ಬೆಳಗಾವಿಯಲ್ಲಿ ಕ್ರಿಕೆಟ್ ದೇವರು; ರಸ್ತೆ ಪಕ್ಕದ ಗೂಡಂಗಡಿಯಲ್ಲಿ ಮಗನೊಂದಿಗೆ ಟೀ ಕುಡಿದ ಸಚಿನ್..! ವಿಡಿಯೋ

| Updated By: ಪೃಥ್ವಿಶಂಕರ

Updated on: Nov 02, 2022 | 4:41 PM

Sachin Tendulkar: ಈ ವಿಡಿಯೋದಲ್ಲಿ ಮಾತನಾಡಿರುವ ಸಚಿನ್, ತಾನು ಬೆಳಗಾವಿ-ಗೋವಾ ಎಕ್ಸ್‌ಪ್ರೆಸ್‌ವೇನಲ್ಲಿ ಪ್ರಯಾಣ ಮಾಡುತ್ತಿರುವುದಾಗಿಯೂ ಹಾಗೂ "ಹಾರ್ಡ್ ಟೋಸ್ಟ್" ತಿನ್ನಲು ಕಾರ್ ನಿಲ್ಲಿಸಿರುವುದಾಗಿಯೂ ಹೇಳಿಕೊಂಡಿದ್ದಾರೆ.

ಬೆಳಗಾವಿಯಲ್ಲಿ ಕ್ರಿಕೆಟ್ ದೇವರು; ರಸ್ತೆ ಪಕ್ಕದ ಗೂಡಂಗಡಿಯಲ್ಲಿ ಮಗನೊಂದಿಗೆ ಟೀ ಕುಡಿದ ಸಚಿನ್..! ವಿಡಿಯೋ
sachin tendulkar
Follow us on

ಕ್ರಿಕೆಟ್ ದೇವರು, ವಿಶ್ವ ಕ್ರಿಕೆಟ್​ನ ಬ್ಯಾಟಿಂಗ್ ಮಾಂತ್ರಿಕ ಸಚಿನ್ ತೆಂಡೂಲ್ಕರ್ (Sachin Tendulkar), ತಮ್ಮ ಇನ್‌ಸ್ಟಾಗ್ರಾಮ್ ಹ್ಯಾಂಡಲ್‌ನಲ್ಲಿ ವೀಡಿಯೊಂದನ್ನು ಪೋಸ್ಟ್ ಮಾಡಿದ್ದು, ಈಗ ಆ ವಿಡಿಯೋ ಸಖತ್ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿರುವಂತೆ ಹೆದ್ದಾರಿ ಪಕ್ಕದ ಅಂಗಡಿಯೊಂದಕ್ಕೆ ಭೇಟಿ ನೀಡಿರುವ ಸಚಿನ್, ಅಲ್ಲಿ ತಮ್ಮ ಮಗನೊಂದಿಗೆ ಟೀ ಹೀರಿದ್ದಾರೆ. ವಾಸ್ತವವಾಗಿ ಎರಡು ದಿನಗಳ ಹಿಂದೆ ಸಚಿನ್‌ ತೆಂಡೂಲ್ಕರ್‌, ಬೆಳಗಾವಿ ಮಾರ್ಗವಾಗಿ ಗೋವಾಗೆ ತೆರಳಿದ್ದಾರೆ. ಆ ವೇಳೆ ಬೆಳಗಾವಿ ಹೊರ ವಲಯದ ಮಚ್ಚೆ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ವೈಜು ನಿತೂರ್ಕರ್ ಎಂಬುವವರ ಫೌಜಿ ಟೀ ಸ್ಟಾಲ್​ನಲ್ಲಿ ಸಚಿನ್ ಚಹಾ ಸವಿದಿದ್ದಾರೆ.

ಈ ವಿಡಿಯೋದಲ್ಲಿ ಮಾತನಾಡಿರುವ ಸಚಿನ್, ತಾನು ಬೆಳಗಾವಿ-ಗೋವಾ ಎಕ್ಸ್‌ಪ್ರೆಸ್‌ವೇನಲ್ಲಿ ಪ್ರಯಾಣ ಮಾಡುತ್ತಿರುವುದಾಗಿಯೂ ಹಾಗೂ “ಹಾರ್ಡ್ ಟೋಸ್ಟ್” ತಿನ್ನಲು ಕಾರ್ ನಿಲ್ಲಿಸಿರುವುದಾಗಿಯೂ ಹೇಳಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಸರಳ ಉಡುಗೆಯಲ್ಲಿ ಕಾಣಿಸಿಕೊಂಡಿರುವ ಸಚಿನ್, ಟೀ ಕುಡಿಯುವುದರೊಂದಿಗೆ ಸ್ಥಳೀಯರೊಂದಿಗೆ ಸಂವಹನ ನಡೆಸಿದ್ದಾರೆ. ಹಾಗೆಯೇ ಆ ಬಳಿಕ ಟೀ ಸ್ಟಾಲ್ ಮಾಲೀಕರಿಗೆ ಹಸ್ತಲಾಘವ ಮಾಡಿ, ಅವರೊಂದಿಗೆ ಸೆಲ್ಫಿ ಕೂಡ ಕ್ಲಿಕ್ಕಿಸಿಕೊಂಡಿದ್ದಾರೆ.

ಈ ವೇಳೆ ಕಾಲೇಜು ವಿದ್ಯಾರ್ಥಿ ಹಾಗೂ ಸ್ಥಳೀಯರ ಜತೆಗೂ ಸಚಿನ್ ಮಾತುಕತೆ ನಡೆಸಿದ್ದಾರೆ. ತಂದೆ-ಮಗ ಇಬ್ಬರೂ ಎಸ್‌ಯುವಿ ಕಾರಿನಲ್ಲಿ ಪ್ರಯಾಣ ಬೆಳೆಸಿದ್ದು, ಸಚಿನ್ ತಾನು ಚಹಾ ಕುಡಿದಿದಲ್ಲದೆ ಕಾರಿನೊಳಗೆ ಕುಳಿತಿದ್ದ ಮಗ ಅರ್ಜುನ್ ತೆಂಡೂಲ್ಕರ್‌ಗೂ ಚಹಾವನ್ನು ನೀಡಿದ್ದಾರೆ. ಈ ಘಟನೆ ನಡೆದು ಎರಡು ದಿನಗಳ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಸಚಿನ್ ಈ ವಿಡಿಯೋ ಹಂಚಿಕೊಂಡಿದ್ದು, ಪೋಸ್ಟ್ ಮಾಡಿದ ಕೆಲವೇ ಗಂಟೆಗಳಲ್ಲಿ ಈ ವಿಡಿಯೋ ಸಖತ್ ವೈರಲ್ ಆಗಿದೆ.

Published On - 4:38 pm, Wed, 2 November 22