ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ನ (IPL 2022) 13ನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು 4 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ. ಇದಕ್ಕೂ ಮುನ್ನ ಮೊದಲು ಬ್ಯಾಟ್ ಮಾಡಿದ ರಾಜಸ್ಥಾನ ರಾಯಲ್ಸ್ ತಂಡವು ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB vs RR) ತಂಡಕ್ಕೆ 170 ರನ್ಗಳ ಟಾರ್ಗೆಟ್ ನೀಡಿತು. ಜೋಸ್ ಬಟ್ಲರ್ (70) ಅವರ ಆಕರ್ಷಕ ಅರ್ಧಶತಕದ ನೆರವಿನಿಂದ ರಾಜಸ್ಥಾನ್ ರಾಯಲ್ಸ್ ತಂಡವು ನಿಗದಿತ 20 ಓವರ್ಗಳಲ್ಲಿ 3 ವಿಕೆಟ್ ಕಳೆದುಕೊಂಡು 169 ರನ್ಗಳಿಸಿತು.
ಈ ಗುರಿಯನ್ನು ಬೆನ್ನತ್ತಿದ ಆರ್ಸಿಬಿ 87 ರನ್ಗೆ 5 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಈ ಹಂತದಲ್ಲಿ ಜೊತೆಯಾದ ದಿನೇಶ್ ಕಾರ್ತಿಕ್ ಹಾಗೂ ಶಹಬಾಜ್ ಅಹ್ಮದ್ ಕೇವಲ 22 ಎಸೆತಗಳಲ್ಲಿ ಅರ್ಧಶತಕದ ಜೊತೆಯಾಟವಾಡುವ ಮೂಲಕ ಪಂದ್ಯದ ಗತಿಯನ್ನೇ ಬದಲಿಸಿದ್ದರು. ಅದರಲ್ಲೂ ದಿನೇಶ್ ಕಾರ್ತಿಕ್ ಅಬ್ಬರವನ್ನು ತಡೆಯಲು ರಾಜಸ್ಥಾನ್ ರಾಯಲ್ಸ್ ಬೌಲರ್ಗಳು ಪರದಾಡಿದರು.
ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ ಡಿಕೆ ಸಿಕ್ಸ್ ಫೋರ್ಗಳ ಸುರಿಮಳೆಗೈದರು. ಪರಿಣಾಮ ಕೊನೆಯ 3 ಓವರ್ಗಳಲ್ಲಿ ಆರ್ಸಿಬಿಗೆ 28 ರನ್ಗಳ ಅವಶ್ಯಕತೆಯಿತ್ತು. ಅಂತಿಮವಾಗಿ 19.1 ಓವರ್ಗಳಲ್ಲಿ ಗುರಿ ಮುಟ್ಟುವ ಮೂಲಕ ಆರ್ಸಿಬಿ 4 ವಿಕೆಟ್ಗಳ ಜಯ ಸಾಧಿಸಿತು. ಈ ಮೂಲಕ ಆರ್ಸಿಬಿ ಗೆಲುವಿನ ರೂವಾರಿಗಳಾಗಿ ದಿನೇಶ್ ಕಾರ್ತಿಕ್ (44) ಹಾಗೂ ಶಹಬಾಜ್ ಅಹ್ಮದ್ (45) ಹೊರಹೊಮ್ಮಿದರು.
ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ:
ಫಾಫ್ ಡು ಪ್ಲೆಸಿಸ್ (ನಾಯಕ), ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್‌ವೆಲ್, ಅನುಜ್ ರಾವತ್, ದಿನೇಶ್ ಕಾರ್ತಿಕ್, ಶಹಬಾಜ್ ಅಹ್ಮದ್, ವನಿಂದು ಹಸರಂಗ, ಹರ್ಷಲ್ ಪಟೇಲ್, ಜೋಶ್ ಹ್ಯಾಝಲ್ವುಡ್, ಮೊಹಮ್ಮದ್ ಸಿರಾಜ್, ಆಕಾಶ್ ದೀಪ್, ಸುಯಶ್ ಪ್ರಭುದೇಸಾಯಿ, ಲುವ್ನಿತ್ ಸಿಸೋಡಿಯಾ, ಅನೀಶ್ವರ್ ಗೌತಮ್, ಕರ್ಣ್ ಶರ್ಮಾ, ಜೇಸನ್ ಬೆಹ್ರೆಡ್ರಾರ್ಫ್, ಸಿದ್ದಾರ್ಥ್ ಕೌಲ್, ಚಾಮಾ ಮಿಲಿಂದ್, ಮಹಿಪಾಲ್ ಲೊಮ್ರೋರ್, ಶೆರ್ಫೇನ್ ರುದರ್‌ಫೋರ್ಡ್, ಫಿನ್ ಅಲೆನ್, ಡೇವಿಡ್ ವಿಲ್ಲಿ.
ರಾಜಸ್ಥಾನ್ ರಾಯಲ್ಸ್ (RR) ತಂಡ:
ಸಂಜು ಸ್ಯಾಮ್ಸನ್ (ನಾಯಕ), ದೇವದತ್ ಪಡಿಕ್ಕಲ್, ಯಶಸ್ವಿ ಜೈಸ್ವಾಲ್, ಜೋಸ್ ಬಟ್ಲರ್, ಶಿಮ್ರಾನ್ ಹೆಟ್ಮೆಯರ್, ರಿಯಾನ್ ಪರಾಗ್, ಆರ್ ಅಶ್ವಿನ್, ಟ್ರೆಂಟ್ ಬೌಲ್ಟ್, ಯುಜ್ವೇಂದ್ರ ಚಹಾಲ್, ಪ್ರಸಿದ್ಧ್ ಕೃಷ್ಣ, ಕೆಸಿ ಕಾರ್ಯಪ್ಪ, ನವದೀಪ್ ಸೈನಿ, ತೇಜಸ್ ಬರೋಕಾ, ಅನುನಯ್ ಸಿಂಗ್, ಕುಲದೀಪ್ ಸೇನ್, ಧ್ರುವ್ ಜುರೆಲ್, ಕುಲ್ದ್ರುವ್ ಜುರೆಲ್ , ಶುಭಂ ಗರ್ವಾಲ್, ನಾಥನ್ ಕೌಲ್ಟರ್-ನೈಲ್, ರಾಸ್ಸಿ ವಾನ್ ಡೆರ್ ಡುಸ್ಸೆನ್, ಜೇಮ್ಸ್ ನೀಶಮ್, ಡೇರಿಲ್ ಮಿಚೆಲ್, ಕರುಣ್ ನಾಯರ್, ಒಬೆಡ್ ಮೆಕಾಯ್.
ಟಾಸ್ ಗೆದ್ದ RCB ನಾಯಕ ಫಾಫ್ ಡುಪ್ಲೆಸಿಸ್ ಬೌಲಿಂಗ್ ಆಯ್ದುಕೊಂಡಿದ್ದಾರೆ.
ಉಭಯ ತಂಡಗಳ ಪ್ಲೇಯಿಂಗ್ ಇಲೆವೆನ್ನಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ.
