AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬ್ಯಾಟರ್‌ಗಳು ಕೈಕೊಟ್ಟರೂ ಬೌಲರ್‌ಗಳು ಕೈಬಿಡಲಿಲ್ಲ; ಸರಣಿ ಗೆಲುವಿನ ರಹಸ್ಯ ಬಿಚ್ಚಿಟ್ಟ ಅಯ್ಯರ್

ನ್ಯೂಜಿಲೆಂಡ್ ವಿರುದ್ಧ ಟೀಂ ಇಂಡಿಯಾ 3-1 ಏಕದಿನ ಸರಣಿ ಗೆದ್ದಿದೆ. ನಾಯಕ ಶ್ರೇಯಸ್ ಅಯ್ಯರ್ ಬೌಲರ್‌ಗಳ ಅದ್ಭುತ ಪ್ರದರ್ಶನವನ್ನು ಶ್ಲಾಘಿಸಿದರು. ಬ್ಯಾಟರ್‌ಗಳಿಗೆ ಕಠಿಣವಾಗಿದ್ದ ಸರಣಿಯಲ್ಲಿ, ಬೌಲರ್‌ಗಳು ಜವಾಬ್ದಾರಿಯುತವಾಗಿ ಬೌಲಿಂಗ್ ಮಾಡಿದರು. ಆಟಗಾರರ ಒಗ್ಗಟ್ಟು, ಗೆಲ್ಲುವ ಮನೋಭಾವ ಮತ್ತು ಕಠಿಣ ಪರಿಸ್ಥಿತಿಗಳನ್ನು ಎದುರಿಸಿ ಸಾಧಿಸಿದ ಈ ಗೆಲುವು ನಿಜಕ್ಕೂ ಮೆಚ್ಚುವಂತದ್ದು. ಅಭಿಮಾನಿಗಳ ಬೆಂಬಲವನ್ನೂ ಅಯ್ಯರ್ ಸ್ಮರಿಸಿದರು.

ಬ್ಯಾಟರ್‌ಗಳು ಕೈಕೊಟ್ಟರೂ ಬೌಲರ್‌ಗಳು ಕೈಬಿಡಲಿಲ್ಲ; ಸರಣಿ ಗೆಲುವಿನ ರಹಸ್ಯ ಬಿಚ್ಚಿಟ್ಟ ಅಯ್ಯರ್
Shreyas Iyer
ಪೃಥ್ವಿಶಂಕರ
|

Updated on: Nov 15, 2026 | 6:17 PM

Share

ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯನ್ನು ಟೀಂ ಇಂಡಿಯಾ 3-1 ಅಂತರದಲ್ಲಿ ಗೆದ್ದುಕೊಂಡಿದೆ. ಗೆಲುವಿನ ಬಳಿಕ ಮಾತನಾಡಿದ ನಾಯಕ ಶ್ರೇಯಸ್ ಅಯ್ಯರ್, ತಂಡದ ಬೌಲರ್‌ಗಳ ಪ್ರದರ್ಶನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸರಣಿಯುದ್ದಕ್ಕೂ ಬ್ಯಾಟರ್‌ಗಳಿಗೆ ರನ್ ಗಳಿಸುವುದು ಸುಲಭವಾಗಿರಲಿಲ್ಲ. ಇಂತಹ ಕಠಿಣ ಪರಿಸ್ಥಿತಿಯಲ್ಲೂ ಬೌಲರ್‌ಗಳು ಜವಾಬ್ದಾರಿಯುತ ಪ್ರದರ್ಶನ ನೀಡಿದರು. ಆಟಗಾರರ ಒಗ್ಗಟ್ಟು ಮತ್ತು ಗೆಲ್ಲಲೇಬೇಕೆಂಬ ಮನೋಭಾವವೇ ಸರಣಿ ಗೆಲುವಿಗೆ ಪ್ರಮುಖ ಕಾರಣ ಎಂದು ಅಯ್ಯರ್ ಹೇಳಿದ್ದಾರೆ.

