AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಾಟಲಿ ಮುಚ್ಚಳದ ಕಳ್ಳಾಟ! ಅಖ್ತರ್ ಬಾಯ್ಬಿಟ್ಟ ಸ್ಫೋಟಕ ಸತ್ಯ!

ಕ್ರಿಕೆಟ್ ಜಗತ್ತನ್ನು ಬೆಚ್ಚಿಬೀಳಿಸುವಂತಹ ಸ್ಫೋಟಕ ಸತ್ಯವೊಂದು ಈಗ ಹೊರಬಿದ್ದಿದೆ! ಎಂಟು ವರ್ಷಗಳ ಹಿಂದಿನ ಆಸ್ಟ್ರೇಲಿಯಾದ 'ಸ್ಯಾಂಡ್‌ಪೇಪರ್ ಗೇಟ್' ವಿವಾದದ ಬೆಂಕಿ ಇನ್ನೂ ಆರುವ ಮುನ್ನವೇ, ಪಾಕಿಸ್ತಾನದ ಮಾಜಿ ವೇಗಿ ಶೋಯೆಬ್ ಅಖ್ತರ್ ತಮ್ಮದೇ ತಂಡದ ಹಳೆಯ ಕಳ್ಳಾಟವನ್ನು ಬಯಲಿಗೆಳೆದಿದ್ದಾರೆ. ಇಂಗ್ಲೆಂಡ್ ಪಿಚ್‌ಗಳಲ್ಲಿ ವಿಕೆಟ್ ಕೀಳಲು ಬಾಟಲಿ ಮುಚ್ಚಳಗಳನ್ನು ಬಳಸುತ್ತಿದ್ದೆವು ಎನ್ನುವ ಮೂಲಕ ಅಖ್ತರ್ ಕ್ರಿಕೆಟ್ ಲೋಕದಲ್ಲಿ ಹೊಸ ಬಿರುಗಾಳಿ ಎಬ್ಬಿಸಿದ್ದಾರೆ.

ಬಾಟಲಿ ಮುಚ್ಚಳದ ಕಳ್ಳಾಟ! ಅಖ್ತರ್ ಬಾಯ್ಬಿಟ್ಟ ಸ್ಫೋಟಕ ಸತ್ಯ!
Shoaib AkhtarImage Credit source: GettyImages
ಝಾಹಿರ್ ಯೂಸುಫ್
|

Updated on:Nov 20, 2026 | 8:02 AM

Share

ಕ್ರಿಕೆಟ್ ಜಗತ್ತಿನಲ್ಲಿ ಮತ್ತೊಮ್ಮೆ ‘ಬಾಲ್ ಟ್ಯಾಂಪರಿಂಗ್’ (ಚೆಂಡನ್ನು ವಿರೂಪಗೊಳಿಸುವುದು) ವಿವಾದ ಭುಗಿಲೆದ್ದಿದೆ. 2018ರ ಆಸ್ಟ್ರೇಲಿಯಾದ ಕುಖ್ಯಾತ ‘ಸ್ಯಾಂಡ್‌ಪೇಪರ್ ಗೇಟ್’ ಪ್ರಕರಣವು ಎಂಟು ವರ್ಷಗಳ ನಂತರ ಮತ್ತೆ ಮುನ್ನೆಲೆಗೆ ಬಂದಿದೆ. ಈ ಹೊತ್ತಲ್ಲೇ ಪಾಕಿಸ್ತಾನದ ಮಾಜಿ ವೇಗಿ ಶೋಯೆಬ್ ಅಖ್ತರ್ ನೀಡಿರುವ ಸ್ಫೋಟಕ ಹೇಳಿಕೆಯೊಂದು ಇಡೀ ಕ್ರಿಕೆಟ್ ಜಗತ್ತನ್ನೇ ಬೆಚ್ಚಿಬೀಳಿಸಿದೆ.

ಶೋಯೆಬ್ ಅಖ್ತರ್ ಹೇಳಿದ್ದೇನು?

ಇತ್ತೀಚೆಗೆ ವಿಸ್ಡನ್‌ನ ‘ದಿ ಸ್ಕೂಪ್’ ಪಾಡ್‌ಕ್ಯಾಸ್ಟ್‌ನಲ್ಲಿ ಮಾತನಾಡಿದ ಶೋಯೆಬ್ ಅಖ್ತರ್, ಆಸ್ಟ್ರೇಲಿಯಾ ಕ್ರಿಕೆಟ್‌ನಲ್ಲಿ ನಡೆಯುತ್ತಿರುವ ಇತ್ತೀಚಿನ ಬೆಳವಣಿಗೆಗಳ ಬಗ್ಗೆ ಪ್ರತಿಕ್ರಿಯಿಸುತ್ತಾ ತಮ್ಮ ಆಟದ ದಿನಗಳ ಕಹಿ ಸತ್ಯವನ್ನು ಬಹಿರಂಗಪಡಿಸಿದ್ದಾರೆ.

