ಕೊಹ್ಲಿ ಜೊತೆಗಿನ ಒಂದೇ ಒಂದು ಸೆಲ್ಫಿಗಾಗಿ ಬರೋಬ್ಬರಿ 23 ಸಾವಿರ ರೂ. ಖರ್ಚು ಮಾಡಿದ ಅಭಿಮಾನಿ..!

ಗುವಾಹಟಿಯಲ್ಲಿ ಟೀಂ ಇಂಡಿಯಾ ತಂಗಿದ್ದ ಹೋಟೆಲ್​ನಲ್ಲಿ ತಾವು ಕೂಡ ಒಂದು ರೂಂ ಬುಕ್ ಮಾಡಲು ಮುಂದಾಗಿದ್ದಾರೆ. ಇಲ್ಲಿ ರೂಮ್ ಬುಕ್ ಮಾಡುವುದು ಅಷ್ಟು ಸುಲಭವಾಗಿರಲಿಲ್ಲ. ಏಕೆಂದರೆ ಟೀಂ ಇಂಡಿಯಾ ಪಂಚತಾರಾ ಹೋಟೆಲ್‌ನಲ್ಲಿ ತಂಗಿದ್ದು, ಆ ಹೋಟೆಲ್​ನಲ್ಲಿ ಒಂದು ದಿನ ತಂಗಲು 23,400 ರೂ. ಪಾವಿತಿಸಬೇಕು.

ಕೊಹ್ಲಿ ಜೊತೆಗಿನ ಒಂದೇ ಒಂದು ಸೆಲ್ಫಿಗಾಗಿ ಬರೋಬ್ಬರಿ 23 ಸಾವಿರ ರೂ. ಖರ್ಚು ಮಾಡಿದ ಅಭಿಮಾನಿ..!
Edited By:

Updated on: Oct 02, 2022 | 5:56 PM

ಭಾರತ ಒಂದು ಕ್ರಿಕೆಟ್ ಧರ್ಮ ದೇಶ.. ಇಲ್ಲಿ ಭಾರತೀಯ ಕ್ರಿಕೆಟಿಗರಿಗೆ ದೇವರ ಸ್ಥಾನಮಾನವಿದೆ. ತಮ್ಮ ನೆಚ್ಚಿನ ಕ್ರಿಕೆಟಿಗನಿಗಾಗಿ ಏನು ಬೇಕಾದರೂ ಮಾಡಲು ಅಭಿಮಾನಿಗಳು ಸಿದ್ಧರಿರುತ್ತಾರೆ. ಭಾರತದಲ್ಲಿ ಇನ್ನುಳಿದ ಕ್ರೀಡೆಗಳಿಗಿಂತ ಕ್ರಿಕೆಟ್​ಗೆ ಹೆಚ್ಚು ಮನ್ನಣೆ ಸಿಕ್ಕಿರುವುದರಿಂದಲೋ ಏನೋ, ಕ್ರಿಕೆಟಿಗರ ಮೇಲಿನ ಅಭಿಮಾನಿಗಳ ಪ್ರೀತಿಗೆ ಮಿತಿಯೇ ಇಲ್ಲ. ಅದರಲ್ಲಂತೂ ವಿಶ್ವ ಕ್ರಿಕೆಟ್​ನ ರನ್ ಮಷಿನ್ ವಿರಾಟ್ ಕೊಹ್ಲಿ (Virat Kohli) ಅವರನ್ನು ಪ್ರೀತಿಸುವ ಅಭಿಮಾನಿಗಳ ಸಂಖ್ಯೆ ಅಪಾರ. ಅದಕ್ಕೆ ತಾಜಾ ಉದಾಹರಣೆ ಎಂದರೆ ಸೋಶಿಯಲ್ ಮೀಡಿಯಾದಲ್ಲಿ ಅತಿ ಹೆಚ್ಚು ಅನುಯಾಯಿಯಗಳನ್ನು ಹೊಂದಿರುವ ಭಾರತದ ಏಕೈಕ ಕ್ರಿಕೆಟಿಗನೆಂದರು ಅದು ವಿರಾಟ್ ಮಾತ್ರ. ಅಂತಹ ವಿರಾಟ್ ಕೊಹ್ಲಿಗಾಗಿ, ಅವರ ಜೊತೆ ಒಂದೇ ಒಂದು ಸೆಲ್ಫಿಗಾಗಿ ಅಥವಾ ಒಂದು ಆಟೋಗ್ರಾಫ್​ಗಾಗಿ ಅಭಿಮಾನಿಗಳು ಏನನ್ನೂ ಮಾಡಲು ಸಿದ್ಧರಿರುತ್ತಾರೆ. ಕೊಹ್ಲಿ ಜೊತೆಗಿನ ಒಂದೇ ಒಂದು ಫೋಟೋಕ್ಕಾಗಿ ಹಲವು ಅಭಿಮಾನಿಗಳು ಪಂದ್ಯದ ನಡುವೆಯೇ ಮೈದಾನದೊಳಕ್ಕೆ ನುಗ್ಗಿರುವುದನ್ನು ನಾವು ಹಲವು ಬಾರಿ ನೋಡಿದ್ದೇವೆ. ಇದಕ್ಕೆ ತಾಜಾ ಉದಾಹರಣೆಯಾಗಿ ಅಭಿಮಾನಿಯೊಬ್ಬ ಕೊಹ್ಲಿ ಜೊತೆಗಿನ ಒಂದು ಫೋಟೋಕ್ಕಾಗಿ ಬರೋಬ್ಬರಿ 23 ಸಾವಿರ ರೂ. ಖರ್ಚು ಮಾಡಿದ್ದಾನೆ.