ಪ್ರಸಿದ್ಧ್ ಕೃಷ್ಣ ಎಸೆತದಲ್ಲಿ ಡಿಕೆ ಫೋರ್
ಬೌಲ್ಟ್ ಎಸೆತದಲ್ಲಿ ಶಹಬಾಜ್ (45) ಬೌಲ್ಡ್
ಬೌಲ್ಟ್ ಎಸೆತದಲ್ಲಿ ಶಹಬಾಜ್ ಭರ್ಜರಿ ಸಿಕ್ಸ್
ಪ್ರಸಿದ್ದ್ ಕೃಷ್ಣ ಎಸೆತದಲ್ಲಿ ಭರ್ಜರಿ ಸಿಕ್ಸ್ ಸಿಡಿಸಿದ ಶಹಬಾಜ್
ಪ್ರಸಿದ್ದ್ ಕೃಷ್ಣ ಎಸೆತದಲ್ಲಿ ಆಕರ್ಷಕ ಬೌಂಡರಿ ಬಾರಿಸಿದ ಶಹಬಾಜ್
ಸೈನಿ ಎಸೆತದಲ್ಲಿ ಬ್ಯಾಕ್ ಟು ಬ್ಯಾಕ್ ಬೌಂಡರಿ ಬಾರಿಸಿ ದಿನೇಶ್ ಕಾರ್ತಿಕ್ ಅಬ್ಬರ
ಸೈನಿ ಎಸೆತದಲ್ಲಿ ಭರ್ಜರಿ ಬೌಂಡರಿ ಬಾರಿಸಿದ ಡಿಕೆ
ಅಶ್ವಿನ್ ಓವರ್ನಲ್ಲಿ 21 ರನ್ ಬಾರಿಸಿದ ದಿನೇಶ್ ಕಾರ್ತಿಕ್
ಮೂರು ಫೋರ್, ಒಂದು ಸಿಕ್ಸ್
ಅಶ್ವಿನ್ ನೋ ಬಾಲ್ ಎಸೆತದಲ್ಲಿ ಬೌಂಡರಿ ಬಾರಿಸಿದ ದಿನೇಶ್ ಕಾರ್ತಿಕ್
ಫ್ರೀ ಹಿಟ್ನಲ್ಲಿ ಭರ್ಜರಿ ಸಿಕ್ಸ್ ಸಿಡಿಸಿದ ಡಿಕೆ
ಟ್ರೆಂಟ್ ಬೌಲ್ಟ್ ಎಸೆತದಲ್ಲಿ ರುದರ್‌ಫೋರ್ಡ್ (5) ಭರ್ಜರಿ ಹೊಡೆತಕ್ಕೆ ಯತ್ನ
ನವದೀಪ್ ಸೈನಿ ಅದ್ಭುತ ಕ್ಯಾಚ್
ಸೈನಿ ಎಸೆತದಲ್ಲಿ ಭರ್ಜರಿ ಸಿಕ್ಸ್ ಸಿಡಿಸಿದ ಶಹಬಾಜ್
ಸೈನಿ ಎಸೆತದಲ್ಲಿ ಭರ್ಜರಿ ಬೌಂಡರಿ ಬಾರಿಸಿದ ಶಹಬಾಜ್
ಕ್ರೀಸ್ನಲ್ಲಿ ರುದರ್‌ಫೋರ್ಡ್-ಶಹಬಾಜ್ ಅಹ್ಮದ್ ಬ್ಯಾಟಿಂಗ್
ಚಹಲ್ ಸ್ಪಿನ್ ಮೋಡಿ
ಡೇವಿಡ್ ವಿಲ್ಲಿ ಕ್ಲೀನ್ ಬೌಲ್ಡ್
ಮಿಂಚಿನ ವೇಗದಲ್ಲಿ ಬೇಲ್ಸ್ ಎಗರಿಸಿದ ಚಹಲ್.. ವಿರಾಟ್ ಕೊಹ್ಲಿ ರನೌಟ್
ಆರ್ಸಿಬಿ ಮೂರು ವಿಕೆಟ್ ಪತನ
ಸೈನಿ ಎಸೆತದಲ್ಲಿ ಕೀಪರ್ಗೆ ಕ್ಯಾಚ್ ನೀಡಿ ಹೊರನಡೆದ ಅನೂಜ್ ರಾವತ್ (26)
ಚಹಲ್ ಎಸೆತದಲ್ಲಿ ಕ್ಯಾಚ್ ನೀಡಿ ಹೊರನಡೆದ ಫಾಫ್ ಡುಪ್ಲೆಸಿಸ್ (29)
ಕ್ರೀಸ್ನಲ್ಲಿ ಅನೂಜ್ ರಾವತ್-ಫಾಫ್ ಡುಪ್ಲೆಸಿಸ್ ಬ್ಯಾಟಿಂಗ್