“ಗೆಳೆಯರೇ, ನೀವು ಇದನ್ನು ಇಲ್ಲಿಗೆ ಬಿಟ್ಟುಬಿಡಿ. ಇದರ ಬಗ್ಗೆ ಏಕೆ ಇಷ್ಟೊಂದು ದೊಡ್ಡ ರಾದ್ಧಾಂತ ಮಾಡುತ್ತಿದ್ದೀರಿ? ಇದು ಕ್ರಿಕೆಟ್‌ಗೆ ಹಾನಿ ಮಾಡಿದೆ ಎಂದು ನನಗೆ ಅರ್ಥವಾಗುತ್ತದೆ. ಅದು ನಮ್ಮ ಕ್ರಿಕೆಟ್‌ಗೂ ಹಾನಿ ಮಾಡಿತ್ತು. ನಾವು ಇಂಗ್ಲೆಂಡ್‌ನಲ್ಲಿ ಸ್ಯಾಂಡ್‌ಪೇಪರ್ ಬದಲಿಗೆ ಬಾಟಲಿ ಮುಚ್ಚಳಗಳನ್ನು ಬಳಸುತ್ತಿದ್ದೆವು. ನಾವು ಚೆಂಡುಗಳನ್ನು ಬದಲಾಯಿಸುತ್ತಿದ್ದೆವು ಮತ್ತು ಇನ್ನೂ ಅನೇಕ ಕೆಲಸಗಳನ್ನು ಮಾಡುತ್ತಿದ್ದೆವು. ನೀವು ಸತ್ಯವನ್ನು ಒಪ್ಪಿಕೊಂಡು ಹೊರಬಂದಿದ್ದೀರಿ, ಅಷ್ಟಕ್ಕೆ ಸುಮ್ಮನಾಗಿ. ಅದನ್ನೇ ದೊಡ್ಡ ವಿಷಯವನ್ನಾಗಿ ಮಾಡಬೇಡಿ.” ಶೋಯೆಬ್ ಅಖ್ತರ್ ಮನವಿ ಮಾಡಿದ್ದಾರೆ.

ಈ ವಿವಾದ ಮತ್ತೆ ಹುಟ್ಟಿಕೊಂಡಿದ್ದು ಏಕೆ?

2018ರಲ್ಲಿ ಸೌತ್ ಆಫ್ರಿಕಾದ ಕೇಪ್ ಟೌನ್‌ನಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾದ ಆಟಗಾರರು ಸ್ಯಾಂಡ್‌ಪೇಪರ್ (ಮರಳು ಕಾಗದ) ಬಳಸಿ ಚೆಂಡನ್ನು ವಿರೂಪಗೊಳಿಸಿದ್ದರು. ಆ ಸಮಯದಲ್ಲಿ ನಾಯಕ ಸ್ಟೀವ್ ಸ್ಮಿತ್, ಉಪನಾಯಕ ಡೇವಿಡ್ ವಾರ್ನರ್ ಮತ್ತು ಕ್ಯಾಮರೋನ್ ಬ್ಯಾಂಕ್ರಾಫ್ಟ್ ಅವರಿಗೆ ಮಾತ್ರ ಶಿಕ್ಷೆಯಾಗಿತ್ತು. ಆದರೆ ಈಗ ಆ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ…

ಉಸ್ಮಾನ್ ಖ್ವಾಜಾ ಅವರ ಆತ್ಮಚರಿತ್ರೆ: ಆಸ್ಟ್ರೇಲಿಯಾದ ಮಾಜಿ ಬ್ಯಾಟರ್ ಉಸ್ಮಾನ್ ಖ್ವಾಜಾ ತಮ್ಮ ಹೊಸ ಆತ್ಮಚರಿತ್ರೆ ‘ಸಬ್ರ್’  ನಲ್ಲಿ, “2018ರ ಬಾಲ್ ಟ್ಯಾಂಪರಿಂಗ್ ಬಗ್ಗೆ ಕೇವಲ ಮೂವರಿಗೆ ಮಾತ್ರವಲ್ಲ, ಇಡೀ ಆಸ್ಟ್ರೇಲಿಯಾ ತಂಡಕ್ಕೆ ತಿಳಿದಿತ್ತು” ಎಂದು ಬರೆದಿದ್ದಾರೆ.

