Shikhar Dhawan: ‘ನನ್ನ ಪ್ರೀತಿ’; ಹೊಸ ಪ್ರೇಯಸಿಯನ್ನು ಅಧಿಕೃತವಾಗಿ ಪರಿಚಯಿಸಿದ ಶಿಖರ್ ಧವನ್

Shikhar Dhawan's New Love: ಭಾರತೀಯ ಕ್ರಿಕೆಟ್ ತಾರೆ ಶಿಖರ್ ಧವನ್ ಅವರು ತಮ್ಮ ಹೊಸ ಗೆಳತಿ ಸೋಫಿ ಶೈನ್ ಜೊತೆಗಿನ ಸಂಬಂಧವನ್ನು ಇನ್ಸ್ಟಾಗ್ರಾಮ್ ನಲ್ಲಿ ಅಧಿಕೃತವಾಗಿ ಘೋಷಿಸಿದ್ದಾರೆ. ಐರ್ಲೆಂಡ್ ಮೂಲದ ಸೋಫಿ ಜೊತೆ ಧವನ್ ಹಲವು ಬಾರಿ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದರು. ಈಗ ಅವರ ಸಂಬಂಧಕ್ಕೆ ಅಧಿಕೃತ ಮುದ್ರೆ ಬಿದ್ದಿದೆ.

Shikhar Dhawan: ‘ನನ್ನ ಪ್ರೀತಿ’; ಹೊಸ ಪ್ರೇಯಸಿಯನ್ನು ಅಧಿಕೃತವಾಗಿ ಪರಿಚಯಿಸಿದ ಶಿಖರ್ ಧವನ್
Shikhar Dhawan

Updated on: May 01, 2025 | 7:56 PM

ಕ್ರಿಕೆಟ್ ಲೋಕಕ್ಕೆ ಕಳೆದ ವರ್ಷವೇ ಗುಡ್​ ಬೈ ಹೇಳಿದ್ದ ಟೀಂ ಇಂಡಿಯಾ ಕ್ರಿಕೆಟಿಗ ಶಿಖರ್ ಧವನ್ (Shikhar Dhawan) ಅವರ ವೈಯಕ್ತಿಕ ಜೀವನದಲ್ಲಿ ಹೊಸ ಇನ್ನಿಂಗ್ಸ್ ಪ್ರೀತಿಯ ಮೈದಾನದಲ್ಲಿ ಪ್ರಾರಂಭವಾಗಿದೆ. ವರ್ಷದ ಹಿಂದೆ ತಮ್ಮ ಮಡದಿಯಿಂದ ವಿಚ್ಛೇದನ ಪಡೆದು ಏಕಾಂಗಿಯಾಗಿದ್ದ ಶಿಖರ್ ಧವನ್ ಜೀವನಕ್ಕೆ ಹೊಸ ಗೆಳತಿಯ ಆಗಮನವಾಗಿದ್ದು, ಇದೀಗ ಈ ವಿಚಾರ ಇಡೀ ಜಗತ್ತಿಗೆ ಗೊತ್ತಾಗಿದೆ. ಅಷ್ಟಕ್ಕೂ ಧವನ್ ಜೀವನಕ್ಕೆ ಎಂಟ್ರಿಯಾಗಿರುವ ಹುಡುಗಿ ಯಾರು ಅಂದರೆ ಇಷ್ಟು ದಿನ ರೂಮರ್ಡ್ ಗರ್ಲ್ ಫ್ರೆಂಡ್ ಎನಿಸಿಕೊಳ್ಳುತ್ತಿದ್ದ ಸೋಫಿ ಶೈನ್ (Sophie Shine). ಶಿಖರ್ ಧವನ್ ಗುರುವಾರ ಇನ್ಸ್ಟಾಗ್ರಾಮ್​ನಲ್ಲಿ ಒಂದು ಪೋಸ್ಟ್ ಮಾಡಿದ್ದು, ಅದರಲ್ಲಿ ಅವರು ತಮ್ಮ ಮತ್ತು ಸೋಫಿಯ ಫೋಟೋವನ್ನು ಹಂಚಿಕೊಂಡಿದ್ದಾರೆ. ಈ ಫೋಟೋಗೆ ‘ನನ್ನ ಪ್ರೀತಿ’ ಎಂದು ಶೀರ್ಷಿಕೆ ನೀಡಲಾಗಿದ್ದು, ಈ ಇಬ್ಬರ ನಡುವಿನ ಸಂಬಂಧಕ್ಕೆ ಅಧಿಕೃತ ಮುದ್ರೆ ಬಿದ್ದಿದೆ.