ಅಸ್ಸಾಂನ ಅಭಿಮಾನಿಯೊಬ್ಬ ವಿರಾಟ್ ಕೊಹ್ಲಿ ಜೊತೆ ಸೆಲ್ಫಿ ತೆಗೆದುಕೊಳ್ಳಲು ಬರೋಬ್ಬರಿ 23 ಸಾವಿರ ರೂ. ಖರ್ಚು ಮಾಡಿರುವ ಸುದ್ದಿಯೊಂದು ಈಗ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಈ ದುಬಾರಿ ಬೆಲೆಯ ಸೆಲ್ಫಿ ತೆಗೆದುಕೊಂಡ ಅಭಿಮಾನಿಯ ಹೆಸರು ರಾಹುಲ್ ರೈ ಆಗಿದ್ದು, ಅವರು ಗುವಾಹಟಿಯ ಶಾಂತಿಪುರದ ನಿವಾಸಿಯಾಗಿದ್ದಾರೆ.

2ನೇ ಟಿ20 ಪಂದ್ಯಕ್ಕಾಗಿ ಗುವಾಹಟಿ ತಲುಪಿದ ಟೀಂ ಇಂಡಿಯಾವನ್ನು ಹಾಗೂ ಕೊಹ್ಲಿಯನ್ನು ಬೇಟಿಯಾಗಲು ರಾಹುಲ್, ವಿಮಾನ ನಿಲ್ದಾಣಕ್ಕೆ ಹೋಗಿದ್ದಾರೆ. ಆದರೆ ಅಲ್ಲಿ ಭದ್ರತಾ ಸಿಬ್ಬಂದಿ, ರಾಹುಲ್ ಅವರನ್ನು ವಿರಾಟ್ ಕೊಹ್ಲಿ ಬಳಿ ಹೋಗಲು ಬಿಟ್ಟಿಲ್ಲ. ಇದರಿಂದ ನಿರಾಶಗೊಂಡ ರಾಹುಲ್, ಗುವಾಹಟಿಯಲ್ಲಿ ಟೀಂ ಇಂಡಿಯಾ ತಂಗಿದ್ದ ಹೋಟೆಲ್​ನಲ್ಲಿ ತಾವು ಕೂಡ ಒಂದು ರೂಂ ಬುಕ್ ಮಾಡಲು ಮುಂದಾಗಿದ್ದಾರೆ. ಇಲ್ಲಿ ರೂಮ್ ಬುಕ್ ಮಾಡುವುದು ಅಷ್ಟು ಸುಲಭವಾಗಿರಲಿಲ್ಲ. ಏಕೆಂದರೆ ಟೀಂ ಇಂಡಿಯಾ ಪಂಚತಾರಾ ಹೋಟೆಲ್‌ನಲ್ಲಿ ತಂಗಿದ್ದು, ಆ ಹೋಟೆಲ್​ನಲ್ಲಿ ಒಂದು ದಿನ ತಂಗಲು 23,400 ರೂ. ಪಾವಿತಿಸಬೇಕು. ಆದರೆ ಕೊಹ್ಲಿ ಜೊತೆಗೆ ಸೆಲ್ಫಿ ತೆಗೆದುಕೊಳ್ಳಲೇಬೇಕೆಂದು ನಿರ್ಧರಿಸಿದ್ದ ರಾಹುಲ್ ಹಣವನ್ನು ಲೆಕ್ಕಿಸದೆ, ಅದೇ ಹೋಟೆಲ್​ನಲ್ಲಿ ರೂಂ ಬುಕ್ ಮಾಡಿಕೊಂಡಿದ್ದಾರೆ.

