AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Shikhar Dhawan With Mystery Girl: ಭಾರತ-ಬಾಂಗ್ಲಾ ಪಂದ್ಯದ ಮಧ್ಯೆ ಮಿಸ್ಟರಿ ಗರ್ಲ್ ಜೊತೆ ಕಾಣಿಸಿಕೊಂಡ ಶಿಖರ್ ಧವನ್

IND vs BAN, Champion Trophy 2025: ಶಿಖರ್ ಧವನ್ ಜೊತೆ ಸ್ಟ್ಯಾಂಡ್ನಲ್ಲಿ ಕುಳಿತಿರುವ ಈ ಮಹಿಳೆ ಯಾರು ಎಂದು ಅಭಿಮಾನಿಗಳಲ್ಲಿ ಚರ್ಚೆ ತೀವ್ರಗೊಂಡಿದೆ. ಕೆಲವು ಸಮಯದ ಹಿಂದೆ ವಿಚ್ಛೇದನ ಪಡೆದ ಶಿಖರ್ ಧವನ್ ಮತ್ತೊಮ್ಮೆ ವಿದೇಶಿ ಮಹಿಳೆಯೊಂದಿಗೆ ಡೇಟಿಂಗ್ ಮಾಡುತ್ತಿದ್ದಾರೆ ಎಂದು ಕೆಲವರು ಹೇಳುತ್ತಿದ್ದಾರೆ. ಧವನ್ ವಿಚ್ಛೇದನ ಪಡೆದಿರುವುದರಿಂದ ಜನರಲ್ಲಿ ಈ ರೀತಿಯ ಪ್ರಶ್ನೆ ಉದ್ಭವಿಸುತ್ತಿದೆ.

Shikhar Dhawan With Mystery Girl: ಭಾರತ-ಬಾಂಗ್ಲಾ ಪಂದ್ಯದ ಮಧ್ಯೆ ಮಿಸ್ಟರಿ ಗರ್ಲ್ ಜೊತೆ ಕಾಣಿಸಿಕೊಂಡ ಶಿಖರ್ ಧವನ್
Shikhar Dhawan And Sophie Shine
ಪ್ರೀತಿ ಭಟ್​, ಗುಣವಂತೆ
| Edited By: |

Updated on: Feb 21, 2025 | 12:57 PM

Share

ಬಾಂಗ್ಲಾದೇಶವನ್ನು 6 ವಿಕೆಟ್‌ಗಳಿಂದ ಸೋಲಿಸುವ ಮೂಲಕ ಭಾರತ ಕ್ರಿಕೆಟ್ ತಂಡ ಚಾಂಪಿಯನ್ಸ್ ಟ್ರೋಫಿ 2025 ಅನ್ನು ಅದ್ಭುತವಾಗಿ ಪ್ರಾರಂಭಿಸಿದೆ. 229 ರನ್‌ಗಳ ಗುರಿಯನ್ನು ಭಾರತ ಇನ್ನೂ 21 ಎಸೆತಗಳು ಬಾಕಿ ಇರುವಾಗಲೇ ತಲುಪಿತು. ಮೊಹಮ್ಮದ್ ಶಮಿ ಐದು ವಿಕೆಟ್ ಗೊಂಚಲು ಪಡೆದ ನಂತರ, ಶುಭ್​ಮನ್ ಗಿಲ್ ಬ್ಯಾಟಿಂಗ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿ ಶತಕ (101) ಸಿಡಿಸಿದರು. ಚಾಂಪಿಯನ್ಸ್ ಟ್ರೋಫಿಯ ಬ್ರಾಂಡ್ ರಾಯಭಾರಿ ಶಿಖರ್ ಧವನ್ ಕೂಡ ಪಂದ್ಯ ವೀಕ್ಷಿಸಲು ಆಗಮಿಸಿದ್ದರು. ಈ ಸಮಯದಲ್ಲಿ, ಓರ್ವ ವಿದೇಶಿ ಮಹಿಳೆ ಕೂಡ ಅವರೊಂದಿಗೆ ಸ್ಟ್ಯಾಂಡ್‌ನಲ್ಲಿ ಕುಳಿತಿರುವುದು ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಸದ್ಯ ಶಿಖರ್ ಧವನ್ ಜೊತೆ ಸ್ಟ್ಯಾಂಡ್​ನಲ್ಲಿ ಕುಳಿತಿರುವ ಈ ಮಹಿಳೆ ಯಾರು ಎಂದು ಅಭಿಮಾನಿಗಳಲ್ಲಿ ಚರ್ಚೆ ತೀವ್ರಗೊಂಡಿದೆ. ಕೆಲವು ಸಮಯದ ಹಿಂದೆ ವಿಚ್ಛೇದನ ಪಡೆದ ಶಿಖರ್ ಧವನ್ ಮತ್ತೊಮ್ಮೆ ವಿದೇಶಿ ಮಹಿಳೆಯೊಂದಿಗೆ ಡೇಟಿಂಗ್ ಮಾಡುತ್ತಿದ್ದಾರೆ ಎಂದು ಕೆಲವರು ಹೇಳುತ್ತಿದ್ದಾರೆ. ಧವನ್ ವಿಚ್ಛೇದನ ಪಡೆದಿರುವುದರಿಂದ ಜನರಲ್ಲಿ ಈ ರೀತಿಯ ಪ್ರಶ್ನೆ ಉದ್ಭವಿಸುತ್ತಿದೆ.

