ಹೊಸ ಗರ್ಲ್ ಫ್ರೆಂಡ್ ಜೊತೆ ತನ್ನ ಮನೆಯಲ್ಲಿ ರೀಲ್ಸ್ ಮಾಡಿದ ಶಿಖರ್ ಧವನ್; ವಿಡಿಯೋ ನೋಡಿ
Shikhar Dhawan's New Girlfriend: ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ಶಿಖರ್ ಧವನ್ ಅವರು ತಮ್ಮ ಹೊಸ ಗೆಳತಿ ಸೋಫಿ ಶೈನ್ ಜೊತೆ ಮಾಡಿದ ವೈರಲ್ ರೀಲ್ಸ್‌ನಿಂದ ಸುದ್ದಿಯಲ್ಲಿದ್ದಾರೆ. ದೆಹಲಿಯ ತಮ್ಮ ಮನೆಯಲ್ಲಿ ಚಿತ್ರೀಕರಿಸಲ್ಪಟ್ಟ ಈ ರೀಲ್ಸ್‌ನಲ್ಲಿ ಅವರ ಸಂಬಂಧವನ್ನು ಸ್ಪಷ್ಟವಾಗಿ ತೋರಿಸಲಾಗಿದೆ. ಕಳೆದ ಕೆಲವು ತಿಂಗಳುಗಳಿಂದ ಧವನ್ ಮತ್ತು ಸೋಫಿ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದರೂ, ಈ ರೀಲ್ಸ್ ಅವರ ಸಂಬಂಧವನ್ನು ಅಧಿಕೃತವಾಗಿ ದೃಢಪಡಿಸಿದೆ.

ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ಶಿಖರ್ ಧವನ್ (Shikhar Dhawan) ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ತಮ್ಮ ರೂಮರ್ ಗರ್ಲ್ ಫ್ರೆಂಡ್ ಜೊತೆ ತನ್ನ ಮನೆಯಲ್ಲಿ ರೀಲ್ಸ್ ಮಾಡಿರುವ ಶಿಖರ್ ಧವನ್ ಅದನ್ನು ಸೋಶಿಯಲ್ ಮೀಡಿಯಾಕ್ಕೆ ಹರಿಬಿಟ್ಟಿದ್ದಾರೆ. ಇದೀಗ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದ್ದು, ಧವನ್ ಅವರ ವೈಯಕ್ತಿಕ ಬದುಕಿನಲ್ಲಿ ಮತ್ತೊಂದು ಇನ್ನಿಂಗ್ಸ್ ಆರಂಭವಾಗಿದೆ ಎಂದು ನೆಟ್ಟಿಗರು ಅಭಿಪ್ರಾಯಪಡುತ್ತಿದ್ದಾರೆ. ನೆಟ್ಟಿಗರ ಹೀಗೆ ಹೇಳಲು ಕಾರಣವೂ ಇದ್ದು, ಧವನ್ ತಮ್ಮ ರೂಮರ್ ಗರ್ಲ್ ಫ್ರೆಂಡ್ ಜೊತೆ ಈ ರೀತಿಯಾಗಿ ಕಾಣಿಸಿಕೊಳ್ಳುತ್ತಿರುವುದು ಇದೇ ಮೊದಲಲ್ಲ. ಕೆಲವು ತಿಂಗಳಿಂದ ಈ ಜೋಡಿ ಜೊತೆ ಜೊತೆಯಾಗಿ ಸುತ್ತಾಟ ನಡೆಸುತ್ತಿದ್ದು, ಧವನ್ ಬಾಳಿನಲ್ಲಿ ಹೊಸ ಹುಡುಗಿಯ ಆಗಮನವಾಗಿದೆ ಎಂಬುದಂತ್ತು ನಿಜವಾಗಿರುವಂತೆ ತೋರುತ್ತಿದೆ.
