AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2024: ಕೆಎಲ್ ರಾಹುಲ್ ನೇತೃತ್ವದ ಲಕ್ನೋ ತಂಡಕ್ಕೆ ಆಸೀಸ್ ಸ್ಟಾರ್ ಆಟಗಾರನ ಎಂಟ್ರಿ

Lucknow Super Giants: ಲಕ್ನೋ ಹೊಸ ಸಹಾಯಕ ಸಿಬ್ಬಂದಿ ಹೆಸರನ್ನು ಘೋಷಿಸಿದೆ. ಆಸ್ಟ್ರೇಲಿಯದ ಮಾಜಿ ಸ್ಟಾರ್ ಬ್ಯಾಟ್ಸ್‌ಮನ್ ಆ್ಯಡಂ ವೋಗ್ಸ್ ಅವರನ್ನು ತಂಡದ ಸಹಾಯಕ ಸಿಬ್ಬಂದಿ ಆಗಿ ಫ್ರಾಂಚೈಸಿ ನೇಮಿಸಿದೆ. ವೋಗ್ಸ್ ಮೊದಲ ಬಾರಿಗೆ ಐಪಿಎಲ್ ತಂಡವೊಂದಕ್ಕೆ ಸಹಾಯಕ ಸಿಬ್ಬಂದಿ ಆಗಿ ಸೇವೆ ಸಲ್ಲಿಸಲಿದ್ದಾರೆ.

IPL 2024: ಕೆಎಲ್ ರಾಹುಲ್ ನೇತೃತ್ವದ ಲಕ್ನೋ ತಂಡಕ್ಕೆ ಆಸೀಸ್ ಸ್ಟಾರ್ ಆಟಗಾರನ ಎಂಟ್ರಿ
LSG
Vinay Bhat
|

Updated on:Mar 15, 2024 | 11:55 AM

Share

ಲಕ್ನೋ ಸೂಪರ್ ಜೈಂಟ್ಸ್ ತಂಡ ಐಪಿಎಲ್ 2024 ಆರಂಭಕ್ಕೂ ಮುನ್ನ ತಮ್ಮ ಕೋಚಿಂಗ್ ಸಿಬ್ಬಂದಿಯಲ್ಲಿ ಸಾಕಷ್ಟು ಬದಲಾವಣೆಗಳನ್ನು ಮಾಡಿದೆ. ಗೌತಮ್ ಗಂಭೀರ್ ಮತ್ತು ಆ್ಯಂಡಿ ಫ್ಲವರ್ ನಿರ್ಗಮನದ ನಂತರ, ಹೊಸ ಸಿಬ್ಬಂದಿಗಳು ಬಂದಿದ್ದಾರೆ. ಇದೀಗ ಈ ಪಟ್ಟಿಗೆ ಮತ್ತೊಂದು ಹೆಸರು ಸೇರ್ಪಡೆಯಾಗಿದೆ. ಲಕ್ನೋ ಹೊಸ ಸಹಾಯಕ ಸಿಬ್ಬಂದಿ ಹೆಸರನ್ನು ಘೋಷಿಸಿದೆ. ಆಸ್ಟ್ರೇಲಿಯದ ಮಾಜಿ ಸ್ಟಾರ್ ಬ್ಯಾಟ್ಸ್‌ಮನ್ ಆ್ಯಡಂ ವೋಗ್ಸ್ ಅವರನ್ನು ತಂಡದ ಸಹಾಯಕ ಸಿಬ್ಬಂದಿ ಆಗಿ ಫ್ರಾಂಚೈಸಿ ನೇಮಿಸಿದೆ. ವೋಗ್ಸ್ ಮೊದಲ ಬಾರಿಗೆ ಐಪಿಎಲ್ ತಂಡವೊಂದಕ್ಕೆ ಸಹಾಯಕ ಸಿಬ್ಬಂದಿ ಆಗಿ ಸೇವೆ ಸಲ್ಲಿಸಲಿದ್ದಾರೆ.