ಶಿಖರ್ ಧವನ್ ಈ ವಿದೇಶಿ ಮಹಿಳೆ ಜೊತೆ ಕಾಣಿಸಿಕೊಳ್ಳುತ್ತಿರುವುದು ಇದೇ ಮೊದಲ ಬಾರಿಯೇನಲ್ಲ. ಕಳೆದ ವರ್ಷ ನವೆಂಬರ್ 2024 ರಲ್ಲಿ ಕೂಡ ಶಿಖರ್ ಇದೇ ಮಹಿಳೆಯೊಂದಿಗೆ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದರು. ಈ ಸಂದರ್ಭ ಈ ಮಿಸ್ಟರಿ ಗರ್ಲ್ ಕ್ಯಾಮೆರಾಗಳಿಂದ ತಪ್ಪಿಸಿಕೊಳ್ಳುತ್ತಿರುವುದು ಕಂಡುಬಂದಿತ್ತು.

IND vs BAN: ಏಕದಿನದಲ್ಲಿ ಶರವೇಗದ ಬ್ಯಾಟಿಂಗ್; ವಿಶೇಷ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿದ ಹಿಟ್​ಮ್ಯಾನ್

ಈಗ ಭಾರತ vs ಬಾಂಗ್ಲಾದೇಶ ಪಂದ್ಯದಲ್ಲಿ, ಮತ್ತೆ ವಿದೇಶಿ ಮಹಿಳೆಯೊಂದಿಗೆ ಕುಳಿತು ಧವನ್ ಪಂದ್ಯವನ್ನು ಆನಂದಿಸುತ್ತಿರುವುದು ಕಂಡುಬಂದಿದೆ. ಆ ಮಹಿಳೆ ಸೋಫಿ ಶೈನ್ ಎಂದು ವರದಿಯಾಗಿದ್ದು, ಶಕೀಲ್ ಧವನ್ ಕೂಡ ಇನ್ಸ್ಟಾಗ್ರಾಮ್ ನಲ್ಲಿ ಅವರನ್ನು ಫಾಲೋ ಮಾಡುತ್ತಾರೆ. ಇಬ್ಬರ ನಡುವೆ ಸ್ನೇಹ ಇರುವುದು ಸ್ಪಷ್ಟ. ಆದಾಗ್ಯೂ, ಇಬ್ಬರೂ ಪರಸ್ಪರ ಡೇಟಿಂಗ್ ಮಾಡುತ್ತಿದ್ದಾರೆಯೇ ಅಥವಾ ಸ್ನೇಹಿತರಾಗಿ ಪಂದ್ಯವನ್ನು ವೀಕ್ಷಿಸಲು ಒಟ್ಟಿಗೆ ಬಂದಿದ್ದಾರೆಯೇ ಎಂಬುದು ತಿಳಿದುಬಂದಿಲ್ಲ.

