16ನೇ ಆವೃತ್ತಿಯ ಐಪಿಎಲ್ನ 8ನೇ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ತಂಡವನ್ನು 5 ರನ್‌ಗಳಿಂದ ಮಣಿಸಿದ ಪಂಜಾಬ್ ಕಿಂಗ್ಸ್ ತಂಡ ಸತತ ಎರಡನೇ ಗೆಲುವಿನೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ 2ನೇ ಸ್ಥಾನಕ್ಕೇರಿದೆ. ಮೊದಲ ಬಾರಿಗೆ ಐಪಿಎಲ್ ಆಕ್ಷನ್‌ಗೆ ಸಾಕ್ಷಿಯಾದ ಗುವಾಹಟಿಯಲ್ಲಿ ರೋಚಕ ಪಂದ್ಯ ನಡೆಯಿತು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪಂಜಾಬ್ ಕಿಂಗ್ಸ್ ತಂಡ ನಾಯಕ ಶಿಖರ್ ಧವನ್ ಅವರ ಅಜೇಯ 86 ರನ್ ಹಾಗೂ ಪ್ರಬ್ಸಿಮ್ರನ್ ಅವರ 60 ರನ್ಗಳ ಇನ್ನಿಂಗ್ಸ್ನಿಂದಾಗಿ ನಿಗದಿತ 20 ಓವರ್ಗಳಲ್ಲಿ 4 ವಿಕೆಟ್ ಕಳೆದುಕೊಂಡು 197 ರನ್ ಗಳಿಸಿತು. ಈ ಗುರಿ ಬೆನ್ನಟ್ಟಿದ ರಾಜಸ್ಥಾನ್ ತಂಡ ಕೊನೆಯವರೆಗೂ ಹೋರಾಟ ನೀಡಿತ್ತಾದರೂ ಗೆಲುವು ಸಾಧಿಸಲು ಸಾಧ್ಯವಾಗಲಿಲ್ಲ. ತಂಡದ ಪರ ನಾಯಕ ಸಂಜು ಸ್ಯಾಮ್ಸನ್ ಅತ್ಯಧಿಕ 42 ರನ್ ಬಾರಿಸಿದರೆ ಕೊನೆಯಲ್ಲಿ ಹಿಟ್ಮೆಯರ್ 36 ರನ್ ಹಾಗೂ ದೃವ್ ಜುರೇಲ್ ಅಜೇಯ 32 ರನ್ಗಳ ಹೋರಾಟದ ಇನ್ನಿಂಗ್ಸ್ ಆಡಿದರು.
ಕೊನೆಯ ಓವರ್‌ನಲ್ಲಿ 16 ರನ್ಗಳ ಗುರಿ ಬೆನ್ನಟ್ಟಿದ ರಾಜಸ್ಥಾನ್ ತಂಡ 15 ರನ್ ಗಳಿಸಲಷ್ಟೇ ಶಕ್ತವಾಗಿ ಕೇವಲ 5 ರನ್ಗಳ ರೋಚಕ ಸೋಲು ಅನುಭವಿಸಿತು.
ಶಿಮ್ರಾನ್ ಹೆಟ್ಮೆಯರ್ ಔಟಾಗಿದ್ದಾರೆ. ಕೊನೆಯ ಓವರ್‌ನ ಎರಡನೇ ಎಸೆತದಲ್ಲಿ ಅವರು ರನ್ ಔಟ್ ಆದರು. ಇದರೊಂದಿಗೆ ರಾಜಸ್ಥಾನದ ಆರನೇ ವಿಕೆಟ್ ಕೂಡ ಪತನವಾಯಿತು.
ಅರ್ಷದೀಪ್ ಸಿಂಗ್ ಎಸೆದ 19ನೇ ಓವರ್‌ನಲ್ಲಿ ಜುರೆಲ್ ಒಂದು ಸಿಕ್ಸರ್ ಮತ್ತು 2 ಬೌಂಡರಿಗಳನ್ನು ಬಾರಿಸಿದರು.