ಬ್ಯಾಂಕ್ರಾಫ್ಟ್ ಅವರ 4,500 ಪದಗಳ ಲೇಖನ: ಖ್ವಾಜಾ ಅವರ ಪುಸ್ತಕ ಬಿಡುಗಡೆಯಾದ ಬೆನ್ನಲ್ಲೇ, ಕ್ಯಾಮರೋನ್ ಬ್ಯಾಂಕ್ರಾಫ್ಟ್ ಕೂಡ ಸುಮಾರು 4,500 ಪದಗಳ ಸುದೀರ್ಘ ಲೇಖನವೊಂದನ್ನು ಬರೆದು, ತಂಡದ ಬೌಲರ್‌ಗಳು ಮತ್ತು ಕೋಚಿಂಗ್ ಸಿಬ್ಬಂದಿಗೂ ಈ ವಿಚಾರ ತಿಳಿದಿತ್ತು ಎಂದು ಸ್ಫೋಟಕ ಮಾಹಿತಿ ಹೊರಹಾಕಿದ್ದಾರೆ.

ಪ್ಯಾಟ್ ಕಮ್ಮಿನ್ಸ್ ನಿರಾಕರಣೆ: ಮತ್ತೊಂದೆಡೆ, ಆಸ್ಟ್ರೇಲಿಯಾ ಟೆಸ್ಟ್ ನಾಯಕ ಪ್ಯಾಟ್ ಕಮ್ಮಿನ್ಸ್ ಈ ಆರೋಪಗಳನ್ನು “ಶುದ್ಧ ಸುಳ್ಳು” ಎಂದು ತಳ್ಳಿಹಾಕಿದ್ದು, ಆಸ್ಟ್ರೇಲಿಯಾ ಕ್ರಿಕೆಟ್‌ನಲ್ಲಿ ಆಂತರಿಕ ಬಿಕ್ಕಟ್ಟು ಸೃಷ್ಟಿಯಾಗಿದೆ.

ಅಖ್ತರ್ ಸ್ಫೋಟಕ ಸತ್ಯ!

“ಚೆಂಡನ್ನು ವಿರೂಪಗೊಳಿಸುವುದು ಕೇವಲ ಇಬ್ಬರು ಅಥವಾ ಮೂವರು ಆಟಗಾರರ ನಿರ್ಧಾರವಾಗಿರಲು ಸಾಧ್ಯವೇ ಇಲ್ಲ. ಪಂದ್ಯ ಗೆಲ್ಲಲು ರಿವರ್ಸ್ ಸ್ವಿಂಗ್ ಅಗತ್ಯವಿರುವಾಗ ಇಡೀ ತಂಡಕ್ಕೆ ಅದು ತಿಳಿದೇ ಇರುತ್ತದೆ” ಎಂಬ ವಾದವನ್ನು ಶೋಯೆಬ್ ಅಖ್ತರ್ ಮುಂದಿಟ್ಟಿದ್ದಾರೆ.

“ತಮ್ಮದೇ ಸಹ ಆಟಗಾರರನ್ನು ವರ್ಷಗಳ ನಂತರ ಸಾರ್ವಜನಿಕವಾಗಿ ಇಕ್ಕಟ್ಟಿಗೆ ಸಿಲುಕಿಸುವುದು ಸರಿಯಲ್ಲ. 90ರ ದಶಕದಲ್ಲಿ ಪಾಕಿಸ್ತಾನ ತಂಡದಲ್ಲಿದ್ದ ಮ್ಯಾಚ್ ಫಿಕ್ಸಿಂಗ್ ಮತ್ತು ಇತರ ವಿವಾದಗಳ ಬಗ್ಗೆ ನನ್ನ ಬಳಿಯೂ ಸಾಕಷ್ಟು ಕಥೆಗಳಿವೆ, ಆದರೆ ನಾನು ಅವುಗಳನ್ನು ಬಹಿರಂಗಪಡಿಸುವುದಿಲ್ಲ” ಎಂದು ಅಖ್ತರ್ ಅಭಿಪ್ರಾಯಪಟ್ಟಿದ್ದಾರೆ.