ಬ್ಯಾಟರ್‌ಗಳ ಸರಣಿಯಾಗಿರಲಿಲ್ಲ

ಪಂದ್ಯದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶ್ರೇಯಸ್ ಅಯ್ಯರ್, ಸರಣಿಯುದ್ದಕ್ಕೂ ಬೌಲರ್‌ಗಳು ತೋರಿದ ಆತ್ಮವಿಶ್ವಾಸ ಮತ್ತು ಹೋರಾಟದ ಮನೋಭಾವವನ್ನು ಕೊಂಡಾಡಿದರು. ‘ಇಡೀ ಸರಣಿಯನ್ನು ಗಮನಿಸಿದರೆ ಇದು ಬ್ಯಾಟರ್‌ಗಳಿಗೆ ಹೇಳಿ ಮಾಡಿಸಿದ ಸರಣಿಯಾಗಿರಲಿಲ್ಲ. ಆದರೆ ನಮ್ಮ ಬೌಲರ್‌ಗಳು ಪ್ರತಿಯೊಂದು ಸಂದರ್ಭದಲ್ಲೂ ಜವಾಬ್ದಾರಿ ತೆಗೆದುಕೊಂಡು ಉತ್ತಮವಾಗಿ ಬೌಲಿಂಗ್ ಮಾಡಿದರು. ಯಾವುದೇ ರೀತಿಯ ಪಿಚ್ ಅಥವಾ ಪರಿಸ್ಥಿತಿ ಇದ್ದರೂ ತಂಡವನ್ನು ಗೆಲುವಿನ ದಡ ಸೇರಿಸುವ ವಿಶ್ವಾಸ ಅವರಲ್ಲಿತ್ತು. ಪ್ರತಿಯೊಬ್ಬ ಆಟಗಾರನಲ್ಲೂ ಇರಬೇಕಾದ ಮನೋಭಾವ ಮತ್ತು ಹೋರಾಟದ ಗುಣ ನಮ್ಮ ತಂಡದಲ್ಲಿದೆ. ಇದು ನಿಜಕ್ಕೂ ಮೆಚ್ಚುವಂತಹದ್ದು’.

‘ಇಲ್ಲಿ ನಡೆದ ಟಿ20 ಮತ್ತು ಏಕದಿನ ಸರಣಿಗಳಲ್ಲಿ ನಮಗೆ ವಿಭಿನ್ನ ಪರಿಸ್ಥಿತಿಗಳು ಎದುರಾದವು. ಹವಾಮಾನವೂ ಆಗಾಗ ಬದಲಾಗುತ್ತಿತ್ತು. ಹಲವು ಸವಾಲುಗಳನ್ನು ಎದುರಿಸಿ ಎರಡೂ ಸರಣಿಗಳಲ್ಲಿ ಗೆಲುವು ಸಾಧಿಸಿರುವುದು ದೊಡ್ಡ ಸಾಧನೆ. ಇಂದಿನ ಪಂದ್ಯದಲ್ಲೂ ಬ್ಯಾಟಿಂಗ್‌ನಲ್ಲಿ ಹೆಚ್ಚು ರನ್ ಗಳಿಸಲು ಸಾಧ್ಯವಾಗದಿದ್ದರೂ, ಯಾವುದೇ ಕ್ಷಣದಲ್ಲಿ ಪಂದ್ಯದ ಚಿತ್ರಣ ಬದಲಿಸಬಹುದು ಎಂಬ ನಂಬಿಕೆ ನಮ್ಮಲ್ಲಿತ್ತು. ತಂಡದ ಪ್ರತಿಯೊಬ್ಬ ಆಟಗಾರನೂ ಇದೇ ಮನೋಭಾವದೊಂದಿಗೆ ಆಡಿದ್ದರಿಂದ ಗೆಲುವು ಸಾಧ್ಯವಾಯಿತು’ ಎಂದರು.

