ಕೆನಡಾದಲ್ಲಿ ನಡೆಯುತ್ತಿರುವ ಗ್ಲೋಬಲ್ ಟಿ20 ಲೀಗ್ ಟೂರ್ನಿಯಿಂದ ಬಾಂಗ್ಲಾ ಟೈಗರ್ಸ್ ಮಿಸ್ಸಿಸೌಗಾ ತಂಡ ಹೊರಬಿದ್ದಿದೆ. ಅದು ಕೂಡ ನಿರ್ಣಾಯಕ ಪಂದ್ಯದಲ್ಲಿ ಸೂಪರ್ ಓವರ್ ಆಡಲು ನಿರಾಕರಿಸುವ ಮೂಲಕ ಎಂಬುದೇ ಅಚ್ಚರಿ. ಈ ಟೂರ್ನಿಯ ಎಲಿಮಿನೇಟರ್ ಪಂದ್ಯದಲ್ಲಿ ಬಾಂಗ್ಲಾ ಟೈಗರ್ಸ್ ಮಿಸ್ಸಿಸೌಗಾ ಮತ್ತು ಟೊರೊಂಟೊ ನ್ಯಾಷನಲ್ಸ್ ತಂಡಗಳು ಮುಖಾಮುಖಿಯಾಗಿದ್ದವು.
ಮಳೆಯ ಕಾರಣ ಪಂದ್ಯವು ನಿಗದಿತ ಸಮಯದಲ್ಲಿ ಆರಂಭವಾಗಿರಲಿಲ್ಲ. ಇದಾಗ್ಯೂ ಫಲಿತಾಂಶ ನಿರ್ಧರಿಸಲು ಆಯೋಜಕರು ಸೂಪರ್ ಓವರ್ ಆಡಲು ನಿರ್ಧರಿಸಿದ್ದರು. ಆದರೆ ಬಾಂಗ್ಲಾ ಟೈಗರ್ಸ್ ಮಿಸ್ಸಿಸೌಗಾ ತಂಡದ ನಾಯಕ ಶಕೀಬ್ ಅಲ್ ಹಸನ್ ಸೂಪರ್ ಓವರ್ ಅಡಲು ನಿರಾಕರಿಸಿದ್ದಾರೆ.
ಐಸಿಸಿ ನಿಯಮದ ಪ್ರಕಾರ ಫಲಿತಾಂಶ ನಿರ್ಧರಿಸಲು ಕನಿಷ್ಠ 5 ಓವರ್ಗಳ ಪಂದ್ಯವನ್ನು ಆಯೋಜಿಸಬೇಕೆಂದು ಶಕೀಬ್ ಹಾಗೂ ಬಾಂಗ್ಲಾ ಟೈಗರ್ಸ್ ಮಿಸ್ಸಿಸೌಗಾ ತಂಡವು ಆಗ್ರಹಿಸಿದೆ. ಆದರೆ ಅದಾಗಲೇ ಮೈದಾನವು ಸಂಪೂರ್ಣ ಒದ್ದೆಯಾಗಿದ್ದರಿಂದ 5 ಓವರ್ಗಳ ಪಂದ್ಯ ನಡೆಸುವಂತಹ ಯಾವುದೇ ಪರಿಸ್ಥಿತಿ ಇರಲಿಲ್ಲ.
ಇತ್ತ ಸೂಪರ್ ಓವರ್ ಮೂಲಕ ಪಂದ್ಯದ ಫಲಿತಾಂಶ ನಿರ್ಧರಿಸಲು ಆಯೋಜಕರು ಮುಂದಾದರೂ ಶಕೀಬ್ ಅಲ್ ಹಸನ್ ಅದಕ್ಕೆ ಸಮ್ಮತಿ ಸೂಚಿಸಿರಲಿಲ್ಲ. ಹೀಗಾಗಿ ಎಲಿಮಿನೇಟರ್ ಪಂದ್ಯವನ್ನು ರದ್ದುಗೊಳಿಸಲಾಯಿತು. ಈ ಪಂದ್ಯದ ರದ್ದತಿಯಿಂದಾಗಿ ಬಾಂಗ್ಲಾ ಟೈಗರ್ಸ್ ಮಿಸ್ಸಿಸೌಗಾ ತಂಡವು ಗ್ಲೋಬಲ್ ಟಿ20 ಲೀಗ್ನಿಂದ ಹೊರಬಿದ್ದಿದೆ.
ಅತ್ತ ಎಲಿಮಿನೇಟರ್ ಪಂದ್ಯವಾಡದೇ ಟೊರೊಂಟೊ ನ್ಯಾಷನಲ್ಸ್ ತಂಡವು ಕ್ವಾಲಿಫೈಯರ್-2 ಗೆ ಅರ್ಹತೆ ಪಡೆದುಕೊಂಡಿದೆ. ಅಲ್ಲದೆ ದ್ವಿತೀಯ ಕ್ವಾಲಿಫೈಯರ್ ಪಂದ್ಯದಲ್ಲಿ ಟೊರೊಂಟೊ ನ್ಯಾಷನಲ್ಸ್ ಹಾಗೂ ಬ್ರಾಂಪ್ಟನ್ ವೋಲ್ವ್ಸ್ ತಂಡಗಳು ಮುಖಾಮುಖಿಯಾಗಿದೆ.
