ಅಬುಧಾಬಿಯ ಶೇಖ್ ಝಾಯೆದ್ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ನ 36ನೇ ಪಂದ್ಯದಲ್ಲಿ ರಿಷಭ್ ಪಂತ್ (Rishabh Pant) ನಾಯಕತ್ವದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಸಂಜು ಸ್ಯಾಮ್ಸನ್ (Sanju Samson) ನೇತೃತ್ವದ ರಾಜಸ್ಥಾನ್ ರಾಯಲ್ಸ್ (DC vs RR) ವಿರುದ್ದ 33 ರನ್ಗಳ ಜಯ ಸಾಧಿಸಿದೆ. ಡೆಲ್ಲಿ ಕ್ಯಾಪಿಟಲ್ಸ್ ನೀಡಿದ 155 ರನ್ಗಳ ಟಾರ್ಗೆಟ್ ಬೆನ್ನತ್ತಿದ ರಾಜಸ್ಥಾನ್ ರಾಯಲ್ಸ್ ನಿಗದಿತ 20 ಓವರ್ನಲ್ಲಿ 6 ವಿಕೆಟ್ ಕಳೆದುಕೊಂಡು 121 ರನ್ಗಳಿಸಲಷ್ಟೇ ಶಕ್ತವಾಯಿತು. ಇದಕ್ಕೂ ಮುನ್ನ ಟಾಸ್ ಗೆದ್ದ ಆರ್ಆರ್ ನಾಯಕ ಸಂಜು ಸ್ಯಾಮ್ಸನ್ ಬೌಲಿಂಗ್ ಆಯ್ದುಕೊಂಡರು. ಅದರಂತೆ ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ತಂಡದಿಂದ ನಿರೀಕ್ಷಿತ ಬ್ಯಾಟಿಂಗ್ ಮೂಡಿ ಬಂದಿರಲಿಲ್ಲ.
ಪವರ್ಪ್ಲೇನಲ್ಲೇ ಶಿಖರ್ ಧವನ್ (8) ಹಾಗೂ ಪೃಥ್ವಿ ಶಾ (10) ವಿಕೆಟ್ ಒಪ್ಪಿಸಿ ನಿರಾಸೆ ಮೂಡಿಸಿದರು. ಆ ಬಳಿಕ ಜೊತೆಗೂಡಿದ ರಿಷಭ್ ಪಂತ್ ಹಾಗೂ ಶ್ರೇಯಸ್ ಅಯ್ಯರ್ ಒಂದಷ್ಟು ಪ್ರತಿರೋಧ ತೋರಿದರು. ಇದಾಗ್ಯೂ ಪಂತ್ (24) ತಂಡದ ಮೊತ್ತ 83 ರನ್ ಆಗಿದ್ದ ವೇಳೆ ವಿಕೆಟ್ ಒಪ್ಪಿಸಿದರು. ಇನ್ನು ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ ಶ್ರೇಯಸ್ ಅಯ್ಯರ್ (43) ಸಂಜು ಸ್ಯಾಮ್ಸನ್ ಮಾಡಿದ ಅದ್ಭುತ ಸ್ಟಂಪಿಂಗ್ನಿಂದ ಔಟಾದರು. ಆ ಬಳಿಕ ಶಿಮ್ರಾನ್ ಹೆಟ್ಮೆಯರ್ ಬಿರುಸಿನ 28 ರನ್ ಬಾರಿಸಿದರು. ಪರಿಣಾಮ ಡೆಲ್ಲಿ ಕ್ಯಾಪಿಟಲ್ಸ್ ನಿಗದಿತ 20 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 154 ರನ್ಗಳಿಸಲು ಸಾಧ್ಯವಾಯಿತು.
155 ರನ್ಗಳ ಟಾರ್ಗೆಟ್ ಬೆನ್ನತ್ತಿದ ರಾಜಸ್ಥಾನ್ ರಾಯಲ್ಸ್ ಪರ ನಾಯಕ ಸಂಜು ಸ್ಯಾಮ್ಸನ್ 53 ಎಸೆತಗಳಲ್ಲಿ 70 ರನ್ ಬಾರಿಸಿದರೂ ತಂಡವನ್ನು ಗೆಲುವಿನ ದಡ ಸೇರಿಸಲಾಗಲಿಲ್ಲ. ಅಂತಿಮವಾಗಿ ರಾಜಸ್ಥಾನ್ ರಾಯಲ್ಸ್ 6 ವಿಕೆಟ್ ಕಳೆದುಕೊಂಡು 121 ರನ್ಗಳಿಗೆ ತನ್ನ ಇನಿಂಗ್ಸ್ ಅಂತ್ಯಗೊಳಿಸಿತು. ಇದರೊಂದಿಗೆ ಡೆಲ್ಲಿ ಕ್ಯಾಪಿಟಲ್ಸ್ ತಂಡ 33 ರನ್ಗಳ ಭರ್ಜರಿ ಜಯ ಸಾಧಿಸಿತು.
5️⃣ wickets. 5️⃣ different bowlers. Each of them with an economy of 6️⃣ or under so far ?