ಆಡುವ ಬಳಗದಲ್ಲಿ ಆಗಾಗ ಬದಲಾವಣೆ

ಗಾಯಗಳು ಮತ್ತು ಕೆಲ ಆಟಗಾರರು ಲಭ್ಯವಿಲ್ಲದ ಕಾರಣ ಸರಣಿಯುದ್ದಕ್ಕೂ ತಂಡದ ಆಡುವ ಬಳಗದಲ್ಲಿ ಆಗಾಗ ಬದಲಾವಣೆ ಮಾಡಬೇಕಾಯಿತು. ಇದರಿಂದ ಆಟಗಾರರಿಗೆ ತಮ್ಮ ಜವಾಬ್ದಾರಿಗಳಿಗೆ ಹೊಂದಿಕೊಳ್ಳುವುದು ಸ್ವಲ್ಪ ಕಷ್ಟವಾಗಿತ್ತು ಎಂದ ಅಯ್ಯರ್, ‘ಆಟಗಾರರನ್ನು ಆಗಾಗ ಬದಲಾಯಿಸುವುದು ಕೆಲವೊಮ್ಮೆ ಸವಾಲಿನ ಕೆಲಸವಾಗುತ್ತದೆ. ಹೊಸ ಪರಿಸ್ಥಿತಿಗಳಿಗೆ ಹೊಂದಿಕೊಳ್ಳಲು ಆಟಗಾರರಿಗೆ ಸಮಯ ಬೇಕಾಗುತ್ತದೆ. ಆದರೆ, ನಾವು ಯಾವುದೇ ನೆಪ ಹೇಳಲು ಬಯಸಲಿಲ್ಲ. ನಮ್ಮ ಮೇಲಿರುವ ನಿರೀಕ್ಷೆಗಳನ್ನು ತಲುಪುವುದಷ್ಟೇ ನಮ್ಮ ಗುರಿಯಾಗಿತ್ತು. ಪ್ರತಿಯೊಬ್ಬ ಆಟಗಾರನೂ ಮೈದಾನಕ್ಕಿಳಿದು ತನ್ನ ಶಕ್ತಿಮೀರಿ ಪ್ರದರ್ಶನ ನೀಡಲು ಸಿದ್ಧನಿದ್ದ’ ಎಂದರು.

ಬೇ ಓವಲ್‌ನಲ್ಲಿ ಟೀಂ ಇಂಡಿಯಾದ ವಿಜಯೋತ್ಸವ: ಏಕದಿನ ಸರಣಿ ಗೆದ್ದು ಬೀಗಿದ ಭಾರತ

ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ ಅಯ್ಯರ್

ನ್ಯೂಜಿಲೆಂಡ್ ಪ್ರವಾಸದುದ್ದಕ್ಕೂ ತಂಡಕ್ಕೆ ಬೆಂಬಲ ನೀಡಿದ ಭಾರತೀಯ ಅಭಿಮಾನಿಗಳಿಗೂ ಶ್ರೇಯಸ್ ಅಯ್ಯರ್ ಧನ್ಯವಾದ ಅರ್ಪಿಸಿದರು, ‘ಪ್ರತಿಯೊಂದು ಪಂದ್ಯದಲ್ಲೂ ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳು ಮೈದಾನಕ್ಕೆ ಬಂದು ನಮ್ಮನ್ನು ಬೆಂಬಲಿಸಿದ್ದಾರೆ. ಕೆಲವೊಮ್ಮೆ ಫಲಿತಾಂಶ ನಮ್ಮ ಪರವಾಗಿತ್ತು, ಮತ್ತೆ ಕೆಲವೊಮ್ಮೆ ನ್ಯೂಜಿಲೆಂಡ್ ಪರವಾಗಿತ್ತು. ಆದರೂ ಅವರು ಎರಡೂ ತಂಡಗಳಿಗೆ ಬೆಂಬಲ ನೀಡಿದ್ದು ಸಂತೋಷದ ಸಂಗತಿ. ಕ್ರೀಡೆ ಬೆಳೆಯಲು ಇಂತಹ ಪ್ರೋತ್ಸಾಹ ಬಹಳ ಮುಖ್ಯ. ಅಭಿಮಾನಿಗಳಿಂದ ನಮಗೆ ಸಿಗುವ ಸ್ಫೂರ್ತಿ ಅಪಾರ. ಇಲ್ಲಿ ಬಂದು ಬೆಂಬಲ ನೀಡಿದ ಪ್ರತಿಯೊಬ್ಬರಿಗೂ ಧನ್ಯವಾದಗಳು” ಎಂದು ಅಯ್ಯರ್ ಹೇಳಿದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಪೃಥ್ವಿಶಂಕರ
ಪೃಥ್ವಿಶಂಕರ

ಪೃಥ್ವಿಶಂಕರ ಅವರ ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ. ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ಕೆಲಸ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ಇವರು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ಇವರ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.