ಶಿಖರ್ ಧವನ್ 2012 ರಲ್ಲಿ ತಮಗಿಂತ ಹಿರಿಯರಾದ ಆಯೇಷಾ ಮುಖರ್ಜಿ ಅವರನ್ನು ವಿವಾಹವಾದರು. ಅವರಿಬ್ಬರಿಗೂ ಒಬ್ಬ ಮಗನೂ ಇದ್ದಾನೆ. ಕೆಲವು ಸಮಯದ ಹಿಂದೆ, ಧವನ್ ಮತ್ತು ಆಯೇಷಾ ಬೇರ್ಪಟ್ಟು ವಿಚ್ಛೇದನ ಪಡೆದರು. ಅಂದಿನಿಂದ, ಧವನ್ ಒಂಟಿ ಜೀವನ ನಡೆಸುತ್ತಿದ್ದಾರೆ. ಧವನ್ ಮಗ ತನ್ನ ತಾಯಿ ಜೊತೆ ಆಸ್ಟ್ರೇಲಿಯಾದಲ್ಲಿ ವಾಸಿಸುತ್ತಿದ್ದಾನೆ. ನ್ಯಾಯಾಲಯವು ಮಗನ ಕಸ್ಟಡಿಯನ್ನು ಆಯೇಷಾ ಮುಖರ್ಜಿಗೆ ನೀಡಿದ್ದರೂ, ಧವನ್ ತನ್ನ ಮಗನನ್ನು ಭೇಟಿಯಾಗಲು ಯಾವುದೇ ನಿರ್ಬಂಧವಿರಲಿಲ್ಲ. ಆದರೆ ಧವನ್ ತನ್ನ ಮಗನನ್ನು ಎರಡು ವರ್ಷಗಳಿಂದ ನೋಡಿಲ್ಲವಂತೆ.