ಅಶ್ವಿನ್ ಎಸೆತದಲ್ಲಿ ಆಫ್ ಸೈಡ್ನತ್ತ ಡುಪ್ಲೆಸಿಸ್ ಆಕರ್ಷಕ ಫೋರ್
ಪ್ರಸಿದ್ಧ್ ಕೃಷ್ಣ ಎಸೆತದಲ್ಲಿ ಮುನ್ನುಗ್ಗಿ ಬಂದು ಬೌಂಡರಿ ಬಾರಿಸಿದ ಅನೂಜ್ ರಾವತ್
ಅಶ್ವಿನ್ ಎಸೆತದಲ್ಲಿ ಆಕರ್ಷಕ ಬೌಂಡರಿ ಬಾರಿಸಿದ ಡುಪ್ಲೆಸಿಸ್
ಬೌಲ್ಟ್ ಎಸೆತದಲ್ಲಿ ಫಾಫ್ ಡುಪ್ಲೆಸಿಸ್ ಕ್ಲಾಸಿಕ್ ಆಫ್ ಸೈಡ್ ಶಾಟ್…ಬೌಂಡರಿ
ಬೌಲ್ಟ್ ಎಸೆತದಲ್ಲಿ ಆಫ್ ಸೈಡ್ನತ್ತ ಆಕರ್ಷಕ ಬೌಂಡರಿ ಬಾರಿಸಿದ ಫಾಫ್ ಡುಪ್ಲೆಸಿಸ್
ಪ್ರಸಿದ್ಧ್ ಕೃಷ್ಣ ಎಸೆತದಲ್ಲಿ ಬ್ಯಾಕ್ ಟು ಬ್ಯಾಕ್ ಭರ್ಜರಿ ಬೌಂಡರಿ ಬಾರಿಸಿದ ಅನೂಜ್ ರಾವತ್
ಆರಂಭಿಕರು:
ಫಾಫ್ ಡುಪ್ಲೆಸಿಸ್
ಅನೂಜ್ ರಾವತ್
ಮೊದಲ ಓವರ್: ಟ್ರೆಂಟ್ ಬೌಲ್ಟ್
We have a chase on our hands.
Batters, you’re up! ??#PlayBold #WeAreChallengers #IPL2022 #Mission2022 #RCB #ನಮ್ಮRCB #RRvRCB pic.twitter.com/zNE1xa626c
— Royal Challengers Bangalore (@RCBTweets) April 5, 2022
ಜೋಸ್ ಬಟ್ಲರ್- 70
ಶಿಮ್ರಾನ್ ಹೆಟ್ಮೆಯರ್- 42
ಆಕಾಶ್ ದೀಪ್ ಎಸೆತದಲ್ಲಿ ಬ್ಯಾಕ್ ಟು ಬ್ಯಾಕ್ ಸಿಕ್ಸ್ ಸಿಡಿಸಿದ ಬಟ್ಲರ್
ಆಕಾಶ್ ದೀಪ್ ಫ್ರಿ ಹಿಟ್ ಎಸೆತದಲ್ಲಿ ಭರ್ಜರಿ ಸಿಕ್ಸ್ ಸಿಡಿಸಿದ ಬಟ್ಲರ್
ಸಿರಾಜ್ ಎಸೆತದಲ್ಲಿ ಭರ್ಜರಿ ಸಿಕ್ಸ್ ಸಿಡಿಸಿ ಅರ್ಧಶತಕ ಪೂರೈಸಿದ ಬಟ್ಲರ್
42 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ ಬಟ್ಲರ್
ಸಿರಾಜ್ ಎಸೆತದಲ್ಲಿ ಭರ್ಜರಿ ಸಿಕ್ಸ್ ಸಿಡಿಸಿದ ಜೋಸ್ ಬಟ್ಲರ್
ಸಿರಾಜ್ ಎಸೆತದಲ್ಲಿ ಸಿಡಿಲಬ್ಬರದ ಬೌಂಡರಿ ಬಾರಿಸಿದ ಹೆಟ್ಮೆಯರ್
ಹರ್ಷಲ್ ಪಟೇಲ್ ಎಸೆತದಲ್ಲಿ ಭರ್ಜರಿ ಬೌಂಡರಿ ಬಾರಿಸಿದ ಹೆಟ್ಮೆಯರ್