This bowling attack ???#YehHaiNayiDilli #IPL2021 #DCvRR pic.twitter.com/2dSwY5iCRn
— Delhi Capitals (@DelhiCapitals) September 25, 2021
ಸೋಲಿನ ಸುಳಿಯಲ್ಲಿ ಸಂಜು ಸ್ಯಾಮ್ಸನ್ ನೇತೃತ್ವದ ರಾಜಸ್ಥಾನ್ ರಾಯಲ್ಸ್
ರಬಾಡಾ ಎಸೆತದಲ್ಲಿ ಭರ್ಜರಿ ಹೊಡೆತ…ಸಂಜು ಸ್ಯಾಮ್ಸನ್ ನೀಡಿದ ಸುಲಭ ಕ್ಯಾಚ್ ಕೈಚೆಲ್ಲಿದ ಶಿಖರ್ ಧವನ್
ರಬಾಡ ಎಸೆತದಲ್ಲಿ ರಬಾಡ ಸ್ಕೂಪ್…ಚೆಂಡು ಶಾರ್ಟ್ ಥರ್ಡ್ ಮ್ಯಾನ್ನತ್ತ ಬೌಂಡರಿಗೆ-ಫೋರ್
ಕೊನೆಯ 2 ಓವರ್ಗಳಲ್ಲಿ ರಾಜಸ್ಥಾನ್ ರಾಯಲ್ಸ್‌ಗೆ ಗೆಲ್ಲಲು 54 ರನ್ಗಳ ಅವಶ್ಯಕತೆ
ಅನ್ರಿಕ್ ನೋಕಿಯಾ ಎಸೆತದಲ್ಲಿ ಭರ್ಜರಿ ಹೊಡೆತಕ್ಕೆ ಮುಂದಾಗಿ ಬೌಂಡರಿ ಲೈನ್ನಲ್ಲಿ ಕ್ಯಾಚ್ ನೀಡಿ ಹೊರನಡೆದ ರಾಹುಲ್ ತಿವಾಠಿಯಾ
39 ಎಸೆತಗಳಲ್ಲಿ ಹಾಫ್ ಸೆಂಚುರಿ ಪೂರೈಸಿದ ಆರ್ಆರ್ ನಾಯಕ ಸಂಜು ಸ್ಯಾಮ್ಸನ್
16 ಓವರ್ ಮುಕ್ತಾಯ…ರಾಜಸ್ಥಾನ ರಾಯಲ್ಸ್ ಗೆ 24 ಎಸೆತಗಳಲ್ಲಿ 64 ರನ್ಗಳ ಅವಶ್ಯಕತೆ
ಕ್ರೀಸ್ನಲ್ಲಿ ಸಂಜು ಸ್ಯಾಮ್ಸನ್ ಹಾಗೂ ತಿವಾಠಿಯಾ ಬ್ಯಾಟಿಂಗ್
ರಬಾಡಾ ಓವರ್ನಲ್ಲಿ ಬ್ಯಾಕ್ ಟು ಬ್ಯಾಕ್ ಬೌಂಡರಿ…ಶಾರ್ಟ್ ಲೆಂಗ್ತ್ ಎಸೆತವನ್ನು ಬೌಂಡರಿಗಟ್ಟಿದ ಸಂಜು ಸ್ಯಾಮ್ಸನ್- ಫೋರ್
ಮತ್ತೊಂದು ಬೌಂಡರಿ ಬಾರಿಸಿದ ಸಂಜು ಸ್ಯಾಮ್ಸನ್…ರಬಾಡ ಎಸೆದ ಸ್ಲೋಬಾಲ್ಗೆ ಮಿಡ್ ಆಫ್ನತ್ತ ಬೌಂಡರಿ ಬಾರಿಸಿದ ಸ್ಯಾಮ್ಸನ್
ರಬಾಡ ಎಸೆತವನ್ನು ಫೈನ್ ಲೆಗ್ನತ್ತ ಆಕರ್ಷಕವಾಗಿ ಬಾರಿಸಿದ ಸಂಜು ಸ್ಯಾಮ್ಸನ್…ಮತ್ತೊಂದು ಫೋರ್
14ನೇ ಓವರ್ ಮುಕ್ತಾಯದ ವೇಳೆ ಡೆಲ್ಲಿ ಕ್ಯಾಪಿಟಲ್ಸ್ ಸ್ಕೋರ್ 92/2
ರಾಜಸ್ಥಾನ್ ರಾಯಲ್ಸ್ 68/5 (14)
ಅನ್ರಿಕ್ ನೋಕಿಯಾ ವೇಗದ ಎಸೆತ..ಆಕರ್ಷಕವಾಗಿ ಥರ್ಡ್ ಮ್ಯಾನ್ ಬೌಂಡರಿಯತ್ತ ಬಾರಿಸಿದ ಸಂಜು ಸ್ಯಾಮ್ಸನ್- ಫೋರ್
ಕ್ರೀಸ್ನಲ್ಲಿ ರಾಹುಲ್ ತಿವಾಠಿಯಾ ಹಾಗೂ ಸಂಜು ಸ್ಯಾಮ್ಸನ್ ಬ್ಯಾಟಿಂಗ್
ರಾಜಸ್ಥಾನ್ ರಾಯಲ್ಸ್ ಗೆ 42 ಎಸೆತಗಳಲ್ಲಿ 96 ರನ್ಗಳ ಅವಶ್ಯಕತೆ
ರಿಯಾನ್ ಪರಾಗ್ ಕ್ಲೀನ್ ಬೌಲ್ಡ್…ಅಕ್ಷರ್ ಪಟೇಲ್ ಎಸೆತವನ್ನು ಗುರುತಿಸುವಲ್ಲಿ ಎಡವಿದ ಪರಾಗ್…ಕೇವಲ 2 ರನ್ಗಳಿಸಿ ಪೆವಿಲಿಯನ್ನತ್ತ ಹೆಜ್ಜೆಹಾಕಿದ ಯುವ ಆಟಗಾರ.
