ಪ್ರಸ್ತುತ ಅಮೇರಿಕಾದಲ್ಲಿ ಯುಎಸ್ ಮಾಸ್ಟರ್ಸ್ ಟಿ10 ಲೀಗ್‌ನ (US Masters T10 League) ಉದ್ಘಾಟನಾ ಆವೃತ್ತಿಯು ಆರು ತಂಡಗಳ ನಡುವೆ ನಡೆಯುತ್ತಿದೆ. ಈ ಲೀಗ್ನಲ್ಲಿ ಹಲವಾರು ಭಾರತ ಮತ್ತು ಪಾಕಿಸ್ತಾನದ (India and Pakistan) ನಿವೃತ್ತ ಆಟಗಾರರು ಆಡುತ್ತಿದ್ದಾರೆ. ಅವರಲ್ಲಿ ಭಾರತದ ಗೌತಮ್ ಗಂಭೀರ್ (Gautam Gambhir) ಮತ್ತು ಶಾಹಿದ್ ಅಫ್ರಿದಿ (Shahid Afridi) ಕೂಡ ನ್ಯೂಯಾರ್ಕ್ ವಾರಿಯರ್ಸ್ ಮತ್ತು ನ್ಯೂಜೆರ್ಸಿ ಲೆಜೆಂಡ್ಸ್ ತಂಡದ ನಾಯಕತ್ವದ ವಹಿಸಿದ್ದಾರೆ. ಉಭಯ ಆಟಗಾರರ ತಂಡಗಳ ನಡುವೆ ಭಾನುವಾರ ನಡೆದ ಪಂದ್ಯದಲ್ಲಿ ಗೌತಮ್ ಗಂಭೀರ್ ನೇತೃತ್ವದ ನ್ಯೂಜೆರ್ಸಿ ಲೆಜೆಂಡ್ಸ್ ತಂಡ, ಶಾಹಿದ್ ಅಫ್ರಿದಿ ನಾಯಕತ್ವದ ನ್ಯೂಯಾರ್ಕ್ ವಾರಿಯರ್ಸ್ ತಂಡವನ್ನು 9 ವಿಕೆಟ್ಗಳಿಂದ ಮಣಿಸಿ ರೋಚಕ ಜಯ ಸಾಧಿಸಿದೆ.
ಮಳೆ ಪೀಡಿತ ಈ ಪಂದ್ಯವನ್ನು ಕೇವಲ ಐದು ಓವರ್ಗಳಿಗೆ ಸೀಮಿತಗೊಳಿಸಲಾಯಿತು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಶಾಹಿದ್ ಅಫ್ರಿದಿ ನಾಯಕತ್ವದ ನ್ಯೂಯಾರ್ಕ್ ವಾರಿಯರ್ಸ್ ತಂಡ ಮೊದಲ ಎರಡು ಓವರ್‌ಗಳಲ್ಲಿ ರಿಚರ್ಡ್ ಲೆವಿ ಮತ್ತು ತಿಲಕರತ್ನೆ ದಿಲ್ಶನ್ ಅವರ ವಿಕೆಟ್ಗಳನ್ನು ಕಳೆದುಕೊಂಡಿದರಿಂದ ಉತ್ತಮ ಆರಂಭವನ್ನು ಪಡೆಯಲಿಲ್ಲ. ಆದಾಗ್ಯೂ, ಇನ್ನಿಂಗ್ಸ್‌ಗೆ ಜೀವ ತುಂಬಿದ ನಾಯಕ ಶಾಹಿದ್ ಆಫ್ರಿದಿ ಸ್ಫೋಟಕ ಬ್ಯಾಟಿಂಗ್ ಮಾಡಿದರು. ತಂಡದ ಪರ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್ಗೆ ಇಳಿದ ಅವರು ಕೇವಲ 12 ಎಸೆತಗಳಲ್ಲಿ 6 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ ಅಜೇಯ 37* ರನ್ ಬಾರಿಸಿದರು.