ಕೊನೆಯ 3 ಓವರ್ಗಳು ಬಾಕಿ
ಸಿರಾಜ್ ಎಸೆತದಲ್ಲಿ ಲೆಗ್ಸೈಡ್ನತ್ತ ಭರ್ಜರಿ ಸಿಕ್ಸ್ ಸಿಡಿಸಿದ ಹೆಟ್ಮೆಯರ್
ಕೊನೆಯ 4 ಓವರ್ಗಳು ಬಾಕಿ
ಕ್ರೀಸ್ನಲ್ಲಿ ಜೋಸ್ ಬಟ್ಲರ್-ಶಿಮ್ರಾನ್ ಹೆಟ್ಮೆಯರ್ ಬ್ಯಾಟಿಂಗ್
ಕ್ರೀಸ್ನಲ್ಲಿ ಜೋಸ್ ಬಟ್ಲರ್-ಶಿಮ್ರಾನ್ ಹೆಟ್ಮೆಯರ್ ಬ್ಯಾಟಿಂಗ್
ಹಸರಂಗ ಎಸೆತದಲ್ಲಿ ಬ್ಯಾಕ್ ಟು ಬ್ಯಾಕ್ ಬೌಂಡರಿ ಬಾರಿಸಿದ ಹೆಟ್ಮೆಯರ್
ಹಸರಂಗ ಎಸೆತದಲ್ಲಿ ಆಫ್ಸೈಡ್ನತ್ತ ಬೌಂಡರಿ ಬಾರಿಸಿದ ಎಡಗೈ ಬ್ಯಾಟ್ಸ್ಮನ್ ಹೆಟ್ಮೆಯರ್
Gone!!! Hasaranga gets his man! Sanju chips it straight back and an easy catch for Wanindu. ?#PlayBold #WeAreChallengers #IPL2022 #Mission2022 #RCB #ನಮ್ಮRCB #RRvRCB pic.twitter.com/7ROgQTXRvS
— Royal Challengers Bangalore (@RCBTweets) April 5, 2022
ಹಸರಂಗ ಎಸೆತದಲ್ಲಿ ಸುಲಭ ಕ್ಯಾಚ್ ನೀಡಿ ಹೊರನಡೆದ ಸಂಜು ಸ್ಯಾಮ್ಸನ್ (8)
ವನಿಂದು ಹಸರಂಗ ಎಸೆತದಲ್ಲಿ ಸೂಪರ್ ಸಿಕ್ಸ್ ಸಿಡಿಸಿದ ಸಂಜು ಸ್ಯಾಮ್ಸನ್
ಕ್ರೀಸ್ನಲ್ಲಿ ಜೋಸ್ ಬಟ್ಲರ್-ಸಂಜು ಸ್ಯಾಮ್ಸನ್ ಬ್ಯಾಟಿಂಗ್
ಹರ್ಷಲ್ ಪಟೇಲ್ ಎಸೆತದಲ್ಲಿ ಭರ್ಜರಿ ಹೊಡೆತಕ್ಕೆ ಮುಂದಾದ ದೇವದತ್ ಪಡಿಕ್ಕಲ್
ಅದ್ಭುತ ಕ್ಯಾಚ್ ಹಿಡಿದ ವಿರಾಟ್ ಕೊಹ್ಲಿ
ಹಸರಂಗ ಎಸೆತದಲ್ಲಿ ಲಾಂಗ್ ಆಫ್ನತ್ತ ಭರ್ಜರಿ ಸಿಕ್ಸ್ ಸಿಡಿಸಿದ ಜೋಸ್ ಬಟ್ಲರ್
ವನಿಂದು ಹಸರಂಗಗೆ ಚೆಂಡು ನೀಡಿದ ಫಾಫ್ ಡುಪ್ಲೆಸಿಸ್
ಡೇವಿಡ್ ವಿಲ್ಲಿ ಎಸೆತದಲ್ಲಿ ಭರ್ಜರಿ ಸಿಕ್ಸ್ ಸಿಡಿಸಿದ ದೇವದತ್ ಪಡಿಕ್ಕಲ್
ಆಕಾಶ್ ದೀಪ್ ಎಸೆತದಲ್ಲಿ ಲಾಂಗ್ ಆಫ್ನತ್ತ ಭರ್ಜರಿ ಸಿಕ್ಸ್ ಸಿಡಿಸಿದ ಜೋಸ್ ಬಟ್ಲರ್
ಆಕಾಶ್ ದೀಪ್ ಎಸೆತದಲ್ಲಿ ಬಟ್ಲರ್ ಭರ್ಜರಿ ಹೊಡೆತ
ಬೌಂಡರಿ ಲೈನ್ನಲ್ಲಿ ಕಷ್ಟಕರ ಕ್ಯಾಚ್ ಕೈಬಿಟ್ಟ ಡೇವಿಡ್ ವಿಲ್ಲಿ
David Willey strikes straight up.
Gets the wicket of Yashasvi Jaiswal, who departs for 4 runs.
Live – https://t.co/HLoQF5ETnl #RRvRCB #TATAIPL pic.twitter.com/fJ2DOUNNyX
— IndianPremierLeague (@IPL) April 5, 2022
ಕ್ರೀಸ್ನಲ್ಲಿ ಜೋಸ್ ಬಟ್ಲರ್-ದೇವದತ್ ಪಡಿಕ್ಕಲ್ ಬ್ಯಾಟಿಂಗ್
ಕ್ರೀಸ್ನಲ್ಲಿ ಜೋಸ್ ಬಟ್ಲರ್-ದೇವದತ್ ಪಡಿಕ್ಕಲ್ ಬ್ಯಾಟಿಂಗ್
ಮೊಹಮ್ಮದ್ ಸಿರಾಜ್ ಬದಲಿಗೆ ಆಕಾಶ್ ದೀಪ್ಗೆ ಚೆಂಡು ನೀಡಿದ ನಾಯಕ ಡುಪ್ಲೆಸಿಸ್
ವಿಲ್ಲಿ ಎಸೆತದಲ್ಲಿ ಆಕರ್ಷಕ ಬೌಂಡರಿ ಬಾರಿಸಿದ ದೇವದತ್ ಪಡಿಕ್ಕಲ್
ಕ್ರೀಸ್ನಲ್ಲಿ ಜೋಸ್ ಬಟ್ಲರ್-ದೇವದತ್ ಪಡಿಕ್ಕಲ್ ಬ್ಯಾಟಿಂಗ್
ಸಿರಾಜ್ ಎಸೆತದಲ್ಲಿ ಲೆಗ್ಸೈಡ್ನತ್ತ ಭರ್ಜರಿ ಸಿಕ್ಸ್ ಸಿಡಿಸಿದ ದೇವದತ್ ಪಡಿಕ್ಕಲ್
ಡೇವಿಡ್ ವಿಲ್ಲಿ ಎಸೆತದಲ್ಲಿ ಬೌಲ್ಡ್ ಆದ ಯಶಸ್ವಿ ಜೈಸ್ವಾಲ್ (4)
ಮೊದಲ ಓವರ್ನಲ್ಲಿ ಕೇವಲ 1 ರನ್ ನೀಡಿದ ಸಿರಾಜ್
ಆರಂಭಿಕರು:
ಜೋಸ್ ಬಟ್ಲರ್
ಯಶಸ್ವಿ ಜೈಸ್ವಾಲ್
ಬೌಲರ್:- ಮೊಹಮ್ಮದ್ ಸಿರಾಜ್
A look at the Playing XI for #RRvRCB
Live – https://t.co/mANeRaHBbK #RRvRCB #TATAIPL https://t.co/Kjqikz6Z2j pic.twitter.com/f0wl2OlwmL
— IndianPremierLeague (@IPL) April 5, 2022
ಉಭಯ ತಂಡಗಳ ಪ್ಲೇಯಿಂಗ್ 11
ರಾಜಸ್ಥಾನ್ ರಾಯಲ್ಸ್ (ಪ್ಲೇಯಿಂಗ್ XI): ಜೋಸ್ ಬಟ್ಲರ್, ಯಶಸ್ವಿ ಜೈಸ್ವಾಲ್, ದೇವದತ್ ಪಡಿಕ್ಕಲ್, ಸಂಜು ಸ್ಯಾಮ್ಸನ್ (ನಾಯಕ), ಶಿಮ್ರಾನ್ ಹೆಟ್ಮೆಯರ್, ರಿಯಾನ್ ಪರಾಗ್, ರವಿಚಂದ್ರನ್ ಅಶ್ವಿನ್, ನವದೀಪ್ ಸೈನಿ, ಟ್ರೆಂಟ್ ಬೌಲ್ಟ್, ಪ್ರಸಿದ್ಧ್ ಕೃಷ್ಣ, ಯುಜ್ವೇಂದ್ರ ಚಹಾಲ್
ರಾಯಲ್ ಚಾಲೆಂಜರ್ಸ್ ಬೆಂಗಳೂರು (ಪ್ಲೇಯಿಂಗ್ XI): ಫಾಫ್ ಡು ಪ್ಲೆಸಿಸ್ (ನಾಯಕ), ಅನುಜ್ ರಾವತ್, ವಿರಾಟ್ ಕೊಹ್ಲಿ, ದಿನೇಶ್ ಕಾರ್ತಿಕ್, ಶೆರ್ಫಾನ್ ರುದರ್‌ಫೋರ್ಡ್, ಶಹಬಾಜ್ ಅಹ್ಮದ್, ವನಿಂದು ಹಸರಂಗ, ಡೇವಿಡ್ ವಿಲ್ಲಿ, ಹರ್ಷಲ್ ಪಟೇಲ್, ಆಕಾಶ್ ದೀಪ್, ಮೊಹಮ್ಮದ್ ಸಿರಾಜ್
ರಾಜಸ್ಥಾನ್ ರಾಯಲ್ಸ್ (ಪ್ಲೇಯಿಂಗ್ XI): ಜೋಸ್ ಬಟ್ಲರ್, ಯಶಸ್ವಿ ಜೈಸ್ವಾಲ್, ದೇವದತ್ ಪಡಿಕ್ಕಲ್, ಸಂಜು ಸ್ಯಾಮ್ಸನ್ (ನಾಯಕ), ಶಿಮ್ರಾನ್ ಹೆಟ್ಮೆಯರ್, ರಿಯಾನ್ ಪರಾಗ್, ರವಿಚಂದ್ರನ್ ಅಶ್ವಿನ್, ನವದೀಪ್ ಸೈನಿ, ಟ್ರೆಂಟ್ ಬೌಲ್ಟ್, ಪ್ರಸಿದ್ಧ್ ಕೃಷ್ಣ, ಯುಜ್ವೇಂದ್ರ ಚಹಾಲ್
ರಾಯಲ್ ಚಾಲೆಂಜರ್ಸ್ ಬೆಂಗಳೂರು (ಪ್ಲೇಯಿಂಗ್ XI): ಫಾಫ್ ಡು ಪ್ಲೆಸಿಸ್ (ನಾಯಕ), ಅನುಜ್ ರಾವತ್, ವಿರಾಟ್ ಕೊಹ್ಲಿ, ದಿನೇಶ್ ಕಾರ್ತಿಕ್, ಶೆರ್ಫಾನ್ ರುದರ್‌ಫೋರ್ಡ್, ಶಹಬಾಜ್ ಅಹ್ಮದ್, ವನಿಂದು ಹಸರಂಗ, ಡೇವಿಡ್ ವಿಲ್ಲಿ, ಹರ್ಷಲ್ ಪಟೇಲ್, ಆಕಾಶ್ ದೀಪ್, ಮೊಹಮ್ಮದ್ ಸಿರಾಜ್
ಟಾಸ್ ಗೆದ್ದ RCB ನಾಯಕ ಫಾಫ್ ಡುಪ್ಲೆಸಿಸ್ ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ಅದರಂತೆ ರಾಜಸ್ಥಾನ್ ರಾಯಲ್ಸ್ ತಂಡ ಮೊದಲು ಬ್ಯಾಟಿಂಗ್ ಮಾಡಲಿದೆ.
Checking-in for Match Day! ???#PlayBold #WeAreChallengers #IPL2022 #Mission2022 #RCB #ನಮ್ಮRCB #RRvRCB pic.twitter.com/UnI7Y43TPk
— Royal Challengers Bangalore (@RCBTweets) April 5, 2022
Ideal scenario for today, Yuzi should take wickets, DDP should score runs, Saini should get a good spell …. But, RCB should win ??? Win win for all of us!
— Danish Sait (@DanishSait) April 5, 2022
ಚಹಲ್ ವಿಕೆಟ್ ಪಡೆಯಬೇಕು, ಪಡಿಕ್ಕಲ್ ರನ್ಗಳಿಸಬೇಕು, ಸೈನಿ ಉತ್ತಮವಾಗಿ ಬೌಲಿಂಗ್ ಮಾಡಬೇಕು…ಆದರೆ ಆರ್ಸಿಬಿ ಗೆಲ್ಲಲೇಬೇಕು ಎಂದ ದಾನಿಶ್ ಸೇಠ್.
ದೇವದತ್ ಪಡಿಕ್ಕಲ್
ಯುಜುವೇಂದ್ರ ಚಹಲ್
ನವದೀಪ್ ಸೈನಿ
ಮಾಜಿ ಆರ್ಸಿಬಿ ಆಟಗಾರರಾದ ಕಾರಣ ಈ ಮೂವರು ಮಿಂಚಲಿ, ಆರ್ಸಿಬಿ ಗೆಲ್ಲಲಿ ಎಂದು ಟ್ವೀಟ್ ಮಾಡಿರುವ ದಾನಿಶ್ ಸೇಠ್.
We’ll be facing some familiar faces in our clash tonight. ?
Go well boys, (but not too well). ?
See you on the field. ????#PlayBold #WeAreChallengers #IPL2022 #Mission2022 #RCB #ನಮ್ಮRCB #RRvRCB pic.twitter.com/EZXVHsnDle— Royal Challengers Bangalore (@RCBTweets) April 5, 2022
ರಾಜಸ್ಥಾನ್ ರಾಯಲ್ಸ್ ತಂಡದಲ್ಲಿರುವ ಮಾಜಿ ಆರ್ಸಿಬಿ ಆಟಗಾರರು
– ದೇವದತ್ ಪಡಿಕ್ಕಲ್
-ಯುಜುವೇಂದ್ರ ಚಹಲ್
-ನವದೀಪ್ ಸೈನಿ
ಈ ರೋಚಕ ಮುಖಾಮುಖಿಗೆ ಕ್ಷಣಗಣನೆ ಪ್ರಾರಂಭವಾಗಿದೆ! ??#PlayBold #WeAreChallengers #RCB #IPL2022 #ನಮ್ಮRCB #Mission2022 #RRvRCB pic.twitter.com/IiDZipNhO3
— Royal Challengers Bangalore (@RCBTweets) April 5, 2022
Published On - 6:09 pm, Tue, 5 April 22