ಈ ಮ್ಯಾಚ್ನಲ್ಲಿ 5 ವಿಕೆಟ್ಗಳ ಜಯ ಸಾಧಿಸುವ ಮೂಲಕ ಟೊರೊಂಟೊ ನ್ಯಾಷನಲ್ಸ್ ತಂಡವು ಇದೀಗ ಫೈನಲ್ಗೆ ಪ್ರವೇಶಿಸಿದೆ. ಅದರಂತೆ ಆಗಸ್ಟ್ 11 ರಂದು ನಡೆಯಲಿರುವ ಅಂತಿಮ ಹಣಾಹಣಿಯಲ್ಲಿ ಮಾಂಟ್ರಿಯಲ್ ಟೈಗರ್ಸ್ ಮತ್ತು ಟೊರೊಂಟೊ ನ್ಯಾಷನಲ್ಸ್ ತಂಡಗಳು ಮುಖಾಮುಖಿಯಾಗಲಿದ್ದು, ಈ ಪಂದ್ಯದಲ್ಲಿ ಗೆಲ್ಲುವ ತಂಡ ಚಾಂಪಿಯನ್ ಪಟ್ಟಕ್ಕೇರಲಿದೆ.
ಟೊರೊಂಟೊ ನ್ಯಾಷನಲ್ಸ್ ತಂಡ: ಕಾಲಿನ್ ಮನ್ರೊ (ನಾಯಕ), ಉನ್ಮುಕ್ತ್ ಚಂದ್, ಆಂಡ್ರೀಸ್ ಗೌಸ್, ರಾಸ್ಸಿ ವ್ಯಾನ್ ಡೆರ್ ಡಸ್ಸೆನ್, ಅರ್ಮಾನ್ ಕಪೂರ್, ಮೊಹಮ್ಮದ್ ನವಾಜ್, ರೊಮಾರಿಯೋ ಶೆಫರ್ಡ್, ಜೇಸನ್ ಬೆಹ್ರೆನ್‌ಡಾರ್ಫ್, ಜುನೈದ್ ಸಿದ್ದಿಕ್, ಜತೀಂದ್ರಪಾಲ್ ಮಥಾರು, ನಿಖಿಲ್ ದತ್ತಾ, ಸಾದಾಬ್ ಜಾಫ್ ಅಲೆನ್, ರೋಸ್ಟನ್ ಚೇಸ್, ರೋಹಿತ್ ಪೌಡೆಲ್, ನಿಕೋಲಸ್ ಕಿರ್ಟನ್, ಕನ್ವರ್ ಮನ್, ದಿಲ್ರಾಜ್ ಡಿಯೋಲ್, ಜಗನ್‌ದೀಪ್ ಸಿಂಗ್, ಮುಹಮ್ಮದ್ ರೋಹಿದ್ ಖಾನ್.
ಇದನ್ನೂ ಓದಿ: Rohit Sharma: ಈ ಒಂದು ದಾಖಲೆ ಬರೆಯಲು ರೋಹಿತ್ ಶರ್ಮಾ ಮುಂದಿನ ವರ್ಷದವರೆಗೆ ಕಾಯಲೇಬೇಕು..!
ಮಾಂಟ್ರಿಯಲ್ ಟೈಗರ್ಸ್ ತಂಡ: ದಿಲ್‌ಪ್ರೀತ್ ಬಾಜ್ವಾ, ಆಷ್ಟನ್ ಅಗರ್, ಪರ್ವೀನ್ ಕುಮಾರ್, ಟಿಮ್ ಸೀಫರ್ಟ್ (ನಾಯಕ), ಗೆರ್ಹಾರ್ಡ್ ಎರಾಸ್ಮಸ್, ಶೆರ್ಫೇನ್ ರುದರ್‌ಫೋರ್ಡ್, ಅಜ್ಮತುಲ್ಲಾ ಒಮರ್‌ಜಾಯ್, ಕಾರ್ಬಿನ್ ಬಾಷ್, ಅಯಾನ್ ಅಫ್ಜಲ್ ಖಾನ್, ಜಹೂರ್ ಖಾನ್, ಕಲೀಮ್ ಸನಾ, ಕ್ರಿಸ್‌ಮದ್ ಲಿನ್‌ಫ್ಯಾನ್, ಕ್ರಿಸ್‌ಮದ್ ಲಿನ್‌ಫ್ಯಾನ್ ಸೈಫುದ್ದೀನ್, ಬೆನ್ ಮಾನೆಂಟಿ, ಆದಿತ್ಯ ವರದರಾಜನ್, ಯುವರಾಜ್ ಹುಂಡಾಲ್, ಅನೂಪ್ ರವಿ, ಪ್ರಭಾಸೀಸ್ ರೈನಾ, ನವೀನ್-ಉಲ್-ಹಕ್, ಚರಂಜಿತ್ ರಾಂಧವಾ.