ಸ್ಯಾಮ್ ಕರನ್ ಎಸೆದ 18ನೇ ಓವರ್‌ನಲ್ಲಿ ರಾಜಸ್ಥಾನ 19 ರನ್ ಗಳಿಸಿತು. ಹೆಟ್ಮೆಯರ್ ಮತ್ತು ಜುರೆಲ್ ಕೊನೆಯಲ್ಲಿ ಬಿರುಸಿನ ಆಟ ಪ್ರದರ್ಶಿಸುತ್ತಿದ್ದಾರೆ. ಹೆಟ್ಮೆಯರ್ ಓವರ್‌ನ ಎರಡನೇ ಮತ್ತು ಅಂತಿಮ ಎಸೆತದಲ್ಲಿ 2 ಸಿಕ್ಸರ್‌ಗಳನ್ನು ಬಾರಿಸಿದರು.
17ನೇ ಓವರ್ ಎಸೆದ ನಾಥನ್ ಎಲ್ಲಿಸ್‌ಗೆ ಮೊದಲು, ಹೆಟ್ಮೆಯರ್ ಡೀಪ್ ಮಿಡ್ ವಿಕೆಟ್‌ನಲ್ಲಿ ಸಿಕ್ಸರ್ ಹೊಡೆದರು. ಆ ಬಳಿಕ ಧ್ರುವ್ ಜುರೆಲ್ ಕೂಡ ಸಿಕ್ಸರ್ ಬಾರಿಸಿದರು. ಆ ಓವರ್‌ನಲ್ಲಿ ರಾಜಸ್ಥಾನ 16 ರನ್ ಗಳಿಸಿತು.
15ನೇ ಓವರ್‌ನಲ್ಲಿ ದೇವದತ್ ಪಡಿಕಲ್ ರೂಪದಲ್ಲಿ ರಾಜಸ್ಥಾನ ಮತ್ತೊಂದು ವಿಕೆಟ್ ಕಳೆದುಕೊಂಡಿತು. ಸಾಕಷ್ಟು ಒತ್ತಡದಲ್ಲಿ ಆಡುತ್ತಿದ್ದ ಪಡಿಕ್ಕಲ್ ಅವರನ್ನು ನಾಥನ್ ಬಲಿಪಶು ಮಾಡಿದರು.
ನಾಥನ್ ಎಲ್ಲಿಸ್ ಮೂರನೇ ವಿಕೆಟ್ ಪಡೆದರು. ಅವರು ಸ್ಥಳೀಯ ಹುಡುಗ ರಿಯಾನ್ ಪರಾಗ್ ಅವರನ್ನು ಬಲಿಪಶು ಮಾಡಿದರು. ಪರಾಗ್ ಮಿಡ್-ಆನ್‌ನಲ್ಲಿ ಬಿಗ್ ಶಾಟ್ ಆಡಲು ಯತ್ನಿಸಿದರು. ಆದರೆ ಚೆಂಡು ಅಂದುಕೊಂಡತೆ ಸಿಕ್ಸರ್ ಹೊಗಲಿಲ್ಲ, ಶಾರುಖ್ ಸುಲಭ ಕ್ಯಾಚ್ ಪಡೆದರು.
13ನೇ ಓವರ್‌ನಲ್ಲಿ ರಿಯಾನ್ ಪರಾಗ್ ಕೊನೆಯ ಎಸೆತದಲ್ಲಿ ಸಿಕ್ಸರ್ ಬಾರಿಸಿದರು. ಚೆಂಡನ್ನು ಲಾಂಗ್ ಆನ್ ಕಡೆ ಆಡಿದ ಪರಾಗ್ ಅದ್ಭುತ ಸಿಕ್ಸರ್ ಹೊಡೆದರು. ಈ ಓವರ್‌ನ ಮೂರನೇ ಎಸೆತದಲ್ಲಿ ಬೌಂಡರಿ ಕೂಡ ಬಂತು.
