ಪಾಕಿಸ್ತಾನದ ವೇಗದ ಬೌಲರ್ ಶಾಹೀನ್ ಅಫ್ರಿದಿ ಅವರು 2024 ರ ಟಿ20 ವಿಶ್ವಕಪ್ ವೇಳೆ ತಂಡದ ಮುಖ್ಯ ಕೋಚ್ ಗ್ಯಾರಿ ಕರ್ಸ್ಟನ್ ಮತ್ತು ತಂಡದ ನಿರ್ವಹಣೆಯೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಅಲ್ಲದೆ ಈ ಬಗ್ಗೆ ತನಿಖೆ ಕೂಡ ಮುಂದುವರಿದಿದೆ ಎಂದು ಪಾಕಿಸ್ತಾನದ ಸಮಾ ಟಿವಿ ವರದಿ ಮಾಡಿದೆ. ವರದಿ ಪ್ರಕಾರ, ಶಾಹೀನ್ ಅಫ್ರಿದಿ ಅನುಚಿತವಾಗಿ ವರ್ತಿಸಿದರೂ ಮ್ಯಾನೇಜ್‌ಮೆಂಟ್ ಏಕೆ ಅವರ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳಲಿಲ್ಲ ಎಂಬುದರ ಬಗ್ಗೆ ಈಗ ಪಿಸಿಬಿ ತನಿಖೆ ನಡೆಸುತ್ತಿದೆ. ಅಷ್ಟೇ ಅಲ್ಲ, ವಿಶ್ವಕಪ್‌ಗೂ ಮುನ್ನ ನಡೆದ ಇಂಗ್ಲೆಂಡ್ ಮತ್ತು ಐರ್ಲೆಂಡ್ ಪ್ರವಾಸದ ವೇಳೆಯೂ ಕೋಚ್ ಹಾಗೂ ಟೀಮ್ ಮ್ಯಾನೇಜ್‌ಮೆಂಟ್ ಜೊತೆ ಶಾಹೀನ್ ಅನುಚಿತವಾಗಿ ವರ್ತಿಸಿದ್ದರು ಎಂದು ವರದಿ ಮಾಡಿದೆ.
ಅಲ್ಲದೆ ಶಾಹೀನ್ ಶಾ ಆಫ್ರಿದಿ ಕೋಚ್ ಮತ್ತು ಮ್ಯಾನೇಜ್‌ಮೆಂಟ್‌ನೊಂದಿಗೆ ಅನುಚಿತವಾಗಿ ವರ್ತಿಸಿರುವ ಬಗ್ಗೆ ಕೋಚ್ ಗ್ಯಾರಿ ಕರ್ಸ್ಟನ್ ಮತ್ತು ಅಜರ್ ಮಹಮೂದ್ ಪಿಸಿಬಿಗೆ ದೂರು ನೀಡಿದ್ದು, ಈ ದೂರಿನಲ್ಲಿ ಆಟಗಾರರು ನಾಯಕತ್ವಕ್ಕಾಗಿ ಪರಸ್ಪರ ಲಾಬಿ ನಡೆಸುತ್ತಿದ್ದಾರೆ ಎಂದು ಕೋಚ್ ಆರೋಪಿಸಿದ್ದಾರೆ ಎಂದು ವರದಿಯಾಗಿದೆ.