“ನಾನೂ ಸಹ ಪುಸ್ತಕ ಬರೆದು ಆ ಎಲ್ಲಾ ಸತ್ಯಗಳನ್ನು ಬಿಚ್ಚಿಡಬಹುದು. ಆದರೆ, ನಾನು ಹಾಗೆ ಮಾಡುವುದಿಲ್ಲ. ಏಕೆಂದರೆ, ನನ್ನದೇ ದೇಶದ ಮತ್ತು ನನ್ನೊಂದಿಗೆ ಆಡಿದ ಆಟಗಾರರ ಮರ್ಯಾದೆಯನ್ನು ಸಾರ್ವಜನಿಕವಾಗಿ ಹರಾಜು ಹಾಕಲು ನನಗೆ ಇಷ್ಟವಿಲ್ಲ” ಎಂದು ಅಖ್ತರ್ ಸ್ಪಷ್ಟಪಡಿಸಿದ್ದಾರೆ.

“ಹಳೆಯ ಕೊಳಕನ್ನು ಕೆದಕುತ್ತಾ ಕೂರುವುದರಿಂದ ಕೇವಲ ಆಟಗಾರರಿಗೆ ಮಾತ್ರವಲ್ಲ, ಇಡೀ ಕ್ರಿಕೆಟ್ ಕ್ರೀಡೆಗೆ ಕೆಟ್ಟ ಹೆಸರು ಬರುತ್ತದೆ. ತಪ್ಪನ್ನು ಒಪ್ಪಿಕೊಂಡು ಕ್ಷಮೆ ಕೇಳಿದ ಮೇಲೆ ಆ ವಿಷಯವನ್ನು ಅಲ್ಲಿಗೇ ಬಿಟ್ಟು ಮುಂದೆ ಸಾಗಬೇಕು” ಎಂಬುದು ಅಖ್ತರ್ ಅವರ ವಾದವಾಗಿದೆ.

ಬಾಟಲಿ ಮುಚ್ಚಳಗಳ ಬಳಕೆ!

1980 ಮತ್ತು 90ರ ದಶಕದಲ್ಲಿ ಪಾಕಿಸ್ತಾನದ ವೇಗದ ಬೌಲರ್‌ಗಳು ‘ರಿವರ್ಸ್ ಸ್ವಿಂಗ್’ ಪಡೆಯಲು ಚೆಂಡಿನ ಒಂದು ಬದಿಯನ್ನು ಒರಟಾಗಿಸುತ್ತಿದ್ದರು. ಇದಕ್ಕಾಗಿ ಜೇಬಿನಲ್ಲಿ ಲೋಹದ ಬಾಟಲಿ ಮುಚ್ಚಳಗಳನ್ನು  ಇಟ್ಟುಕೊಂಡು ಚೆಂಡನ್ನು ಕೆರೆಯುತ್ತಿದ್ದರು ಎಂದು ಸ್ವತಃ ಮಾಜಿ ನಾಯಕ ಇಮ್ರಾನ್ ಖಾನ್ ಹಿಂದೆ ಒಪ್ಪಿಕೊಂಡಿದ್ದರು. ಈಗ ಅಖ್ತರ್ ಕೂಡ ಇದನ್ನೇ ದೃಢಪಡಿಸಿದ್ದಾರೆ.

1992ರಲ್ಲಿ ವಾಸಿಮ್ ಅಕ್ರಮ್ ಮತ್ತು ವಕಾರ್ ಯೂನಿಸ್ ಅವರ ಮಾರಕ ಬೌಲಿಂಗ್‌ನಿಂದ ಪಾಕಿಸ್ತಾನ್ ಇಂಗ್ಲೆಂಡ್ ವಿರುದ್ಧ ಸರಣಿ ಗೆದ್ದಿತ್ತು. ಲಾರ್ಡ್ಸ್ ಪಂದ್ಯವೊಂದರಲ್ಲಿ ಚೆಂಡಿನ ಮೇಲ್ಮೈಯನ್ನು ಹರಿತವಾದ ವಸ್ತುವಿನಿಂದ ಕೆರೆದಿರುವುದನ್ನು ಅಂಪೈರ್‌ಗಳು ಪತ್ತೆಹಚ್ಚಿ ಚೆಂಡನ್ನು ಬದಲಾಯಿಸಿದ್ದರು. ಆದರೆ ರಾಜತಾಂತ್ರಿಕ ಕಾರಣಗಳಿಂದ ಆಗ ಐಸಿಸಿ ಇದನ್ನು ಮುಚ್ಚಿಹಾಕಿತ್ತು.