ರಾಜಸ್ಥಾನ್ ರಾಯಲ್ಸ್ 100 ರನ್ ಪೂರೈಸಿದ್ದು, ರಿಯಾನ್ ಪರಾಗ್ ಸಿಕ್ಸರ್ ಬಾರಿಸುವ ಮೂಲಕ ತಂಡವನ್ನು ಶತಕದ ಗಡಿ ಡಾಟಿಸಿದರು.
ನಾಥನ್ ಎಲ್ಲಿಸ್ ಎರಡನೇ ವಿಕೆಟ್ ಪಡೆದಿದ್ದಾರೆ. ಈ ಬಾರಿ ಸಂಜು ಸ್ಯಾಮ್ಸನ್ ಅವರನ್ನು ಬಲಿಪಶು ಮಾಡಿದ್ದಾರೆ. ಸ್ಯಾಮ್ಸನ್ 25 ಎಸೆತಗಳಲ್ಲಿ 42 ರನ್ ಗಳಿಸಿ ವಿಕೆಟ್ ಒಪ್ಪಿಸಿದ್ದಾರೆ.
ಬಟ್ಲರ್ ವಿಕೆಟ್ ಬಳಿಕ ರಾಜಸ್ಥಾನ್ ಇನ್ನಿಂಗ್ಸ್ ಮಂದಗತಿಯಲ್ಲಿ ಸಾಗುತ್ತಿದೆ. ಈಗಾಗಲೆ 10 ಓವರ್ಗಳ ಆಟ ಮುಗಿದಿದ್ದು ರಾಜಸ್ಥಾನ್ ತಂಡ ಕೇವಲ 89 ರನ್ ಗಳಿಸಿದೆ.
ಪವರ್ ಪ್ಲೇನ ಕೊನೆಯ ಓವರ್ ಎಸೆದ ನಾಥನ್ ಎಲ್ಲಿಸ್ ಜೋಸ್ ಬಟ್ಲರ್ ವಿಕೆಟ್ ಪಡೆದಿದ್ದಾರೆ. ಎಲ್ಲಿಸ್ ಎಸೆದ ಚೆಂಡು ಬಟಲ್ರ್ ಅವರ ಬ್ಯಾಟ್ನ ಅಂಚಿಗೆ ತಾಗಿ ಬಳಿಕ ಪ್ಯಾಡ್ಗೆ ತಗಲು ಗಾಳಿಯಲ್ಲಿ ಹೋಯಿತು. ಕೂಡಲೇ ಓಡಿ ಬಂದ ಎಲ್ಲಿಸ್ ಅದ್ಭುತ ಕ್ಯಾಚ್ ತೆಗೆದುಕೊಂಡರು.
ಐದನೇ ಓವರ್ ಬೌಲ್ ಮಾಡಿದ ಹರ್ಪ್ರೀತ್ ಬ್ರಾರ್ ಎರಡು ಬೌಂಡರಿ ತಿಂದರು. ಸ್ಯಾಮ್ಸನ್ ಓವರ್‌ನ ಎರಡನೇ ಮತ್ತು ಮೂರನೇ ಎಸೆತಗಳಲ್ಲಿ ಸತತ ಎರಡು ಬೌಂಡರಿಗಳನ್ನು ಬಾರಿಸಿದರು. ಆ ಓವರ್‌ನಲ್ಲಿ ರಾಜಸ್ಥಾನ 9 ರನ್ ಗಳಿಸಿತು.
ಅರ್ಶ್ದೀಪ್ ಸಿಂಗ್ ಈಗ ವಿಕೆಟ್ ನಂತರ 2 ಸಿಕ್ಸರ್ ತಿಂದಿದ್ದಾರೆ. ನಾಲ್ಕನೇ ಓವರ್‌ನ ನಾಲ್ಕನೇ ಎಸೆತದಲ್ಲಿ ಸಂಜು ಸ್ಯಾಮ್ಸನ್ ಅದ್ಭುತ ಸಿಕ್ಸರ್ ಬಾರಿಸಿದರು. ಬಟ್ಲರ್ ಅಂತಿಮ ಚೆಂಡನ್ನು ಲಾಂಗ್ ಆನ್‌ನಲ್ಲಿ ಸಿಕ್ಸರ್ ಬಾರಿಸಿದರು.