The Lala Show. Shahid Afridi, wow! 🔥🤙#NJTvNYW #T10League #CricketsFastestFormat #SunshineStarsSixes #USMastersT10 pic.twitter.com/IwufYBv8PL
— US Masters T10 (@USMastersT10) August 20, 2023
US Masters T10 League: 47ನೇ ವಯಸ್ಸಿನಲ್ಲೂ ಅಬ್ಬರಿಸಿದ ಕಾಲಿಸ್; ರೈನಾ ತಂಡಕ್ಕೆ 48 ರನ್ ಜಯ
ಅದರಲ್ಲೂ ಎದುರಾಳಿ ಬೌಲರ್ ಹಾಗೂ ಅನುಭವಿ ಕ್ರಿಕೆಟಿಗ ಕ್ರಿಸ್ಟೋಫರ್ ಬಾರ್ನ್‌ವೆಲ್ ಮತ್ತು ಅಭಿಮನ್ಯು ಮಿಥುನ್ ಅವರು ಇನ್ನಿಂಗ್ಸ್‌ನಲ್ಲಿ ಬೌಲ್ ಮಾಡಿದ ಏಕೈಕ ಓವರ್‌ನಲ್ಲಿ ಕ್ರಮವಾಗಿ 27 ಮತ್ತು 15 ರನ್ ಸಿಡಿಸಿದರು. ಅಫ್ರಿದಿ ಅವರ ಈ ಸ್ಫೋಟಕ ಇನ್ನಿಂಗ್ಸ್ನಿಂದಾಗಿ ನ್ಯೂಜೆರ್ಸಿ ಲೆಜೆಂಡ್ಸ್ ಐದು ಓವರ್‌ಗಳಲ್ಲಿ 84 ರನ್ ಕಲೆಹಾಕಿತು.
ಈ ಗುರಿ ಬೆನ್ನಟ್ಟಿದ ನ್ಯೂಜೆರ್ಸಿ ಲೆಜೆಂಡ್ಸ್ ತಂಡ ಇನ್ನು 2 ಎಸೆತಗಳು ಬಾಕಿ ಇರುವಂತೆಯೇ ಗೆಲುವಿನ ದಡ ಸೇರಿತು. ತಂಡದ ಪರ ಆರಂಭಿಕರಾಗಿ ಕಣಕ್ಕಿಳಿದಿದ್ದ ಜೆಸ್ಸಿ ರೈಡರ್ ಕೇವಲ 12 ಎಸೆತಗಳಲ್ಲಿ 3 ಬೌಂಡರಿ ಹಾಗೂ 4 ಸಿಕ್ಸರ್ ಸಹಿತ 38 ರನ್ ಬಾರಿಸಿದರೆ, ಮತ್ತೊಬ್ಬ ಆರಂಭಿಕ ಯೂಸುಫ್ ಪಠಾಣ್ 6 ಎಸೆತಗಳಲ್ಲಿ 2 ಸಿಕ್ಸರ್ ಸಹಿತ ಅಜೇಯ16 ರನ್ ಬಾರಿಸಿದರು. ಇವರೊಂದಿಗೆ ಮೂರನೇ ಕ್ರಮಾಂದಲ್ಲಿ ಬ್ಯಾಟ್ ಬೀಸಿದ ಕ್ರಿಸ್ಟೋಫರ್ ಬಾರ್ನ್‌ವೆಲ್ 10 ಎಸೆತಗಳಲ್ಲಿ 4 ಸಿಕ್ಸರ್ ಸಹಿತ ಅಜೇಯ 28 ರನ್ ಬಾರಿಸುವುದರೊಂದಿಗೆ ಕೇವಲ 4.4 ಓವರ್‌ಗಳಲ್ಲಿ ತಂಡವನ್ನು ಗೆಲುವಿನ ದಡ ಸೇರಿಸಿದರು.
Jesse ‘𝑹𝑶𝑪𝑲𝑺𝑻𝑨𝑹’ Ryder! Absolute vintage. 🔥🤩#NJTvNYW #T10League #CricketsFastestFormat #SunshineStarsSixes #USMastersT10 pic.twitter.com/jp9ZoSeWJP
— US Masters T10 (@USMastersT10) August 20, 2023
ಒಟ್ಟಾರೆ ನ್ಯೂಜೆರ್ಸಿ ಲೆಜೆಂಡ್ಸ್ ತಂಡದ ಪರ ಈ ಪಂದ್ಯದಲ್ಲಿ 10 ಸಿಕ್ಸರ್‌ಗಳು ಸಿಡಿಸಿದವು. ಇನ್ನು ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಆರಂಭಿಕರಾಗಿ ಕಣಕ್ಕಿಳಿಯುತ್ತಿದ್ದ ಗೌತಮ್ ಗಂಭೀರ್, ಇದು ಐದು ಓವರ್ಗಳ ಪಂದ್ಯವಾಗಿದ್ದರಿಂದ ಆರಂಭಿಕರಾಗಿ ಕಣಕ್ಕಿಳಿಯಲಿಲ್ಲ. ಹೀಗಾಗಿ ಅವರಿಗೆ ಬ್ಯಾಟಿಂಗ್ ಮಾಡುವ ಅವಕಾಶ ಸಿಗಲಿಲ್ಲ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:59 pm, Mon, 21 August 23