ಹಾಗೆಯೇ ಚೆಂಡಿನ ಹೊಲಿಗೆಯನ್ನು ಉಗುರಿನಿಂದ ಕೀಳುವುದು, ಚೆಂಡನ್ನು ನೆಲಕ್ಕೆ ಬಲವಾಗಿ ಎಸೆಯುವುದು ಹಾಗೂ ಅಂಪೈರ್‌ಗಳ ಕಣ್ಣು ತಪ್ಪಿಸಿ ಚೆಂಡನ್ನೇ ಬದಲಾಯಿಸುವಂತಹ ತಂತ್ರಗಳನ್ನು ಬಳಸುತ್ತಿದ್ದೆವು ಎಂದು ಶೋಯೆಬ್ ಅಖ್ತರ್ ಈಗ ಬಾಯ್ಬಿಟ್ಟಿದ್ದಾರೆ.

ಇನ್ನು ಸ್ವತಃ ಶೋಯೆಬ್ ಅಖ್ತರ್ ಕೂಡ 2003ರಲ್ಲಿ ಶ್ರೀಲಂಕಾದಲ್ಲಿ ನ್ಯೂಝಿಲೆಂಡ್ ವಿರುದ್ಧದ ಏಕದಿನ ಪಂದ್ಯವೊಂದರಲ್ಲಿ ಚೆಂಡನ್ನು ಉಗುರಿನಿಂದ ಕೆರೆದ ಕಾರಣಕ್ಕೆ ಎರಡು ಪಂದ್ಯಗಳ ನಿಷೇಧ ಮತ್ತು ಪಂದ್ಯದ ಸಂಭಾವನೆಯ ಶೇ. 75ರಷ್ಟು ದಂಡಕ್ಕೆ ಗುರಿಯಾಗಿದ್ದರು.

ಇದನ್ನೂ ಓದಿ: ಟೀಮ್ ಇಂಡಿಯಾಗೆ ಬಿಗ್ ಶಾಕ್: ಕಪ್ ಗೆದ್ದಿದ್ದಕ್ಕೆ ಸಿಕ್ಕಿದ್ದು ಇಷ್ಟೇನಾ?

ಒಟ್ಟಾರೆಯಾಗಿ, 80-90ರ ದಶಕದ ಕ್ರಿಕೆಟ್‌ನಲ್ಲಿ ‘ರಿವರ್ಸ್ ಸ್ವಿಂಗ್’ ಪಡೆಯಲು ಬೌಲರ್‌ಗಳು ಇಂತಹ ಅಡ್ಡದಾರಿಗಳನ್ನು ಹಿಡಿಯುವುದು ಸಾಮಾನ್ಯವಾಗಿತ್ತು ಎಂಬುದನ್ನು ಶೋಯೆಬ್ ಅಖ್ತರ್ ಅವರ ಈ ಮಾತುಗಳು ಮತ್ತೊಮ್ಮೆ ಸಾಬೀತುಪಡಿಸಿವೆ. ಆದರೆ, ಹಳೆಯ ವಿವಾದಗಳನ್ನು ಕೆದಕುತ್ತಾ ಕೂರುವ ಬದಲು ಆಟವನ್ನು ಮುಂದಕ್ಕೆ ಕೊಂಡೊಯ್ಯಬೇಕು ಎಂಬುದು ಅವರ ಸ್ಪಷ್ಟ ಸಂದೇಶವಾಗಿದೆ.

Published On - 8:01 am, Fri, 20 November 26

Follow Us
ಝಾಹಿರ್ ಯೂಸುಫ್
ಝಾಹಿರ್ ಯೂಸುಫ್

ಟಿವಿ9 ಡಿಜಿಟಲ್ ಚೀಫ್ ಸಬ್ ಎಡಿಟರ್. 10 ವರ್ಷಗಳಿಂದ ಕನ್ನಡ ಡಿಜಿಟಲ್​ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್​​ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.