ಈ ಋತುವಿನಲ್ಲಿ, ಲಕ್ನೋ ಕೋಚಿಂಗ್ ಸಿಬ್ಬಂದಿಯಲ್ಲಿ ಮಹತ್ವದ ಬದಲಾವಣೆಗಳನ್ನು ಮಾಡಿತು. ಆಸ್ಟ್ರೇಲಿಯಾದ ಮಾಜಿ ಕೋಚ್ ಮತ್ತು ಆರಂಭಿಕ ಬ್ಯಾಟ್ಸ್‌ಮನ್ ಜಸ್ಟಿನ್ ಲ್ಯಾಂಗರ್ ಅವರನ್ನು ತಂಡದ ತರಬೇತುದಾರನನ್ನಾಗಿ ನೇಮಿಸಿತು. ನಂತರ, ದಕ್ಷಿಣ ಆಫ್ರಿಕಾದ ಮಾಜಿ ಆಲ್‌ರೌಂಡರ್ ಲ್ಯಾನ್ಸ್ ಕ್ಲೂಸೆನರ್ ಅವರನ್ನು ಸಹಾಯಕ ಕೋಚ್ ಆಗಿ ನೇಮಿಸಲಾಯಿತು. ಇದೀಗ ವೋಗ್ಸ್ ತಂಡದ ಸಹಾಯಕ ಸಿಬ್ಬಂದಿಯಲ್ಲಿ ಸ್ಥಾನ ಪಡೆದಿದ್ದಾರೆ.

ಆರ್​ಸಿಬಿ ಬೌಲಿಂಗ್​ಗೆ ಬಂತು ಆನೆ ಬಲ: ಟಾಮ್ ಕರನ್ ಬದಲಿಗೆ ಸ್ಪೋಟಕ ವೇಗಿ ಎಂಟ್ರಿ?

ವೋಗ್ಸ್ ತರಬೇತಿಯಲ್ಲಿ ಉತ್ತಮ ಅನುಭವ ಹೊಂದಿದ್ದಾರೆ. ಅವರು ಪಶ್ಚಿಮ ಆಸ್ಟ್ರೇಲಿಯಾದ ಕೋಚ್ ಆಗಿದ್ದಾರೆ. ಇವರ ಕೋಚಿಂಗ್ ಅಡಿಯಲ್ಲಿ, ವೆಸ್ಟರ್ನ್ ಆಸ್ಟ್ರೇಲಿಯಾ ಏಕದಿನ ಪಂದ್ಯಾವಳಿಗಳಾದ ಮಾರ್ಷ್ ಕಪ್ ಮತ್ತು ಶೆಫೀಲ್ಡ್ ಶೀಲ್ಡ್ ಅನ್ನು ಹಲವಾರು ಬಾರಿ ಗೆದ್ದಿದೆ. ಆಸ್ಟ್ರೇಲಿಯಾದ ಬಿಗ್ ಬ್ಯಾಷ್ ಲೀಗ್ (BBL) ನಲ್ಲಿ ಪರ್ತ್ ಸ್ಕಾರ್ಚರ್ಸ್‌ನ ತರಬೇತುದಾರರಾಗಿದ್ದರು ಮತ್ತು ಎರಡು ಬಾರಿ ತಂಡ ಪ್ರಶಸ್ತಿಯನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದ್ದರು. ಇದೀಗ ಐಪಿಎಲ್ ಟ್ರೋಫಿ ಗೆಲ್ಲಲು ವೋಗ್ಸ್ ಲಕ್ನೋಗೆ ಹೇಗೆ ಸಹಾಯ ಮಾಡುತ್ತಾರೆ ನೋಡಬೇಕಾಗಿದೆ.

ಇದು ಲಕ್ನೋದ ಮೂರನೇ ಸೀಸನ್. ಈ ತಂಡವು 2022 ರಲ್ಲಿ ಐಪಿಎಲ್‌ಗೆ ಪದಾರ್ಪಣೆ ಮಾಡಿತು. ತಂಡದ ಮುಖ್ಯ ಕೋಚ್ ಲ್ಯಾಂಗರ್ ಅವರು, ವೋಗ್ಸ್ ಆಗಮನವು ತಂಡಕ್ಕೆ ಬೋನಸ್ ಆಗಿದೆ ಎಂದು ಹೇಳಿದ್ದಾರೆ. ವೋಗ್ಸ್ ಒಬ್ಬ ಶ್ರೇಷ್ಠ ತರಬೇತುದಾರ ಮತ್ತು ವ್ಯಕ್ತಿ. ಈ ಹಿಂದೆಯೂ ನಾವು ಒಟ್ಟಿಗೆ ಕೆಲಸ ಮಾಡಿದ್ದೇವೆ ಎಂದು ಲ್ಯಾಂಗರ್ ಹೇಳಿದ್ದಾರೆ.

ಶಾಕ್ ಬೆನ್ನಲ್ಲೇ ಕೆಕೆಆರ್​ಗೆ ಶುಭ ಸುದ್ದಿ: ತಂಡ ಸೇರಿಕೊಳ್ಳಲಿದ್ದಾರೆ ಶ್ರೇಯಸ್ ಅಯ್ಯರ್

ಲಕ್ನೋ ಸೂಪರ್ ಜೈಂಟ್ಸ್ ತಂಡ:

ಕೆಎಲ್ ರಾಹುಲ್ (ನಾಯಕ), ನಿಕೋಲಸ್ ಪೂರನ್ (ಉಪನಾಯಕ), ಕ್ವಿಂಟನ್ ಡಿ ಕಾಕ್, ಆಯುಷ್ ಬದೋನಿ, ಮಾರ್ಕಸ್ ಸ್ಟೊಯಿನಿಸ್, ದೀಪಕ್ ಹೂಡಾ, ಕೈಲ್ ಮೇಯರ್ಸ್, ದೇವದತ್ ಪಡಿಕ್ಕಲ್, ನವೀನ್-ಉಲ್-ಹಕ್, ರವಿ ಬಿಷ್ಣೋಯ್, ಕೃನಾಲ್ ಪಾಂಡ್ಯ, ಯುದ್ಧವೀರ್ ಸಿಂಗ್, ಯಶ್ ಠಾಕೂರ್ , ಪ್ರೇರಕ್ ಮಂಕಡ್, ಅಮಿತ್ ಮಿಶ್ರಾ, ಮಯಾಂಕ್ ಯಾದವ್, ಶಮರ್ ಜೋಸೆಫ್, ಮೊಹ್ಸಿನ್ ಖಾನ್, ಕೃಷ್ಣಪ್ಪ ಗೌತಮ್, ಅರ್ಶಿನ್ ಕುಲಕರ್ಣಿ, ಶಿವಂ ಮಾವಿ, ಎಂ ಸಿದ್ಧಾರ್ಥ್, ಡೇವಿಡ್ ವಿಲ್ಲಿ, ಆಷ್ಟನ್ ಟರ್ನರ್, ಮೊಹಮ್ಮದ್ ಅರ್ಷದ್ ಖಾನ್.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:53 am, Fri, 15 March 24

ಬುರ್ಖಾ ಹಾಕಿಕೊಂಡು ಓಡಾಡಿದ್ರೂ ಪೊಲೀಸರ ಕೈಗೆ ಸಿಕ್ಕಿಬಿದ್ದ ಅತ್ಯಾಚಾರ ಆರೋಪಿ
ಬುರ್ಖಾ ಹಾಕಿಕೊಂಡು ಓಡಾಡಿದ್ರೂ ಪೊಲೀಸರ ಕೈಗೆ ಸಿಕ್ಕಿಬಿದ್ದ ಅತ್ಯಾಚಾರ ಆರೋಪಿ
ಜನರ ಸಪೋರ್ಟ್ ಹೇಗಿದೆ ಎಂಬುದನ್ನು ಸ್ಪರ್ಧಿಗಳಿಗೆ ತೋರಿಸಿದ ಬಿಗ್ ಬಾಸ್ 
ಜನರ ಸಪೋರ್ಟ್ ಹೇಗಿದೆ ಎಂಬುದನ್ನು ಸ್ಪರ್ಧಿಗಳಿಗೆ ತೋರಿಸಿದ ಬಿಗ್ ಬಾಸ್ 
ಎಚ್ಚರ, ದಕ್ಷಿಣ ದಿಕ್ಕಿಗೆ ತಿರುಗಿ ನಮಸ್ಕಾರ ಮಾಡಲೇಬಾರದು! ಕಾರಣ ಇಲ್ಲಿದೆ
ಎಚ್ಚರ, ದಕ್ಷಿಣ ದಿಕ್ಕಿಗೆ ತಿರುಗಿ ನಮಸ್ಕಾರ ಮಾಡಲೇಬಾರದು! ಕಾರಣ ಇಲ್ಲಿದೆ
ಮಕರ ರಾಶಿಗೆ ಶುಕ್ರ ಪ್ರವೇಶ: ಈ ದಿನದ ರಾಶಿ ಭವಿಷ್ಯ ಹೇಗಿದೆ ನೋಡಿ
ಮಕರ ರಾಶಿಗೆ ಶುಕ್ರ ಪ್ರವೇಶ: ಈ ದಿನದ ರಾಶಿ ಭವಿಷ್ಯ ಹೇಗಿದೆ ನೋಡಿ
ಬ್ಲಿಂಕಿಟ್ ಡೆಲಿವರಿ ಬಾಯ್ ಆದ ಪರಿಣಿತಿ ಚೋಪ್ರಾ ಗಂಡ ರಾಘವ್ ಚಡ್ಡಾ
ಬ್ಲಿಂಕಿಟ್ ಡೆಲಿವರಿ ಬಾಯ್ ಆದ ಪರಿಣಿತಿ ಚೋಪ್ರಾ ಗಂಡ ರಾಘವ್ ಚಡ್ಡಾ
ಟಾಕ್ಸಿಕ್ ಟೀಸರ್ ಟೀಕಿಸಿದವರ ಗೂಗಲ್ ಸರ್ಚ್ ಹಿಸ್ಟರಿ ನೋಡಿ: ವಿನಯ್ ಗೌಡ
ಟಾಕ್ಸಿಕ್ ಟೀಸರ್ ಟೀಕಿಸಿದವರ ಗೂಗಲ್ ಸರ್ಚ್ ಹಿಸ್ಟರಿ ನೋಡಿ: ವಿನಯ್ ಗೌಡ
ಪೊಲೀಸ್ ಠಾಣೆಗೆ ಬೆಂಕಿ ಹಚ್ಚುತ್ತೇನೆ; ಬಜರಂಗದಳದ ವ್ಯಕ್ತಿಯಿಂದ ಬೆದರಿಕೆ
ಪೊಲೀಸ್ ಠಾಣೆಗೆ ಬೆಂಕಿ ಹಚ್ಚುತ್ತೇನೆ; ಬಜರಂಗದಳದ ವ್ಯಕ್ತಿಯಿಂದ ಬೆದರಿಕೆ
ಬಸ್​​ನಲ್ಲಿ 240 ಗ್ರಾಂ ಚಿನ್ನ ಕದ್ದಾಕೆ ಸಿಕ್ಕಿಬಿದ್ದಿದ್ಹೇಗೆ ಗೊತ್ತಾ?
ಬಸ್​​ನಲ್ಲಿ 240 ಗ್ರಾಂ ಚಿನ್ನ ಕದ್ದಾಕೆ ಸಿಕ್ಕಿಬಿದ್ದಿದ್ಹೇಗೆ ಗೊತ್ತಾ?
ಹಠವಾದಿ, ಛಲಗಾರ್ತಿ, ಕಿಚ್ಚು ಇತ್ಯಾದಿ; ಅಶ್ವಿನಿ ಗೌಡಗೆ ಸಿಕ್ಕ ಬಿರುದು ನೋಡಿ
ಹಠವಾದಿ, ಛಲಗಾರ್ತಿ, ಕಿಚ್ಚು ಇತ್ಯಾದಿ; ಅಶ್ವಿನಿ ಗೌಡಗೆ ಸಿಕ್ಕ ಬಿರುದು ನೋಡಿ
ಸಿದ್ದರಾಮಯ್ಯ ಅಧಿಕಾರದಿಂದ ಇಳಿಯೋದು ಯಾವಾಗ?: ಕೋಡಿಮಠ ಶ್ರೀ ಸ್ಪೋಟಕ ಭವಿಷ್ಯ
ಸಿದ್ದರಾಮಯ್ಯ ಅಧಿಕಾರದಿಂದ ಇಳಿಯೋದು ಯಾವಾಗ?: ಕೋಡಿಮಠ ಶ್ರೀ ಸ್ಪೋಟಕ ಭವಿಷ್ಯ