ಕೊನೆಗೂ ತನ್ನ ಪ್ರಯತ್ನ ಬಿಡದ ರಾಹುಲ್, ಎರಡನೇ ದಿನ ಬ್ರೇಕ್ ಫಾಸ್ಟ್ ಲಾಂಜ್​ನಲ್ಲಿ ವಿರಾಟ್ ಜೊತೆ ಸೆಲ್ಫಿ ತೆಗೆದುಕೊಳ್ಳುವುದರಲ್ಲಿ ಯಶಸ್ವಿಯಾಗಿದ್ದಾರೆ. ಬ್ರೇಕ್ ಫಾಸ್ಟ್ ಲಾಂಜ್​ನಲ್ಲಿ ವಿರಾಟ್ ಅವರನ್ನು ಭೇಟಿಯಾದ ರಾಹುಲ್, ಕೊಹ್ಲಿ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದಲ್ಲದೆ, ಕೊಹ್ಲಿ ಫೋಟೋದ ಮೇಲೆ ಅವರ ಆಟೋಗ್ರಾಫ್​ ಕೂಡ ತೆಗೆದುಕೊಂಡು ಮನೆಗೆ ಮರಳಿದ್ದಾರೆ.

ಇಂದಿನ ಪಂದ್ಯಕ್ಕೆ ಸಂಭಾವ್ಯ 11

ಭಾರತದ ಸಂಭಾವ್ಯ ಪ್ಲೇಯಿಂಗ್ 11: ರೋಹಿತ್ ಶರ್ಮಾ, ಕೆಎಲ್ ರಾಹುಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಬ್ ಪಂತ್, ದಿನೇಶ್ ಕಾರ್ತಿಕ್, ಅಕ್ಷರ್ ಪಟೇಲ್, ಹರ್ಷಲ್ ಪಟೇಲ್, ಆರ್​. ಅಶ್ವಿನ್, ದೀಪಕ್ ಚಹರ್ ಮತ್ತು ಅರ್ಷದೀಪ್ ಸಿಂಗ್.

ದಕ್ಷಿಣ ಆಫ್ರಿಕಾದ ಸಂಭಾವ್ಯ ಪ್ಲೇಯಿಂಗ್ 11: ಕ್ವಿಂಟನ್ ಡಿ ಕಾಕ್, ರೀಜಾ ಹೆಂಡ್ರಿಕ್ಸ್, ಐಡೆನ್ ಮಾರ್ಕ್ರಾಮ್, ಟೆಂಬಾ ಬವುಮಾ, ಹೆನ್ರಿಕ್ ಕ್ಲಾಸೆನ್, ಡೇವಿಡ್ ಮಿಲ್ಲರ್, ವೇಯ್ನ್ ಪೆರ್ನೆಲ್, ಕಗಿಸೊ ರಬಾಡ, ತಬ್ರೇಝ್ ಶಮ್ಸಿ, ಕೇಶವ್ ಮಹಾರಾಜ್ ಮತ್ತು ಅನ್ರಿಕ್ ನೋಕಿಯಾ.

Published On - 5:56 pm, Sun, 2 October 22