Read More
ಇಂದು ಪ್ರಬೋಧಿನಿ ಏಕಾದಶಿ: ಮೇಷಾದಿ ದ್ವಾದಶ ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಇಂದು ಪ್ರಬೋಧಿನಿ ಏಕಾದಶಿ: ಮೇಷಾದಿ ದ್ವಾದಶ ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಬಸವ ಮಂಟಪʼ ಕೃತಿ ಮುಟ್ಟುಗೋಲಿಗೆ ಸಚಿವ ಸಂಪುಟ ಸಮ್ಮತಿ
ಬಸವ ಮಂಟಪʼ ಕೃತಿ ಮುಟ್ಟುಗೋಲಿಗೆ ಸಚಿವ ಸಂಪುಟ ಸಮ್ಮತಿ
‘ಮಹಾರಾಣಿ ಆಗಬಾರದು’ ಮಂಜಿಗೆ ನೇರವಾಗಿ ಹೇಳಿದ ಮಂಜ: ವಿಡಿಯೋ
‘ಮಹಾರಾಣಿ ಆಗಬಾರದು’ ಮಂಜಿಗೆ ನೇರವಾಗಿ ಹೇಳಿದ ಮಂಜ: ವಿಡಿಯೋ
ಶಿಕ್ಷಕರು ಬೈದಿದ್ದಕ್ಕೆ 10ನೇ ತರಗತಿಯ ನಾಲ್ವರು ವಿದ್ಯಾರ್ಥಿಗಳು ಪರಾರಿ
ಶಿಕ್ಷಕರು ಬೈದಿದ್ದಕ್ಕೆ 10ನೇ ತರಗತಿಯ ನಾಲ್ವರು ವಿದ್ಯಾರ್ಥಿಗಳು ಪರಾರಿ
ಸುಳ್ಳಿನಿಂದ ಕಲುಷಿತಗೊಂಡಿದ್ದ ಭೀಮಾನದಿ ಕ್ಲೀನ್ ಮಾಡಿದ ಪೌರ ಕಾರ್ಮಿಕರು
ಸುಳ್ಳಿನಿಂದ ಕಲುಷಿತಗೊಂಡಿದ್ದ ಭೀಮಾನದಿ ಕ್ಲೀನ್ ಮಾಡಿದ ಪೌರ ಕಾರ್ಮಿಕರು
ಶೈನ್ ಶೆಟ್ಟಿ ಅಭಿನಯದ ‘ಶಂಕರಾಭರಣ’ ಸಿನಿಮಾ ನೋಡಿ ಮೆಚ್ಚಿದ ಪ್ರೇಕ್ಷಕರು
ಶೈನ್ ಶೆಟ್ಟಿ ಅಭಿನಯದ ‘ಶಂಕರಾಭರಣ’ ಸಿನಿಮಾ ನೋಡಿ ಮೆಚ್ಚಿದ ಪ್ರೇಕ್ಷಕರು
ಹಸಿದು ಕಂಗಾಲಾಗಿದ್ದ ಸ್ಪರ್ಧಿಗಳಿಗೆ ಕಿಚ್ಚನಿಂದ ಬಂತು ಬಿರಿಯಾನಿ: ವಿಡಿಯೋ
ಹಸಿದು ಕಂಗಾಲಾಗಿದ್ದ ಸ್ಪರ್ಧಿಗಳಿಗೆ ಕಿಚ್ಚನಿಂದ ಬಂತು ಬಿರಿಯಾನಿ: ವಿಡಿಯೋ
ಸಿಸಿಬಿ ಇನ್ಮುಂದೆ 'ಆ್ಯಂಟಿ ರೌಡಿ ಸ್ಕ್ವಾಡ್'
ಸಿಸಿಬಿ ಇನ್ಮುಂದೆ 'ಆ್ಯಂಟಿ ರೌಡಿ ಸ್ಕ್ವಾಡ್'
ಮೂರನೇ ದಿನಕ್ಕೆ ಕಾಲಿಟ್ಟ ಆಶಾ ಕಾರ್ಯಕರ್ತೆಯರ ಪ್ರತಿಭಟನೆ, ಇಬ್ಬರು ಅಸ್ವಸ್ಥ
ಮೂರನೇ ದಿನಕ್ಕೆ ಕಾಲಿಟ್ಟ ಆಶಾ ಕಾರ್ಯಕರ್ತೆಯರ ಪ್ರತಿಭಟನೆ, ಇಬ್ಬರು ಅಸ್ವಸ್ಥ
'ನಮ್ಮ ಹಳೇ ಬಾಸ್​​ ಕುಮಾರಸ್ವಾಮಿ ಭಸ್ಮಾಸುರನಂತೆ': ಹೆಚ್​​.ಸಿ. ಬಾಲಕೃಷ್ಣ
'ನಮ್ಮ ಹಳೇ ಬಾಸ್​​ ಕುಮಾರಸ್ವಾಮಿ ಭಸ್ಮಾಸುರನಂತೆ': ಹೆಚ್​​.ಸಿ. ಬಾಲಕೃಷ್ಣ