ಸದ್ಯ ಈ ಫೋಟೋಗಳು ವೈರಲ್ ಆದ ನಂತರ, ಅಭಿಮಾನಿಗಳು ಸಾಮಾಜಿಕ ಮಾಧ್ಯಮದಲ್ಲಿ ನಾನಾರೀತಿಯ ಪ್ರತಿಕ್ರಿಯೆಗಳನ್ನು ನೀಡಲು ಪ್ರಾರಂಭಿಸಿದ್ದಾರೆ. “ಶಿಖರ್ ಧವನ್ ಜೊತೆಗಿರುವ ಈ ಮಹಿಳೆ ಯಾರು?” ಎಂದು ಬಳಕೆದಾರರು ಕೇಳಿದ್ದಾರೆ. ಇದಲ್ಲದೆ, ಮತ್ತೊಬ್ಬ ಸಾಮಾಜಿಕ ಮಾಧ್ಯಮ ಬಳಕೆದಾರರು, “ಶಿಖರ್ ಧವನ್ ಭಾಯ್ ಬಹುಶಃ ಮತ್ತೆ ವಿದೇಶಿ ಮಹಿಳೆಯನ್ನು ಒಪ್ಪುವುದಿಲ್ಲ” ಎಂದು ಬರೆದಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಸೈರನ್ ಮೊಳಗುತ್ತಿದ್ದಂತೆಯೇ ಈ ಗ್ರಾಮದ ಎಲ್ಲರ ಮನೆಯ ಟಿವಿ, ಫೋನ್ ಆಫ್
ಸೈರನ್ ಮೊಳಗುತ್ತಿದ್ದಂತೆಯೇ ಈ ಗ್ರಾಮದ ಎಲ್ಲರ ಮನೆಯ ಟಿವಿ, ಫೋನ್ ಆಫ್
ಏನು ಗ್ಯಾರಂಟಿ? ಬಿಜೆಪಿ MLC ಕಾರು ತಡೆದು ನಿಲ್ಲಿಸಿದ ಟೋಲ್ ಸಿಬ್ಬಂದಿ
ಏನು ಗ್ಯಾರಂಟಿ? ಬಿಜೆಪಿ MLC ಕಾರು ತಡೆದು ನಿಲ್ಲಿಸಿದ ಟೋಲ್ ಸಿಬ್ಬಂದಿ
ಆತನಿಗೆ 68, ಆಕೆಗೆ 58 ವರ್ಷ: ಹಾಸನದಲ್ಲಿ ವೃದ್ದರಿಬ್ಬರ ಮದುವೆ ಸಂಘರ್ಷ
ಆತನಿಗೆ 68, ಆಕೆಗೆ 58 ವರ್ಷ: ಹಾಸನದಲ್ಲಿ ವೃದ್ದರಿಬ್ಬರ ಮದುವೆ ಸಂಘರ್ಷ
ಕೋಗಿಲು ಬಳಿ 150ಕ್ಕೂ ಹೆಚ್ಚು ಅಕ್ರಮ ಮನೆಗಳು ನೆಲಸಮ: ಭುಗಿಲೆದ್ದ ಆಕ್ರೋಶ
ಕೋಗಿಲು ಬಳಿ 150ಕ್ಕೂ ಹೆಚ್ಚು ಅಕ್ರಮ ಮನೆಗಳು ನೆಲಸಮ: ಭುಗಿಲೆದ್ದ ಆಕ್ರೋಶ
ಸಿಎಂ ಕುರ್ಚಿ ಕಿತ್ತಾಟ: ಅಂತೂ ನಾಯಕರಿಗೆ ಮಹತ್ವದ ಸಂದೇಶ ಕೊಟ್ಟ ಖರ್ಗೆ
ಸಿಎಂ ಕುರ್ಚಿ ಕಿತ್ತಾಟ: ಅಂತೂ ನಾಯಕರಿಗೆ ಮಹತ್ವದ ಸಂದೇಶ ಕೊಟ್ಟ ಖರ್ಗೆ
ಮದ್ಯದ ಅಮಲಿನಲ್ಲಿ ಲಾರಿ ಚಾಲಕ 20ಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿ
ಮದ್ಯದ ಅಮಲಿನಲ್ಲಿ ಲಾರಿ ಚಾಲಕ 20ಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿ
ಗಿಲ್ಲಿಯನ್ನೇ ಹೊರಗೆ ಕಳಿಸುವ ಭ್ರಮೆಯಲ್ಲಿ ರಕ್ಷಿತಾ: ಕಾವ್ಯಾ ಖಡಕ್ ತಿರುಗೇಟು
ಗಿಲ್ಲಿಯನ್ನೇ ಹೊರಗೆ ಕಳಿಸುವ ಭ್ರಮೆಯಲ್ಲಿ ರಕ್ಷಿತಾ: ಕಾವ್ಯಾ ಖಡಕ್ ತಿರುಗೇಟು
ಮನ್ರೇಗಾ ಯೋಜನೆ ಹೆಸ್ರು ಬದಲಾವಣೆ: ಕೇಂದ್ರದ ಕ್ರಮಕ್ಕೆ AICC ಅಧ್ಯಕ್ಷ ಕಿಡಿ
ಮನ್ರೇಗಾ ಯೋಜನೆ ಹೆಸ್ರು ಬದಲಾವಣೆ: ಕೇಂದ್ರದ ಕ್ರಮಕ್ಕೆ AICC ಅಧ್ಯಕ್ಷ ಕಿಡಿ
2026 ಸಿಂಹ ರಾಶಿಯವರಿಗೆ ಹಲವು ಮಹತ್ವದ ಬದಲಾವಣೆಗಳನ್ನು ತರುವ ವರ್ಷ
2026 ಸಿಂಹ ರಾಶಿಯವರಿಗೆ ಹಲವು ಮಹತ್ವದ ಬದಲಾವಣೆಗಳನ್ನು ತರುವ ವರ್ಷ
Pulse Polio Campaign: ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಿದ ಡಿಕೆ ಶಿವಕುಮಾರ್
Pulse Polio Campaign: ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಿದ ಡಿಕೆ ಶಿವಕುಮಾರ್