ಇಂದು ಬಟ್ಲರ್ ಬದಲು ಇನ್ನಿಂಗ್ಸ್ ಆರಂಭಿಕರಾಗಿ ಕಣಕ್ಕಿಳಿದಿದ್ದ ಅಶ್ವಿನ್ ಯಾವುದೇ ರನ್ ಗಳಿಸದೆ 4ನೇ ಓವರ್‌ನಲ್ಲಿ ಮೀಡ್ ಆನ್‌ನಲ್ಲಿ ನಿಂತಿದ್ದ ಧವನ್ಗೆ ಕ್ಯಾಚಿತ್ತು ಔಟಾದರು.
ಕರನ್ ಎಸೆದ 3ನೇ ಓವರ್‌ನ ಮೂರನೇ ಎಸೆತದಲ್ಲಿ ಬಟ್ಲರ್ ಡೀಪ್ ಕಡೆ ಶಾಟ್ ಆಡಿದರು. ಅಲ್ಲಿ ಕ್ಯಾಚ್ ಹಿಡಿಯಲು ಪ್ರಯತ್ನಿಸಿದ ಹಪ್ರೀತ್ ಬ್ರಾರ್ ಸುಲಭ ಕ್ಯಾಚ್ ಕೈಚೆಲ್ಲಿದರು. ಆದರೆ ಇದೇ ಬ್ರಾರ್ ಹಿಂದಿನ ಬಾಲ್ನಲ್ಲಿ ಅದ್ಭುತ ಫಿಲ್ಡಿಂಗ್ ಮಾಡಿ ಬೌಂಡರಿ ತಡೆದಿದ್ದರು.
2ನೇ ಓವರ್ ಮೊದಲ ಎಸೆತದಲ್ಲಿ ಬೌಂಡರಿ ಬಾರಿಸಿದ್ದ ಜೈಸ್ವಾಲ್, ಮೂರನೇ ಎಸೆತದಲ್ಲಿ ಶಾರ್ಟ್ನಲ್ಲಿ ಕ್ಯಾಚಿತ್ತು ಔಟಾಗಿದ್ದಾರೆ. ಪಂಜಾಬ್ಗೆ ಬಿಗ್ ವಿಕೆಟ್ ಸಿಕ್ಕಿದೆ.
ರಾಜಸ್ಥಾನದ ಇನ್ನಿಂಗ್ಸ್ ಆರಂಭವಾಗಿದೆ. ಆದರೆ ಆರಂಭದಲ್ಲೇ ಕಳೆದ ಪಂದ್ಯದಲ್ಲಿ ಬಿರುಸಿನ ಅರ್ಧಶತಕ ಸಿಡಿಸಿದ್ದ ಜೋಸ್ ಬಟ್ಲರ್ ಓಪನಿಂಗ್ಗೆ ಬಾರದೆ, ಯಶಸ್ವಿ ಜೈಸ್ವಾಲ್ ಜತೆ ರವಿಚಂದ್ರನ್ ಅಶ್ವಿನ್ ಬಂದಿರುವುದು ತಂಡದ ಅಭಿಮಾನಿಗಳು ಸೇರಿದಂತೆ ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ.
20ನೇ ಓವರ್ ಎಸೆದ ಜೇಸನ್ ಹೋಲ್ಡರ್ ಈ ಓವರ್‌ನಲ್ಲಿ ಕೇವಲ 1 ಬೌಂಡರಿ ಬಿಟ್ಟುಕೊಟ್ಟು, ಶಾರುಖ್ ವಿಕೆಟ್ ಪಡೆದರು. ಅಂತಿಮವಾಗಿ ಪಂಜಾಬ್ ತಂಡ 4 ವಿಕೆಟ್ ಕಳೆದುಕೊಂಡು 20 ಓವರ್ಗಳಲ್ಲಿ 197 ರನ್ ಬಾರಿಸಿತು.