ಅಕ್ಷರ್ ಪಟೇಲ್ ಎಸೆತದಲ್ಲಿ ಸೂಪರ್ ಶಾಟ್…ಔಟ್ ಸೈಡ್ ಆಫ್ ಬೌಂಡರಿ ಬಾರಿಸಿದ ಸಂಜು ಸ್ಯಾಮ್ಸನ್
ಮೊದಲ ಹತ್ತು ಓವರ್ಗಳಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ನೀಡಿದ್ದು ಕೇವಲ 48 ರನ್ ಮಾತ್ರ.
ರಬಾಡಾ ಎಸೆತದಲ್ಲಿ ಅವೇಶ್ ಖಾನ್ಗೆ ಕ್ಯಾಚ್ ನೀಡಿ ಲೊಮರರ್ ನಿರ್ಗಮನ
ಕ್ರೀಸ್ನಲ್ಲಿ ಸಂಜು ಸ್ಯಾಮ್ಸನ್ ಹಾಗೂ ರಿಯಾನ್ ಪರಾಗ್ ಬ್ಯಾಟಿಂಗ್
RR 48/4 (10.2)
ಅಶ್ವಿನ್ ಎಸೆತಕ್ಕೆ ಲೊಮರರ್ ಭರ್ಜರಿ ಪ್ರತ್ಯುತ್ತರ…ಚೆಂಡು ಬೌಂಡರಿ ದಾಟಿದ ಸಿಕ್ಸ್
21/3 RR v DC ಅಬುಧಾಬಿ *
21/1 MI v PBKS ಚೆನ್ನೈ
24/4 CSK v MI ದುಬೈ
25/1 KKR v RR ಮುಂಬೈ
ಮೊದಲ ಆರು ಓವರ್ಗಳಲ್ಲಿ ರಾಜಸ್ಥಾನ್ ರಾಯಲ್ಸ್ ಕಲೆಹಾಕಿದ್ದು ಕೇವಲ 21 ರನ್ ಮಾತ್ರ. 3 ವಿಕೆಟ್ ಉರುಳಿಸಿ ಪವರ್ಪ್ಲೇನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಸಂಪೂರ್ಣ ಮೇಲುಗೈ
ಕ್ರೀಸ್ನಲ್ಲಿ ಸಂಜು ಸ್ಯಾಮ್ಸನ್ ಹಾಗೂ ಮಹಿಪಾಲ್ ಲೊಮರರ್ ಬ್ಯಾಟಿಂಗ್.
ಅಶ್ವಿನ್ ಎಸೆತದಲ್ಲಿ ಮುನ್ನುಗ್ಗಿ ಬಾರಿಸಲು ಬಂದ ಡೇವಿಡ್ ಮಿಲ್ಲರ್…ಚೆಂಡು ನೇರವಾಗಿ ಕೀಪರ್ ಕೈಗೆ…ಸ್ಟಂಪ್ ಔಟ್..ಡೇವಿಡ್ ಮಿಲ್ಲರ್ ಇನಿಂಗ್ಸ್ ಅಂತ್ಯ.
ಅನ್ರಿಕ್ ನೋಕಿಯಾ ಎಸೆತದಲ್ಲಿ ಸಂಜು ಸ್ಯಾಮ್ಸನ್ ಬ್ಯಾಟ್ ಬದಿಯಿಂದ ಚಿಮ್ಮಿದ ಚೆಂಡು…ಅತ್ಯಾದ್ಭುತ ಡೈವಿಂಗ್ ಮೂಲಕ ಕ್ಯಾಚ್ ಹಿಡಿದ ವಿಕೆಟ್ ಕೀಪರ್ ರಿಷಭ್ ಪಂತ್..ಅಂಪೈರ್ ಔಟ್ ಎಂದು ತೀರ್ಪು. ಡಿಎಸ್ಆರ್ ಮೊರೆ ಹೋದ ಸಂಜು ಸ್ಯಾಮ್ಸನ್. ಮೂರನೇ ಅಂಪೈರ್ ಪರಿಶೀಲನೆ ವೇಳೆ ಚೆಂಡು ಹೆಲ್ಮೆಟ್ಗೆ ಬಡಿದಿರುವುದು ಸ್ಪಷ್ಟ. ನಾಟೌಟ್ ಎಂದು ತೀರ್ಪು.
ಡೆಲ್ಲಿ ಕ್ಯಾಪಿಟಲ್ಸ್ ಉತ್ತಮ ಆರಂಭ.
ಮೊದಲ ಮೂರು ಓವರ್ನಲ್ಲಿ 2 ವಿಕೆಟ್ ಉರುಳಿಸಿ ನೀಡಿದ್ದು ಕೇವಲ 15 ರನ್ ಮಾತ್ರ.
ಲಿವಿಂಗ್ಸ್ಟೋನ್ (1) ಹಾಗೂ ಯಶಸ್ವಿ ಜೈಸ್ವಾಲ್ (5) ಔಟ್.
ಕ್ರೀಸ್ನಲ್ಲಿ ಡೇವಿಡ್ ಮಿಲ್ಲರ್ ಹಾಗೂ ಸಂಜು ಸ್ಯಾಮ್ಸನ್ ಬ್ಯಾಟಿಂಗ್
ಲಿವಿಂಗ್ಸ್ಟೋನ್ (1) ಹಾಗೂ ಯಶಸ್ವಿ ಜೈಸ್ವಾಲ್ (5) ಔಟ್.
ಅನ್ರಿಕ್ ನೋಕಿಯಾ ಎಸೆತದಲ್ಲಿ ಯಶಸ್ವಿ ಜೈಸ್ವಾಲ್ ಬ್ಯಾಟ್ ಬದಿ ತಗುಲಿ ಚೆಂಡು ವಿಕೆಟ್ ಕೀಪರ್ ಕೈಗೆ…ಬಲವಾದ ಮನವಿ..ಅಂಪೈರ್ ನಾಟೌಟ್…ಡಿಆರ್ಎಸ್ ಮೊರೆ ಹೋದ ಡೆಲ್ಲಿ ನಾಯಕ ಪಂತ್. 3ನೇ ಅಂಪೈರ್ ತೀರ್ಪು- ಔಟ್
ಡೆಲ್ಲಿ ಕ್ಯಾಪಿಟಲ್ಸ್ಗೆ ಮೊದಲ ಯಶಸ್ಸು ತಂದುಕೊಟ್ಟ ಅವೇಶ್ ಖಾನ್
ಅವೇಶ್ ಖಾನ್ ಎಸೆತದಲ್ಲಿ ಲಿವಿಂಗ್ಸ್ಟೋನ್ ಬ್ಯಾಟ್ ಎಡ್ಜ್…ವಿಕೆಟ್ ಕೀಪರ್ ರಿಷಭ್ ಪಂತ್ ಅತ್ಯುತ್ತಮ ಕ್ಯಾಚ್. ಲಿಯಾಮ್ ಲಿವಿಂಗ್ಸ್ಟೋನ್ (1) ಔಟ್.
ಮೊದಲ ಓವರ್- ಅವೇಶ್ ಖಾನ್
ರಾಜಸ್ಥಾನ್ ರಾಯಲ್ಸ್ ಆರಂಭಿಕರು:-
ಲಿಯಾಮ್ ಲಿವಿಂಗ್ಸ್ಟೋನ್ (ಇಂಗ್ಲೆಂಡ್) ಹಾಗೂ ಯಶಸ್ವಿ ಜೈಸ್ವಾಲ್
A fighting total demands a fighting job from our bowlers now ?
Let's do this boys ??#YehHaiNayiDIlli #IPL2021 #DCvRR pic.twitter.com/WbYwyrzzv0
— Delhi Capitals (@DelhiCapitals) September 25, 2021
A collective effort under the Abu Dhabi sun. ☀️
Game ??#DCvRR | #HallaBol | #RoyalsFamily | #IPL2021 pic.twitter.com/99GwE8xuBl
— Rajasthan Royals (@rajasthanroyals) September 25, 2021
INNINGS BREAK!
2⃣ wickets each for @Mustafiz90 & @Sakariya55
1⃣ wicket each for @tyagiktk & @rahultewatia024⃣3⃣ for @ShreyasIyer15
2⃣8⃣ for @SHetmyerThe #RR chase to begin shortly. #VIVOIPL #DCvRR
Scorecard ? https://t.co/SKdByWvPFO pic.twitter.com/tzvdRxEmeA
— IndianPremierLeague (@IPL) September 25, 2021
ರಾಜಸ್ಥಾನ್ ರಾಯಲ್ಸ್‌ಗೆ 155 ರನ್ಗಳ ಟಾರ್ಗೆಟ್
ಮೊದಲ ಎಸೆತದಲ್ಲಿ- ಕೇವಲ 1 ರನ್ (ಲಲಿತ್ ಯಾದವ್)
2ನೇ ಎಸೆತದಲ್ಲಿ- 1 ರನ್ ಮಾತ್ರ ( ಅಶ್ವಿನ್ )
3ನೇ ಎಸೆತದಲ್ಲಿ- 1 ರನ್ (ಲಲಿತ್ ಯಾದವ್)
4ನೇ ಎಸೆತದಲ್ಲಿ- 2 ರನ್ ( ಅಶ್ವಿನ್ )
5ನೇ ಎಸೆತದಲ್ಲಿ- 2 ರನ್ ( ಅಶ್ವಿನ್ )
6ನೇ ಎಸೆತದಲ್ಲಿ- 2 ರನ್ (ಅಶ್ವಿನ್)
ಕ್ರೀಸ್ನಲ್ಲಿ ರವಿಚಂದ್ರನ್ ಅಶ್ವಿನ್ ಹಾಗೂ ಲಲಿತ್ ಯಾದವ್ ಬ್ಯಾಟಿಂಗ್
ಚೇತನ್ ಸಕರಿಯಾ ಎಸೆತದಲ್ಲಿ ಅಕ್ಷರ್ ಪಟೇಲ್ ಭರ್ಜರಿ ಹೊಡೆತ…ಬೌಂಡರಿ ಲೈನ್ನಲ್ಲಿ ಡೇವಿಡ್ ಮಿಲ್ಲರ್ ಉತ್ತಮ ಕ್ಯಾಚ್..12 ರನ್ಗಳೊಂದಿಗೆ ಅಕ್ಷರ್ ಪಟೇಲ್ ಇನಿಂಗ್ಸ್ ಅಂತ್ಯ
ಚೇತನ್ ಸಕರಿಯಾ ಅವರ ಮೊದಲ ಎಸೆತದಲ್ಲೇ ಕ್ಲೀನ್ ಸ್ಟೈಕ್…ನೇರವಾಗಿ ಚೆಂಡು ಸ್ಟೇಡಿಯಂಗೆ…ಅಕ್ಷರ್ ಪಟೇಲ್ ಬ್ಯಾಟ್ನಿಂದ ಭರ್ಜರಿ ಸಿಕ್ಸ್
ಕಾರ್ತಿಕ್ ತ್ಯಾಗಿ ಎಸೆತದಲ್ಲಿ ಲೆಗ್ ಸೈಡ್ನತ್ತ ಕಟ್ ಶಾಟ್ ಬಾರಿಸಿದ ಲಲಿತ್ ಯಾದವ್…ಫೋರ್
16 ಎಸೆತಗಳಲ್ಲಿ 28 ರನ್ ಬಾರಿಸಿ ಮುಸ್ತಫಿಜುರ್ ರಹಮಾನ್ಗೆ ವಿಕೆಟ್ ಒಪ್ಪಿಸಿದ ಶಿಮ್ರಾನ್ ಹೆಟ್ಮೆಯರ್
ಶಿಮ್ರಾನ್ ಹೆಟ್ಮೆಯರ್ ಔಟ್….ಮುಸ್ತಫಿಜುರ್ ಎಸೆತದಲ್ಲಿ ಭರ್ಜರಿ ಹೊಡೆತಕ್ಕೆ ಮುಂದಾದ ಹೆಟ್ಮೆಯರ್.. ಥರ್ಟಿ ಯಾರ್ಡ್ ಸರ್ಕಲ್ನಲ್ಲಿದ್ದ ಥರ್ಡ್ ಮ್ಯಾನ್ ಫೀಲ್ಡರ್ ಚೇತನ್ ಸಕರಿಯಾಗೆ ಕ್ಯಾಚ್…ರಾಜಸ್ಥಾನ್ಗೆ 5ನೇ ಯಶಸ್ಸು
STUMPED! @rahultewatia02 has the big wicket of Shreyas Iyer. ? ?