Read More
ಮುತ್ತುರಾಯನಸ್ವಾಮಿ ಬೆಟ್ಟದಲ್ಲಿ ದಾರಿ ತಪ್ಪಿದ್ದ ಯುವಕನ ರಕ್ಷಣೆ
ಮುತ್ತುರಾಯನಸ್ವಾಮಿ ಬೆಟ್ಟದಲ್ಲಿ ದಾರಿ ತಪ್ಪಿದ್ದ ಯುವಕನ ರಕ್ಷಣೆ
‘ಯಶಸ್ ನಯವಂಚಕ, ಚಿಲ್ಲರೆ ಬುದ್ಧಿ’: ಸುದೀಪ್ ಎದುರಲ್ಲೇ ಆರೋಪಗಳ ಸುರಿಮಳೆ
‘ಯಶಸ್ ನಯವಂಚಕ, ಚಿಲ್ಲರೆ ಬುದ್ಧಿ’: ಸುದೀಪ್ ಎದುರಲ್ಲೇ ಆರೋಪಗಳ ಸುರಿಮಳೆ
ಬಿರ್ಸಾ ಮುಂಡಾ ಪ್ರತಿಮೆಗೆ ಪುಷ್ಪನಮನ ಸಲ್ಲಿಸಿದ ಪ್ರಧಾನಿ ಮೋದಿ
ಬಿರ್ಸಾ ಮುಂಡಾ ಪ್ರತಿಮೆಗೆ ಪುಷ್ಪನಮನ ಸಲ್ಲಿಸಿದ ಪ್ರಧಾನಿ ಮೋದಿ
ಕಾಮುಕನ ವಿಕೃತಿಗೆ ಬೇಸತ್ತ ಹಾಸ್ಟೆಲ್ ವಿದ್ಯಾರ್ಥಿನಿಯರು
ಕಾಮುಕನ ವಿಕೃತಿಗೆ ಬೇಸತ್ತ ಹಾಸ್ಟೆಲ್ ವಿದ್ಯಾರ್ಥಿನಿಯರು
ಮೋದಿ ಬಂದ ರೋಡಿಗೆ ಮಾತ್ರ ಥಳಥಳ ಡಾಂಬರ್, ಉಳಿದ ರಸ್ತೆ ತುಂಬಾ ನೂರಾರು ಗುಂಡಿ
ಮೋದಿ ಬಂದ ರೋಡಿಗೆ ಮಾತ್ರ ಥಳಥಳ ಡಾಂಬರ್, ಉಳಿದ ರಸ್ತೆ ತುಂಬಾ ನೂರಾರು ಗುಂಡಿ
ಹೊಸ ಶರ್ಟ್ ಕತ್ತರಿಸಲು ಹಿಂದೇಟು:ಬನಿಯನ್‌ನಲ್ಲೇ KASಪರೀಕ್ಷೆ ಬರೆದ ಅಭ್ಯರ್ಥಿ
ಹೊಸ ಶರ್ಟ್ ಕತ್ತರಿಸಲು ಹಿಂದೇಟು:ಬನಿಯನ್‌ನಲ್ಲೇ KASಪರೀಕ್ಷೆ ಬರೆದ ಅಭ್ಯರ್ಥಿ
ಬಾಳೆಗೊನೆಯಲ್ಲಿ ಡ್ರಗ್ ಸಾಗಾಟ: ಪ್ರಗತಿಪರ ಯುವ ರೈತನ ಕರಾಳ ಮುಖ ಬಯಲು
ಬಾಳೆಗೊನೆಯಲ್ಲಿ ಡ್ರಗ್ ಸಾಗಾಟ: ಪ್ರಗತಿಪರ ಯುವ ರೈತನ ಕರಾಳ ಮುಖ ಬಯಲು
ಕಾಡಾನೆ ದಾಳಿಗೆ ಮಹಿಳೆ ಬಲಿ: ತೀವ್ರಗೊಂಡ ಚೌಡಹಳ್ಳಿ ಗ್ರಾಮಸ್ಥರ ಪ್ರತಿಭಟನೆ
ಕಾಡಾನೆ ದಾಳಿಗೆ ಮಹಿಳೆ ಬಲಿ: ತೀವ್ರಗೊಂಡ ಚೌಡಹಳ್ಳಿ ಗ್ರಾಮಸ್ಥರ ಪ್ರತಿಭಟನೆ
ಕೆಎಎಸ್ ಪರೀಕ್ಷೆ: ಅಕ್ರಮ ತಡೆಯಲು ಬೆಂಗಳೂರು ಕೇಂದ್ರಗಳಲ್ಲಿ ಬಿಗಿ ಭದ್ರತೆ
ಕೆಎಎಸ್ ಪರೀಕ್ಷೆ: ಅಕ್ರಮ ತಡೆಯಲು ಬೆಂಗಳೂರು ಕೇಂದ್ರಗಳಲ್ಲಿ ಬಿಗಿ ಭದ್ರತೆ
ಹಿರಿಯೂರು ಉಪಚುನಾವಣೆಗೆ NDA ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಗೊಂದಲ
ಹಿರಿಯೂರು ಉಪಚುನಾವಣೆಗೆ NDA ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಗೊಂದಲ