Ruturaj Gaikwad: ರುತುರಾಜ್ ಗಾಯಕ್ವಾಡ್​ಗೆ ಇಂದು ಬಿಗ್ ಡೇ: ಐಪಿಎಲ್ ಇತಿಹಾಸದಲ್ಲಿ ಯಾರೂ ಮಾಡಿರದ ದಾಖಲೆಗೆ ಸಜ್ಜು

| Updated By: Vinay Bhat

Updated on: Oct 15, 2021 | 10:00 AM

IPL 2021 Final, CSK vs KKR: ಗಾಯಕ್ವಾಡ್ ಸದ್ಯ ಐಪಿಎಲ್ 2021 ರಲ್ಲಿ 15 ಪಂದ್ಯಗಳನ್ನು ಆಡಿದ್ದು 1 ಶತಕ, 4 ಅರ್ಧಶತಕ, 61 ಬೌಂಡರಿ, 22 ಸಿಕ್ಸರ್​ನೊಂದಿಗೆ ಒಟ್ಟು ಬರೋಬ್ಬರಿ 603 ರನ್ ಕಲೆಹಾಕಿದ್ದಾರೆ. ಈ ಮೂಲಕ ಆರೆಂಜ್ ಕ್ಯಾಪ್ ತೊಡಲು ತುದಿಗಾಲಿನಲ್ಲಿ ನಿಂತು ಕಾಯುತ್ತಿದ್ದಾರೆ.

Ruturaj Gaikwad: ರುತುರಾಜ್ ಗಾಯಕ್ವಾಡ್​ಗೆ ಇಂದು ಬಿಗ್ ಡೇ: ಐಪಿಎಲ್ ಇತಿಹಾಸದಲ್ಲಿ ಯಾರೂ ಮಾಡಿರದ ದಾಖಲೆಗೆ ಸಜ್ಜು
Ruturaj Gaikwad IPL 2021 Final CSK vs KKR
Follow us on

ರುತುರಾಜ್ ಗಾಯಕ್ವಾಡ್ (Ruturaj Gaikwad) ಈ ಬಾರಿಯ ಐಪಿಎಲ್ 2021 ರಲ್ಲಿ (IPL 2021) ನೀಡಿದ ಪ್ರದರ್ಶನ ಕ್ರಿಕೆಟ್ ಪಂಡಿತರನ್ನೇ ಬೆರಗಾಗಿಸಿದೆ. ಒಂದು ಶತಕ ನಾಲ್ಕು ಅರ್ಧಶತಕ ಸಿಡಿಸಿರುವ ಇವರು ಭರ್ಜರಿ ಫಾರ್ಮ್​ನಲ್ಲಿದ್ದು, ಟೂರ್ನಿಯುದ್ದಕ್ಕೂ ಅಮೋಘ ಆಟವಾಡುತ್ತಾ ಬಂದಿದ್ದಾರೆ. ಸಿಎಸ್​ಕೆ (CSK) ಗೆಲುವಿನಲ್ಲಿ ಅರ್ಧಪಾಲು ಹೊಂದಿರುವ ಇವರು ಇಂದು ಕೋಲ್ಕತ್ತಾ ನೈಟ್ ರೈಡರ್ಸ್ (CSK vs KKR Final)​ ವಿರುದ್ಧದ ಫೈನಲ್ ಪಂದ್ಯದಲ್ಲಿ ಹೊಸ ದಾಖಲೆ (IPL Record) ಬರೆಯಲು ಹೊರಟಿದ್ದಾರೆ. ಅದು ಐಪಿಎಲ್ ಇತಿಹಾಸದಲ್ಲೇ (IPL History) ಯಾರೂ ಮಾಡಿರದ ವಿಶೇಷ ದಾಖಲೆ.

ಹೌದು, ಗಾಯಕ್ವಾಡ್ ಸದ್ಯ ಐಪಿಎಲ್ 2021 ರಲ್ಲಿ 15 ಪಂದ್ಯಗಳನ್ನು ಆಡಿದ್ದು 1 ಶತಕ, 4 ಅರ್ಧಶತಕ, 61 ಬೌಂಡರಿ, 22 ಸಿಕ್ಸರ್​ನೊಂದಿಗೆ ಒಟ್ಟು ಬರೋಬ್ಬರಿ 603 ರನ್ ಕಲೆಹಾಕಿದ್ದಾರೆ. ಈ ಮೂಲಕ ಆರೆಂಜ್ ಕ್ಯಾಪ್ ತೊಡಲು ತುದಿಗಾಲಿನಲ್ಲಿ ನಿಂತು ಕಾಯುತ್ತಿದ್ದಾರೆ. ಐಪಿಎಲ್ 2021ರ ಐಪಿಎಲ್​ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಪಟ್ಟಿಯ ಮೊದಲ ಸ್ಥಾನದಲ್ಲಿ ಕೆ. ಎಲ್ ರಾಹುಲ್ ಇದ್ದು, ಇವರು 13 ಪಂದ್ಯಗಳಿಂದ 626 ರನ್ ಬಾರಿಸಿದ್ದಾರೆ. ಈ ಮೂಲಕ ರಾಹುಲ್​ರನ್ನು ಹಿಂದಿಕ್ಕಲು ಗಾಯಕ್ವಾಡ್​ಗೆ ಕೇವಲ 23 ರನ್​ಗಳ ಅವಶ್ಯಕತೆಯಿದೆ.

ಈ ಬಾರಿಯ ಐಪಿಎಲ್​ನಲ್ಲಿ 137.35 ಸ್ಟ್ರೈಕ್​ರೇಟ್, 46.38 ಸರಾಸರಿ ಹೊಂದಿರುವ ಗಾಯಕ್ವಾಡ್ 23 ರನ್ ಗಳಿಸಿ ಆರೆಂಜ್ ಕ್ಯಾಪ್ ತಮ್ಮದಾಗಿಸಿದರೆ ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲೇ ಆರೆಂಜ್ ಕ್ಯಾಪ್ ತೊಟ್ಟ ಯಂಗೆಸ್ಟ್ ಬ್ಯಾಟ್ಸ್​ಮನ್​ ಎಂಬ ದಾಖಲೆ ಬರೆಯಲಿದ್ದಾರೆ. ಸದ್ಯ ಈ ದಾಖಲೆ ಆಸ್ಟ್ರೇಲಿಯಾದ ಶಾನ್ ಮಾರ್ಶ್ ಹೆಸರಲ್ಲಿದೆ. ಇವರು 2008ರ ಐಪಿಎಲ್​ನಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ಪರ 25 ವರ್ಷವಿರುವಾಗ 616 ರನ್ ಗಳಿಸಿದ್ದರು. 23 ವರ್ಷ ರುತುರಾಜ್ ಈ ದಾಖಲೆ ಬ್ರೇಕ್ ಮಾಡುತ್ತಾರ ಎಂಬುದು ಕಾದುನೋಡಬೇಕಿದೆ.

ಇನ್ನು ಪರ್ಪಲ್ ಕ್ಯಾಪ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಹರ್ಷಲ್ ಪಟೇಲ್​ಗೆ ಖಚಿತವಾಗಿದೆ. ಇವರು 15 ಪಂದ್ಯಗಳಿಂದ ಬರೋಬ್ಬರಿ 32 ವಿಕೆಟ್ ಕಿತ್ತು ಅತಿ ಹೆಚ್ಚು ವಿಕೆಟ್ ಪಡೆದವರ ಸಾಲಿನಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. ಎರಡನೇ ಸ್ಥಾನದಲ್ಲಿ ಆವೇಶ್ ಖಾನ್ ಇದ್ದು ಇವರು 16 ಪಂದ್ಯಗಳಿಂದ 24 ವಿಕೆಟ್ ಪಡೆದಿದ್ದಾರೆ.

ಈ ಬಾರಿಯ ಐಪಿಎಲ್​ನಲ್ಲಿ ಅತಿ ಹೆಚ್ಚು ಸಿಕ್ಸ್ ಬಾರಿಸಿದ ಕೀರ್ತಿ ಕೆ. ಎಲ್ ರಾಹುಲ್​ಗೆ ಇದೆ. ಇವರು 30 ಸಿಕ್ಸರ್ ಸಿಡಿಸಿದ್ದಾರೆ. 6 ಹಾಫ್ ಸೆಂಚುರಿಯೊಂದಿಗೆ ಅತಿ ಹೆಚ್ಚು ಅರ್ಧಶತಕದ ಸಾಧನೆ ಕೂಡ ಇವರ ಹೆಸರಲ್ಲಿದೆ. ಅತಿ ಹೆಚ್ಚು ಬೌಂಡರಿ ಬಾರಿಸಿ ಶಿಖರ್ ಧವನ್ (63 ಬೌಂಡರಿ) ಮೊದಲ ಸ್ಥಾನದಲ್ಲಿದ್ದಾರೆ.

CSK vs KKR, IPL 2021 Final: ಫೈನಲ್ ಕದನಕ್ಕೂ ಮುನ್ನ ಧೋನಿಗೆ ಶುರುವಾಗಿದೆ ತಲೆನೋವು: ಯಾವ ಕಾರಣಕ್ಕಾಗಿ?

IPL 2021 Final: CSK vs KKR: ಐಪಿಎಲ್​ನಲ್ಲಿಂದು ಫೈನಲ್ ಫೈಟ್: ಪ್ರಶಸ್ತಿಗಾಗಿ ಚೆನ್ನೈ-ಕೋಲ್ಕತ್ತಾ ನಡುವೆ ಹೈವೋಲ್ಟೇಜ್ ಪಂದ್ಯ

(Ruturaj Gaikwad is on a cusp of a very special record on Today IPL 2021 Final CSK vs KKR Match)