Fine work behind the stumps from @rajasthanroyals captain @IamSanjuSamson. ? ? #DC 4 down. #VIVOIPL #DCvRR
Follow the match ? https://t.co/SKdByWvPFO pic.twitter.com/hx8Y4OxlEv
— IndianPremierLeague (@IPL) September 25, 2021
ಕಾರ್ತಿಕ್ ತ್ಯಾಗಿ ಟು ಹೆಟ್ಮೆಯರ್…ಬೌನ್ಸರ್…ಅಷ್ಟೇ ನಾಜೂಕಾಗಿ ಆಡಿದ ಹೆಟ್ಮೆಯರ್…ಚೆಂಡು ಬೌಂಡರಿಗೆ…ಫೋರ್
ಕಾರ್ತಿಕ್ ತ್ಯಾಗಿ ಎಸೆತದಲ್ಲಿ ಬ್ಯಾಕ್ ಟು ಬ್ಯಾಕ್ ಬೌಂಡರಿ—ಆಫ್ ಸೈಡ್ನಲ್ಲಿ ವಿಂಡೀಸ್ ಎಡಗೈ ದಾಂಡಿಗ ಅಬ್ಬರ
15ನೇ ಓವರ್ನಲ್ಲಿ ಶತಕದ ಗಟಿದಾಟಿದ ಡೆಲ್ಲಿ ಕ್ಯಾಪಿಟಲ್ಸ್.
ಕ್ರೀಸ್ನಲ್ಲಿ ಶಿಮ್ರಾನ್ ಹೆಟ್ಮೆಯರ್ ಹಾಗೂ ಲಲಿತ್ ಯಾದವ್ ಬ್ಯಾಟಿಂಗ್
ಹೆಟ್ಮೆಯರ್ ಹಿಟ್ಟಿಂಗ್ ಶಾಟ್…ಚೇತನ್ ಸಕರಿಯಾ ಎಸೆತದಲ್ಲಿ ಲಾಂಗ್ ಆನ್ನತ್ತ ಸೂಪರ್ ಫೋರ್
ಚೇತನ್ ಸಕರಿಯಾ ಎಸೆತದಲ್ಲಿ ಶ್ರಿಮಾನ್ ಹೆಟ್ಮೆಯರ್ ಕವರ್ನತ್ತ ಭರ್ಜರಿ ಹೊಡೆತ…ಬೌಂಡರಿ ದಾಟಿದ ಚೆಂಡು- ಫೋರ್
32 ಎಸೆತಗಳಲ್ಲಿ 42 ರನ್ ಬಾರಿಸಿ ಭರ್ಜರಿ ಬ್ಯಾಟಿಂಗ್ ಮಾಡುತ್ತಿದ್ದ ಅಯ್ಯರ್. ತಿವಾಠಿಯ ಎಸೆತದಲ್ಲಿ ಸಂಜು ಸ್ಯಾಮ್ಸನ್ ಮಾಡಿದ ಚುರುಕಿನ ಸ್ಟಂಪಿಂಗ್ಗೆ ಬಲಿ. 2 ಸಿಕ್ಸರ್ನೊಂದಿಗೆ 42 ರನ್ ಬಾರಿಸಿದ್ದ ಶ್ರೇಯಸ್ ಅಯ್ಯರ್ ಇನಿಂಗ್ಸ್ ಅಂತ್ಯ.
ರಾಹುಲ್ ತಿವಾಠಿಯಾ ಬೌಲಿಂಗ್ನಲ್ಲಿ ಸಂಜು ಸ್ಯಾಮ್ಸನ್ ಸೂಪರ್ ಸ್ಟಂಪ್…ಇಂಚುಗಳ ಅಂತರದಲ್ಲಿ ಶ್ರೇಯಸ್ ಅಯ್ಯರ್ ಕಾಲು ಹೊರಗೆ…ಮೂರನೇ ಅಂಪೈರ್ ತೀರ್ಪು- ಔಟ್.
C
ಕ್ರೀಸ್ನಲ್ಲಿ ಶ್ರೇಯಸ್ ಅಯ್ಯರ್ ಹಾಗೂ ಶಿಮ್ರಾನ್ ಹೆಟ್ಮೆಯರ್ ಬ್ಯಾಟಿಂಗ್
ಮುಸ್ತಫಿಜುರ್ ರಹಮಾನ್ ಎಸೆತದಲ್ಲಿ ಬ್ಯಾಟ್ ಎಡ್ಜ್ ತಾಗಿ ರಿಷಭ್ ಪಂತ್ ಬೌಲ್ಡ್. 24 ಎಸೆತಗಳಲ್ಲಿ 24 ರನ್ ಬಾರಿಸಿದ ಪಂತ್ ಇನಿಂಗ್ಸ್ ಅಂತ್ಯ.
5⃣0⃣-run stand! ? ?@ShreyasIyer15 & @RishabhPant17 complete a vital half-century stand as @DelhiCapitals move past 70. ? ? #VIVOIPL #DCvRR
Follow the match ? https://t.co/SKdByWvPFO pic.twitter.com/usMynrSwl4
— IndianPremierLeague (@IPL) September 25, 2021
ಶ್ರೇಯಸ್ ಅಯ್ಯರ್ ಸಿಡಿಲಬ್ಬರ ಶುರು
ತಬ್ರೇಜ್ ಶಮ್ಶಿ ಎಸೆತದಲ್ಲಿ ಎಕ್ಸ್ಟ್ರಾ ಕವರ್ನತ್ತ ಭರ್ಜರಿ ಸಿಕ್ಸ್ ಸಿಡಿಸಿದ ಅಯ್ಯರ್
10 ಓವರ್ ಮುಕ್ತಾಯ: ರಾಜಸ್ಥಾನ್ ಉತ್ತಮ ಬೌಲಿಂಗ್…ಮೊದಲ 60 ಎಸೆತಗಳಲ್ಲಿ ನೀಡಿದ್ದು ಕೇವಲ 66 ರನ್ಗಳು ಮಾತ್ರ.
ಕ್ರೀಸ್ನಲ್ಲಿ ಶ್ರೇಯಸ್ ಅಯ್ಯರ್ ಹಾಗೂ ರಿಷಭ್ ಪಂತ್ ಬ್ಯಾಟಿಂಗ್
ತಬ್ರೇಜ್ ಶಮ್ಶಿ ಎಸೆತದಲ್ಲಿ ಪವರ್ಫುಲ್ ಸ್ವೀಪ್ ಶಾಟ್- ರಿಷಭ್ ಪಂತ್ ಬ್ಯಾಟ್ನಿಂದ ಭರ್ಜರಿ ಬೌಂಡರಿ
8 ಓವರ್ ಮುಕ್ತಾಯ: ಡೆಲ್ಲಿ ಬ್ಯಾಟರ್ಗಳು ಬಾರಿಸಿದ್ದು ಕೇವಲ 3 ಬೌಂಡರಿ
ಉತ್ತಮ ದಾಳಿ ಸಂಘಟಿಸುತ್ತಿರುವ ರಾಜಸ್ಥಾನ್ ರಾಯಲ್ಸ್. ಬೌಂಡರಿಗಾಗಿ ಡೆಲ್ಲಿ ಕ್ಯಾಪಿಟಲ್ಸ್ ಬ್ಯಾಟ್ಸ್ಮನ್ಗಳ ತಡಕಾಟ. ಅತ್ಯುತ್ತಮ ಫೀಲ್ಡಿಂಗ್ ಮೂಲಕ ರನ್ಗತಿ ನಿಯಂತ್ರಿಸುತ್ತಿರುವ ರಾಜಸ್ಥಾನ್ ರಾಯಲ್ಸ್ ತಂಡ.
ಐಪಿಎಲ್ನಲ್ಲಿ ಮತ್ತೆ ಕಣಕ್ಕಿಳಿದ ದಕ್ಷಿಣ ಆಫ್ರಿಕಾದ ಸ್ಪಿನ್ನರ್ ತಬ್ರೇಜ್ ಶಮ್ಸಿ. ಈ ಹಿಂದೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಪ್ರತಿನಿಧಿಸಿದ್ದರು. ಇದೀಗ ಐಪಿಎಲ್ ದ್ವಿತಿಯಾರ್ಧದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದಲ್ಲಿ ಬದಲಿ ಆಟಗಾರನಾಗಿ ಸ್ಥಾನ ಪಡೆದಿದ್ದಾರೆ. ಅಂದಹಾಗೆ ಶಮ್ಸಿ ಪ್ರಸ್ತುತ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ನ ನಂಬರ್ 1 ಬೌಲರ್ ಎಂಬುದು ವಿಶೇಷ.
ಪವರ್‌ಪ್ಲೇ ಮುಕ್ತಾಯ: ರಾಜಸ್ಥಾನ್ ರಾಯಲ್ಸ್ ಮೇಲುಗೈ
ಕ್ರೀಸ್ನಲ್ಲಿ ರಿಷಭ್ ಪಂತ್ (7) ಹಾಗೂ ಶ್ರೇಯಸ್ ಅಯ್ಯರ್ (9) ಬ್ಯಾಟಿಂಗ್
ಶಾಟ್ ಬೌನ್ಸ್ ಎಸೆದ ಕಾರ್ತಿಕ್ ತ್ಯಾಗಿ…ಸಂಪೂರ್ಣ ಲಾಭ ಪಡೆದುಕೊಂಡ ರಿಷಭ್ ಪಂತ್..ಶಾರ್ಟ್ ಫೈನ್ ಲೆಗ್ನತ್ತ ಬೌಂಡರಿ- ತಂಡಕ್ಕೆ 4 ರನ್ಗಳ ಸೇರ್ಪಡೆ.
ಕಾರ್ತಿಕ್ ತ್ಯಾಗಿ ಎಸೆತದಲ್ಲಿ ವೈಡ್ ಆಫ್ ಚೆಂಡನ್ನು ಆಫ್ ಸೈಡ್ನಲ್ಲಿ ಬೌಂಡರಿಗಟ್ಟಿದ ಶ್ರೇಯಸ್ ಅಯ್ಯರ್
ವಿಕೆಟ್ ಒಪ್ಪಿಸಿದ ಡೆಲ್ಲಿ ಕ್ಯಾಪಿಟಲ್ಸ್ ಆರಂಭಿಕರು.
ಶಿಖರ್ ಧವನ್ (8) ಹಾಗೂ ಪೃಥ್ವಿ ಶಾ (12) ಔಟ್.
ಕಾರ್ತಿಕ್ ತ್ಯಾಗಿ ಹಾಗೂ ಚೇತನ್ ಸಕರಿಯಾಗೆ ತಲಾ ಒಂದು ವಿಕೆಟ್
ಕ್ರೀಸ್ನಲ್ಲಿ ಶ್ರೇಯಸ್ ಅಯ್ಯರ್ ಹಾಗೂ ರಿಷಭ್ ಪಂತ್ ಬ್ಯಾಟಿಂಗ್
ಚೇತನ್ ಸಕರಿಯಾ ಎಸೆತದಲ್ಲಿ ಲಿಯಾಮ್ ಲಿವಿಂಗ್ಸ್ಟೋನ್ಗೆ ಸುಲಭ ಕ್ಯಾಚ್ ನೀಡಿ ನಿರ್ಗಮಿಸಿದ ಪೃಥ್ವಿ ಶಾ (10)
ರಾಜಸ್ಥಾನ್ ರಾಯಲ್ಸ್ ಉತ್ತಮ ಬೌಲಿಂಗ್- ಪವರ್ಪ್ಲೇನಲ್ಲಿ ರನ್ಗಾಗಿ ಪರದಾಡುತ್ತಿರುವ ಡೆಲ್ಲಿ ಕ್ಯಾಪಿಟಲ್ಸ್
ಕ್ರೀಸ್ನಲ್ಲಿ ಪೃಥ್ವಿ ಶಾ ಹಾಗೂ ಶ್ರೇಯಸ್ ಅಯ್ಯರ್ ಬ್ಯಾಟಿಂಗ್.
8 ಎಸೆತಗಳಲ್ಲಿ 8 ರನ್ ಬಾರಿಸಿ ವಿಕೆಟ್ ಒಪ್ಪಿಸಿದ ಶಿಖರ್ ಧವನ್. ಮೊದಲ ಯಶಸ್ಸು ತಂದುಕೊಟ್ಟ ಯುವ ವೇಗಿ ಕಾರ್ತಿಕ್ ತ್ಯಾಗಿ.
ಕಾರ್ತಿಕ್ ತ್ಯಾಗಿ ಕಮಾಲ್- ರಕ್ಷಣಾತ್ಮಕ ಆಟಕ್ಕೆ ಮುಂದಾದ ಶಿಖರ್ ಧವನ್..ಬ್ಯಾಟ್ ತಾಗಿ ಚೆಂಡು ವಿಕೆಟ್ಗೆ- ಧವನ್ ಬೌಲ್ಡ್
ಡೆಲ್ಲಿ ಕ್ಯಾಪಿಟಲ್ಸ್ ನಿಧಾನಗತಿಯ ಬ್ಯಾಟಿಂಗ್. ಮೊದಲ 3 ಓವರ್ನಲ್ಲಿ 18 ರನ್ ಮಾತ್ರ.
ಲೊಮರರ್ ಎಸೆತಕ್ಕೆ ಬ್ಯೂಟಿಫುಲ್ ಸ್ಕ್ವೇರ್ ಕಟ್…ಚೆಂಡು ಬೌಂಡರಿಗೆ- ಮೊದಲ ಬೌಂಡರಿ ಬಾರಿಸಿದ ಶಿಖರ್ ಧವನ್
ಎಡಗೈ ಸ್ಪಿನ್ನರ್ ಮಹಿಪಾಲ್ ಲೊಮರರ್ಗೆ ಚೆಂಡು ನೀಡಿದ ಸಂಜು ಸ್ಯಾಮ್ಸನ್
ಡೆಲ್ಲಿ ಕ್ಯಾಪಿಟಲ್ಸ್ ಆರಂಭಿಕರು
ಪೃಥ್ವಿ ಶಾ
ಶಿಖರ್ ಧವನ್
ಮೊದಲ ಓವರ್- ಮುಸ್ತಫಿಜುರ್ ರಹಮಾನ್
.@IPL, can we play an extra overseas batter today? ??#DCvRR | #HallaBol | #RoyalsFamily | @KumarSanga2 pic.twitter.com/Zcb4Ro9Arw
— Rajasthan Royals (@rajasthanroyals) September 25, 2021
ಕಳೆದ ಸೀಸನ್ನಲ್ಲಿ ಯುಎಇನಲ್ಲಿ ರಾಜಸ್ಥಾನ್ ವಿರುದ್ದ ಡೆಲ್ಲಿ 2 ಪಂದ್ಯಗಳನ್ನು ಗೆದ್ದುಕೊಂಡಿತ್ತು. ಇದೀಗ ಅಬುಧಾಬಿಯಲ್ಲಿ ಇದೇ ಮೊದಲ ಬಾರಿಗೆ ಮುಖಾಮುಖಿಯಾಗುತ್ತಿದೆ. ಇಲ್ಲೂ ಗೆಲ್ಲುವ ವಿಶ್ವಾಸದಲ್ಲಿ ಡೆಲ್ಲಿ ಹುಡುಗರು. ಸೇಡು ತೀರಿಸಿಕೊಳ್ಳುವ ತವಕದಲ್ಲಿ ರಾಜಸ್ಥಾನ್ ಬಾಯ್ಸ್.
