GT vs CSK: ಟಿ20 ವಿಶ್ವಕಪ್ ತಂಡದಲ್ಲಿಲ್ಲ ಸ್ಥಾನ: ಸ್ಫೋಟಕ ಶತಕದ ನಂತರ ಶುಭ್​ಮನ್ ಗಿಲ್ ಸಂಭ್ರಮಿಸಿದ್ದು ಹೇಗೆ ನೋಡಿ

|

Updated on: May 11, 2024 | 9:04 AM

Shubman Gill Angry Celebration: ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಶುಭ್​ಮನ್ ಗಿಲ್ 52 ಎಸೆತಗಳಲ್ಲಿ 196.15 ಸ್ಟ್ರೈಕ್ ರೇಟ್‌ನೊಂದಿಗೆ ಶತಕ ಪೂರೈಸಿದರು. 9 ಬೌಂಡರಿ ಮತ್ತು 6 ಸಿಕ್ಸರ್ಸ್ ಸಿಡಿಸಿದರು. ಶತಕ ಸಿಡಿಸುತ್ತಿದ್ದಂತೆ ಗಿಲ್ ಮೈದಾನದಲ್ಲಿ ಜಿಗಿದು ಆಕ್ರಮಣಕಾರಿ ಆಚರಣೆ ಮಾಡಿದರು. ಇದಕ್ಕೆ ಕಾರಣ ಬಿಸಿಸಿಐ ಆಯ್ಕೆ ಸಮಿತಿ.

GT vs CSK: ಟಿ20 ವಿಶ್ವಕಪ್ ತಂಡದಲ್ಲಿಲ್ಲ ಸ್ಥಾನ: ಸ್ಫೋಟಕ ಶತಕದ ನಂತರ ಶುಭ್​ಮನ್ ಗಿಲ್ ಸಂಭ್ರಮಿಸಿದ್ದು ಹೇಗೆ ನೋಡಿ
Shubman Gill Celebration
Follow us on

ಐಪಿಎಲ್ 17ನೇ ಸೀಸನ್​ನ 59ನೇ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ತಂಡದ ನಾಯಕ ಶುಭ್​ಮನ್ ಗಿಲ್ (Shubman Gill) ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಸ್ಫೋಟಕ ಶತಕ ಸಿಡಿಸಿದರು. ಗಿಲ್ ಅವರ ಈ ಶತಕ ಹಲವು ರೀತಿಯಲ್ಲಿ ವಿಶೇಷ ದಾಖಲೆಗೆ ಪಾತ್ರವಾಯಿತು. ಶುಭ್​ಮನ್ ಅವರ ಈ ಶತಕದ ಮೂಲಕ ಐಪಿಎಲ್ ಇತಿಹಾಸದಲ್ಲಿ 100ನೇ ಶತಕ ದಾಖಲಾಯಿತು. ಇದು ಐಪಿಎಲ್ ವೃತ್ತಿಜೀವನದಲ್ಲಿ ಗಿಲ್ ಅವರ ನಾಲ್ಕನೇ ಶತಕ, ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಮೂರನೇ ಮತ್ತು ನಾಯಕನಾಗಿ ಅವರ ಮೊದಲ ಶತಕ ಕೂಡ ಹೌದು. ಶತಕ ಬಾರಿಸಿದ ನಂತರ ಶುಭಮನ್ ಆಕ್ರಮಣಕಾರಿ ಸಂಭ್ರಮಾಚರಣೆ ಮಾಡಿದರು. ಗಿಲ್ ಅವರೀ ಆ್ಯಂಗ್ರಿ ಸೆಲೆಬ್ರೇಷನ್​ಗೆ ಕಾರಣ ಕೂಡ ಇದೆ.

ಶುಭ್​ಮನ್ ಗಿಲ್ 52 ಎಸೆತಗಳಲ್ಲಿ 196.15 ಸ್ಟ್ರೈಕ್ ರೇಟ್‌ನೊಂದಿಗೆ ಶತಕ ಪೂರೈಸಿದರು. ಅವರ ಇನ್ನಿಂಗ್ಸ್‌ನಲ್ಲಿ 9 ಬೌಂಡರಿ ಮತ್ತು 6 ಸಿಕ್ಸರ್‌ಗಳು ಸೇರಿದ್ದವು. ಶುಭ್‌ಮನ್‌ ಶತಕ ಸಿಡಿಸುತ್ತಿದ್ದಂತೆ ಗುಜರಾತ್‌ ಡಗೌಟ್‌ನಲ್ಲಿದ್ದ ಎಲ್ಲ ಆಟಗಾರರು ಚಪ್ಪಾಳೆ ತಟ್ಟಿದರು. ಕೋಚ್ ಜಾಂಟಿ ರೋಡ್ಸ್ ಕೂಡ ಅವರನ್ನು ಅಭಿನಂದಿಸಿದ್ದಾರೆ. ಗಿಲ್ ಮೈದಾನದಲ್ಲಿ ಜಿಗಿದು ಕೈಗಳಿಂದ ಹೆಲ್ಮೆಟ್ ಅನ್ನು ಮೇಲಕ್ಕೆತ್ತಿ ಆಕ್ರಮಣಕಾರಿ ಆಚರಣೆ ಮಾಡಿದರು. ಇದಕ್ಕೆ ಕಾರಣ ಬಿಸಿಸಿಐ ಆಯ್ಕೆ ಸಮಿತಿ.

