾರ್ಟ್‌ಮನ್‌ಗೆ ಕ್ಯಾಚ್ ನೀಡಿ ಔಟಾದರು.
#RovamnPowell smashed 5 sixes in an over! 🔥#DasunShanaka was on the receiving end of the onslaught but redeemed himself with a wicket in the final delivery. 🤩
Catch all the #MLC action on Star Sports & JioHotstar! pic.twitter.com/b6hJ8A2Tqr
— Star Sports (@StarSportsIndia) June 22, 2026
ಈ ಮೂಲಕ ರೋವ್ಮನ್ ಪೊವೆಲ್ 11 ಎಸೆತಗಳಲ್ಲಿ 5 ಭರ್ಜರಿ ಸಿಕ್ಸರ್ ಹಾಗೂ 1 ಫೋರ್ನೊಂದಿಗೆ 37 ರನ್ ಬಾರಿಸಿ ಇನಿಂಗ್ಸ್ ಅಂತ್ಯಗೊಳಿಸಿದರು. ಪೊವೆಲ್ ಅವರ ಈ ಸಿಡಿಲಬ್ಬರದ ಬ್ಯಾಟಿಂಗ್ ನೆರವಿನೊಂದಿಗೆ ಲಾಸ್ ಏಂಜಲೀಸ್ ನೈಟ್ ರೈಡರ್ಸ್ ತಂಡವು 20 ಓವರ್ಗಳಲ್ಲಿ 196 ರನ್ ಕಲೆಹಾಕಿತು.
197 ರನ್ಗಳ ಗುರಿ ಬೆನ್ನತ್ತಿದ ಸಿಯಾಟಲ್ ಓರ್ಕಾಸ್ ತಂಡವು 15.3 ಓವರ್ಗಳಲ್ಲಿ ಕೇವಲ 115 ರನ್‌ಗಳಿಸಿ ಆಲೌಟ್ ಆಯಿತು. ಈ ಮೂಲಕ ಲಾಸ್ ಏಂಜಲೀಸ್ ನೈಟ್ ರೈಡರ್ಸ್ ತಂಡವು ಈ ಪಂದ್ಯದಲ್ಲಿ 81 ರನ್ಗಳ ಭರ್ಜರಿ ಜಯ ಸಾಧಿಸಿದೆ.
ಲಾಸ್ ಏಂಜಲೀಸ್ ನೈಟ್ ರೈಡರ್ಸ್ ಪ್ಲೇಯಿಂಗ್ 11: ಕಾಲಿನ್ ಮನ್ರೋ , ಆ್ಯಂಡ್ರೆ ಫ್ಲೆಚರ್ (ವಿಕೆಟ್ ಕೀಪರ್ ), ಉನ್ಮುಕ್ತ್ ಚಂದ್ , ರೋವ್ಮನ್ ಪೊವೆಲ್ , ಜೇಸನ್ ಹೋಲ್ಡರ್ (ನಾಯಕ) , ಆ್ಯಂಡ್ರೆ ರಸೆಲ್ , ಸೈಫ್ ಬದರ್ , ಸುನಿಲ್ ನರೈನ್ , ಶ್ಯಾಡ್ಲಿ ವ್ಯಾನ್ ಶಾಲ್ಕ್‌ವಿಕ್ , ಕಾರ್ತಿಕ್ ಗಟ್ಟೆಪಲ್ಲಿ , ಕಾರ್ಮಿ ಲೆ ರೂಕ್ಸ್.
ಇದನ್ನೂ ಓದಿ: ನಾನಂತೂ ರೆಡಿ… ಸ್ಪಷ್ಟ ಸಂದೇಶ ರವಾನಿಸಿದ ವೈಭವ್ ಸೂರ್ಯವಂಶಿ!
ಸಿಯಾಟಲ್ ಓರ್ಕಾಸ್ ಪ್ಲೇಯಿಂಗ್ 11: ಟಿಮ್ ಸೈಫರ್ಟ್ (ವಿಕೆಟ್ ಕೀಪರ್), ಶಯಾನ್ ಜಹಾಂಗೀರ್ , ಮ್ಯಾಥ್ಯೂ ಬ್ರೀಟ್ಝ್ಕೆ , ಶಿಮ್ರಾನ್ ಹೆಟ್ಮಿಯರ್ , ಮಾರ್ಕಸ್ ಸ್ಟೊಯಿನಿಸ್ (ನಾಯಕ) ,ದಸುನ್ ಶಾನಕ , ಅಲಿ ಶೇಖ್ , ಹರ್ಮೀತ್ ಸಿಂಗ್ , ಕ್ಯಾಮೆರೋನ್ ಗ್ಯಾನನ್ , ಜಸ್ದೀಪ್ ಸಿಂಗ್ , ಒಟ್ನೀಲ್ ಬಾರ್ಟ್‌ಮನ್.




