IPL 2024: ಶಾಕ್ ಬೆನ್ನಲ್ಲೇ ಕೆಕೆಆರ್​ಗೆ ಶುಭ ಸುದ್ದಿ: ತಂಡ ಸೇರಿಕೊಳ್ಳಲಿದ್ದಾರೆ ಶ್ರೇಯಸ್ ಅಯ್ಯರ್

Shreyas Iyer Injury: ಮುಂಬೈ ರಣಜಿ ಟ್ರೋಫಿ ತಂಡದ ಮ್ಯಾನೇಜರ್ ಭೂಷಣ್ ಪಾಟೀಲ್ ಮಾತನಾಡಿ, ಶ್ರೇಯಸ್ ಅಯ್ಯರ್ ಅವರ ಬೆನ್ನಿಗೆ ಗಾಯವಾಗಿದೆ ನಿಜ. ಆದರೆ, ಆತಂಕಕ್ಕೆ ಪಡುವ ಅಗತ್ಯವಿಲ್ಲ ಎಂದು ಹೇಳಿದರು. ಐಪಿಎಲ್ 2024 ರ ಪೂರ್ವ ಶಿಬಿರಕ್ಕಾಗಿ ಅಯ್ಯರ್ ಎರಡು ದಿನಗಳಲ್ಲಿ ಕೋಲ್ಕತ್ತಾಗೆ ಪ್ರಯಾಣಿಸಲಿದ್ದಾರೆ ಎಂದು ಹೇಳಿದ್ದಾರೆ.

IPL 2024: ಶಾಕ್ ಬೆನ್ನಲ್ಲೇ ಕೆಕೆಆರ್​ಗೆ ಶುಭ ಸುದ್ದಿ: ತಂಡ ಸೇರಿಕೊಳ್ಳಲಿದ್ದಾರೆ ಶ್ರೇಯಸ್ ಅಯ್ಯರ್
Shreyas Iyer

Updated on: Mar 15, 2024 | 9:07 AM

2023-24 ಋತುವಿನಲ್ಲಿ ಬಿಸಿಸಿಐ ಕೇಂದ್ರ ಗುತ್ತಿಗೆ ಪಟ್ಟಿಯಿಂದ ಹೊರಗಿಟ್ಟ ನಂತರ ಕೋಲ್ಕತ್ತಾ ನೈಟ್ ರೈಡರ್ಸ್ ನಾಯಕ ಶ್ರೇಯಸ್ ಅಯ್ಯರ್‌ಗೆ ಐಪಿಎಲ್ 2024 ನಿರ್ಣಾಯಕ ಟೂರ್ನಿಯಾಗಿದೆ. ಆದಾಗ್ಯೂ, ರಣಜಿ ಟ್ರೋಫಿ ಫೈನಲ್‌ನ ಆರಂಭಿಕ ಇನ್ನಿಂಗ್ಸ್‌ನಲ್ಲಿ ವೀರೋಚಿತ 95 ರನ್‌ಗಳ ನಂತರ ಅಯ್ಯರ್ ಬೆನ್ನಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂಬ ವರದಿಯಾಗಿತ್ತು. ಇದು ಅಯ್ಯರ್​ಗೆ ಮತ್ತು ಕೆಕೆಆರ್ ಕಳವಳಕ್ಕೆ ಕಾರಣವಾಗಿತ್ತು. ವಿದರ್ಭ-ಮುಂಬೈ ಪಂದ್ಯದ ನಡುವೆ ಸಂಭವಿಸಿದ ಗಾಯದ ಸಮಸ್ಯೆಯಿಂದಾಗಿ ಅವರು ಐಪಿಎಲ್‌ನ ಮೊದಲ ಕೆಲವು ಪಂದ್ಯಗಳಿಂದ ಹೊರಗುಳಿಯಲಿದ್ದಾರೆ ಎಂದು ವರದಿಗಳು ತಿಳಿಸಿವೆ. ಆದಾಗ್ಯೂ, ಕೆಕೆಆರ್ ಇದೀಗ ನೆಮ್ಮದಿಯ ನಿಟ್ಟುಸಿರು ಬಿಡುವ ಸುದ್ದಿ ಹೊರಬಿದ್ದಿದೆ.

ಕ್ರಿಕ್‌ಬಜ್‌ನೊಂದಿಗೆ ಮಾತನಾಡಿದ ಮುಂಬೈ ರಣಜಿ ಟ್ರೋಫಿ ತಂಡದ ಮ್ಯಾನೇಜರ್ ಭೂಷಣ್ ಪಾಟೀಲ್, ಶ್ರೇಯಸ್ ಅಯ್ಯರ್ ಅವರ ಬೆನ್ನಿಗೆ ಗಾಯವಾಗಿದೆ ನಿಜ. ಆದರೆ, ಆತಂಕಕ್ಕೆ ಪಡುವ ಅಗತ್ಯವಿಲ್ಲ ಎಂದು ಹೇಳಿದರು. ಐಪಿಎಲ್ 2024 ರ ಪೂರ್ವ ಶಿಬಿರಕ್ಕಾಗಿ ಅಯ್ಯರ್ ಎರಡು ದಿನಗಳಲ್ಲಿ ಕೋಲ್ಕತ್ತಾಗೆ ಪ್ರಯಾಣಿಸಲಿದ್ದಾರೆ ಎಂದು ಹೇಳಿದ್ದಾರೆ. ಅವರು ಆರೋಗ್ಯವಾಗಿದ್ದಾರೆ ಎಂದು ಪಾಟೀಲ್ ಹೇಳಿದರು.

ಅಭ್ಯಾಸದ ವೇಳೆ ರಿಷಭ್ ಪಂತ್ ಸ್ಫೋಟಕ ಬ್ಯಾಟಿಂಗ್ ಕಂಡು ಎಲ್ಲರೂ ಶಾಕ್: ವಿಡಿಯೋ ನೋಡಿ

ಕೆಕೆಆರ್ ಮ್ಯಾನೇಜ್‌ಮೆಂಟ್ ಕೂಡ ಕ್ರಿಕ್‌ಬಜ್‌ಗೆ ಶ್ರೇಯಸ್ ಅಯ್ಯರ್‌ ಗಾಯದ ಬಗ್ಗೆ ಯಾವುದೇ ಮಾಹಿತಿ ಬಂದಿಲ್ಲ ಎಂದು ತಿಳಿಸಿದೆ. ಅಯ್ಯರ್ ಅವರು ಗಾಯಗೊಂಡಿದ್ದಾರೆಯೇ ಎಂಬ ಬಗ್ಗೆ ಯಾವುದೇ ಅನೌಪಚಾರಿಕ ಮಾಹಿತಿಯನ್ನು ನೀಡಿಲ್ಲವಂತೆ. ವಿದರ್ಭ ವಿರುದ್ಧದ ರಣಜಿ ಟ್ರೋಫಿ ಫೈನಲ್‌ನ ಅಂತಿಮ ಎರಡು ದಿನಗಳಲ್ಲಿ ಶ್ರೇಯಸ್ ಅಯ್ಯರ್ ಮುಂಬೈ ಪರ ಮೈದಾನಕ್ಕಿಳಿಯಲಿಲ್ಲ. ಟೈಮ್ಸ್ ಆಫ್ ಇಂಡಿಯಾದ ವರದಿಯ ಪ್ರಕಾರ, ಶ್ರೇಯಸ್ ಅಯ್ಯರ್ ಅವರು ಬೆನ್ನು ಸೆಳೆತಕ್ಕಾಗಿ ಮುಂಬೈ ಫಿಸಿಯೊದಿಂದ ಎರಡು ಬಾರಿ ಚಿಕಿತ್ಸೆ ಪಡೆಯಬೇಕಾಯಿತು.

2024 ರ ಐಪಿಎಲ್ ಆವೃತ್ತಿಯು ಮಾರ್ಚ್ 22 ರಂದು ಚೆನ್ನೈ ಸೂಪರ್ ಕಿಂಗ್ಸ್ (CSK) ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ನಡುವಿನ ಪಂದ್ಯದೊಂದಿಗೆ ಚೆನ್ನೈನ MA ಚಿದಂಬರಂ ಕ್ರೀಡಾಂಗಣದಲ್ಲಿ ಪ್ರಾರಂಭವಾಗಲಿದೆ. ಎರಡು ಬಾರಿಯ ಮಾಜಿ ಚಾಂಪಿಯನ್ ಕೆಕೆಆರ್ ಮಾರ್ಚ್ 23 ರಂದು ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಅಭಿಯಾನವನ್ನು ಪ್ರಾರಂಭಿಸಲಿದೆ.

ಟಿ20 ವಿಶ್ವಕಪ್ ಆಯ್ಕೆಗೆ ಐಪಿಎಲ್ ಪ್ರದರ್ಶನ ಮುಖ್ಯವಲ್ಲ, ಆದರೆ…: ಯುವ ಕ್ರಿಕೆಟಿಗರಿಗೆ ಬಿಸಿಸಿಐ ಬಿಗ್ ಶಾಕ್

ಐಪಿಎಲ್ 2022 ರ ಮೆಗಾ ಹರಾಜಿನಲ್ಲಿ ಶಾರುಖ್ ಖಾನ್ ಅವರ ಸಹ-ಮಾಲೀಕತ್ವದ ಫ್ರಾಂಚೈಸಿ ರೂ. 12.25 ಕೋಟಿಗೆ ಸಹಿ ಹಾಕಿದ್ದ ಶ್ರೇಯಸ್ ಬೆನ್ನುನೋವಿನಿಂದಾಗಿ 2023 ರ ಸಂಪೂರ್ಣ ಋತುವನ್ನು ಕಳೆದುಕೊಂಡರು. ಅವರ ಅನುಪಸ್ಥಿತಿಯಲ್ಲಿ, ನಿತೀಶ್ ರಾಣಾ ಅವರನ್ನು ತಂಡದ ನಾಯಕರನ್ನಾಗಿ ನೇಮಿಸಲಾಯಿತು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