19ನೇ ಓವರ್‌ನಲ್ಲಿ ಧವನ್ 1 ಬೌಂಡರಿ ಹಾಗೂ 1 ಸಿಕ್ಸರ್ ನೆರವಿನಿಂದ 16 ರನ್ ದೋಚಿದರು.
ಹೋಲ್ಡರ್ ಎಸೆದ 18ನೇ ಓವರ್‌ನಲ್ಲಿ 1 ಸಿಕ್ಸರ್ ಬಂತು. ಓವರ್‌ನ 4ನೇ ಎಸೆತದಲ್ಲಿ ಧವನ್ ರಿವರ್ಸ್ ಶಾರ್ಟ್ ಆಡುವ ಮೂಲಕ ಡೀಪ್ ಬ್ಯಾಕ್ವರ್ಡ್ನಲ್ಲಿ ಭರ್ಜರಿ ಸಿಕ್ಸರ್ ಬಾರಿಸಿದರು.
ಜಿತೇಶ್ ವಿಕೆಟ್ ಬಳಿಕ ಬಂದಿದ್ದ ಸಿಕಂದರ್ ರಜಾ 17ನೇ ಓವರ್‌ನ ಮೊದಲ ಎಸೆತದಲ್ಲೇ ಕ್ಲೀನ್ ಬೌಲ್ಡ್ ಆಗುವುದರೊಂದಿಗೆ ಕೇವಲ 1 ರನ್ಗಳಿಗೆ ತಮ್ಮ ಇನ್ನಿಂಗ್ಸ್ ಮುಗಿಸಿದರು.
ಯುಜುವೇಂದ್ರ ಚಹಾಲ್ ದೊಡ್ಡ ವಿಕೆಟ್ ಪಡೆದರು.ಓವರ್‌ನ 4ನೇ ಎಸೆತವನ್ನು ಸಿಕ್ಸರ್ ಬಾರಿಸುವ ಯತ್ನದಲ್ಲಿ ಜಿತೇಶ್ ಶರ್ಮಾ ಲಾಂಗ್ ಆಫ್ನಲ್ಲಿ ಕ್ಯಾಚಿತ್ತು ಔಟಾದರು.
15ನೇ ಓವರ್‌ನ 3ನೇ ಎಸೆತವನ್ನು ಎಕ್ಸ್ಟ್ರಾ ಕವರ್ ಮೇಲೆ ಸಿಕ್ಸರ್ ಬಾರಿಸಿದ ಜಿತೇಶ್ ಶರ್ಮಾ, ತಂಡವನ್ನು 150 ರನ್ಗಳ ಗಡಿ ದಾಟಿಸಿದರು.
ಚಹಲ್ ಎಸೆದ 13ನೇ ಓವರ್‌ನಲ್ಲಿ 3 ಮತ್ತು 4ನೇ ಎಸೆತವನ್ನು ಡೀಪ್ ಕವರ್ನಲ್ಲಿ ಬೌಂಡರಿ ಬಾರಿಸಿದ ಧವನ್ ಅರ್ಧಶತಕ ಪೂರೈಸಿದರು. ಇದು ಧವನ್ ಅವರ 48ನೇ ಟಿ20 ಅರ್ಧಶತಕವಾಗಿದೆ.ಈ ಓವರ್‌ನಲ್ಲಿ ಒಟ್ಟು 3 ಬೌಂಡರಿ ಬಂದವು
12ನೇ ಓವರ್ ಎಸೆಯಲು ಬಂದ ಚಹಲ್ ಬರೋಬ್ಬರಿ 17 ರನ್ ಬಿಟ್ಟುಕೊಟ್ಟರು. ಈ ಓವರ್‌ನಲ್ಲಿ ಜಿತೇಶ್ 2 ಬ್ಯಾಕ್ ಟು ಬ್ಯಾಕ್ ಬೌಂಡರಿ ಬಾರಿಸಿದರೆ, ಕೊನೆಯ ಎಸೆತದಲ್ಲಿ ಧವನ್ ಲಾಂಗ್ ಆಫ್ನಲ್ಲಿ ಭರ್ಜರಿ ಸಿಕ್ಸರ್ ಬಾರಿಸಿದರು.
