- Kannada News Photo gallery Cricket photos Shreyas Iyer Injury missing out on the initial few matches of the IPL 2024
IPL 2024: ಕೆಕೆಆರ್ಗೆ ಬಿಗ್ ಶಾಕ್: ಅದೇ ಬೆನ್ನು ನೋವು, ಮತ್ತೊಮ್ಮೆ ಇಂಜುರಿಗೆ ತುತ್ತಾದ ಶ್ರೇಯಸ್ ಅಯ್ಯರ್
Shreyas Iyer Injury: ಶ್ರೇಯಸ್ ಅಯ್ಯರ್ ಬೆನ್ನುನೋವಿನಿಂದಾಗಿ ಐಪಿಎಲ್ 2024 ರ ಆರಂಭಿಕ ಕೆಲವು ಪಂದ್ಯಗಳನ್ನು ಕಳೆದುಕೊಳ್ಳುವ ಸಾಧ್ಯತೆಯಿದೆ. ವರದಿಯ ಪ್ರಕಾರ, ಐಪಿಎಲ್‌ನಲ್ಲಿ ಕೆಕೆಆರ್ ತಂಡದ ನಾಯಕರಾಗಿರುವ ಅಯ್ಯರ್ ಬೆನ್ನುನೋವಿನಿಂದ ಬಳಲುತ್ತಿದ್ದಾರೆ. ಗುರುವಾರ ಮುಂಬೈ ಮತ್ತು ವಿದರ್ಭ ನಡುವಿನ ರಣಜಿ ಟ್ರೋಫಿ 2024 ಫೈನಲ್ ವೇಳೆ ಬೆನ್ನುನೋವಿಗೆ ತುತ್ತಾಗಿದ್ದಾರೆ.
Updated on:Mar 14, 2024 | 10:30 AM

ಐಪಿಎಲ್ 2024 ರ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ನಾಯಕರಾಗಿ ಮರು ನೇಮಕಗೊಂಡಿರುವ ಸ್ಟಾರ್ ಇಂಡಿಯನ್ ಬ್ಯಾಟರ್ ಶ್ರೇಯಸ್ ಅಯ್ಯರ್ ಅವರು ಇಂಡಿಯನ್ ಪ್ರೀಮಿಯರ್ ಲೀಗ್ನ ಆರಂಭಿಕ ಕೆಲವು ಪಂದ್ಯಗಳಿಗೆ ಅಲಭ್ಯರಾಗುವ ಸಾಧ್ಯತೆ ಇದೆ. ಗುರುವಾರ ಮುಂಬೈ ಮತ್ತು ವಿದರ್ಭ ನಡುವಿನ ರಣಜಿ ಟ್ರೋಫಿ 2024 ಫೈನಲ್ ವೇಳೆ ಬೆನ್ನುನೋವಿಗೆ ತುತ್ತಾಗಿದ್ದಾರೆ.

ವರದಿಯ ಪ್ರಕಾರ, ಅಯ್ಯರ್ ಅವರ ಬೆನ್ನಿನ ಗಾಯವು ಮತ್ತೊಮ್ಮೆ ಉಲ್ಬಣಗೊಂಡಿದೆಯಂತೆ. ಕಳೆದ ವರ್ಷ ಅವರು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಗಾಯವು ಮರುಕಳಿಸಿದ್ದು, ಈಗ IPL 2024 ರ ಆರಂಭಿಕ ಪಂದ್ಯಗಳಲ್ಲಿ ಆಡುವುದು ಅನುಮಾನ ಎನ್ನಲಾಗಿದೆ. ರಣಜಿ ಪಂದ್ಯದಲ್ಲಿ 95 ರನ್ ಗಳಿಸಿದ್ದಾಗ ಶ್ರೇಯಸ್‌ಗೆ ಗಾಯದ ಸಮಸ್ಯೆ ಮತ್ತೊಮ್ಮೆ ಕಾಡಿತು.

"ಶ್ರೇಯಸ್ ಅಯ್ಯರ್ಗೆ ಅದೇ ಬೆನ್ನುನೋವು ಉಲ್ಬಣಗೊಂಡಿದೆ. ಅವರು ರಣಜಿ ಟ್ರೋಫಿ ಫೈನಲ್‌ನ 5 ನೇ ದಿನದಂದು ಮೈದಾನಕ್ಕಿಳಿಯುವ ಸಾಧ್ಯತೆಯಿಲ್ಲ. ಐಪಿಎಲ್‌ನ ಆರಂಭಿಕ ಪಂದ್ಯಗಳನ್ನು ಕಳೆದುಕೊಳ್ಳುವ ಅಪಾಯದಲ್ಲಿದ್ದಾರೆ" ಎಂದು ಮೂಲವೊಂದು ಉಲ್ಲೇಖಿಸಿದೆ. 30 ರಿಂದ 40 ನಿಮಿಷಗಳ ಕಾಲ ಬ್ಯಾಟಿಂಗ್ ಮಾಡಿದ ನಂತರ ಬೆನ್ನಿನ ನೋವಿನಿಂದ ಬಳಲುತ್ತಿದ್ದ ಅಯ್ಯರ್ ಈ ಋತುವಿನಲ್ಲಿ ಮುಂಬೈನ ಎರಡು ರಣಜಿ ಟ್ರೋಫಿ ಪಂದ್ಯಗಳನ್ನು ಕಳೆದುಕೊಂಡಿದ್ದರು.

2024 ರ ಐಪಿಎಲ್ ಆವೃತ್ತಿಯು ಮಾರ್ಚ್ 22 ರಂದು ಚೆನ್ನೈ ಸೂಪರ್ ಕಿಂಗ್ಸ್ (CSK) ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ನಡುವಿನ ಪಂದ್ಯದೊಂದಿಗೆ ಚೆನ್ನೈನ MA ಚಿದಂಬರಂ ಕ್ರೀಡಾಂಗಣದಲ್ಲಿ ಪ್ರಾರಂಭವಾಗಲಿದೆ. ಎರಡು ಬಾರಿಯ ಮಾಜಿ ಚಾಂಪಿಯನ್ ಕೆಕೆಆರ್ ಮಾರ್ಚ್ 23 ರಂದು ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಅಭಿಯಾನವನ್ನು ಪ್ರಾರಂಭಿಸಲಿದೆ.

ಐಪಿಎಲ್ 2022 ರ ಮೆಗಾ ಹರಾಜಿನಲ್ಲಿ ಶಾರುಖ್ ಖಾನ್ ಅವರ ಸಹ-ಮಾಲೀಕತ್ವದ ಫ್ರಾಂಚೈಸಿ ರೂ. 12.25 ಕೋಟಿಗೆ ಸಹಿ ಹಾಕಿದ್ದ ಶ್ರೇಯಸ್ ಬೆನ್ನುನೋವಿನಿಂದಾಗಿ 2023 ರ ಸಂಪೂರ್ಣ ಋತುವನ್ನು ಕಳೆದುಕೊಂಡರು. ಅವರ ಅನುಪಸ್ಥಿತಿಯಲ್ಲಿ, ನಿತೀಶ್ ರಾಣಾ ಅವರನ್ನು ತಂಡದ ನಾಯಕರನ್ನಾಗಿ ನೇಮಿಸಲಾಯಿತು.
Published On - 10:28 am, Thu, 14 March 24