This is real face of Shaheen afridi doing beef with Coaches & management now imagine how will he behave with teammates,he’s so greedy for Captaincy I’m sure he intentionally don’t perfom in WC 23 so management remove Babar, all these teachings are coming from his shahid Afridi pic.twitter.com/aysURS8ERU
— 𝗦𝗞𝗜𝗣𝗣𝗘𝗥 56🇵🇰 (@101_Edgbaston) July 10, 2024
ಇದೆಲ್ಲದರ ನಡುವೆ ಟಿ20 ವಿಶ್ವಕಪ್‌ನಲ್ಲಿ ತಂಡದ ಕಳಪೆ ಪ್ರದರ್ಶನದ ಬಳಿಕ ರಾಷ್ಟ್ರೀಯ ಆಯ್ಕೆ ಸಮಿತಿಯಲ್ಲಿ ಅಬ್ದುಲ್ ರಜಾಕ್ ಮತ್ತು ವಹಾಬ್ ರಿಯಾಜ್ ಅವರನ್ನು ತಮ್ಮ ಸೇವೆಯಿಂದ ತೆಗೆದುಹಾಕಲಾಗಿದೆ. ಅಬ್ದುಲ್ ರಜಾಕ್ ಪುರುಷ ಮತ್ತು ಮಹಿಳಾ ಆಯ್ಕೆ ಸಮಿತಿಯ ಭಾಗವಾಗಿದ್ದರೆ, ವಹಾಬ್ ಪುರುಷರ ತಂಡದ ಆಯ್ಕೆಗಾರರಾಗಿದ್ದರು. ಆದರೆ ಟಿ20 ವಿಶ್ವಕಪ್‌ನಲ್ಲಿ ಪಾಕಿಸ್ತಾನ ತಂಡ ನೀರಸ ಪ್ರದರ್ಶನ ನೀಡಿತ್ತು. ಹೀಗಾಗಿ ಪಿಸಿಬಿ ಈ ನಿರ್ಧಾರ ತೆಗೆದುಕೊಂಡಿದ್ದು, ಈ ಇಬ್ಬರ ತಲೆದಂಡವಾಗಿದೆ.
ಆಯ್ಕೆ ಸಮಿತಿಯಿಂದ ತೆಗೆದುಹಾಕಲ್ಪಟ್ಟ ನಂತರ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ವೊಂದನ್ನು ಹಂಚಿಕೊಂಡಿರುವ ವಹಾಬ್ ರಿಯಾಜ್, ‘ನಾನು ಬಹಳಷ್ಟು ಹೇಳಬಲ್ಲೆ, ಆದರೆ ನಾನು ಬ್ಲೇಮ್ ಗೇಮ್‌ನ ಭಾಗವಾಗಲು ಬಯಸುವುದಿಲ್ಲ. ಪಿಸಿಬಿ ಆಯ್ಕೆ ಸಮಿತಿಯ ಸದಸ್ಯನಾಗಿ ನನ್ನ ಸೇವೆ ಕೊನೆಗೊಂಡಿದೆ. ನಾನು ಇಷ್ಟಪಡುವ ಆಟವನ್ನು ಸಂಪೂರ್ಣ ನಂಬಿಕೆ ಮತ್ತು ಪ್ರಾಮಾಣಿಕತೆಯಿಂದ ನಾನು ಬಡಿಸಿದ್ದೇನೆ ಎಂದು ಜನರು ತಿಳಿದುಕೊಳ್ಳಬೇಕೆಂದು ನಾನು ಬಯಸುತ್ತೇನೆ. ಪಾಕಿಸ್ತಾನ ಕ್ರಿಕೆಟ್‌ನ ಉನ್ನತಿಗಾಗಿ ನಾನು ನನ್ನ ಶೇಕಡಾ 100 ರಷ್ಟು ಕೊಡುಗೆಯನ್ನು ನೀಡಿದ್ದೇನೆ. ಆಯ್ಕೆ ಸಮಿತಿಯ ಭಾಗವಾಗಿರುವುದು ನನಗೆ ಗೌರವವಾಗಿದೆ. ರಾಷ್ಟ್ರೀಯ ತಂಡವನ್ನು ಆಯ್ಕೆ ಮಾಡಲು ಏಳು ಸದಸ್ಯರ ಸಮಿತಿಯ ಭಾಗವಾಗಿ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಒಂದು ವಿಶೇಷವಾಗಿದೆ. ಎಲ್ಲರ ಮತಕ್ಕೂ ಸಮಾನ ಮಹತ್ವವಿತ್ತು. ನಾವು ತಂಡವಾಗಿ ಆಯ್ಕೆ ನಿರ್ಧಾರಗಳನ್ನು ತೆಗೆದುಕೊಂಡಿದ್ದೇವೆ ಮತ್ತು ಆ ಪ್ರಕ್ರಿಯೆಯ ಜವಾಬ್ದಾರಿಯನ್ನು ಸಮಾನವಾಗಿ ಹಂಚಿಕೊಂಡಿದ್ದೇವೆ. ಇದಕ್ಕೆ ಕೊಡುಗೆ ನೀಡುವುದು ಗೌರವದ ಸಂಗತಿ ಎಂದು ಬರೆದುಕೊಂಡಿದ್ದಾರೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:50 pm, Thu, 11 July 24