ಅರ್ಧಶತಕ ಸಿಡಿಸಿ ಸ್ಫೋಟಕ ಬ್ಯಾಟಿಂಗ್ಗೆ ಮುಂದಾಗಿದ್ದ ಪ್ರಬ್ಸಿಮ್ರನ್, ಜೇಸನ್ ಹೋಲ್ಡರ್ ಬೌಲಿಂಗ್ನಲ್ಲಿ ಲಾಂಗ್ ಆಫ್ನಲ್ಲಿ ಕ್ಯಾಚಿತ್ತು ಔಟಾಗಿದ್ದಾರೆ. ಬಟ್ಲರ್ ಅದ್ಭುತ ಕ್ಯಾಚ್ ಹಿಡಿದರು.
9ನೇ ಓವರ್ ಎಸೆದ ಬೋಲ್ಟ್ ಅವರ ಮೊದಲ ಎಸೆತದಲ್ಲೇ ಪ್ರಬ್ಸಿಮ್ರಾನ್ ಬೌಲರ್ ತಲೆಯ ಮೇಲೆ ಸ್ಟ್ರೈಟ್ ಸಿಕ್ಸರ್ ಬಾರಿಸಿದರು.
ಪವರ್ ಪ್ಲೇ ಮುಗಿದ ನಂತರ ಪಂಜಾಬ್ ಬ್ಯಾಟಿಂಗ್ ನಿಧಾನವಾಗಿದೆ. 7ನೇ ಓವರ್‌ನಲ್ಲಿ ಬೌಂಡರಿ ಬರಲಿಲ್ಲ. ಆದರೆ 8ನೇ ಓವರ್‌ನಲ್ಲಿ ಧವನ್ ಕೀಪರ್ ಹಿಂದೆ ಬೌಂಡರಿ ಬಾರಿಸಿದರು.
ಪಂಜಾಬ್ ಪಾಲಿನ 6 ಓವರ್ಗಳು ಮುಗಿದಿವೆ. ಇದರರ್ಥ ಪವರ್ ಪ್ಲೇ ಮುಗಿದಿದೆ. ಈ 6 ಓವರ್ಗಳಲ್ಲಿ ಪಂಜಾಬ್ ಯಾವುದೇ ವಿಕೆಟ್ ನಷ್ಟವಿಲ್ಲದೆ 63 ರನ್ ಬಾರಿಸಿದೆ.ಈ ಓವರ್ನಲ್ಲೂ 1 ಬೌಂಡರಿ ಬಂತು.
5ನೇ ಓವರ್ ಎಸೆದ ಅಶ್ವಿನ್ ಕೂಡ ಕೊಂಚ ದುಬಾರಿಯಾದರು. ಈ ಓವರ್ನಲ್ಲು ಪ್ರಬ್ಸಿಮ್ರಾನ್ 2 ಬೌಂಡರಿ ಬಾರಿಸಿದರು. ಇದರೊಂದಿಗೆ ಪಂಜಾಬ್ ಸ್ಕೋರ್ ಅರ್ಧಶತಕ ದಾಟಿದೆ.
4ನೇ ಓವರ್ ಎಸೆದ ಅಸೀಫ್ ಈ ಓವರ್‌ನಲ್ಲಿ ಬರೋಬ್ಬರಿ 19 ರನ್ ಬಿಟ್ಟುಕೊಟ್ಟರು. ಈ ಓವರ್‌ನಲ್ಲಿ ಪ್ರಭ್ಸಿಮ್ರಾನ್ ಸಿಂಗ್ 1 ಸಿಕ್ಸರ್ ಹಾಗೂ 3 ಬೌಂಡರಿ ಬಾರಿಸಿದರು.
ಬೋಲ್ಟ್ ಎಸೆದ 3ನೇ ಓವರ್‌ನಲ್ಲಿ ನಾಯಕ ಶಿಖರ್ ಧವನ್ ಎರಡು ಬೌಂಡರಿ ಬಾರಿಸಿದರು.