ಪಂದ್ಯದ ಗತಿ ಬದಲಾಯಿಸಿದ ರಶೀದ್ ಖಾನ್ ರೋಚಕ ಕ್ಯಾಚ್: ಸ್ತಬ್ಧವಾದ ಮೋದಿ ಸ್ಟೇಡಿಯಂ

2024 ರ ಐಸಿಸಿ ಟಿ20 ವಿಶ್ವಕಪ್‌ಗೆ ಭಾರತೀಯ ತಂಡವನ್ನು ಏಪ್ರಿಲ್ 30 ರಂದು ಪ್ರಕಟಿಸಲಾಯಿತು. ವಿಶ್ವಕಪ್ ಮುಖ್ಯ ತಂಡದಿಂದ ಶುಭ್​ಮನ್ ಗಿಲ್ ಅವರನ್ನು ಕೈಬಿಡಲಾಯಿತು. ಗಿಲ್ ಅವರನ್ನು ಮೀಸಲು ಆಟಗಾರನಾಗಿ ಸೇರಿಸಲಾಗಿದೆಯಷ್ಟೆ. ಈ ಕೋಪವನ್ನು ಶುಭ್‌ಮನ್ ತಮ್ಮ ಸಂಭ್ರಮದ ಮೂಲಕ ವ್ಯಕ್ತಪಡಿಸಿದ್ದಾರೆ ಎಂದು ನೆಟ್ಟಿಗರು ಹೇಳುತ್ತಿದ್ದಾರೆ. ಇದೀಗ ಗಿಲ್ ಅವರ ಆಕ್ರಮಣಕಾರಿ ಸಂಭ್ರಮದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.

ಶುಭ್​ಮನ್ ಗಿಲ್ ಆಕ್ರಮಣಕಾರಿ ಸಂಭ್ರಮದ ವಿಡಿಯೋ ಇಲ್ಲಿದೆ:

 

ಗುಜರಾತ್ ಸಿಡಿಲಬ್ಬರದ ಬ್ಯಾಟಿಂಗ್ ನೋಡಿ ಕಣ್ಣೀರಿಟ್ಟ ಚೆನ್ನೈನ ಪುಟ್ಟ ಫ್ಯಾನ್; ವಿಡಿಯೋ ನೋಡಿ

ಪಂದ್ಯ ಮುಗಿದ ಬಳಿಕ ಪೋಸ್ಟ್ ಮ್ಯಾಚ್ ಪ್ರೆಸೆಂಟೇಷನ್ ವೇಳೆ ಮಾತನಾಡಿದ ಜಿಟಿ ನಾಯಕ ಶುಭ್​ಮನ್ ಗಿಲ್, “ಪ್ರಾಮಾಣಿಕವಾಗಿ ಹೇಳಬೇಕೆಂದರೆ ಒಂದು ಹಂತದಲ್ಲಿ ನಾವು 250+ ರನ್ ಕಲೆಹಾಕುವ ಗುರಿ ಹೊಂದಿದ್ದೆವು. ಆದರೆ, ಅಂತಿಮ ಹಂತದಲ್ಲಿ ಹಿಂದೆ ಬಿದ್ದೆವು. ಕೊನೆಯ ಎರಡು-ಮೂರು ಓವರ್‌ಗಳಲ್ಲಿ ಅವರು ಚೆನ್ನಾಗಿ ಬೌಲ್ ಮಾಡಿದರು. ನಾವು 10-15 ಕಡಿಮೆ ಎಂದು ನಾನು ಭಾವಿಸಿದೆವು, ಇದು ನಿವ್ವಳ ರನ್ ದರದಲ್ಲಿ ಹೊಡೆತ ಬೀಳುತ್ತದೆ. ನಾನು ಮತ್ತು ಸಾಯಿ ಸುದರ್ಶನ್ ಮನಸ್ಸಿನಲ್ಲಿ ಗುರಿಗಳನ್ನು ಹೊಂದಿರಲಿಲ್ಲ, ನಮ್ಮ ಮುಂದೆ ಬಂದ ಪ್ರತಿ ಓವರ್​ನಲ್ಲಿ ಸಿಕ್ಕ ಅವಕಾಶವನ್ನು ಪಡೆದುಕೊಂಡೆವು. ನಾವು ಒಬ್ಬರನ್ನೊಬ್ಬರು ಚೆನ್ನಾಗಿ ಅರ್ಥಮಾಡಿಕೊಳ್ಳುತ್ತೇವೆ,” ಎಂದು ಗಿಲ್ ಹೇಳಿದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:03 am, Sat, 11 May 24