W v/s RR in Dubai ✅
W v/s RR in Sharjah ✅
Aiming for another W now in Abu Dhabi ?️#YehHaiNayiDilli #IPL2021 #DCvRR pic.twitter.com/1u2hRZM8NN— Delhi Capitals (@DelhiCapitals) September 25, 2021
A Royals debut for @shamsi90 in #DCvRR! ?#HallaBol | #IPL2021 | @Dream11 pic.twitter.com/w6yyrSzJXv
— Rajasthan Royals (@rajasthanroyals) September 25, 2021
One forced change ?? Lalit Yadav IN for Marcus Stoinis ↩️
What are your thoughts on our Playing XI for #DCvRR? ?#YehHaiNayiDilli #IPL2021 @aplapollo_tubes pic.twitter.com/acpe3bob1s
— Delhi Capitals (@DelhiCapitals) September 25, 2021
Team News
1⃣ change for @DelhiCapitals as Lalit Yadav named in the team.
2⃣ changes for @rajasthanroyals as @DavidMillerSA12 & @shamsi90 picked in the team. #VIVOIPL #DCvRR
Follow the match ? https://t.co/SKdByWvPFO
Here are the Playing XIs ? pic.twitter.com/W1PIEjiRrA
— IndianPremierLeague (@IPL) September 25, 2021
? Toss Update ?@IamSanjuSamson has won the toss & @rajasthanroyals have elected to bowl against @DelhiCapitals. #VIVOIPL #DCvRR
Follow the match ? https://t.co/SKdByWvPFO pic.twitter.com/J520sRNtcm
— IndianPremierLeague (@IPL) September 25, 2021
ದೆಹಲಿ ಕ್ಯಾಪಿಟಲ್ಸ್ (ಪ್ಲೇಯಿಂಗ್ ಇಲೆವೆನ್): ಪೃಥ್ವಿ ಶಾ, ಶಿಖರ್ ಧವನ್, ಶ್ರೇಯಸ್ ಅಯ್ಯರ್, ರಿಷಭ್ ಪಂತ್ (ನಾಯಕ), ಲಲಿತ್ ಯಾದವ್, ಶಿಮ್ರಾನ್ ಹೆಟ್ಮೆಯರ್, ಅಕ್ಸರ್ ಪಟೇಲ್, ರವಿಚಂದ್ರನ್ ಅಶ್ವಿನ್, ಕಾಗಿಸೊ ರಬಾಡಾ, ಅನ್ರಿಕ್ ನೋಕಿಯಾ, ಅವೇಶ್ ಖಾನ್
ರಾಜಸ್ಥಾನ ರಾಯಲ್ಸ್ (ಪ್ಲೇಯಿಂಗ್ ಇಲೆವೆನ್): ಯಶಸ್ವಿ ಜೈಸ್ವಾಲ್, ಸಂಜು ಸ್ಯಾಮ್ಸನ್ (ನಾಯಕ), ಲಿಯಾಮ್ ಲಿವಿಂಗ್ಸ್ಟೋನ್, ಡೇವಿಡ್ ಮಿಲ್ಲರ್, ಮಹಿಪಾಲ್ ಲೊಮರ್, ರಿಯಾನ್ ಪರಾಗ್, ರಾಹುಲ್ ತೆವಾಟಿಯಾ, ಕಾರ್ತಿಕ್ ತ್ಯಾಗಿ, ಚೇತನ್ ಸಕಾರಿಯಾ, ಮುಸ್ತಫಿಜುರ್ ರಹಮಾನ್, ತಬ್ರೇಜ್ ಶಮ್ಸಿ
ಎವಿನ್ ಲೂಯಿಸ್ ಹಾಗೂ ಕ್ರಿಸ್ ಮೋರಿಸ್ ಔಟ್
ಡೇವಿಡ್ ಮಿಲ್ಲರ್ ಹಾಗೂ ತಬ್ರೇಝ್ ಶಮ್ಸಿ ಇನ್
ಟಾಸ್ ಗೆದ್ದ ರಾಜಸ್ಥಾನ್ ರಾಯಲ್ಸ್ ನಾಯಕ ಸಂಜು ಸ್ಯಾಮ್ಸನ್- ಬೌಲಿಂಗ್ ಆಯ್ಕೆ
— Rajasthan Royals (@rajasthanroyals) September 25, 2021
Beating the heat ☀️, the @SHetmyer style! ? ?#VIVOIPL #DCvRR pic.twitter.com/boqcVqQ3oG
— IndianPremierLeague (@IPL) September 25, 2021
Hello & welcome from Abu Dhabi for Match 3⃣6⃣ of the #VIVOIPL ?
It's the @RishabhPant17-led @DelhiCapitals who will take on @IamSanjuSamson's @rajasthanroyals. ? ?#DelhiCapitals or #RR – which team are you rooting for? ?? #DCvRR pic.twitter.com/vkwJLmzxId
— IndianPremierLeague (@IPL) September 25, 2021
.@AnrichNortje02's first game in #IPL2021 went like ⬇️ ⚡
What speeds is he going to clock today? ?#YehHaiNayiDilli #DCvRR pic.twitter.com/hb264cRi6k
— Delhi Capitals (@DelhiCapitals) September 25, 2021
DC tigers on their way to the ?️ ?
A ROYAL clash awaits. ⚔️ ?#YehHaiNayiDilli #IPL2021 #DCvRR @SofitelDXBPalm pic.twitter.com/NNwnbcXFRC
— Delhi Capitals (@DelhiCapitals) September 25, 2021
Weekend outing. ?#DCvRR | #HallaBol | #IPL2021 | #SambhaalLenge | @goeltmt pic.twitter.com/RAc2rPps9d
— Rajasthan Royals (@rajasthanroyals) September 25, 2021
Published On - 2:33 pm, Sat, 25 September 21