ಹೊಸ ಗೆಳತಿ ಜೊತೆ ಮನೆಯಲ್ಲಿ ರೀಲ್ಸ್
ಶಿಖರ್ ಧವನ್ ಏಪ್ರಿಲ್ 12 ರ ಶನಿವಾರ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಒಂದು ರೀಲ್ ಅನ್ನು ಪೋಸ್ಟ್ ಮಾಡಿದ್ದಾರೆ. ಈ ರೀಲ್ಸ್ ಅನ್ನು ಧವನ್ ದೆಹಲಿಯಲ್ಲಿರುವ ತಮ್ಮ ಮನೆಯಲ್ಲಿ ಮಾಡಿರುವುದನ್ನು ನಾವು ಗಮನಿಸಬಹುದಾಗಿದೆ. ಇದರಲ್ಲಿ, ಧವನ್ ಜೊತೆಗೆ ಒಬ್ಬ ಮಹಿಳೆ ಕಾಣಿಸಿಕೊಂಡಿದ್ದಾರೆ. ಈ ಮಹಿಳೆ ಬೇರೆ ಯಾರೂ ಅಲ್ಲ, ಕಳೆದ ಕೆಲವು ತಿಂಗಳುಗಳಿಂದ ಧವನ್ ಜೊತೆ ಬೇರೆ ಬೇರೆ ಸಂದರ್ಭಗಳಲ್ಲಿ ಕಾಣಿಸಿಕೊಂಡಿರುವ ಅದೇ ಮಹಿಳೆ. ಅಂದಿನಿಂದ, ಈ ಇಬ್ಬರ ನಡುವಿನ ಸಂಬಂಧದ ಬಗ್ಗೆ ಊಹಾಪೋಹಗಳು ಮತ್ತು ವದಂತಿಗಳು ಕೇಳಿಬರುತ್ತಲೇ ಇವೆ. ಈ ವದಂತಿಯ ಬಗ್ಗೆ ಈ ಇಬ್ಬರೂ ಏನನ್ನು ಹೇಳದಿದ್ದರೂ ವೈರಲ್ ವೀಡಿಯೊದಿಂದ ಎಲ್ಲವೂ ಖಚಿತವಾದಂತ್ತಾಗಿದೆ.
View this post on Instagram
ಧವನ್ ಅವರ ಹೊಸ ಗೆಳತಿಯ ಹೆಸರು ಸೋಫಿ ಶೈನ್, ಅವರು ಐರ್ಲೆಂಡ್‌ನವರಾಗಿದ್ದು ಮಾರ್ಕೆಟಿಂಗ್ ಕ್ಷೇತ್ರದಲ್ಲಿ ಕೆಲಸ ಮಾಡುತ್ತಾರೆ. ಕಳೆದ ವರ್ಷ ನವೆಂಬರ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಇಬ್ಬರೂ ಮೊದಲ ಬಾರಿಗೆ ಒಟ್ಟಿಗೆ ಕಾಣಿಸಿಕೊಂಡರು ಆದರೆ ಆಗ ಯಾರೂ ಅದನ್ನು ಗಮನಿಸಿರಲಿಲ್ಲ. ಆದರೆ ಈ ವರ್ಷದ ಆರಂಭದಲ್ಲಿ, ಚಾಂಪಿಯನ್ಸ್ ಟ್ರೋಫಿಯಲ್ಲಿ ಟೀಂ ಇಂಡಿಯಾದ ಪಂದ್ಯದ ಸಮಯದಲ್ಲಿ ಧವನ್ ಮತ್ತು ಸೋಫಿ ಒಟ್ಟಿಗೆ ಕುಳಿತಿದ್ದಾಗ ಎಲ್ಲರ ಗಮನ ಸೆಳೆದರು. ಅಂದಿನಿಂದ, ಧವನ್ ಮತ್ತು ಸೋಫಿ ಕೆಲವು ಮದುವೆಗಳು, ಸಂದರ್ಶನಗಳು ಮತ್ತು ವಿವಿಧ ಕಾರ್ಯಕ್ರಮಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ.
ಮೊಟ್ಟ ಮೊದಲ ವಿದೇಶಿ ಲೀಗ್ನ ಮೊದಲ ಪಂದ್ಯದಲ್ಲಿ ಶಿಖರ್ ಧವನ್ ಫೇಲ್
ಪರೋಕ್ಷವಾಗಿ ಉತ್ತರಿಸಿದ್ದ ಧವನ್
ಸಂದರ್ಶನವೊಂದರಲ್ಲಿ, ಧವನ್ ಅವರನ್ನು ಅವರ ಹೊಸ ಪ್ರೀತಿ ಮತ್ತು ಎರಡನೇ ಮದುವೆಯ ಬಗ್ಗೆ ಕೇಳಿದಾಗ, ಅವರು ಯಾರನ್ನೂ ಹೆಸರಿಸದೆ, ಅವರು ವಿಶ್ವದ ಅತ್ಯಂತ ಸುಂದರ ಮಹಿಳೆಯನ್ನು ಪ್ರೀತಿಸುತ್ತಿರುವುದಾಗಿ ಹೇಳಿದರು. ಆ ಸಮಯದಲ್ಲಿ ಅಲ್ಲೇ ಇದ್ದ ಸೋಫಿ ಶೈನ್ ಧವನ್ ಅವರ ಮಾತಿಗೆ ಕೂಡ ನಾಚಿ ನೀರಾಗಿದ್ದರು. ಆದರೆ ಈಗ ಧವನ್ ಮನೆಗೆ ಸೋಫಿಯ ಪ್ರವೇಶ ಅವರ ಸಂಬಂಧವನ್ನು ದೃಢಪಡಿಸಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