ಐರಿಶ್ ಹುಡುಗಿ ಹಿಂದೆ ಬಿದ್ದ ಗಬ್ಬರ್

ಟೀಂ ಇಂಡಿಯಾದ ಆರಂಭಿಕ ಬ್ಯಾಟ್ಸ್‌ಮನ್ ಶಿಖರ್ ಧವನ್ ಪ್ರಸ್ತುತ ಐರ್ಲೆಂಡ್ ಮೂಲದ ಸೋಫಿ ಶೈನ್ ಜೊತೆ ಪ್ರೀತಿಯಲ್ಲಿ ಬಿದ್ದಿದ್ದಾರೆ. ಅವರು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಫೋಟೋ ಪೋಸ್ಟ್ ಮಾಡುವ ಮೂಲಕ ಈ ವಿಚಾರವನ್ನು ಬಹಿರಂಗಪಡಿಸಿದ್ದಾರೆ. ಚಾಂಪಿಯನ್ಸ್ ಟ್ರೋಫಿಯ ಸಮಯದಲ್ಲಿ ಶಿಖರ್ ಧವನ್ ಸೋಫಿ ಜೊತೆ ಕಾಣಿಸಿಕೊಂಡಿದ್ದರು. ಸೋಫಿ ಟೀಂ ಇಂಡಿಯಾ ಪಂದ್ಯಗಳನ್ನು ವೀಕ್ಷಿಸಲು ಧವನ್​ ಜೊತೆಗೆ ಬಂದಿದ್ದು ಮಾತ್ರವಲ್ಲದೆ, ಇಬ್ಬರಿಬ್ಬರು ಜೊತೆ ಜೊತೆಯಾಗಿ ಮದುವೆ ಸಮಾರಂಭಗಳಲ್ಲೂ ಕಾಣಿಸಿಕೊಂಡಿದ್ದರು.

ಅನುಮಾನ ಮೂಡಿದ್ದು ಯಾವಾಗ?

ಇದಕ್ಕೂ ಮೊದಲು, ಶಿಖರ್ ಧವನ್ ಮತ್ತು ಸೋಫಿ ಕಳೆದ ವರ್ಷ ಒಟ್ಟಿಗೆ ಕಾಣಿಸಿಕೊಂಡಿದ್ದರು. ನವೆಂಬರ್ 2024 ರಲ್ಲಿ ಚಾಂಪಿಯನ್ಸ್ ಟ್ರೋಫಿಗೆ ಮುಂಚೆಯೇ, ಇಬ್ಬರೂ ವಿಮಾನ ನಿಲ್ದಾಣದಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದರು. ಇವರಿಬ್ಬರ ನಡುವೆ ಏನೋ ನಡೆಯುತ್ತಿದೆ ಎಂಬ ಊಹಪೋಹಗಳಿಗೆ ರೆಕ್ಕೆ ಸಿಕ್ಕಿದ್ದು ಇಲ್ಲಿಂದಲೆ. ಇದೀಗ ಶಿಖರ್ ಧವನ್ ಇಬ್ಬರು ಪ್ರೀತಿಯಲ್ಲಿ ಬಿದ್ದಿರುವುದನ್ನು ಖಚಿತಪಡಿಸಿದ್ದಾರೆ. ಸೋಫಿ ಮೂಲತಃ ಐರ್ಲೆಂಡ್‌ನವರಾಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ಒಬ್ಬರನ್ನೊಬ್ಬರು ಫಾಲೋ ಮಾಡುತ್ತಿದ್ದಾರೆ. ಸೋಫಿ 44 ಸಾವಿರಕ್ಕೂ ಹೆಚ್ಚು ಅನುಯಾಯಿಗಳನ್ನು ಹೊಂದಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:52 pm, Thu, 1 May 25