2ನೇ ಓವರ್‌ನಲ್ಲಿ ಪ್ರಬ್ಸಿಮ್ರನ್ ಥರ್ಡ್ ಮ್ಯಾನ್ನಲ್ಲಿ ಭರ್ಜರಿ ಸಿಕ್ಸರ್ ಬಾರಿಸಿದರು. ಈ ಓವರ್ನಂತರ ಪಂಜಾಬ್ 16 ರನ್ ಗಳಿಸಿದೆ.
ಪಂದ್ಯ ಆರಂಭವಾಗಿದ್ದು, ಪಂಜಾಬ್ ಪರ ನಾಯಕ ಶಿಖರ್ ಧವನ್ ಮತ್ತು ಪ್ರಭಾಸಿಮ್ರಾನ್ ಸಿಂಗ್ ಕಣಕ್ಕಿಳಿದಿದ್ದಾರೆ. ರಾಜಸ್ಥಾನ ಪರ ಟ್ರೆಂಟ್ ಬೌಲ್ಟ್ ಬೌಲಿಂಗ್ ಆರಂಭಿಸಿದ್ದಾರೆ.
ಶಿಖರ್ ಧವನ್ (ನಾಯಕ), ಪ್ರಭಾಸಿಮ್ರಾನ್ ಸಿಂಗ್, ಭಾನುಕಾ ರಾಜಪಕ್ಸೆ, ಜಿತೇಶ್ ಶರ್ಮಾ, ಶಾರುಖ್ ಖಾನ್, ಸ್ಯಾಮ್ ಕರನ್, ಸಿಕಂದರ್ ರಜಾ, ನಾಥನ್ ಎಲ್ಲಿಸ್, ಹರ್‌ಪ್ರೀತ್ ಬ್ರಾರ್, ರಾಹುಲ್ ಚಾಹರ್, ಅರ್ಷದೀಪ್ ಸಿಂಗ್.
ಸಂಜು ಸ್ಯಾಮ್ಸನ್ (ನಾಯಕ), ಯಶಸ್ವಿ ಜೈಸ್ವಾಲ್, ಜೋಸ್ ಬಟ್ಲರ್, ದೇವದತ್ ಪಡಿಕ್ಕಲ್, ಶಿಮ್ರಾನ್ ಹೆಟ್ಮೆಯರ್, ರಿಯಾನ್ ಪರಾಗ್, ಜೇಸನ್ ಹೋಲ್ಡರ್, ರವಿಚಂದ್ರನ್ ಅಶ್ವಿನ್, ಯುಜ್ವೇಂದ್ರ ಚಾಹಲ್, ಟ್ರೆಂಟ್ ಬೌಲ್ಟ್, ಕೆಎಂ ಆಸಿಫ್.
ಕಳೆದ ಭಾನುವಾರ ರಾಜಸ್ಥಾನ್ ರಾಯಲ್ಸ್, ಸನ್ ರೈಸರ್ಸ್ ಹೈದರಾಬಾದ್ ತಂಡವನ್ನು 72 ರನ್ ಗಳ ದೊಡ್ಡ ಅಂತರದಿಂದ ಸೋಲಿಸಿತ್ತು. ಇತ್ತ ಮೊಹಾಲಿಯಲ್ಲಿ ನಡೆದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡ, ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಡಕ್‌ವರ್ತ್ ಲೂಯಿಸ್ ನಿಯಮದಡಿಯಲ್ಲಿ ಏಳು ರನ್‌ಗಳಿಂದ ಸೋಲಿಸಿತು.
ಟಾಸ್ ಗೆದ್ದ ರಾಜಸ್ಥಾನ್ ನಾಯಕ ಸಂಜು ಸ್ಯಾಮ್ಸನ್ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದ್ದಾರೆ. ಹೀಗಾಗಿ ಪಂಜಾಬ್ ತಂಡ ಮೊದಲು ಬ್ಯಾಟಿಂಗ್ ಮಾಡಲಿದೆ.
Published On - 7:01 pm, Wed, 5 April 23